Subscribe to Gizbot

1,499 ದರದಲ್ಲಿ ಐಬಾಲ್‌ ಫಾಬ್‌ 22ಇ ಬಂದಿದೆ

Posted By: Super
1,499 ದರದಲ್ಲಿ ಐಬಾಲ್‌ ಫಾಬ್‌ 22ಇ ಬಂದಿದೆ
ಮುಂಬೈ ಮೂಲದ ಅಗ್ಗದ ಬೆಲೆಯ ತಾಂತ್ರಿಕ ಸರಕುಗಳ ತಯಾರಿಕಾ ಸಂಸ್ಥೆಯಾದ ಐಬಾಲ್‌ ಇತ್ತೀಚೆಗಷ್ಟೇ ತನ್ನಯ ಆಂಡಿ ಸ್ಮಾರ್ಟ್‌ಫೋನ್‌ ಹಾಗೂ ಸ್ಲೈಡ್‌ ಟ್ಯಾಬ್ಲೆಟ್‌ ಬಿಡುಗಡೆ ಮಾಡಿ ಸಾಕಷ್ಟು ಸುದ್ಧಿಯಲ್ಲಿತ್ತು. ಇದೀಗ ಮತ್ತೊಮ್ಮೆ ಸಂಸ್ಥೆಯು ಮತ್ತೊಂದು ಐಬಾಲ್‌ ಫಾಬ್‌ 22ಇ ಪೀಚರ್‌ ಫೋನ್‌ ಬಿಡುಗಡೆ ಮಾಡುವ ಮೂಲಕ ಮತ್ತೊಮ್ಮೆ ಸುದ್ಧಿಯಲ್ಲಿದೆ.

ಬಜೆಟ್‌ ಕುರಿತು ಆಲೋಚಿಸುವ ಭಾರತೀಯ ಗ್ರಾಹಕರುಗೆಂದೆ ಐಬಾಲ್‌ ಸಂಸ್ಥೆಯು ತನ್ನಯ ನೂತನ ಫಾಬ್‌ 22ಇ ಫೀಚರ್‌ ಫೋನ್‌ ಅನ್ನು ರೂ. 1,499 ದರದಲ್ಲಿ ಬಿಡುಗಡೆ ಮಾಡಿದ್ದು ಡ್ಯುಯೆಲ್‌ ಸಿಮ್‌ ಫೀಚರ್‌ ಹೊಂದಿದೆ. ಇದಲ್ಲದೇ ನೂತನ ಮೊಬೈಲ್‌ ಫೋನ್‌ನಲ್ಲಿ ಅತ್ಯಾಕರ್ಷಕ ಫೀಚರ್ಸ್‌ಗಳನ್ನು ಹೊಂದಿದ್ದು ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯುವ ನಿರೀಕ್ಷೆ ಮೂಡಿಸಿದೆ.

ಅಂದಹಾಗೆ ಇಷ್ಟೆಲ್ಲಾ ನಿರೀಕ್ಷೆ ಮೂಡಿಸಿರುವ ನೂತನ ಐಬಾಲ್‌ ಫಾಬ್‌ 22 ಇ ನಲ್ಲಿ ಏನೆಲ್ಲಾ ಫೀಚರ್ಸ್‌ ಹೊಂದಿದೆ ಎಂಬುದನ್ನು ತಿಳಿದುಕೊಳ್ಳೋಣ.

ದರ್ಶಕ : ಮಾರುಕಟ್ಟೆಯಲ್ಲಿನ ಉಳಿದೆಲ್ಲಾ ಫೀಚರ್‌ ಫೋನ್‌ಗಳಂತೆಯೇ 2.4 ಇಂಚಿನ ದರ್ಶಕದೊಂದಿಗೆ 320 x 240 ಪಿಕ್ಸೆಲ್ಸ್‌ ಹೊಂದಿದೆ.

ಪ್ರೊಸೆಸರ್‌ : ಫಾಬ್‌ 22ಇ ನಲ್ಲಿನ ಅತ್ಯಂತ ವಿಶೇಷವಾದ ಫೀಚರ್‌ ಎಂದರೆ 312MHz ಪ್ರೊಸೆಸರ್‌ ಹೊಂದಿರುವುದು, ಈ ಮೂಲಕ ಫಾಸ್ಟೆಸ್ಟ್‌ ಫೀಚರ್‌ ಫೋನ್‌ ಎಂದೆನಿಸಿಕೊಂಡಿದೆ.

ಕ್ಯಾಮೆರಾ : ಈ ವಿಚಾರದಲ್ಲಿ 1.3MP ಹಿಂಬದಿಯ ಕ್ಯಾಮೆರಾ ಹೊಂದಿದೆ, ಕಡಿಮೆ ಬೆಲೆಯ ಫೀಚರ್‌ ಫೋನ್‌ ಆದ್ದರಿಂದ ಮುಂಬದಿಯ ಕ್ಯಾಮೆರಾ ಹೊಂದಿಲ್ಲಾ.

ಸ್ಟೋರೇಜ್‌ : ಫಾಬ್‌ 22ಇ ನಲ್ಲಿ ಮೈಕ್ರೋ ಎಸ್‌ಡಿ ಕಾರ್ಡ್‌ ಸ್ಲಾಟ್‌ ಮೂಲಕ 8GB ವರೆಗೂ ಸ್ಟೋರೇಜ್‌ ಸಾಮರ್ಥ್ಯ ವಿಸ್ತರಿಸಿಕೊಳ್ಳ ಬಹುದಾಗಿದೆ.

ಬ್ಯಾಟರಿ : ಸಂಸ್ಥೆ ಹೇಳಿರುವಂತೆ ನೂತನ ಫೀಚರ್‌ ಫೋನ್‌ನಲ್ಲಿ 2,200 mAh ಬ್ಯಾಟರಿ ಇದ್ದು 8.5 ರಿಂದ 9 ಗಂಡೆಗಳ ಟಾಕ್‌ ಟೈಮ್‌ ನೀಡಬಲ್ಲದು.

ಬೆಲೆ ಹಾಗೂ ಲಭ್ಯತೆ

ಕಡಿಮೆ ಬೆಲೆಯ ಫೀಚರ್‌ ಫೋನ್‌ ಆದ್ದರಿಂದ ನೂತನ ಫಾಬ್‌ 22ಇ ರೂ. 1,499 ದರದಲ್ಲಿ ಲಭ್ಯವಿದೆ. ಖರೀದಿಸಲು ಗೋಪ್ರೋಬೋಗೆ ಭೇಟಿ ನೀಡಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot