ಐಫೋನ್ 13 vs ಐಫೋನ್ 13 ಪ್ರೊ: ಖರೀದಿಗೆ ಮಾಡಲು ಯಾವುದು ಬೆಸ್ಟ್?

|

ಟೆಕ್ ದೊಡ್ಡಣ್ಣ ಆಪಲ್ ಇತ್ತೀಚಿಗೆ ಐಫೋನ್‌ 13 ಸರಣಿ ಲಾಂಚ್ ಮಾಡಿ ಜೂಮ್‌ನಲ್ಲಿದೆ. ಆದ್ರೆ, ಇದೀಗ ಆಪಲ್‌ ಕಂಪನಿಯ ಮುಂದಿನ ಐಫೋನ್‌ 14 ಸರಣಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಐಫೋನ್‌ ಪ್ರಿಯರು ಐಫೋನ್‌ 14 ಮಾಡೆಲ್‌ಗಳನ್ನು ಬಿಡುಗಡೆಯನ್ನು ಎದುರುನೋಡುತ್ತೀದ್ದಾರೆ. ಇನ್ನು ಐಫೋನ್‌ 13 ಸರಣಿ ಫೋನ್‌ಗಳು ಸಹ ಗ್ರಾಹಕರನ್ನು ಆಕರ್ಷಿಸದ್ದು, ಆ ಪೈಕಿ ಐಫೋನ್ 13 ಮತ್ತು ಐಫೋನ್ 13 ಪ್ರೊ ಮಾಡೆಲ್‌ಗಳು ಭಾರೀ ಗಮನ ಸೆಳೆದಿವೆ.

ಟ್ರೆಂಡಿ

ಹೌದು, ಆಪಲ್‌ ಸಂಸ್ಥೆಯ ಐಫೋನ್ 13 (iPhone 13) ಮತ್ತು ಐಫೋನ್ 13 ಪ್ರೊ (iPhone 13 Pro) ಮಾಡೆಲ್‌ಗಳು ಅಧಿಕ ಗ್ರಾಹಕರನ್ನು ಸೆಳೆದಿದ್ದು, ಕೆಲವೊಂದು ಫೀಚರ್ಸ್‌ಗಳು ಟ್ರೆಂಡಿ ಎನಿಸಿಕೊಂಡಿವೆ. ಇನ್ನೇನು ಐಫೋನ್‌ 14 ಸರಣಿ ಲಗ್ಗೆ ಇಡುತ್ತಿದ್ದರೂ, ಆಪಲ್‌ನ ಈ ಎರಡು ಮಾಡೆಲ್‌ಗಳು ಮಾರುಕಟ್ಟೆಯಲ್ಲಿ ಇನ್ನು ಸದ್ದು ಮಾಡುತ್ತ ಮುನ್ನಡೆದಿವೆ. ಹಾಗಾದರೇ ಐಫೋನ್ 13 ಮತ್ತು ಐಫೋನ್ 13 ಪ್ರೊ ಟಾಪ್‌ ಫೀಚರ್ಸ್‌ಗಳೆನು? ಅವುಗಳ ಭಿನ್ನತೆಗಳೆನು? ಈ ಎರಡು ಫೋನ್‌ಗಳಲ್ಲಿ ಖರೀದಿಗೆ ಯಾವುದು ಬೆಸ್ಟ್‌ ಎನ್ನುವ ಗೊಂದಲ ಹೊಸ ಐಫೋನ್‌ ಖರೀದಿಸುವವರಲ್ಲಿ ಮೂಡಿರುತ್ತದೆ. ಈ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಐಫೋನ್ 13 vs ಐಫೋನ್ 13 ಪ್ರೊ : ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಐಫೋನ್ 13 vs ಐಫೋನ್ 13 ಪ್ರೊ : ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಐಫೋನ್ 13 ಮತ್ತು ಐಫೋನ್ 13 ಪ್ರೊ ಈ ಎರಡು ಫೋನ್‌ಗಳು OLED ತಂತ್ರಜ್ಞಾನವನ್ನು ಬಳಸಿಕೊಂಡು 6.1 ಇಂಚಿನ ರೆಟಿನಾ XDR ಡಿಸ್‌ಪ್ಲೇ ಹೊಂದಿದ್ದು, 2532 x 1170 ಪಿಕ್ಸಲ್ ರೆಸಲ್ಯೂಶನ್ ಪಡೆದಿವೆ. ಐಫೋನ್ 13 60Hz ರಿಫ್ರೆಶ್ ದರ ಹೊಂದಿದ್ದು, ಐಫೋನ್ 13 ಪ್ರೊ ಫೋನ್ 120Hz ಹೊಂದಿದೆ. ಹಾಗೆಯೇ ಈ ಎರಡು ಡಿಸ್‌ಪ್ಲೇಗಳು ಪ್ರತಿ ಇಂಚಿಗೆ 460 ಪಿಕ್ಸೆಲ್‌ಗಳಿಗೆ ಹೊಂದಿವೆ. ಐಫೋನ್ 13 ಫೋನ್ 800 nits ಹೊಂದಿದ್ದರೇ, ಐಫೋನ್ 13 ಪ್ರೊ ಫೋನ್ 1000 nits ಸಾಮರ್ಥ್ಯ ಹೊಂದಿದೆ. HDR ಸೌಲಭ್ಯ ಸಹ ಪಡೆದಿವೆ. ಐಫೋನ್ 13 vs ಐಫೋನ್ 13 ಪ್ರೊ ಫೋನ್‌ಗಳ ಡಿಸ್‌ಪ್ಲೇ ನಡುವಿನ ಒಂದು ಪ್ರಮುಖ ವ್ಯತ್ಯಾಸವೆಂದರೇ, ಪ್ರೊ ಮೋಷನ್ (ProMotion ತಂತ್ರಜ್ಞಾನ)

ಐಫೋನ್ 13 vs ಐಫೋನ್ 13 ಪ್ರೊ : ಪ್ರೊಸೆಸರ್‌ ಪವರ್‌ ಮತ್ತು ಮೆಮೊರಿ

ಐಫೋನ್ 13 vs ಐಫೋನ್ 13 ಪ್ರೊ : ಪ್ರೊಸೆಸರ್‌ ಪವರ್‌ ಮತ್ತು ಮೆಮೊರಿ

ಐಫೋನ್ 13 ಮತ್ತು ಐಫೋನ್ 13 ಪ್ರೊ ಈ ಎರಡು ಫೋನ್‌ಗಳು ಎರಡೂ A15 ಬಯೋನಿಕ್ ಪ್ರೊಸೆಸರ್‌ನಿಂದ ಚಾಲಿತವಾಗಿದ್ದು, 2 ಕಾರ್ಯಕ್ಷಮತೆ ಮತ್ತು 4 ದಕ್ಷತೆಯ ಕೋರ್‌ಗಳೊಂದಿಗೆ 6-ಕೋರ್ CPU ಅನ್ನು ಪ್ಯಾಕ್ ಮಾಡುತ್ತದೆ. A15 ಬಯೋನಿಕ್ ಪ್ರೊಸೆಸರ್ ಯಂತ್ರ ಕಲಿಕೆ ಮತ್ತು ಕೃತಕ ಬುದ್ಧಿಮತ್ತೆ ಕಾರ್ಯಗಳಿಗೆ ಶಕ್ತಿ ನೀಡಲು ಹೊಸ 16-ಕೋರ್ ನ್ಯೂರಲ್ ಎಂಜಿನ್ ಅನ್ನು ಸಹ ಹೊಂದಿದೆ. ಈ ಎರಡು ಫೋನ್‌ಗಳ ನಡುವಿನ ಒಂದು ವ್ಯತ್ಯಾಸವೆಂದರೆ ಐಫೋನ್ 13 4-ಕೋರ್ GPU ಅನ್ನು ಹೊಂದಿದೆ, ಆದರೆ ಐಫೋನ್ 13 ಪ್ರೊ 5-ಕೋರ್ CPU ಅನ್ನು ಹೊಂದಿದೆ. ಹಾಗೆಯೇ ಆಪಲ್ ಈ ಸರಣಿಯ RAM ಕಾನ್ಫಿಗರೇಶನ್‌ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ, ಐಫೋನ್‌ 13 4GB RAM ಅನ್ನು ಪ್ಯಾಕ್ ಮಾಡುತ್ತದೆ ಮತ್ತು ಐಫೋನ್‌ 13 ಪ್ರೊ 6GB RAM ಅನ್ನು ಪ್ಯಾಕ್ ಮಾಡುತ್ತದೆ.

ಐಫೋನ್ 13 vs ಐಫೋನ್ 13 ಪ್ರೊ : ಬ್ಯಾಟರಿ ಬ್ಯಾಕ್‌ಅಪ್‌

ಐಫೋನ್ 13 vs ಐಫೋನ್ 13 ಪ್ರೊ : ಬ್ಯಾಟರಿ ಬ್ಯಾಕ್‌ಅಪ್‌

ಐಫೋನ್ 13 ಫೋನಿನ ಆಡಿಯೋ ಪ್ಲೇಬ್ಯಾಕ್: ಅಂದಾಜು 75 ಗಂಟೆಗಳು, ಹಾಗೆಯೇ ವೀಡಿಯೊ ಪ್ಲೇಬ್ಯಾಕ್: ಅಂದಾಜು 15 ಗಂಟೆಗಳವರೆಗೆ ಇದೆ. ಇನ್ನು ವೀಡಿಯೊ ಪ್ಲೇಬ್ಯಾಕ್: 19 ಗಂಟೆಗಳವರೆಗೆ ಬ್ಯಾಕ್‌ಅಪ್‌ ನೀಡಲಿದೆ. ಅದೇ ರಿತಿ ಐಫೋನ್ 13 ಪ್ರೊ ಫೋನಿನ ಆಡಿಯೋ ಪ್ಲೇಬ್ಯಾಕ್: ಅಂದಾಜು 75 ಗಂಟೆಗಳು, ವೀಡಿಯೊ ಪ್ಲೇಬ್ಯಾಕ್: ಅಂದಾಜು 20 ಗಂಟೆಗಳವರೆಗೆ ಇದ್ದು, ಇನ್ನು ವೀಡಿಯೊ ಪ್ಲೇಬ್ಯಾಕ್: 22 ಗಂಟೆಗಳವರೆಗೆ ಬೆಂಬಲಿಸಲಿದೆ. ಎರಡೂ ಫೋನ್‌ಗಳು 20W ಪವರ್ ಅಡಾಪ್ಟರ್‌ನೊಂದಿಗೆ 30 ನಿಮಿಷಗಳಲ್ಲಿ 50% ಚಾರ್ಜ್ ಅನ್ನು ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತವೆ.

ಐಫೋನ್ 13 vs ಐಫೋನ್ 13 ಪ್ರೊ: ಕ್ಯಾಮೆರಾ ಸೆಟ್‌ಅಪ್‌

ಐಫೋನ್ 13 vs ಐಫೋನ್ 13 ಪ್ರೊ: ಕ್ಯಾಮೆರಾ ಸೆಟ್‌ಅಪ್‌

ಐಫೋನ್ 13 ಮತ್ತು ಐಫೋನ್ 13 ಪ್ರೊ ನಡುವಿನ ವ್ಯತ್ಯಾಸಗಳನ್ನು ಕಾಣಬಹುದಾಗಿದೆ. ಐಫೋನ್ 13 ಹಿಂಭಾಗದಲ್ಲಿ ವೈಡ್ ಮತ್ತು ಅಲ್ಟ್ರಾ ವೈಡ್ ಕ್ಯಾಮೆರಾಗಳೊಂದಿಗೆ ಡ್ಯುಯಲ್ 12 ಮೆಗಾ ಪಿಕ್ಸಲ್‌ ಕ್ಯಾಮೆರಾ ರಚನೆಯನ್ನು ಹೊಂದಿದೆ. ಮುಂಭಾಗದಲ್ಲಿ, ನೀವು 12 ಮೆಗಾ ಪಿಕ್ಸಲ್‌ f/2.2 ಅಪರ್ಚರ್ ಸೆಲ್ಫಿ ಕ್ಯಾಮೆರಾವನ್ನು ಕಾಣುತ್ತೀರಿ. ಅದೇ ರೀತಿ ಐಫೋನ್ 13 ಪ್ರೊ ಹಿಂಭಾಗದಲ್ಲಿ ಟ್ರಿಪಲ್-ಲೆನ್ಸ್ ಕ್ಯಾಮೆರಾ ಸಿಸ್ಟಮ್ ಜೊತೆಗೆ ಲಿಡಾರ್ ಸ್ಕ್ಯಾನರ್ ಅನ್ನು ಒಳಗೊಂಡಿದೆ. ಟ್ರಿಪಲ್-ಲೆನ್ಸ್ ಕ್ಯಾಮೆರಾ ಸೆಟಪ್ ಟೆಲಿಫೋಟೋ, ವೈಡ್ ಮತ್ತು ಅಲ್ಟ್ರಾ ವೈಡ್ ಕ್ಯಾಮೆರಾಗಳನ್ನು ಒಳಗೊಂಡಿದೆ. ಮುಂಭಾಗದಲ್ಲಿ, ನೀವು f/2.2 ದ್ಯುತಿರಂಧ್ರದೊಂದಿಗೆ ಅದೇ 12 ಮೆಗಾ ಪಿಕ್ಸಲ್‌ ಕ್ಯಾಮೆರಾವನ್ನು ಕಾಣುತ್ತೀರಿ.

ಐಫೋನ್ 13 vs ಐಫೋನ್ 13 ಪ್ರೊ: ವಿಡಿಯೋ ರೆಕಾರ್ಡಿಂಗ್

ಐಫೋನ್ 13 vs ಐಫೋನ್ 13 ಪ್ರೊ: ವಿಡಿಯೋ ರೆಕಾರ್ಡಿಂಗ್

ವಿಡಿಯೋ ರೆಕಾರ್ಡಿಂಗ್‌ಗೆ ಸಂಬಂಧಿಸಿದಂತೆ, ಐಫೋನ್ 13 ಮತ್ತು ಐಫೋನ್ 13 ಪ್ರೊ ಈ ಎರಡೂ 24 fps, 25 fps, 30 fps, ಅಥವಾ 60 fps ನಲ್ಲಿ 4K ವೀಡಿಯೊ ರೆಕಾರ್ಡಿಂಗ್ ಅನ್ನು ಬೆಂಬಲಿಸುತ್ತವೆ. ಜೊತೆಗೆ 60 fps ನಲ್ಲಿ 4K ವರೆಗೆ ಡಾಲ್ಬಿ ವಿಷನ್‌ನೊಂದಿಗೆ HDR ವೀಡಿಯೊ ರೆಕಾರ್ಡಿಂಗ್ ಅನ್ನು ಬೆಂಬಲಿಸಲಿದ್ದು, ಸಿನಿಮ್ಯಾಟಿಕ್ ಮೋಡ್ ಅನ್ನು ಸಹ ಹೊಂದಿವೆ. ಆದ್ರೆ, ಒಂದು ಗಮನಾರ್ಹ ವ್ಯತ್ಯಾಸವೆಂದರೆ, ಐಫೋನ್ 13 ಪ್ರೊ ಫೋನಿನಲ್ಲಿ 30 fps ನಲ್ಲಿ 4K ವರೆಗೆ ಆಪಲ್‌ನ ProRes ವೀಡಿಯೊ ರೆಕಾರ್ಡಿಂಗ್ ಗುಣಮಟ್ಟಕ್ಕೆ ಬೆಂಬಲವನ್ನು ಪಡೆದಿದೆ.

ಐಫೋನ್ 13 vs ಐಫೋನ್ 13 ಪ್ರೊ: ಪ್ರೈಸ್‌ ಟ್ಯಾಗ್‌ ವಿವರ

ಐಫೋನ್ 13 vs ಐಫೋನ್ 13 ಪ್ರೊ: ಪ್ರೈಸ್‌ ಟ್ಯಾಗ್‌ ವಿವರ

ಆಪಲ್ ಐಫೋನ್‌ 13 ಮೂರು ಸ್ಟೋರೇಜ್ ವೇರಿಯಂಟ್‌ ಮಾಡೆಲ್‌ಗಳ ಆಯ್ಕೆ ಪಡೆದಿದ್ದು, ಅವುಗಳು ಕ್ರಮವಾಗಿ 128GB, 256GB ಮತ್ತು 512GB ಆಗಿವೆ. ಇನ್ನು ಐಫೋನ್‌ 13 ಆರಂಭಿಕ ವೇರಿಯಂಟ್‌ ಬೆಲೆಯು 69,900ರೂ. ಆಗಿದೆ. ಅದೇ ರೀತಿ ಐಫೋನ್ 13 ಪ್ರೊ ಸಹ ನಾಲ್ಕು ವೇರಿಯಂಟ್‌ ಆಯ್ಕೆ ಪಡೆದಿದ್ದು, ಕ್ರಮವಾಗಿ 128GB, 256GB, 512GB ಮತ್ತು 1TB ಆಗಿವೆ. ಇನ್ನು ಐಫೋನ್ 13 ಪ್ರೊ ಫೋನಿನ ಆರಂಭಿಕ ವೇರಿಯಂಟ್‌ ಬೆಲೆಯು 1,19,900ರೂ. ಆಗಿದೆ.

ಕೊನೆಯ ಮಾತು: ಖರೀದಿಗೆ ಯಾವುದು ಬೆಸ್ಟ್?

ಕೊನೆಯ ಮಾತು: ಖರೀದಿಗೆ ಯಾವುದು ಬೆಸ್ಟ್?

ಐಫೋನ್ 13 vs ಐಫೋನ್ 13 ಪ್ರೊ ಫೋನ್‌ಗಳು ಫೀಚರ್ಸ್‌ಗಳ ವಿಷಯದಲ್ಲಿ ಬಹುತೇಕ ಸಾಮ್ಯತೆಯ ಹೊಂದಿವೆ. ಅದಾಗ್ಯೂ, ಸ್ಟೋರೇಜ್‌ ವೇರಿಯಂಟ್‌ನಲ್ಲಿ ಫೋ ಮಾಡೆಲ್‌ 1TB ಆಯ್ಕೆ ನೀಡಿದೆ. ಹಾಗೆಯೇ ಐಫೋನ್ 13 ಪ್ರೊ ಫೋನ್ ಪ್ರೊ ಮೊಷನ್ ಡಿಸ್‌ಪ್ಲೇ ಹೊಂದಿದೆ. ಇನ್ನುಳಿದಂತೆ ಖರೀದಿಗೆ ಬೊಂಬಾಟ್‌ ಆಗಿವೆ. ಇನ್ನು ಗ್ರಾಹಕರು ಈ ಎರಡು ಫೋನ್‌ಗಳಲ್ಲಿ ಬಜೆಟ್‌ ಹಾಗೂ ಅಗತ್ಯತೆ ಆಧರಿಸಿ ಖರೀದಿಸುವುದು ಸೂಕ್ತ.

Best Mobiles in India

English summary
iPhone 13 vs iPhone 13 Pro: What are the Difference? Which Should You Choose?

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X