ನಿಮ್ಮ ಸ್ಮಾರ್ಟ್‌ಫೋನ್‌ಗೆ ಎಷ್ಟು ಜಿಬಿ RAM ಇರಬೇಕು..? ಇಲ್ಲಿದೆ ಉತ್ತರ..!

By Gizbot Bureau
|

ಸ್ಮಾರ್ಟ್‌ಫೋನ್‌ ಖರೀದಿ ಸಂದರ್ಭದಲ್ಲಿ ಮೊಬೈಲ್‌ನಲ್ಲಿ RAM ಎಷ್ಟಿದೆ ಎಂಬುದನ್ನು ಸಾಮನ್ಯವಾಗಿ ಗಮನಿಸಿಯೇ ಗಮನಿಸುತ್ತೇವೆ. RAM ಹೆಚ್ಚಿದ್ದಷ್ಟು ಸ್ಮಾರ್ಟ್‌ಫೋನ್‌ ಕಾರ್ಯನಿರ್ವಹಣೆಯು ಕೂಡಡ ಚೆನ್ನಾಗಿರುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಅದಕ್ಕಂತಾನೆ ಸ್ಮಾರ್ಟ್‌ಫೋನ್‌ ತಯಾರಕ ಕಂಪನಿಗಳು ಹೆಚ್ಚಿನ ಸಾಮರ್ಥ್ಯದ RAM ಅಳವಡಿಸಿ, ಸಾಧನವನ್ನು ಶಕ್ತಿಯುತವಾಗಿ ಮಾಡುತ್ತವೆ.

ನಿಮ್ಮ ಸ್ಮಾರ್ಟ್‌ಫೋನ್‌ಗೆ ಎಷ್ಟು ಜಿಬಿ RAM ಇರಬೇಕು..? ಇಲ್ಲಿದೆ ಉತ್ತರ..!

ದೊಡ್ಡ RAM ಎಂದರೆ ಸಾಧನವು ಉತ್ತಮ ಎಂಬುದಲ್ಲವೇ..? ಆದರೆ, ನೈಜ ಸಂಗತಿ ಏನೆಂದರೆ ಸರಿಯಾದ ಪ್ರಮಾಣದ RAM ಕಂಡುಹಿಡಿಯುವುದು ಸ್ಮಾರ್ಟ್‌ಫೋನ್‌ ಜಗತ್ತಿನಲ್ಲಿ ಸಮಸ್ಯೆಯಾಗಿದೆ. ಎಷ್ಟಿದ್ದರೆ ಸಾಕು..? ಎಂಬ ಪ್ರಶ್ನೆಗೆ ಸರಳವಾದ ಉತ್ತರವೆಂದರೆ ಕನಿಷ್ಠ 4GB ಇದ್ದರೆ ಸಾಕು. ಆದರೆ, ದೀರ್ಘವಾದ ಉತ್ತರ ಮುಂದೆ ಇದ್ದು, ನಿಮ್ಮ ಅಗತ್ಯಕ್ಕೆ ತಕ್ಕಂತೆ ಎಷ್ಟು ಜಿಬಿ RAM ಇದ್ದರೆ ಒಳ್ಳೆಯದು ಎಂಬುದನ್ನು ನೋಡಿ.

RAM ಹೇಗೆ ಕಾರ್ಯನಿರ್ವಹಿಸುತ್ತದೆ..?

RAM ಹೇಗೆ ಕಾರ್ಯನಿರ್ವಹಿಸುತ್ತದೆ..?

RAMನ ಕಾರ್ಯನಿರ್ವಹಣೆ ಬಗ್ಗೆ ತಿಳಿಯುವುದು ಅವಶ್ಯಕ. RAMನ್ನು ಮೆಮೊರಿ ಎಂದು ಕೂಡ ಕರೆಯಲಾಗುತ್ತದೆ. ನೀವು ಫೋನ್‌ನ್ನು ಬಳಸದಿದ್ದಾಗ ಮಾಹಿತಿಯನ್ನು ಸಂಗ್ರಹಿಸಿ ಭವಿಷ್ಯದಲ್ಲಿ ನಿಮಗೆ ಅನುಕೂಲ ಮಾಡಿಕೊಡುತ್ತದೆ. ಇನ್ನು, ನಿಮ್ಮ ಫೋನ್‌ನಲ್ಲಿರುವ ಆಂತರಿಕ ಸಂಗ್ರಹಣೆಗಿಂತ RAM ತುಂಬಾ ವೇಗವಾಗಿರುತ್ತದೆ. ಏಕೆಂದರೆ, RAMನಲ್ಲಿ ನೀವು ಹೆಚ್ಚಿನದನ್ನು ಶೇಖರಿಸಿರುವುದಿಲ್ಲ. ಫೋನ್‌ನಲ್ಲಿ ಗೇಮ್‌ ಆಡುತ್ತಿರುವಾಗ ನಿಮಗೆ ಕಾಲ್‌ ಬರುತ್ತದೆ. ಕರೆ ನಂತರ ಗೇಮ್‌ಗೆ ಮರಳುವ ಅವಕಾಶ ಇರುತ್ತದೆ. ಆಗ, ನೀವು ಆಡುತ್ತಿದ್ದ ಗೇಮ್‌ RAMನಲ್ಲಿ ಲೋಡ್‌ ಆಗಿರುತ್ತದೆ. ನೀವು ಕರೆ ಕೊನೆಗೊಳಿಸಿದ ನಂತರ ಗೇಮ್‌ ಒಪನ್‌ ಮಾಡಿದಾಗ ಮೊದಲು ನಿಲ್ಲಿಸಿದ ಸ್ಥಳದಿಂದಲೇ ಅದು ಬ್ಯಾಕ್‌ಅಪ್‌ ಆಗುತ್ತದೆ.

ಇದಕ್ಕಾಗಿ ಸಂಪೂರ್ಣ ಆಪ್‌ನ್ನು ಮರುಲೋಡ್ ಮಾಡುವ ಅಗತ್ಯವಿಲ್ಲ ಮತ್ತು ಗೇಮ್‌ ಕಳೆದುಕೊಳ್ಳುವ ಅಗತ್ಯವು ಇಲ್ಲ. ಇದರರ್ಥ ನಿಮ್ಮ ಸ್ನಾರ್ಟ್‌ಫೋನ್‌ ಹೆಚ್ಚಿನ ಮೆಮೊರಿ ಹೊಂದಿದೆ ಎಂಬುದು ಸ್ಪಷ್ಟವಾಗುತ್ತದೆ. ಇನ್ನು, ಆಂಡ್ರಾಯ್ಡ್‌ ಫೋನ್‌ಗಳಿಗೆ ಟಾಸ್ಕ್‌ ಕಿಲ್ಲರ್‌ ಆಪ್‌ ಅಗತ್ಯವಿಲ್ಲ. ಏಕೆಂದರೆ ಹೆಚ್ಚು ಕಾಲ ಬಳಸದ ಆಪ್‌ಗಳು ಸ್ವಯಂಚಾಲಿತವಾಗಿ ನಿಲ್ಲುತ್ತವೆ.

ನಿಮ್ಮ ಫೋನ್‌ಗೆ 8GB RAM ಬೇಕಾ..?

ನಿಮ್ಮ ಫೋನ್‌ಗೆ 8GB RAM ಬೇಕಾ..?

ಐಫೋನ್ XS ಮತ್ತು ‍XS Max ಆಪಲ್‌ನ 4GB RAM ಹೊಂದಿರುವ ಮೊದಲ ಫೋನ್‌ಗಳಾಗಿವೆ. (ಅಗ್ಗದ ಐಫೋನ್ XR 3GB RAM ಹೊಂದಿದೆ). ಗ್ಯಾಲಕ್ಸಿ ನೋಟ್ 9ನಂತಹ ಕೆಲವು ಆಂಡ್ರಾಯ್ಡ್ ಫೋನ್‌ಗಳನ್ನು 8GB RAMನೊಂದಿಗೆ ಕಾನ್ಫಿಗರ್ ಆಗಿವೆ. ಇದು ಅಲ್ಪ ಪ್ರಮಾಣದ RAMನಂತೆ ಕಂಡರೂ, ನೀವು ಸ್ಮಾರ್ಟ್‌ಫೋನ್‌ನ್ನು ಹೇಗೆ ಬಳಸುತ್ತೀರಿ ಎಂಬುದರರ ಮೇಲೆ ಸಾಧನದ ಕಾರ್ಯನಿರ್ವಹಣೆ ನಿಂತಿದೆ.

ಆಪಲ್ ತನ್ನದೇ ಆದ ಪ್ರೊಸೆಸರ್‌ಗಳನ್ನು ಬಳಸುತ್ತದೆ ಮತ್ತು ಸಾಫ್ಟ್‌ವೇರ್ ಎಲ್ಲವನ್ನೂ ಸರಿಯಾಗಿ ನಿಯಂತ್ರಿಸುತ್ತದೆ. ಫೋನ್‌ಬಫ್ ನಡೆಸಿದ ಹೆಡ್-ಟು-ಹೆಡ್ ಪರೀಕ್ಷೆಯಲ್ಲಿ, 3GB RAM ಹೊಂದಿರುವ ಐಫೋನ್ ‍‍‍XR ಅನ್ನು 8GB RAM ಹೊಂದಿದ ಸ್ಯಾಮ್‌ಸಂಗ್‌ ನೋಟ್ 9 ವಿರುದ್ಧ ಬಳಸಲಾಯಿತು. ಯಾಂತ್ರಿಕ ರೋಬೋಟ್ ತೋಳನ್ನು ಬಳಸಿ ಸರಣಿ ಆಪ್‌ಗಳನ್ನು ಲೋಡ್‌ ಮಾಡಲು ಮತ್ತು ಮೂಲಭೂತ ಕಾರ್ಯಗಳನ್ನು ನಿರ್ವಹಿಸಲಾಯಿತು..

ಐಪೋನ್‌ XR VS ಸ್ಯಾಮ್‌ಸಂಗ್‌ ನೋಟ್‌ 9

ಐಪೋನ್‌ XR VS ಸ್ಯಾಮ್‌ಸಂಗ್‌ ನೋಟ್‌ 9

ಎರಡೂ ಫೋನ್‌ಗಳಿಗೆ 16 ವಿಭಿನ್ನ ಅಪ್ಲಿಕೇಶನ್‌ಗಳನ್ನು ಲೋಡ್ ಮಾಡುವ ಮತ್ತು ಕೆಲವು ಮೂಲಭೂತ ಕಾರ್ಯಗಳನ್ನು ಒಂದು ಲ್ಯಾಪ್‌ನಲ್ಲಿ ನಿರ್ವಹಿಸಲಾಯಿತು. ನಂತರ, ರಿವರ್ಸ್ ಕ್ರಮದಲ್ಲಿ ಅಪ್ಲಿಕೇಶನ್‌ಗಳನ್ನು ಮರು ತೆರೆಯುವ ಕ್ರಿಯೆ ನಡೆಸಲಾಯಿತು. ಮೊದಲ ಲ್ಯಾಪ್ ಪ್ರೊಸೆಸರ್ ವೇಗವನ್ನು ಪರೀಕ್ಷಿಸಿದರೆ, ಎರಡನೇ ಲ್ಯಾಪ್ ಎಷ್ಟು ಅಪ್ಲಿಕೇಶನ್‌ಗಳು ಇನ್ನೂ ಮೆಮೊರಿಯಲ್ಲಿವೆ ಹಾಗೂ ಮತ್ತೆ ಕಾರ್ಯರೂಪಕ್ಕೆ ಬರಲು ಸಿದ್ಧವಾಗಿರುವುದನ್ನು ಪರೀಕ್ಷಿಸಲಾಯಿತು. ಒಟ್ಟಾರೆ, ಎರಡು ಫೋನ್‌ಗಳು ಈ ಸ್ಪರ್ಧೆಯಲ್ಲಿ ಸಮಬಲ ತೋರಿದವು.

ಕಡಿಮೆ RAMನಲ್ಲಿ ಹೆಚ್ಚು ಕೆಲಸ

ಕಡಿಮೆ RAMನಲ್ಲಿ ಹೆಚ್ಚು ಕೆಲಸ

ಐಫೋನ್ XR ಸಾಕಷ್ಟು ವೇಗವಾಗಿತ್ತು. ಈ ಫೋನ್‌, ನೋಟ್‌ 9 ಗಿಂತ ವೇಗದ ಕಾರ್ಯ ನಿರ್ವಹಣೆ ಹಾಗೂ ಆಪ್‌ಗಳನ್ನು ಲೋಡ್‌ ಮಾಡಿದೆ. ಐಫೋನ್‌ XR ಬ್ಯಾಕ್‌ಗ್ರೌಂಡ್‌ ಆಪ್‌ನ್ನು ನಿಲ್ಲಿಸಬೇಕಾಗಿದ್ದರೂ ಸಹ, ಅದನ್ನು ಸರಿದೂಗಿಸುವಷ್ಟು ವೇಗವಾಗಿ ಆಪ್‌ನ್ನು ಮರುಲೋಡ್ ಮಾಡುತ್ತದೆ. ಇನ್ನು, ನೋಟ್ 9 ಎಲ್ಲಾ 16 ಅಪ್‌ಗಳನ್ನು ಮೆಮೊರಿಯಲ್ಲಿ ಇರಿಸಿಕೊಂಡಿದ್ದರೆ, ಐಫೋನ್ XR ವಿವಿಧ ಮೊಬೈಲ್‌ ಗೇಮ್‌ಗಳನ್ನು ಒಳಗೊಂಡು 11 ಆಪ್‌ಗಳನ್ನು ಮೆಮೊರಿಯಲ್ಲಿ ಇರಿಸಿಕೊಂಡಿತ್ತು. 3GB ಫೋನ್‌ ಹೊಂದಿದ್ದರು ಆಪಲ್‌ ಪ್ರಬಲವಾದ ಫೋನ್‌ಗಳನ್ನೇ ಹೊಂದಿದೆ.

ಪಿಕ್ಸೆಲ್‌ 3ಗಿಂತ ಐಫೋನ್ ಮುಂದು

ಪಿಕ್ಸೆಲ್‌ 3ಗಿಂತ ಐಫೋನ್ ಮುಂದು

ಹಾಗಾದರೆ, ಐಫೋನ್ XS ಮತ್ತು XS Maxನಲ್ಲಿ 4GB RAM ಇದ್ದು ಕಾರ್ಯನಿರ್ವಹಣೆ ವೇಗವಾಗಿರುತ್ತೆ ಅಂತಿರಾ..? ಹೌದು, 4GB RAM ಹೊಂದಿರುವ ಪಿಕ್ಸೆಲ್ 3 ವಿರುದ್ಧ XSನ್ನು ಫೋನ್‌ಬಫ್ ಪರೀಕ್ಷೆ ನಡೆಸಲಾಯಿತು. ಇದರಲ್ಲಿ ಐಫೋನ್ XS 13 ಆಪ್‌ಗಳನ್ನು ಮೆಮೊರಿಯಲ್ಲಿ ತೆರೆದಿಟ್ಟಿದೆ ಮತ್ತು XRಗಿಂತ 8 ಸೆಕೆಂಡುಗಳಷ್ಟು ವೇಗವಾಗಿಯೇ ಕಾರ್ಯನಿರ್ವಹಣೆ ಮುಗಿಸಿತ್ತು. ಇದು ಉತ್ತಮವಾದ ವೇಗವೇ. ಇದಲ್ಲದೇ ಐಫೋನ್‌ XS ಪಿಕ್ಸೆಲ್‌ 3ನ್ನು ಪರೀಕ್ಷೆಯಲ್ಲಿ ಒಂದು ನಿಮಿಷದ ಅಂತರದಿಂದ ಸೋಲಿಸಿರುವುದು ಐಫೋನ್‌ ವೇಗಕ್ಕೆ ಸಾಕ್ಷಿಯಾಗಿದೆ. ಐಫೋನ್ ಹೆಚ್ಚು RAM ಹೊಂದಿಲ್ಲದಿರಬಹುದು. ಆದರೆ, RAMನ್ನು ಐಫೋನ್‌ ಸಮರ್ಥವಾಗಿ ಬಳಸುತ್ತದೆ. ಅಲ್ಟ್ರಾಫಾಸ್ಟ್ ಪ್ರೊಸೆಸರ್ ಅಪ್ಲಿಕೇಶನ್‌ಗಳನ್ನು ಲೋಡ್ ಮಾಡುತ್ತದೆ. ಹಾಗೂ ಆಪ್‌ ಮರುಲೋಡ್ ಮಾಡಬೇಕಾದಾಗಲೂ ವೇಗವಾಗಿ ಕಾರ್ಯನಿರ್ವಹಿಸುತ್ತದೆ.

