ದುಬಾರಿ ಐಫೋನ್ ಬೆಲೆ ಭಾರತದಲ್ಲಿ ಕಡಿಮೆ: ರೂ.89000 ಬೆಲೆಯ ಐಫೋನ್ X ಮೇಲೆ ರೂ.30,851 ಕಡಿತ..!
ಜಾಗತಿಕ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯ ಐಫೋನ್ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ಐಫೋನ್ X ಭಾರತದಲ್ಲಿ ಅತೀ ಕಡಿಮೆ ಬೆಲೆಗೆ ದೊರೆಯುತ್ತಿದೆ. ಅಮೆಜಾನ್‌ನಲ್ಲಿ ರೂ.89000 ಬೆಲೆಯ ಐಫೋನ್ X ಮೇಲೆ ರೂ.30,851 ವರೆಗೂ ಕಡಿತವನ್ನು ಕಾಣಬಹುದಾಗಿದೆ. ಈ ಹಿನ್ನಲೆಯಲ್ಲಿ ವಿದೇಶಿಯರು ಭಾರತದಲ್ಲಿಯೇ ಐಫೋನ್ ಖರೀದಿಸುವ ಯೋಜನೆ ಮಾಡುತ್ತಿದ್ದಾರೆ.

ಅಮೆಜಾನ್ ಐಫೋನ್ ಫೇಸ್ಟ್ ಇಲ್ಲಿ ಮಾತ್ರವೇ ಇಷ್ಟು ಪ್ರಮಾಣದ ಕಡಿತವನ್ನು ಕಾಣಬಹುದಾಗಿದೆ. ಏಪ್ರಿಲ್ 10 ರಿಂದ 16ರ ವರೆಗೆ ನಡೆಯಲಿರುವ ಅಮೆಜಾನ್ ಐಫೋನ್ ಫೇಸ್ಟ್ ನಲ್ಲಿ ಆಪಲ್ ಐಫೋನ್‌ಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಕಾಣಬಹುದಾಗಿದೆ. ಈ ಸೇಲ್‌ನಲ್ಲಿ ರೂ.89000 ಬೆಲೆಯ ಐಫೋನ್ X ಮೇಲೆ ರೂ.30,851 ವರೆಗೂ ಕಡಿತವನ್ನು ಪಡೆಯಬಹುದಾಗಿದೆ. ಅದು ಹೇಗೆ ಎಂಬುದನ್ನು ತಿಳಿಸುವು ಪ್ರಯತ್ನ ಇದಾಗಿದೆ.
ಕಡಿತ 01:
ದುಬಾರಿ ಬೆಲೆಯ ಐಫೋನ್ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ಐಫೋನ್ X 64GB ಆವೃತ್ತಿಯ ಬೆಲೆಯಲ್ಲಿ ರೂ.9000 ಕಡಿತವಾಗಿದ್ದು, ರೂ.79999ಕ್ಕೆ ದೊರೆಯಲಿದೆ. ಇದು ಮೊದಲ ಹಂತದ ದರ ಕಡಿತವಾಗಿದೆ.

ಕಡಿತ 02:
ಐಫೋನ್ X 64GB ಆವೃತ್ತಿಯ ಬೆಲೆ ರೂ.ರೂ.79999 ಆಗಿದ್ದು, HDFC ಕಾರ್ಡ್‌ನಲ್ಲಿ ಖರೀದಿ ಮಾಡಿದರೆ ರೂ.4000 ಇನ್‌ಸ್ಟೆಂಟ್ ಕ್ಯಾಷ್ ಬ್ಯಾಕ್ ಅನ್ನು ಕಾಣಬಹುದಾಗಿದೆ. ಇದು ಎರಡನೇ ಹಂತದ ದರ ಕಡಿತವಾಗಿದೆ.

ಕಡಿತ 03:
ಇಲ್ಲದೇ ಅಮೆಜಾನ್ ಐಫೋನ್ X ಕೊಳ್ಳುವವರಿಗೆ ಎಕ್ಸ್‌ಚೇಂಜ್ ಆಫರ್ ಸಹ ನೀಡಿದ್ದು, ನಿಮ್ಮ ಹಳೇಯ ಸ್ಮಾರ್ಟ್‌ಫೋನ್ ಮೇಲೆ ರೂ.17,850 ಕಡಿತವನ್ನು ಪಡೆಯಬಹುದಾಗಿದೆ. ಇದು ಮೂರನೇ ಹಂತಯದದ ಕಡಿತವಾಗಿದ್ದು, ಒಟ್ಟಾರೆಯಾಗಿ ನೀವು ರೂ.30,851 ಗಳ ಕಡಿತವನ್ನು ಪಡೆಯಬಹುದಾಗಿದೆ.


Click it and Unblock the Notifications








