ಮಡುಚುವ ಫೋನ್ ತಯಾರಿಕೆ..ಸ್ಯಾಮ್‌ಸಂಗ್‌'ಗೆ ಶಾಕ್ ನೀಡಿದ ಚೀನಾ ಕಂಪೆನಿ!!

|

ಸ್ಯಾಮ್‌ಸಂಗ್ ಕಂಪೆನಿಯು ಮೊದಲ ಮಡುಚುವ ಫೋನ್ ಅನ್ನು ಬಿಡುಗಡೆ ಮಾಡುತ್ತದೆ ಎನ್ನುವ ಸುದ್ದಿಯ ಬೆನ್ನಲ್ಲೆ ಚೀನಾದ ಆಪಲ್ ಎಂದು ಹೆಸರಾಗಿರುವ ಹುವಾವೆ ಕಂಪೆನಿ ಮೊಬೈಲ್ ಮಾರುಕಟ್ಟೆಗೆ ಶಾಕ್ ನೀಡಿದೆ. 2018ನೇ ವರ್ಷದಲ್ಲಿಯೇ ಗ್ರಾಹಕರಿಗೆ ತಾನೂ ಕೂಡ ಮಡುಚುವ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುವುದಾಗಿ ಹುವಾವೆ ಕಂಪೆನಿ ಹೇಳಿಕೊಂಡಿದೆ.

ಪ್ರೀಮಿಯಂ ಮಡುಚುವ ಫೋನ್‌ಗಳಿಗೆ ಒಎಲ್‌ಇಡಿ (ORGANIC LIGHT-EMMITTING DIODE) ಡಿಸ್‌ಪ್ಲೇ ಅಗತ್ಯವಿದ್ದು, ಇದಕ್ಕಾಗಿ ಹುವಾವೆ ಕಂಪೆನಿ ಚೀನಾದ ಬಿಇಒ ಟೆಕ್ನಾಲಜಿ ಗ್ರೂಪ್ ಜೊತೆ ಸಹಭಾಗಿತ್ವಕ್ಕೆ ಮುಂದಾಗಿದೆ. ಸ್ಯಾಮ್‌ಸಂಗ್ ಕಂಪೆನಿಯನ್ನು ಹಿಂದಿಕ್ಕಲೆಂದೇ ಹುವಾವೆ ಕಂಪೆನಿ ಪ್ರೀಮಿಯಂ ಮಡುಚುವ ಫೋನ್‌ಗಳ ತಯಾರಿಕೆಗೆ ಸಿದ್ದವಾಗಿದೆ ಎಂದು ಹೇಳಲಾಗಿದೆ.

ಮಡುಚುವ ಫೋನ್ ತಯಾರಿಕೆ..ಸ್ಯಾಮ್‌ಸಂಗ್‌'ಗೆ ಶಾಕ್ ನೀಡಿದ ಚೀನಾ ಕಂಪೆನಿ!!

ಟಿವಿ ಸ್ಕ್ರೀನ್‌ಗಳಿಗೆ ದೊಡ್ಡ ಪ್ಯಾನಲ್‌ಗಳನ್ನು ತಯಾರಿಸಿಕೊಡುವುದರಲ್ಲಿ ವಿಶ್ವದಲ್ಲೇ ಹೆಸರಾಗಿರುವ ಬಿಇಒ ಕಂಪೆನಿ ಹುವಾವೆ ಬೇಡಿಕೆಯನ್ನು ಬಹುಬೇಗ ಒದಗಿಸಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟು ಹುವಾವೆಯ ಮಾತನ್ನು ನಂಬಿದ್ದಾರೆ. ಹಾಗಾದರೆ, ಶೀಘ್ರದಲ್ಲೇ ಮಡುಚುವ ಫೋನ್ ಗ್ರಾಹಕರ ಕೈಸೇರಬಹುದಾದ ಈ ಸಮಯದಲ್ಲಿ ಭವಿಷ್ಯದಲ್ಲಿ ಸ್ಮಾರ್ಟ್‌ಫೋನ್‌ಗಳು ಹೇಗಗಿರುತ್ತದೆ ಎಂಬ ಕುತೋಹಲದ ಮಾಹಿತಿಯನ್ನು ಮುಂದೆ ಓದಿ.

ಮಡುಚುವ ಮತ್ತು ವಿಸ್ತರಿಸಬಹುದಾದ ಸ್ಮಾರ್ಟ್‌ಫೋನ್!

ಮಡುಚುವ ಮತ್ತು ವಿಸ್ತರಿಸಬಹುದಾದ ಸ್ಮಾರ್ಟ್‌ಫೋನ್!

