ಕೇವಲ ರೂ. 4,199ಕ್ಕೆ ಇಂಟೆಲ್ ಆಕ್ವಾ 4.0 4G ಪೋನು ...!

Written By:

ಭಾರತದಲ್ಲಿ ರಿಲಾಯನ್ಸ್ ಮಾಲೀಕತ್ವದ ಜಿಯೋ ಲಾಂಚ್ ಆದ ನಂತರದ ದಿನದಲ್ಲಿ 4G ಸ್ಮಾರ್ಟ್‌ಪೋನುಗಳ ಮಾರಾಟವು ಹೆಚ್ಚಾಗಿದ್ದು, ಬಹುತೇಕ ಎಲ್ಲಾ ಕಂಪನಿಗಳೂ 4G ಸಪೋರ್ಟ್ ಮಾಡುವ ಪೋನುಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ.

ಕೇವಲ ರೂ. 4,199ಕ್ಕೆ ಇಂಟೆಲ್ ಆಕ್ವಾ 4.0 4G ಪೋನು ...!

ಓದಿರಿ: ಹೆದರಬೇಡಿ..! ಜಿಯೋ ಉಚಿತ ಕೊಡುಗೆ ಕೊನೆಯಾಗುವುದಿಲ್ಲ, ಟ್ರಾಯ್‌ ಕೊಟ್ಟಿದೆ ಗ್ರೀನ್‌ ಸಿಗ್ನಲ್

ಕೇಲವು ಕಂಪನಿಗಳೂ ಅತೀ ಹೆಚ್ಚಿನ ಬೆಲೆ ಪೋನುಗಳನ್ನು ಮಾರುಕಟ್ಟೆಗೆ ಬಿಟ್ಟರೆ ಇನ್ನು ಕೇಲವು ಕಂಪನಿಗಳು ಮಾಧ್ಯಮ ವರ್ಗವನ್ನು ಗಮನದಲ್ಲಿಟ್ಟುಕೊಂಡು ಕಡಿಮೆ ಬೆಲೆಯ ಪೋನುಗಳನ್ನು ಸಹ ಬಿಡುಗಡೆ ಮಾಡುತ್ತಿವೆ. ಇದೇ ಸಾಲಿಗೆ ಸೇರಲಿದೆ. ಇಂಟೆಲ್ ಆಕ್ವಾ 4.0 4G ಪೋನು. ಈ ಪೋನು ಕೇವಲ ರೂ. 4,199ಕ್ಕೆ ಲಭ್ಯವಿದ್ದು, ಜಿಯೋ ಸಿಮ್ ಅನ್ನು ಈ ಪೋನಿನಲ್ಲಿ ಬಳಸಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಮೋಲೈಡ್ ಸ್ಕ್ರಿನ್:

ಆಮೋಲೈಡ್ ಸ್ಕ್ರಿನ್:

ಇಂಟೆಲ್ ಆಕ್ವಾ 4.0 4G ಪೋನಿನಲ್ಲಿ 4 ಇಂಚಿನ 800x480 ಗುಣಮಟ್ಟದ ಆಮೋಲೈಡ್ ಸ್ಕ್ರಿನ್ ಇದೆ. ಈ ಪೋನು ಗೋಲ್ಡ್, ಬ್ಲಾಕ್ ಮತ್ತು ಬ್ಲೂ ಬಣ್ಣಗಳಲ್ಲಿ ಈ ಪೋನ್ ಲಭ್ಯವಿದೆ.

1.3GHz ಪ್ರೋಸೆಸರ್:

1.3GHz ಪ್ರೋಸೆಸರ್:

ಇಂಟೆಲ್ ಆಕ್ವಾ 4.0 4G ಪೋನಿನಲ್ಲಿ ವೇಗದ ಕಾರ್ಯಚರಣೆಗಾಗಿ 1.3GHz ಪ್ರೋಸೆಸರ್ ಅಳವಡಿಸಲಾಗಿದ್ದು, ಆಂಡ್ರಾಯ್ಡ್ 6.0 ನಲ್ಲಿ ಕಾರ್ಯನಿರ್ವಹಿಸಲಿದೆ. 512MB RAM ಇದ್ದು, ಇದರೊಂದಿಗೆ 4GB ಇಂಟರ್ನಲ್ ಮೆಮೊರಿಯನ್ನು ಈ ಪೋನ್ ಹೊಂದಿದೆ. ಅಲ್ಲದೇ ಮೆಮೊರಿ ಕಾರ್ಡ್ ಹಾಕಿಕೊಂಡು 32GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ.

ಕ್ಯಾಮೆರಾ ಜೊತೆಗೆ LED ಪ್ಲಾಷ್:

ಕ್ಯಾಮೆರಾ ಜೊತೆಗೆ LED ಪ್ಲಾಷ್:

ಇಂಟೆಲ್ ಆಕ್ವಾ 4.0 4G ಪೋನಿನ ಹಿಂಭಾಗದಲ್ಲಿ 2MP ಕ್ಯಾಮೆರಾವನ್ನು ಹೊಂದಿದ್ದು, LED ಪ್ಲಾಫ್ ಲೈಟ್ ಸಹ ಇದರೊಂದಿಗೆ ಇದೆ. ಸೆಲ್ಪಿಗಾಗಿ VGA ಕ್ಯಾಮೆರಾ ನೀಡಲಾಗಿದೆ.

ಇತರೆ ವಿಶೇಷತೆಗಳು:

ಇತರೆ ವಿಶೇಷತೆಗಳು:

4G VoLTE ಗೆ ಸಫೊರ್ಟ್ ಮಾಡುವ ಈ ಪೋನಿನಲ್ಲಿ 1500mAh ಬ್ಯಾಟರಿಯನ್ನು ಅಳವಡಿಸಲಾಗಿದೆ. ಉಳಿದಂತೆ Wi-Fi, Bluetooth 4.0, ಮತ್ತು GPS ಸೇವೆಗಳು ಈ ಪೋನಿನಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
The company has now unveiled the Intex Aqua 4.0 4G, which is an entry-level VoLTE-enabled smartphone.to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot