ಐಫೋನ್ 8ರಲ್ಲಿ ಇರಲಿದೆ 3D ಸೆಲ್ಫಿ ಕ್ಯಾಮೆರಾ..!!!!
ಈ ಕುರಿತಂತೆ LG ಮತ್ತು ಆಪಲ್ ನಡುವೆ 200 ಮಿಲಿಯನ್ ಮೊತ್ತದ ಒಪ್ಪಂದ ನಡೆದಿದೆ ಎನ್ನಲಾಗಿದೆ.
ಆಪಲ್ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆ ನಡೆಸಿರುವ ಐಫೋನ್ ಹೇಗಿರಲಿದೆ ಎನ್ನುವ ಕುತೂಹಲ ದಿನೇ ದಿನೇ ಏರಿಕೆಯಾಗುತ್ತಿದ್ದು, ಇದೇ ಸಂದರ್ಭದಲ್ಲಿ ಹಲವರು ಗಾಳಿ ಸುದ್ದಿಗಳು ಹರಿದಾಡುತ್ತಿದೆ. ಸದ್ಯ ದೊರೆತಿರುವ ಮಾಹಿತಿಯ ಪ್ರಕಾರ ಐಫೋನ್ 8 ರ ಮುಂಭಾಗದಲ್ಲಿ 3D ಕ್ಯಾಮೆರಾವನ್ನು ಅಳವಡಿಸಲಾಗಿದೆಯಂತೆ.

ಈ ಕುರಿತಂತೆ ಖಚಿತ ಮೂಲಗಳಿಂದ ಮಾಹಿತಿ ಲಭ್ಯವಾಗಿದ್ದು, ಖ್ಯಾತ ಎಲೆಕ್ಟ್ರಾನಿಕ್ ತಯಾರಿಕ ಕಂಪನಿ LG, 3D ಕ್ಯಾಮೆರಾವನ್ನು ಸರಬರಾಜು ಮಾಡಿದೆ ಎನ್ನಲಾಗಿದೆ. ಈ ಕುರಿತಂತೆ LG ಮತ್ತು ಆಪಲ್ ನಡುವೆ 200 ಮಿಲಿಯನ್ ಮೊತ್ತದ ಒಪ್ಪಂದ ನಡೆದಿದೆ ಎನ್ನಲಾಗಿದೆ.
ಇದೇ ಈ ಹಿಂದೆ ಐಪೋನ್ 7 ಮತ್ತು ಐಪೋನ್ 7 ಪ್ಲಸ್ ತಯಾರಿಕೆಯ ಸಂದರ್ಭದಲ್ಲಿಯೂ LG ಕಂಪನಿಯೂ ಆಪಲ್‌ಗೆ ಕ್ಯಾಮೆರಾ ಸಪ್ಲೈ ಮಾಡಿತ್ತು ಎನ್ನಲಾಗಿದೆ. ಇದಕ್ಕಾಗಿ ಐಫೋನ್ 8 ತಯಾರಿಕೆಯ ಸಂದರ್ಭದಲ್ಲಿಯೂ ಆಪಲ್ ಈ ಹಿಂದಿನಂತೆ LG ಕಂಪನಿಯೊಂದಗೆ ಮತ್ತೇ ಒಪ್ಪಂದಕ್ಕೆ ಮುಂದಾಗಿದೆ.

ಒಟ್ಟಿನಲ್ಲಿ 3D ಮುಂಭಾಗದ ಕ್ಯಾಮೆರಾವನ್ನು ಅಳವಡಿಸಿರುವ ಐಫೋನ್ 8 ಶೀಘ್ರವೇ ಮಾರುಕಟ್ಟಗೆ ಬರಲಿದ್ದು, ಇದೇ ಈ ಫೋನಿನ ಪ್ರಮುಖ ಆಕರ್ಷಣೆಯಾಗಲಿದೆ ಎಂದರೆ ತಪ್ಪಾಗುವುದಿಲ್ಲ.
ಪ್ರತಿ ಬಾರಿ ಹೊಸ ಫೋನ್ ಬಿಡುಗಡೆ ಮಾಡುವ ಸಂದರ್ಭದಲ್ಲಿ ಒಂದಲ್ಲ ಒಂದು ಹೊಸ ಆಯ್ಕೆಯನ್ನು ತನ್ನ ಗ್ರಾಹಕರಿಗೆ ನೀಡುವ ಆಪಲ್ ಈ ಬಾರಿ ಸೆಲ್ಪಿಗಾಗಿ 3D ಕ್ಯಾಮೆರಾವನ್ನು ನೀಡಲು ಮುಂದಾಗಿದೆ. ಇದು ಈ ಫೋನಿ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಲಿದೆ.


Click it and Unblock the Notifications