ಮಡುಚುವ ಮತ್ತು ವಿಸ್ತರಿಸಬಹುದಾದ ಸ್ಮಾರ್ಟ್‌ಫೋನ್ ತಂತ್ರಜ್ಞಾನದ ಬಗ್ಗೆ ಈಗಾಗಲೇ ಅಭಿವೃದ್ದಿ ನಡೆಯುತ್ತಿದೆ. ಎಲ್‌ಜಿ, ಆಪಲ್ ಮತ್ತು ಸ್ಯಾಮ್‌ಸಂಗ್ ಕಂಪೆನಿಗಳು ವಿಸ್ತರಿಸಬಹುದಾದ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಸಂಶೋಧನೆ ನಡೆಸುತ್ತಿವೆ. ಈಗ ಹುವಾವೆ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಈಗಾಗಲೇ ಸ್ವಲ್ಪಮಟ್ಟಿನ ಯಶಸ್ಸನ್ನು ಸಹ ಈ ತಂತ್ರಜ್ಞಾನ ಪಡೆದುಕೊಂಡಿರುವುದು ಭವಿಷ್ಯದಲ್ಲಿ ಮಡುಚಬಹುದಾದ ಮತ್ತು ವಿಸ್ತರಿಸಬಹುದಾದ ಸ್ಮಾರ್ಟ್‌ಫೋನ್ ಆಸೆಯನ್ನು ಹೊತ್ತಿದೆ.

ಪಾರದರ್ಶಕ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ!

ಪಾರದರ್ಶಕ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ!

ಸ್ಮಾರ್ಟ್‌ಫೋನ್ ತಂತ್ರಜ್ಞಾನದಲ್ಲಿ ಬಹುಬೇಗ ಬದಲಾವಣೆ ಕಾಣುವ ತಂತ್ರಜ್ಞಾನ ಎಂದು ಹೇಳಲಾಗುತ್ತಿರುವ ಪಾರದರ್ಶಕ ಡಿಸ್‌ಪ್ಲೇ ಕಲ್ಪನೆಯೇ ಅತ್ಯದ್ಬುತವಾಗಿದೆ.ಸ್ಮಾರ್ಟ್‌ಫೋನ್ ಒಂದು ಬದಿಯಿಂದ ಮತ್ತೊಂದು ಬದಿಯನ್ನು ಪಾರದರ್ಶಕವಾಗಿ ನೋಡಬಹುದಾದ ಪಾರದರ್ಶಕ ಡಿಸ್‌ಪ್ಲೇ ಇನ್ನೆನು ಕೆಲವೇ ವರ್ಷಗಳಲ್ಲಿ ಕಾಲಿಡುತ್ತದೆ ಎಂದರೆ ಆಶ್ಚರ್ಯವೇನಿಲ್ಲ.!

ವೈರ್‌ಲೆಸ್ ಚಾರ್ಜಿಂಗ್!

ವೈರ್‌ಲೆಸ್ ಚಾರ್ಜಿಂಗ್!

ಭವಿಷ್ಯದ್ಲಲಿ ಸ್ಮಾರ್ಟ್‌ಪೋನ್ ಸೇರಿದಂತೆ ಎಲ್ಲಾ ಸ್ಮಾರ್ಟ್‌ ಡಿವೈಸ್‌ಗಳು ವೈರ್‌ಲೆಸ್ ಚಾರ್ಜಿಂಗ್ ತಂತ್ರಜ್ಞಾನವನ್ನು ನಂಬಲಾರದ ರೀತಿಯಲ್ಲಿ ಹೊಂದುತ್ತವೆ ಎಂದು ಹೇಳಲಾಗಿದೆ. ಮನೆಯಲ್ಲಿನ ಪವರ್ ಸ್ಟೇಷನ್ ಇಂದ ಎಲ್ಲಾ ಸ್ಮಾರ್ಟ್‌ ಡಿವೈಸ್‌ಗಳು ವೈರ್‌ಲೆಸ್ ಸಿಗ್ನಲ್‌ಗಳಿಂದ ಚಾರ್ಜ್ ಆಗುತ್ತವೆ. ಮನೆಯ ಯಾವುದೇ ಸ್ಥಳದಲ್ಲಿ ಚಾರ್ಜ್ ಸ್ವಯಂಚಾಲಿತ ಆಗುವ ಸಾಮರ್ಥ್ಯ ಅವುಗಳಿಗೆ ಇರಲಿದೆಯಂತೆ.

ಸ್ಮಾರ್ಟ್‌ವಾಚ್ ಪ್ರೊಜೆಕ್ಟರ್!

ಸ್ಮಾರ್ಟ್‌ವಾಚ್ ಪ್ರೊಜೆಕ್ಟರ್!

ಈಗ ಇರುವ ಸ್ಮಾರ್ಟ್‌ವಾಚ್‌ಗಳೇ ಮುಂದೆ ಮತ್ತಷ್ಟು ಬದಲಾಗುತ್ತವೆ. ಕೇವಲ ಒಂದು ಸ್ಮಾರ್ಟ್‌ವಾಚ್ ಸ್ಮಾರ್ಟ್‌ಫೋನ್ ರೀತಿಯ ಕಾರ್ಯನಿರ್ವಹಣೆಯನ್ನು ನೀಡಲಿದೆ. ಈ ಸ್ಮಾರ್ಟ್‌ವಾಚ್ ಹೊರಸೂಸುವ ಪಾರದರ್ಶಕ ಬೆಳಕಿನ ಪರದೆಯ ಮೂಲಕವೇ ಸ್ಮಾರ್ಟ್‌ಫೋನ್‌ನಲ್ಲಿ ನಿರ್ವಹಿಸಬಹುದಾದ ಎಲ್ಲಾ ಕಾರ್ಯಗಳನ್ನು ನಿಯಂತ್ರಿಸಬಹುದಾಗಿದೆ ಎಂದು ಟೆಕ್ ಪ್ರಪಂಚ ಈ ತಂತ್ರಜ್ಞಾನ ಅಭಿವೃದ್ದಿಯತ್ತ ಹೆಚ್ಚು ಒಲವು ತೋರಿದೆ.

3D ಸ್ಮಾರ್ಟ್‌ಫೋನ್ ಡಿಸ್‌ಪ್ಲೇ!

3D ಸ್ಮಾರ್ಟ್‌ಫೋನ್ ಡಿಸ್‌ಪ್ಲೇ!

ಥಿಯೇಟರ್‌ಗಳಲ್ಲಿ ಸಿನಿಮಾಗಳನ್ನು 3D ಅನುಭವದಲ್ಲಿ ನೋಡುವ ರಿತಿಯಲ್ಲಿಯೇ, ಭವಿಷ್ಯದಲ್ಲಿ ಸ್ಮಾರ್ಟ್‌ಫೋನ್‌ನಲ್ಲಿಯೇ 3D ಅನುಭವ ನೀಡುವ ಡಿಸ್‌ಪ್ಲೇ ತಯಾರಾಗಲಿದೆ. ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಸಹಾಯದಿಂದ ಭವಿಷ್ಯದ ಸ್ಮಾರ್ಟ್‌ಫೋನ್‌ಗಳೆಲ್ಲವೂ 3D ಸ್ಮಾರ್ಟ್‌ಫೋನ್‌ಗಳಾಗಿರಲಿವೆ ಎಂದು ಟೆಕ್ ಪ್ರಪಂಚ ಊಹಿಸಿ ಅಭಿವೃದ್ದಿಯತ್ತ ದೃಷ್ಟಿಯನ್ನು ಹಾಯಿಸಿದೆ.

ಫೋನ್ ಬ್ಯಾಟರಿ ಖಾಲಿಯಾಗುವುದೇ ಇಲ್ಲ!

ಫೋನ್ ಬ್ಯಾಟರಿ ಖಾಲಿಯಾಗುವುದೇ ಇಲ್ಲ!

ಇನ್ನು ಹತ್ತು ವರ್ಷಗಳಲ್ಲಿ ಬ್ಯಾಟರಿ ಖಾಲಿಯಾಗುವುದೇ ಇಲ್ಲದ ಸ್ಮಾರ್ಟ್‌ಫೋನ್ ತಂತ್ರಜ್ಞಾನ ಅಭಿವೃದ್ದಿಯಾಗುತ್ತದೆ. ಕೇವಲ ಸೋಲಾರ್ ಪವರ್ ಮೂಲಕವೇ ಸ್ಮಾರ್ಟ್‌ಫೋನ್ ಸ್ವಯಂ ಚಾರ್ಜ್ ಆಗುವ ತಂತ್ರಜ್ಞಾನ ಬೆಳವಣಿಗೆಯಾಗಲಿದೆಯಂತೆ. ಈಗಾಗಲೇ ಈ ತಂತ್ರಜ್ಞಾನದ ಅಭಿವೃದ್ದಿಗಾಗಿ ಟೆಕ್ ಪ್ರಪಂಚ ಶ್ರಮಿಸುತ್ತಿರುವ ಬಗ್ಗೆ ಮಾಹಿತಿಗಳಿವೆ.

Best Mobiles in India

English summary
I am back with another story. In this video, we are looking at Huawei Foldable Smartphone with Flexible Display 2018!. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X