ಆಪಲ್ ಐಫೋನ್ 7 ರ ಬಗೆಗಿನ ಹೊಸ ಸುದ್ದಿ ವಿಶೇಷತೆಗಳನ್ನು ಖಚಿತಪಡಿಸುತ್ತದೆ : 7 ಮುಖ್ಯ ತಿಳಿಯಬೇಕಾದ ಸಂಗತಿ

By Prateeksha
|

ಅಂತರ್ಜಾಲದೆಲ್ಲೆಡೆ ಆಪಲ್ ಐಫೋನ್ 7 ರ ಬಗ್ಗೆ ಗಾಳಿಮಾತು ಹರಿದಾಡುತ್ತಿದೆ, ಅದರಲ್ಲಿ ಬಹಳಷ್ಟು ಜನ ಒಂದೇ ಥರದ ಮಾಹಿತಿ ಯನ್ನು ಒದಗಿಸಿದ್ದಾರೆ. ವರದಿಯ ಪ್ರಕಾರ, ಮುಂಬರುವ ಐಫೋನ್ ಮೊಡೆಲ್ಸ್ ಹೆಚ್ಚು ಕಡಿಮೆ ಹಿಂದಿನ ವರ್ಷದ ಐಫೋನ್ 6 ರ ಡಿಜೈನ್ ನಂತೆ ಇರಬಹುದು. ಸ್ವಲ್ಪ ಆದರೆ ಮುಖ್ಯ ಬದಲಾವಣೆ ಹೊಂದಿರುತ್ತದೆ. ಈಗ ಹೊಸ ವರದಿ ಬಂದಿದೆ ಐಫೋನ್ 7 ರ ವಿಶೇಷತೆಗಳ ಬಗ್ಗೆ ಖಚಿತಪಡಿಸಲು. ಈ ವರದಿಯ ಜೊತೆಗೆ, ಇನ್ನೊಂದು ಸುದ್ದಿ ಮುಂಬರುವ ಐಫೋನ್ 7 ರ ಮದರ್ ಬೋರ್ಡ್ ನ ವಿವರಣೆ ನೀಡುತ್ತದೆ.

ಆಪಲ್ ಐಫೋನ್ 7 ರ ಬಗೆಗಿನ ಹೊಸ ಸುದ್ದಿ  ವಿಶೇಷತೆಗಳನ್ನು ಖಚಿತಪಡಿಸುತ್ತದೆ

ಮಾರ್ಕ್ ಗುರ್‍ಮನ್ ವರದಿ (ಬ್ಲೂಮ್‍ಬರ್ಗ್) ಹೇಳಿತು ಅದರ ಮೂಲಗಳು ಖಚಿತಪಡಿಸಿವೆ ಐಫೋನ್ ಸೀರಿಸ್ ನ ಪ್ರಮುಖ ಫೀಚರ್ ಗಳ ಬಗ್ಗೆ. ವರದಿ ಪ್ರಕಾರ, ಸುದ್ದಿಯಲ್ಲಿರುವ ಐಫೋನ್ 7 ನಲ್ಲಿ ಹೆಡ್ ಫೋನ್ ಜ್ಯಾಕ್ ಒಂದು ಇಲ್ಲವಾಗಿದೆ. ವರದಿಯ ಮುಖ್ಯಾಂಶವೆಂದರೆ ರೇರ್ ಮೇಲಿನ ಆಂಟೆನಾಸ್ ನನ್ನು ರಿಡಿಜೈನ್ ಮಾಡಲಾಗಿದೆ. ಮತ್ತೊಂದು ಹಳೆಯ ಗಾಳಿಸುದ್ದಿ ಈಗ ಖಚಿತಪಡಿಸಲಾಗಿದ್ದು ಯಾವುದೆಂದರೆ 5.5 ಇಂಚ್ ಮೊಡೆಲ್ ಐಫೋನ್ ನಲ್ಲಿ ಡುಯಲ್ ಕ್ಯಾಮೆರಾ ಸೆಟ್ ಅಪ್ ಇದೆ.

ಓದಿರಿ: 'ವಿಂಡೋಸ್‌ 10'ನಲ್ಲಿ ಭಾಷೆ ಆಡ್‌ ಮಾಡುವುದು, ರಿಮೂವ್‌ ಮತ್ತು ಬದಲಾವಣೆ ಹೇಗೆ?

ಮತ್ತೊಂದು ವರದಿ, ಇನ್ನೊಂದು ಕಡೆಯಿಂದ ಹೊಸ ಚಿತ್ರಗಳನ್ನು ತೋರಿಸುತ್ತದೆ, ವೀಬೊ ದಲ್ಲಿ ಪೋಸ್ಟ್ ಮಾಡಿದಂತೆ ಆಪಲ್ ಐಫೋನ್ 7 ಮದರ್ ಬೋರ್ಡ್ ಮತ್ತು ಅದರ ವೈಶಿಷ್ಟ್ಯತೆಗಳನ್ನು ತೋರಿಸುತ್ತದೆ.

ಆಪಲ್ ಐಫೋನ್ 7 ರ ಬಗೆಗಿನ ಹೊಸ ಸುದ್ದಿ  ವಿಶೇಷತೆಗಳನ್ನು ಖಚಿತಪಡಿಸುತ್ತದೆ

ಆಪಲ್ ಮುಂದಿನ ತಿಂಗಳು ಆಪಲ್ ಐಫೋನ್ 9 ಮತ್ತು ಆಪಲ್ ಐಫೋನ್ 7 ಪ್ಲಸ್ ಅನ್ನು ಬಿಡುಗಡೆ ಮಾಡಲಿದೆ. ಇನ್ನೊಂದು ಕೇಳಿಬಂದ ಸುದ್ದಿಯೆಂದರೆ ಕಂಪನಿ ಮೂರನೆ ಮೊಡೆಲ್ ಬಿಡುಗಡೆ ಮಾಡಲಿದೆ, ಆಪಲ್ ಐಫೋನ್ ಪ್ರೊ. ಎರಡೂ ಹೊಸ ವರದಿಗಳ ಆಧಾರದ ಮೇಲೆ ಹಳೆ ಹೊರಬಂದ ಸುದ್ದಿಯನ್ನು ಸೇರಿಸಿ ನಾವು 7 ಪ್ರಮುಖ ಸ್ಪೆಸಿಫಿಕೇಷನ್ ಗಳನ್ನು ಪಟ್ಟಿ ಮಾಡಿದ್ದೇವೆ ಮುಂಬರುವ ಐಫೋನ್ 7 ರದ್ದು. ಸೆಪ್ಟೆಂಬರ್ ನಲ್ಲಿ ಇದರ ಖುಲಾಸೆಯಾಗಲಿದೆ.

ಓದಿರಿ: ಸೆಲ್ಫಿಗಾಗಿ ಹೇಳಿಮಾಡಿಸಿದ ಬಜೆಟ್ ಬೆಲೆಯ ಫೋನ್ಸ್

1. ಆಂಟೆನಾ ದ ಜಾಗ ಬದಲಾಗಿದೆ:

ಐಫೋನ್ 7 ಬಗ್ಗೆ ತುಂಬಾ ಸುದ್ದಿಯಿದ್ದು ಅವರೆಲ್ಲಾ ರೇರ್ ಪ್ಯಾನೆಲ್ ನಲ್ಲಿ ಆಂಟೆನಾ ದ ಜಾಗ ಬದಲಾಗಲಿದೆ ಎಂದು ಹೇಳಿದ್ದಾರೆ. ಐಫೋನ್ 6 ನ ಹಾಗೆ ಮೇನ್ ಬೊಡಿಯ ಉದ್ದಕ್ಕೆ ಎಳೆದುಕೊಂಡು ಹೋಗುವ ಬದಲು ಐಫೋನ್ 7 ರಲ್ಲಿ ಆಂಟೆನಾ ಬ್ಯಾಂಡ್ಸ್ ಮೇಲೆ ಮತ್ತು ಕೆಳಗಿನ ತುದಿಗೆ ಸ್ಥಳಾಂತರಿಸಲಾಗಿದೆ. ಇದು ಮುಂಚೆ ಸಿಕ್ಕ ಚಿತ್ರಗಳಲ್ಲಿ ಕಾಣಬಹುದಾಗಿದೆ, ಆಂಟೆನಾ ರೇಷ್ಮೆಯಂತೆ ಮತ್ತು ಚಿಕ್ಕದಾಗಿದೆ.

ಆಪಲ್ ಐಫೋನ್ 7 ರ ಬಗೆಗಿನ ಹೊಸ ಸುದ್ದಿ  ವಿಶೇಷತೆಗಳನ್ನು ಖಚಿತಪಡಿಸುತ್ತದೆ

2. ಪ್ರೆಶ್ಶರ್ ಸೆನ್ಸಿಟಿವ್, ಹೊಸ ಹೋಮ್ ಬಟನ್:

ಹೊಸ ಪೀಳಿಗೆಯ ಐಫೋನ್ಸ್ ಶಾರೀರಿಕ ಹೋಮ್ ಬಟನ್ ಅನ್ನು ಕಳೆದುಕೊಂಡು ನವೀಕೃತ ಬಟನ್ ಹೊಂದಿದೆ. ಇದೊಂದು ಒತ್ತಡ ಗುರುತಿಸುವ ಡಿವೈಜ್ ಬಳಕೆದಾರನಿಗೆ ಪ್ರತಿಕ್ರೀಯೆ ಕಳಿಸುತ್ತದೆ ಕಂಪನದ ಮೂಲಕ. ಅದು ಸದ್ಯದ ಹೋಮ್ ಬಟನ್ ನ ಫಿಸಿಕಲ್ ಕ್ಲಿಕ್ ನಂತೆ ಇರುವುದು. ಇದು ಶಾರೀರಿಕವಾಗಿ ಒತ್ತಿದಾಗ ಹೊಸ ಪೀಳಿಗೆಯ ಮ್ಯಾಕ್ ಬುಕ್ ನ 3ಡಿ ಟಚ್ ಪ್ಯಾಡ್ ನಂತೆ ಕೆಲಸಮಾಡುತ್ತದೆ.

ಓದಿರಿ: ಕನಿಷ್ಠ 2,617 ಸಲ ದಿನಕ್ಕೆ ಸ್ಮಾರ್ಟ್‌ಫೋನ್‌ ಸ್ಕ್ರೀನ್ ಟಚ್ ಮಾಡುತ್ತೇವಂತೆ!
3. ಚಿಕ್ಕ ಮತ್ತು ದೊಡ್ಡ ಡಿಸ್ಪ್ಲೆ ಆಯ್ಕೆ:

ಆಪಲ್ 4.7 ಇಂಚ್ ಮತ್ತು 5.5 ಇಂಚ್ ಆಯ್ಕೆ ಹೊಂದಿರುವ ಫೋನ್ ಬಿಡುಗಡೆಮಾಡುವುದೆಂಬ ಸುದ್ದಿಯಿದೆ ಅದಕ್ಕೆ ಐಫೋನ್ 7 ಮತ್ತು ಐಫೋನ್ 7 ಪ್ಲಸ್ ಎನ್ನಲಾಗುವುದು. ಇದರ ಜೊತೆಗೆ ಸುದ್ದಿಯೆಂದರೆ ಐಫೋನ್ ನ ಪ್ರೊ ವರ್ಷನ್ ಕೂಡ ಬರಲಿದೆ ಮತ್ತು ಅದು ಹೈಯರ್ ಎಂಡ್ ಫೀಚರ್ಸ್ ಹೊಂದಲಿದೆ ಉದಾ: ಡುಯಲ್ ಕ್ಯಾಮೆರಾ ಸೆಟ್ ಅಪ್ ಮತ್ತು ಇತ್ಯಾದಿ.

ಆಪಲ್ ಐಫೋನ್ 7 ರ ಬಗೆಗಿನ ಹೊಸ ಸುದ್ದಿ  ವಿಶೇಷತೆಗಳನ್ನು ಖಚಿತಪಡಿಸುತ್ತದೆ

ಓದಿರಿ: ವೈರ್‌ಗಳಿಲ್ಲದೇ ಸ್ಮಾರ್ಟ್‌ಫೋನ್‌ ಚಾರ್ಜ್‌ ಮಾಡುವ ಪ್ಯಾಂಟ್ ಮತ್ತು ಜಾಕೆಟ್‌ಗಳು
4. ಡುಯಲ್ ಕ್ಯಾಮೆರಾ ಸೆಟ್ ಅಪ್ :

ಇತ್ತೀಚಿನ ವರದಿಯ ಪ್ರಕಾರ ದೊಡ್ಡ ಐಫೋನ್ ಡುಯಲ್ ಕ್ಯಾಮೆರಾ ಹೊಂದಲಿದೆ ಪ್ರಕಾಶಮಾನವಾದ ಚಿತ್ರ ಮತ್ತು ಹೆಚ್ಚಿನ ವಿವರಣೆಗಳಿಗಾಗಿ. ಎರಡೂ ಡುಯಲ್ ಕ್ಯಾಮೆರಾ ಸೆಟಪ್ ಸೆನ್ಸರ್ಸ್ ವಿವಿಧ ರೀತಿಯಲ್ಲಿ ಬಣ್ಣವನ್ನು ಕ್ಯಾಪ್ಚರ್ ಮಾಡುತ್ತದೆ ಮತ್ತು ಒಟ್ಟಿಗೆ ಚಿತ್ರಗಳನ್ನು ತೆಗೆಯುತ್ತವೆ. ಉತ್ತಮ ಪಿಕ್ಸೆಲ್ಸ್ ಮತ್ತು ಮಾಹಿತಿಯನ್ನು ಒಂದುಗೂಡಿಸಲು ಮತ್ತು ಫಲಿತಾಂಶವನ್ನು ಒಂದೇ ಚಿತ್ರದಲ್ಲಿ ನೀಡಲು. ಇದು ಮಂದ ಬೆಳಕಿನಲ್ಲಿ ತೆಗೆಯಲು ಕೂಡ ಉತ್ತಮ. ಎರಡೂ ಸೆನ್ಸರ್ ಗಳು ಚಿತ್ರಗಳನ್ನು ಉತ್ತಮಗೊಳಿಸುತ್ತದೆ ಮತ್ತು ಬಳಕೆದಾರ ಜೂಮ್ ಮಾಡಿದರು ಕೂಡ ಹೆಚ್ಚಿನ ಕ್ಲ್ಯಾರಿಟಿ ಉಳಿಸಿಕೊಳ್ಳುತ್ತದೆ. ಸಣ್ಣ ಮೊಡೆಲ್ 12 ಎಮ್‍ಪಿ ರೇರ್ ಕ್ಯಾಮೆರಾ ಹೊಂದಬಹುದು.

ಆಪಲ್ ಐಫೋನ್ 7 ರ ಬಗೆಗಿನ ಹೊಸ ಸುದ್ದಿ  ವಿಶೇಷತೆಗಳನ್ನು ಖಚಿತಪಡಿಸುತ್ತದೆ

5. ಹೆಡ್ ಫೋನ್ ಜ್ಯಾಕ್ ಗೆ ವಿದಾಯ :

ನಂಬಲರ್ಹವಾದ ಮೂಲದ ವರದಿಯ ಪ್ರಕಾರ ಖಚಿತಪಡಿಸಿಕೊಂಡಿರುವುದೇನೆಂದರೆ ಹೊಸ ಐಫೋನ್ 7 ರಲ್ಲಿ ಹೆಡ್‍ಫೋನ್ ಜ್ಯಾಕ್ ಇರುವುದಿಲ್ಲಾ ಅದರ ಜಾಗವನ್ನು ಬ್ಲೂಟೂತ್ ಅಥವಾ ಲೈಟ್ನಿಂಗ್ ಹೆಡ್‍ಫೋನ್ಸ್ ತೆಗೆದುಕೊಳ್ಳಬಹುದು. ಇದು ಹಳೆಯ ಸುದ್ದಿಯ ಪ್ರಕಾರ. ಹೀಗಾಗಿ ಕೊನೆಗೆ ಈಗ ಐಫೋನ್ ಪ್ರೀಯರು ಹೆಡ್ ಫೋನ್ ಜ್ಯಾಕ್ ಗೆ ವಿದಾಯ ಹೇಳುವ ಸಮಯ.
ಓದಿರಿ: ರೂ.3,299'ರ ಸೆಲ್ಕಾನ್ 'ಮಿಲೇನಿಯಾ ಯುಫೀಲ್' ಸ್ಮಾರ್ಟ್‌ಫೋನ್‌ ಭಾರತದಲ್ಲಿ ಲಾಂಚ್‌

6. ಹೆಚ್ಚಿನ ಪ್ರಾಬಲ್ಯ ಹೊಂದಿದ ಮದರ್‍ಬೊರ್ಡ್ :

ಇನ್ನೊಂದು ಸುದ್ದಿ ಮಾಡಿದ ಮುಖ್ಯ ವಿಷಯವೇನೆಂದರೆ ಐಫೋನ್ ಎ10 ಚಿಪ್‍ಸೆಟ್ ಎಮ್10 ಕೊ ಪ್ರೊಸೆಸರ್ ನೊಂದಿಗೆ ಒಳಗೊಳ್ಳಲಿದೆ. ಇದು 2ಜಿಬಿ ಎಲ್‍ಪಿಡಿಡಿಆರ್4 ರ್ಯಾಮ್ ಸಪೊರ್ಟ್ ಮಾಡಲಿದೆ. ಈ ಫೋನ್ ಎ10 ಮತ್ತು ಸಿಮ್ ಸ್ಲೊಟ್ ಮಧ್ಯೆ ಇನ್ನೊಂದು ಚಿಪ್ ಅನ್ನು ಹೊಂದಲಿದೆ. ಈ ಬಾರಿ, ಐಫೋನ್ 7 ನಲ್ಲಿ ಎ10 ಚಿಪ್ಸ್ ಹೊಂದಿರುವುದಕ್ಕೆ ಟಿಎಸ್‍ಎಮ್‍ಸಿ ಜವಾಬ್ದಾರಿಯಾಗಿದೆ ಶೇಕಡಾ 100 ರಷ್ಟು ಎಂಬ ಮಾತಿದೆ.

ಆಪಲ್ ಐಫೋನ್ 7 ರ ಬಗೆಗಿನ ಹೊಸ ಸುದ್ದಿ  ವಿಶೇಷತೆಗಳನ್ನು ಖಚಿತಪಡಿಸುತ್ತದೆ

7. ವಾಟರ್ ಪ್ರೂಫ್ ಮತ್ತು ಡಸ್ಟ್ ಪ್ರೂಫ್:

ವರದಿಯ ಪ್ರಕಾರ, ಕಂಪನಿಯು ತನ್ನ ದೌರ್ಬಲ್ಯವನ್ನು ಮೆಟ್ಟನಿಂತಿದೆ, ಐಫೋನ್ 7 ವಾಟರ್ ಪ್ರೂಫ್ ಮತ್ತು ಡಸ್ಟ್ ಪ್ರೂಫ್ ಆಗುವ ಸಲಹೆ ನೀಡಿದೆ. ಆದರೆ ನಮಗೆ ಇನ್ನೂ ಸತ್ಯದ ಅರಿವಿಲ್ಲಾ.

Best Mobiles in India

English summary
Rumors around Apple iPhone 7 are all over the Internet, with most of them revealing similar information. As per reports, the upcoming iPhone models will be more or less based on the last year's iPhone 6S' design, with slight but radical changes. Now a new report has come up to confirm some of the iPhone 7's most rumored specs.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X