ಸ್ಟ್ಯಾಂಡರ್ಡ್ RAM

ಸ್ಟ್ಯಾಂಡರ್ಡ್ RAM

ಆಪಲ್ ಕೆಲವು ಪೋನ್‌ಗಳನ್ನು ಹೊಂದಿರುವುದು ಅದಕ್ಕೆ ಪ್ರಯೋಜನವಾಗಿದೆ. ಆದರೆ, ಆಂಡ್ರಾಯ್ಡ್ ಅನೇಕ ಫೋನ್‌ಗಳನ್ನು ಹೊಂದಿದ್ದು, RAMನ ಗಾತ್ರ ಬದಲಾಗುತ್ತಾ ಹೋಗುತ್ತದೆ. ಹೆಚ್ಚಿನ ಸ್ಮಾರ್ಟ್‌ಫೋನ್‌ ಮಾಲೀಕರಿಗೆ 4GBಯಷ್ಟು RAM ಸಾಕು. ವಾಸ್ತವವಾಗಿ, ಡಿಸೆಂಬರ್‌ನಲ್ಲಿ ಗೂಗಲ್ ಪಿಕ್ಸೆಲ್ 2 ಮತ್ತು ಪಿಕ್ಸೆಲ್ 3 ನಲ್ಲಿ ಆಕ್ರಮಣಕಾರಿ ಮೆಮೊರಿ ನಿರ್ವಹಣೆಯನ್ನು ನಿಭಾಯಿಸುವ ಅಪ್‌ಡೇಟ್‌ನ್ನು ಗೂಗಲ್‌ ನೀಡಬೇಕಿತ್ತು. ಗೂಗಲ್ ಗಮನಿಸಿದಂತೆ, ಫೋನ್‌ಗಳಲ್ಲಿ ಕೆಲವು ಅಪ್ಲಿಕೇಶನ್‌ಗಳು ಏಕಕಾಲದಲ್ಲಿ ಕಾರ್ಯನಿರ್ವಹಿಸುವುದನ್ನು ತಡೆಯುತ್ತದೆ. ಉದಾಹರಣೆಗೆ, ಕ್ಯಾಮೆರಾ ಆಪ್‌ ಬಳಸುವಾಗ ಕೆಲವು ಬಳಕೆದಾರರಿಗೆ ಆಡಿಯೊ ಪ್ಲೇಬ್ಯಾಕ್‌ನ್ನು ಫೋನ್‌ಗಳು ನಿಲ್ಲಿಸಿದ್ದು, ಆಂಡ್ರಾಯ್ಡ್‌ನಲ್ಲಿ RAM ಬಳಕೆ ಸಮರ್ಪವಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ.

RAM ಮಾತ್ರವಲ್ಲ..!

RAM ಮಾತ್ರವಲ್ಲ..!

ಹೌದು, RAM ಸ್ಮಾರ್ಟ್‌ಫೋನ್‌ನ ಒಂದು ಭಾಗವಷ್ಟೇ. ಬ್ಯಾಟರಿ, ಪ್ರೊಸೆಸರ್, ಮೋಡೆಮ್ ಮತ್ತು ಸಾಫ್ಟ್‌ವೇರ್ ಅಪ್‌ಡೇಟ್‌ ಹಾಗೂ ಇತರ ಅಂಶಗಳು ಮೊಬೈಲ್‌ನ ದೀರ್ಘಾಯುಷ್ಯ ಮತ್ತು ಕಾರ್ಯಕ್ಷಮತೆಗೆ ಮುಖ್ಯವಾಗಿವೆ. 4GBಗಿಂತ ಹೆಚ್ಚು RAM ಇದ್ದರೆ ಸಾಕು. ಆದರೆ, ಭಾರೀ ಪ್ರಮಾಣದಲ್ಲಿ ಮೊಬೈಲ್‌ ಬಳಸುವವರು ತಮ್ಮ ಬಳಕೆಗೆ ತಕ್ಕಂತೆ RAM ಹೊಂದಿರುವ ಸ್ಮಾರ್ಟ್‌ಫೋನ್‌ ಖರೀದಿಸಿದರೆ ಉತ್ತಮ.

Best Mobiles in India

Read more about:
English summary
How Much RAM Should Your Smartphone Have

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X