Subscribe to Gizbot

ಒನ್‌ಪ್ಲಸ್‌ 5T ಸ್ಮಾರ್ಟ್‌ಫೋನ್‌ನಲ್ಲಿ ನೀವು ನೋಡಲೇ ಬೇಕಾದದ್ದು..!

Posted By: Tejaswini P G

ಸ್ಟಾರ್ ವಾರ್ಸ್ ಕೇವಲ ಒಂದು ಮೂವಿ ಫ್ರಾಂಚೈಸಿ ಅಲ್ಲ. ವರ್ಷಗಳು ಕಳೆದಂತೆ ಈ ಸ್ಪೇಸ್ ಕಥಾನಕ ಹಲವು ಪೀಳಿಗೆಗಳ ಮೇಲೆ ಪ್ರಭಾವ ಬೀರುವ ಲೈಫ್ಸ್ಟೈಲ್ ಆಗಿ ಪರಿವರ್ತನೆ ಗೊಂಡಿದೆ. 2017- ಈ ವರ್ಷ 'ದಿ ಲಾಸ್ಟ್ ಜೇಡಿ' ಮೂಲಕ ಜಾರ್ಜ್ ಲುಕಾಸ್ ನ ಅದ್ಭುತ ಅಂತರಿಕ್ಷ ಪ್ರಯಾಣದ 40ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ. ಲುಕಾಸ್ ನ ನಂತರದ ಸ್ಟಾರ್ ವಾರ್ಸ್ ನ ಮೊದಲ ಚಿತ್ರ ಇದಾಗಿದ್ದು, ಸ್ಟಾರ್ ವಾರ್ಸ್ ಸೀಕ್ವೆಲ್ ಟ್ರಯಾಲಜಿ ಯಲ್ಲಿ ಇದು ಎರಡನೇ ಚಿತ್ರವಾಗಿದ್ದು, ಸ್ಟಾರ್ ವಾರ್ಸ್: ದಿ ಫೋರ್ಸ್ ಅವೇಕನ್ಸ್ ನಂತರದ ಚಿತ್ರವಾಗಿದೆ.

ಒನ್‌ಪ್ಲಸ್‌ 5T ಸ್ಮಾರ್ಟ್‌ಫೋನ್‌ನಲ್ಲಿ ನೀವು ನೋಡಲೇ ಬೇಕಾದದ್ದು..!

ಈ ನೆನಪಿನಲ್ಲಿ ಒನ್‍ಪ್ಲಸ್ ಕಂಪೆನಿಯು ಒನ್‍ಪ್ಲಸ್ 5T ಸ್ಟಾರ್ ವಾರ್ಸ್ ವಿಶೇಷ ಆವೃತ್ತಿಯನ್ನು ಹೊರತಂದಿದ್ದು ಈ ಕ್ರಿಸ್ಮಸ್ ಗೆ ನಿಮ್ಮನ್ನು ಸ್ಟಾರ್ ವಾರ್ಸ್ ನ ಅಭಿಮಾನಿಯಾಗಿಸಲು ಸಜ್ಜಾಗಿದೆ.

Star Wars ಸಿನಿಮಾ ಪ್ರಿಯರಿಗೆ Oneplus 5T Star Wars Edition ಸ್ಮಾರ್ಟ್‌ಫೋನ್ ಖರೀದಿಸುವ ಸುವರ್ಣಾವಕಾಶ!!

ನೀವು ಈಗಾಗಲೇ ಒನ್‍ಪ್ಲಸ್ 5T ಯ ವಿಶೇಷ ಆವೃತ್ತಿಯನ್ನು ಖರೀದಿಸಿದ್ದರೆ ಅಥವಾ ಖರೀದಿಸಲು ಸಜ್ಜಾಗಿದ್ದರೆ ಸ್ಟಾರ್ ವಾರ್ಸ್ ನ ಆಸಕ್ತಿದಾಯಕ ಕಂಟೆಂಟ್ ನಿಮಗಾಗಿ ಕಾಯುತ್ತಿದೆ ಎನ್ನುವುದನ್ನು ತಿಳಿಯಿರಿ. ಹೊಸ ಟ್ರಯಾಲಜಿ ಕೊನೆಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಒನ್ಪ್ಲಸ್ 5T ಯ ಲಿಮಿಟೆಡ್ ಎಡಿಶನ್ ನಲ್ಲಿ ನೀವು ನೋಡಬೇಕಾದ ಕುತೂಹಲಕಾರಿ ಸ್ಟಾರ್ ವಾರ್ಸ್ ಕಂಟೆಂಟ್ ಅನ್ನು ಈ ಲೇಖನದಲ್ಲಿ ಸಂಪಾದಿಸಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಟಾರ್ ವಾರ್ಸ್ : ದಿ ಲಾಸ್ಟ್ ಜೇಡಿ ಆಫೀಶಿಯಲ್ ಟ್ರೇಲರ್

ಸ್ಟಾರ್ ವಾರ್ಸ್ : ದಿ ಲಾಸ್ಟ್ ಜೇಡಿ ಆಫೀಶಿಯಲ್ ಟ್ರೇಲರ್

ಒನ್‍ಪ್ಲಸ್ 5T ವಿಶೇಷ ಆವೃತ್ತಿಯಲ್ಲಿ ನೀವು ನೋಡಬೇಕಾದ ಮೊದಲ ಕಂಟೆಂಟ್ ಎಂದರೆ ನೂತನ ಚಿತ್ರ 'ದಿ ಲಾಸ್ಟ್ ಜೇಡಿ' ಯ ಅಫೀಶಿಯಲ್ ಟ್ರೇಲರ್. ಯೂಟ್ಯೂಬ್ ಗೆ ಲಾಗಿನ್ ಆಗಿ ನಿಮ್ಮ ಒನ್ಪ್ಲಸ್ 5T ಯ 6-ಇಂಚ್ ಸ್ಕ್ರೀನ್ ನಲ್ಲಿ 1080 ಪಿಕ್ಸೆಲ್ ರೆಸೊಲ್ಯೂಶನ್ ನಲ್ಲಿ ದೂರದ ಅಂತರಿಕ್ಷದಲ್ಲಿ ನಡೆಯುವ ಘಟನೆಗಳನ್ನು ವೀಕ್ಷಿಸಿ. 18:9 ಆಸ್ಪೆಕ್ಟ್ ಅನುಪಾತ ಹೊಂದಿರುವ ಇದರ ಸ್ಕ್ರೀನ್ ನಿಮಗೆ ಶ್ರೇಷ್ಟ ಸಿನಿಮ್ಯಾಟಿಕ್ ಅನುಭವ ನೀಡುತ್ತದೆ.

ಸ್ಟಾರ್ ವಾರ್ಸ್ : ದಿ ಕಂಪ್ಲೀಟ್ ಕೆನಾನ್ ಟೈಮ್ಲೈನ್

ಸ್ಟಾರ್ ವಾರ್ಸ್ : ದಿ ಕಂಪ್ಲೀಟ್ ಕೆನಾನ್ ಟೈಮ್ಲೈನ್

ನೀವು ಇತ್ತೀಚೆಗಷ್ಟೇ ಸ್ಟಾರ್ ವಾರ್ಸ್ ನ ಅಭಿಮಾನಿಯಾಗಿದ್ದರೆ ಸ್ಟಾರ್ ವಾರ್ಸ್ ನ ಇತಿಹಾಸ ತಿಳಿಯುವುದು ಆವಶ್ಯಕ. ಇದಕ್ಕಾಗಿ ನೀವು ಒಂದು ದಿನ ಅಥವಾ ಒಂದು ವಾರವನ್ನೇ ವ್ಯಯಿಸ ಬೇಕಾಗಬಹುದು. ನಿಮ್ಮ ಅದೃಷ್ಟಕ್ಕೆ ಇತ್ತೀಚಿಗಷ್ಟೇ ಬಂದ ಸ್ಟಾರ್ ವಾರ್ಸ್ : ದಿ ಕಂಪ್ಲೀಟ್ ಕೆನಾನ್ ಟೈಮ್ಲೈನ್ ಎಂಬ ವೀಡಿಯೋ ಈ ಅದ್ಭುತ ಅಂತರಿಕ್ಷ ಕಥಾನಕದ ಇತಿಹಾಸವನ್ನು ತಿಳಿಸುತ್ತದಲ್ಲದೆ ಈ ಅದ್ಭುತ ಫ್ರಾಂಚೈಸಿ ಯ ಹಿನ್ನಲೆಯನ್ನು ನಿಮಗೆ ನೀಡುತ್ತದೆ.

ಸ್ಟಾರ್ ವಾರ್ಸ್ : ದಿ ಕ್ಲೋನ್ ವಾರ್ಸ್

ಸ್ಟಾರ್ ವಾರ್ಸ್ : ದಿ ಕ್ಲೋನ್ ವಾರ್ಸ್

ಸ್ಟಾರ್ ವಾರ್ಸ್ ಅಭಿಮಾನಿಗಳಿಂದ ಹಿಡಿದು ವಿಮರ್ಶಕರವರೆಗೆ ಟೀಕೆಗಳನ್ನು ಪಡೆದ ಸ್ಟಾರ್ ವಾರ್ಸ್ : ದಿ ಕ್ಲೋನ್ ವಾರ್ಸ್ ಈ ಅದ್ಭುತ ಫ್ರಾಂಚೈಸಿ ಯ ಅತ್ಯಂತ ಕಳಪೆ ಚಿತ್ರವೆನಿಸಿದೆ. ಕೆಲವರು ಇದು ಪ್ರೀಕ್ವೆಲ್ ಚಿತ್ರಗಳಿಗಿಂತಲೂ ಕಳಪೆಯಾಗಿತ್ತು ಎಂದರೆ ಕೆಲವರು ಇದರ ಪ್ರತಿಯೊಂದು ಕ್ಷಣವನ್ನೂ ಮೆಚ್ಚಿದ್ದಾರೆ. ಇದನ್ನು ನಿಮ್ಮ ಒನ್‍ಪ್ಲಸ್ 5T ವಿಶೇಷ ಆವೃತ್ತಿಯಲ್ಲಿ ವೀಕ್ಷಿಸಿ ಮತ್ತು ನೀವೇ ನಿರ್ಧರಿಸಿ.

ಥಿಯೇಟರ್‌ನಲ್ಲಿ ಗೇಮ್ ಆಡುವ ಫೀಲ್ ನೀಡಲಿವೆ 'ಎಲ್‌ಜಿ' ಅಲ್ಟ್ರಾವೈಡ್ ಮಾನಿಟರ್ಸ್!!

ಸ್ಟಾರ್ ವಾರ್ಸ್ : ಗ್ಯಾಲಕ್ಸಿ ಆಫ್ ಹೀರೋಸ್

ಸ್ಟಾರ್ ವಾರ್ಸ್ : ಗ್ಯಾಲಕ್ಸಿ ಆಫ್ ಹೀರೋಸ್

ಸ್ಟಾರ್ ವಾರ್ಸ್ ಲೆಗೆಸಿ ಯ ಅನೇಕಾನೇಕ ವೀಡಿಯೋಗಳನ್ನು ಸ್ಟ್ರೀಮ್ ಮಾಡುವ ನೀವು ನಿಮ್ಮ ಒನ್‍ಪ್ಲಸ್ 5T ಲಿಮಿಟೆಡ್ ಎಡಿಶನ್ ನಲ್ಲಿ ನೀವೇ ಹೀರೋ ಆಗಿ ಗ್ಯಾಲಕ್ಸಿಗಳನ್ನೇಕೆ ಗೆಲ್ಲಬಾರದು? ಅದಕ್ಕಾಗಿ ಡೌನ್ಲೋಡ್ ಮಾಡಿ ಗೂಗಲ್ ಪ್ಲೇಸ್ಟೋರ್ ನಿಂದ ಸ್ಟಾರ್ ವಾರ್ಸ್ : ಗ್ಯಾಲಕ್ಸಿ ಆಫ್ ಹೀರೋಸ್ ಎಂಬ ಆಂಡ್ರಾಯ್ಡ್ ಗೇಮ್. ಇಂಟರ್-ಗ್ಯಾಲಾಕ್ಟಿಕ್ ಯುದ್ಧಗಳನ್ನು ಸ್ಪೇಸ್ ಶಿಪ್ ನಲ್ಲಿ ಕುಳಿತು ಹೋರಾಡಿ, ದುಷ್ಟರ ವಿರುದ್ಧ ಹೋರಾಡಿ ಮತ್ತು ದುಷ್ಟ ರ್ಯಾಂಕರ್ ಅನ್ನು ಸೋಲಿಸಿ. ಒನ್‍ಪ್ಲಸ್ 5T ಯಲ್ಲಿ ನೀವು ಅನ್ವೇಷಿಸಬೇಕಾದ ಫೀಚರ್ಗಳು ಹಲವು ಇದ್ದು, ಒನ್‍ಪ್ಲಸ್ 5T ಯೇ ಒಂದು ಅದ್ಭುತವೆನಿಸಿದೆ.

ಡಾರ್ತ್ ವಾಡೆರ್ಸ್ ಡೆತ್ : ರಿಟರ್ನ್ ಆಫ್ ಜೇಡಿ

ಡಾರ್ತ್ ವಾಡೆರ್ಸ್ ಡೆತ್ : ರಿಟರ್ನ್ ಆಫ್ ಜೇಡಿ

ಪ್ರೇಕ್ಷಕರಿಗೆ ಸಾವಿನ ಹೊಸ್ತಿಲಲ್ಲಿರುವ ವಾಡೆರ್ ನ ಮುಖ ಕಾಣಿಸುವ ದೃಶ್ಯವೇ ಸ್ಟಾರ್ ವಾರ್ಸ್ ನ ಅತ್ಯಂತ ಐಕಾನಿಕ್ ದೃಶ್ಯವೆನಿಸಿದೆ.ಸಿತ್ ಲಾರ್ಡ್ ನ ಮಾಸ್ಕ್ ಅನ್ನು ಲ್ಯೂಕ್ ತೆಗೆಯುವ ದೃಶ್ಯಕ್ಕೆ ಜಾನ್ ವಿಲಿಯಮ್ಸ್ ಶ್ರೇಷ್ಠ ಹಿನ್ನಲೆ ಸಂಗೀತ ನೀಡಿದ್ದು ಅದನ್ನು ಮರೆಯಲಾಗದ ಕ್ಷಣವಾಗಿಸಿದೆ.

ಲೈಟ್ಸೇಬರ್ ಯುದ್ಧಗಳು

ಲೈಟ್ಸೇಬರ್ ಯುದ್ಧಗಳು

ಸ್ಟಾರ್ ವಾರ್ಸ್ ನ ಆಸಕ್ತಿದಾಯಕ ಕ್ಷಣಗಳ ಪಟ್ಟಿ ಅದರ ಅನೇಕ ಅದ್ಭುತ ಲೈಟ್ಸೇಬರ್ ಯುದ್ಧಗಳನ್ನು ಹೊರತು ಪಡಿಸಿದರೆ ಅಪೂರ್ಣವೆನಿಸುತ್ತದೆ. ಯೂಟ್ಯೂಬ್ ನಲ್ಲಿ ನೀವು ಇಂತಹ ಹಲವು ಲೈಟ್ಸೇಬರ್ ಯುದ್ಧಗಳನ್ನು ಅನೇಕ ಘಂಟೆಗಳ ಕಾಲ ನೋಡಿ ಆನಂದಿಸಬಹುದಾಗಿದೆ. ಒನ್‍ಪ್ಲಸ್ 5T ಯ 1080p ರೆಸೊಲ್ಯೂಶನ್ ನ ಸ್ಕ್ರೀನ್ ಈ ದೃಶ್ಯಗಳನ್ನು ವೀಕ್ಷಿಸಲು ಸರಿಯಾದ ಸಾಧನವಾಗಿದೆ.

ಒನ್‍ಪ್ಲಸ್ 5T ಸ್ಟಾರ್ ವಾರ್ಸ್ ಲಿಮಿಟೆಡ್ ಎಡಿಶನ್ ಫೋನ್ ಅಮೇಜಾನ್ ಇಂಡಿಯಾ ಮತ್ತು OnePlusStore.inನಲ್ಲಿ ಲಭ್ಯವಿದೆ. ಅಲ್ಲದೆ ಸ್ಟಾಕ್ ಇರುವ ತನಕ ಬೆಂಗಳೂರು ಮತ್ತು ನೋಯ್ಡಾ ದ ಒನ್‍ಪ್ಲಸ್ ಎಕ್ಸ್ಪೀರಿಯೆನ್ಸ್ ಸ್ಟೋರ್ ಗಳಲ್ಲಿಯೂ ಇದು ಲಭ್ಯವಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Interesting Star Wars content you must watch on OnePlus 5T. Here's the list of must watch videos and games that as a Star Wars fan you must watch on your Limited Edition Star Wars OnePlus 5T
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot