ಗೂಗಲ್‌ನಿಂದ ಸ್ಮಾರ್ಟ್‌ಫೋನ್ ಹೊಸ ಮಂತ್ರ: ಬದಲಾಗಲಿದೆ ಮೊಬೈಲ್ ಪ್ರಪಂಚ..!

|

ಭಾರತೀಯ ಮಾರುಕಟ್ಟೆಯಲ್ಲಿ ಪ್ರೀಮಿಯಮ್ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯ ಬೆಳವಣಿಗೆಯ ದರವು ಹೆಚ್ಚಾಗಿದ್ದು, ಬಳಕೆದಾರರಿಗೆ ಕೈಗೆಟುಕುವ ದರದಲ್ಲಿ ಪ್ರೀಮಿಯಮ್ ಸ್ಮಾರ್ಟ್‌ಫೋನ್‌ಗಳು ಲಭ್ಯವಿರುವ ಹಿನ್ನಲೆಯಲ್ಲಿ ಹೆಚ್ಚಿನ ಪ್ರಮಾಣದ ವ್ಯವಹಾರವು ನಡೆಯುತ್ತಿದೆ. ಒನ್‌ಪ್ಲಸ್ 6 ಮಾರುಕಟ್ಟೆಗೆ ಕಾಲಿಟ್ಟ ನಂತರದಲ್ಲಿ ಬಳಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಪ್ರೀಮಿಯಮ್ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುತ್ತಿದ್ದಾರೆ ಇದಕ್ಕಾಗಿ ಹೊಸ ಸ್ಮಾರ್ಟ್‌ಫೋನ್‌ಗಳು ಈ ವಿಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ.

ಗೂಗಲ್‌ನಿಂದ ಸ್ಮಾರ್ಟ್‌ಫೋನ್ ಹೊಸ ಮಂತ್ರ: ಬದಲಾಗಲಿದೆ ಮೊಬೈಲ್ ಪ್ರಪಂಚ..!

ಈ ಹಿನ್ನಲೆಯಲ್ಲಿ ಒನ್‌ಪ್ಲಸ್ ಪ್ರೀಮಿಯಮ್ ಮಾರುಕಟ್ಟೆಯಲ್ಲಿ ನಂಬರ್ ಒನ್ ಸ್ಮಾರ್ಟ್‌ಫೋನ್ ಮಾರಾಟ ಮಾಡುವ ಕಂಪನಿ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿದೆ. ಇದಕ್ಕೆ ನೇರ ಸ್ಪರ್ಧೆಯನ್ನು ನೀಡುವ ಸಲುವಾಗಿ ಶಿಯೋಮಿ ಪೊಕೊ ಬ್ರಾಂಡ್ ಅನ್ನು ಲಾಂಚ್ ಮಾಡಿದೆ. ಇದರ ಅಡಿಯಲ್ಲಿ ಪೊಕೊ F1 ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಇವುಗಳ ನಡುವೆ ಮತ್ತೊಂದು ಸುದ್ದಿ ಹರಿದಾಡುತ್ತಿದ್ದು, ಶೀಘ್ರವೇ ಗೂಗಲ್‌ ಸಹ ಕಡಿಮೆ ಬೆಲೆಯ ಪ್ರೀಮಿಯಮ್ ಫೋನ್ ಅನ್ನು ಲಾಂಚ್ ಮಾಡಲಿದೆ ಎನ್ನಲಾಗಿದೆ. ಇದರೊಂದಿಗೆ ಆಪಲ್ ಸಹ ಮಧ್ಯಮ ಸರಣಿಯ ಐಫೋನ್ ವೊಂದನ್ನು ಲಾಂಚ್ ಮಾಡಲಿದೆ.

ಭಾರತೀಯ ಮಾರುಕಟ್ಟೆ:

ಭಾರತೀಯ ಮಾರುಕಟ್ಟೆ:

ಗೂಗಲ್ ಭಾರತೀಯ ಮಾರುಕಟ್ಟೆಯಲ್ಲಿ ಎಲ್ಲಾ ವಿಭಾಗದಲ್ಲಿಯೂ ತನ್ನ ಪ್ರಭಾವನ್ನು ಬೀರುವ ಸಲುವಾಗಿ ಯೋಜನೆಯೊಂದನ್ನು ಹಾಕಿಕೊಂಡಿದ್ದು, ಮಧ್ಯಮ ಸರಣಿಯ ಬೊಂಬಾಟ್ ಸ್ಮಾರ್ಟ್‌ಫೋನ್ ವೊಂದನ್ನು ಲಾಂಚ್ ಮಾಡಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಈ ಮೂಲಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಅಧ್ಯಾಯವನ್ನು ಶುರು ಮಾಡಲಿದೆ.

ಒನ್‌ಪ್ಲಸ್‌ಗೆ:

ಒನ್‌ಪ್ಲಸ್‌ಗೆ:

ಶಿಯೋಮಿ ಪೊಕೊ F1 ಸ್ಮಾರ್ಟ್‌ಪೋನ್ ಅನ್ನು ಒನ್‌ಪ್ಲಸ್ ವಿರುದ್ಧವಾಗಿ ಲಾಂಚ್ ಮಾಡಿದ ಮಾದರಿಯಲ್ಲಿಯೇ ಗೂಗಲ್‌ ಸಹ ಇದೇ ಬೆಲೆಯಲ್ಲಿ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲಿದೆ. ಈಗಾಗಲೇ ಗೂಗಲ್ ಪಿಕ್ಸಲ್ ಫೋನ್‌ಗಳು ಟಾಪ್ ಎಂಡ್ ಆವೃತ್ತಿಯಲ್ಲಿ ಲಭ್ಯವಿರುವ ಮಾದರಿಯಲ್ಲಿ ಮಧ್ಯಮ ಸರಣಿಯಲ್ಲಿಯೂ ಕಾಣಿಸಿಕೊಳ್ಳಲಿದೆ.

ಪ್ಯೂರ್ ಆಂಡ್ರಾಯ್ಡ್:

ಪ್ಯೂರ್ ಆಂಡ್ರಾಯ್ಡ್:

ಸದ್ಯ ಮಾರುಕಟ್ಟೆಯಲ್ಲಿ ಪ್ಯೂರ್ ಆಂಡ್ರಾಯ್ಡ್ ಬೇಡಿಕೆಯೂ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಗೂಗಲ್ ತನ್ನದೇ ಫೋನ್‌ ಗಳನ್ನು ಬಿಡುಗಡೆ ಮಾಡುವ ಮೂಲಕ ಬಳಕೆದಾರರಿಗೆ ಎಲ್ಲರಿಗಿಂತಲೂ ಮೊದಲೇ ನೂತನ ಆಂಡ್ರಾಯ್ಡ್ ಎಕ್ಸ್‌ಪೀರಿಯನ್ಸ್ ನೀಡಲು ಮಧ್ಯಮ ವರ್ಗಕ್ಕೆ ಕೈಗೆಟುಕುವ ದರದಲ್ಲಿ ಫೋನ್ ಅನ್ನು ನಿರ್ಮಿಸಲು ಮುಂದಾಗಿದೆ.

ಹೊಸ ಅಧ್ಯಾಯ:

ಹೊಸ ಅಧ್ಯಾಯ:

ಗೂಗಲ್ ಸಹ ಮಧ್ಯಮ ಸರಣಿಯಲ್ಲಿ ಸ್ಮಾರ್ಟ್‌ಫೋನ್ ಲಾಂಚ್ ಮಾಡುವ ಬಗ್ಗೆ ಮಾತನಾಡುತ್ತಿದೆ. ಇದೇ ಮಾದರಿಯಲ್ಲಿ ಆಪಲ್ ಸಹ ಮಧ್ಯಮ ಸರಣಿಯಲ್ಲಿ ಹೊಸ ಐಫೋನ್ ವೊಂದನ್ನು ಬಿಡುಗಡೆ ಮಾಡುವ ಸನಿಹದಲ್ಲಿಯೇ ಈ ಹಿನ್ನಲೆಯಲ್ಲಿ ಈ ಎರಡು ಫೋನ್‌ಗಳು ಮಾರುಕಟ್ಟೆಯಲ್ಲಿ ಹೊಸ ಅಧ್ಯಾಯವನ್ನು ಸೃಷ್ಠಿಸಲಿದೆ.

ಹೊಸ ಆಯ್ಕೆ:

ಹೊಸ ಆಯ್ಕೆ:

ಹೀಗೇ ಟಾಪ್ ಕಂಪನಿಗಳು ಕಡಿಮೆ ಬೆಲೆಯಲ್ಲಿ ಉತ್ತಮ ಸ್ಮಾರ್ಟ್‌ಫೋನ್‌ ಗಳನ್ನು ಲಾಂಚ್ ಮಾಡುವುದರಿಂದ ಬಳಕೆದಾರರಿಗೆ ಸಾಕಷ್ಟು ಹೊಸ ಆಯ್ಕೆಗಳು ಲಭ್ಯವಾಗಲಿದೆ. ಇದರಿಂದಾಗಿ ಚೀನಾ ಸ್ಮಾರ್ಟ್‌ಫೋನ್‌ ಕಂಪನಿಗಳಿಗೆ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಹೊಡೆತ ಬಿಳಲಿದೆ.

Best Mobiles in India

English summary
Is Google planning a smartphone in the Rs 40 - 50k range to take on OnePlus. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X