ನಾವೆಲ್ಲಾ 5G ಯುಗಕ್ಕೆ ಕಾಲಿಡುವ ಮುನ್ನ!.ನಿಮಗೆಷ್ಟು ಗೊತ್ತು ಈ 'G' ಬಗ್ಗೆ! ಇಲ್ಲಿ ನೋಡಿ!!

4G ಎಲ್​ಟಿಇ ಮತ್ತು 4G ವೋಲ್ಟ್ ಎಂದರೆ ಗೊತ್ತಾ?

|

2020 ವೇಳೆಗೆ 5G ತಂತ್ರಜ್ಞಾನ ವಿಶ್ವದೆಲ್ಲೆಡೆ ಸೇರಿ ಭಾರತಕ್ಕೂ ಎಂಟ್ರಿ ನೀಡಲು ಕಾಯುತ್ತಿದೆ.! ಈಗಿರುವ 4G ಗಿಂತಲೂ ಹಲವು ಪಟ್ಟು ವೇಗದ ಈ 5G ತಂತ್ರಜ್ಞಾನದ ಬಗ್ಗೆ ಈಗಾಗಲೇ ಹಲವು ಯೋಜನೆಗಳು ಜಾರಿಯಾಗುತ್ತಿದ್ದು, ಭವಿಷ್ಯದಲ್ಲಿ ಭಾರತ ಕೂಡ 5G ಹೊಂದುವುದು ಖಚಿತವಾಗಿದೆ.!!

ಹಾಗಾದರೆ, ಏನಿದು 5G, 4G, 3G ಮತ್ತು 2G ಎಂಬ ಸಂಕೇತಗಳು? ಈ ಸಂಕೇತಗಳನ್ನು ಬಳಕೆ ಮಾಡಲು ಕಾರಣವೇನು? ಮತ್ತು ಅವುಗಳಲ್ಲಿರುವ G ಎಂದರೆ ಅರ್ಥವೇನು? ಎಂಬ ಪ್ರಶ್ನೆಗಳು ನಿಮ್ಮಲ್ಲಿ ಮೂಡಿದ್ದರೆ ನಾನು ನಿಮಗೆ ಉತ್ತರಿಸುತ್ತೇನೆ.! ಈ ಬಗ್ಗೆ ಸಂಪೂರ್ಣ ವಿವರವನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿ ತಿಳಿಯಿರಿ.!!

ಏನಿದು 5G, 4G, 3G ಮತ್ತು 2G

ಏನಿದು 5G, 4G, 3G ಮತ್ತು 2G

ಮೊಬೈಲ್ ತಂತ್ರಜ್ಞಾನ ಹುಟ್ಟಿದಾಗಿನಿಂದ ಇಲ್ಲಿಯವರೆಗೂ ಸಾಕಷ್ಟು ಅಭಿವೃದ್ದಿಯಾಗಿದ್ದು, 2G ಎನ್ನುವುದು ಹಳೆಯ ಕಾಲದ ತಂತ್ರಜ್ಞಾನ ಆದರೆ, 3G ಸ್ವಲ್ಪ ಹೆಚ್ಚಿನ ಮತ್ತು 4G ಅದಕ್ಕೂ ಹೆಚ್ಚಿನ ತಂತ್ರಜ್ಞಾನ ಎನ್ನಬಹುದು.ಈಗ ಬರಲಿರುವ 5ಜಿ ಸಹಜವಾಗಿಯೇ ಭವಿಷ್ಯದ ತಂತ್ರಜ್ಞಾನ ಎಂದು ಸರಳವಾಗಿ ಹೇಳಬಹುದು!

G ಎಂದರೆ ಅರ್ಥವೇನು?

G ಎಂದರೆ ಅರ್ಥವೇನು?

ಮೊಬೈಲ್ ತಂತ್ರಜ್ಞಾನದ ಅಭಿವೃದ್ದಿಯ ಹಂತವನ್ನು ಸುಲಭವಾಗಿ ಗುರುತಿಸಲು ಅನುಕೂಲವಾಗುವಂತೆ ಅವನ್ನು ತಲೆಮಾರುಗಳಂತೆ( ಜನರೇಶನ್) ವಿಂಗಡಿಸಲಾಗಿದೆ.!! ಇಂಗ್ಲೀಷ್ ವರ್ಣ ಮಾಲೆಯಂತೆ ಜನರೇಶನ್ ಅನ್ನು ಗುರುತಿಸುವ ಸಲುವಾಗಿ G ಎಂದು ಕರೆಯುತ್ತಾರೆ.!! ಉದಾ: 2ಜನರೇಶನ್, 3ಜನರೇಶನ್

1G ಸಹ ಇದೆ.! ಆದರೆ, ನೀವು ಕೇಳೀಲ್ಲ.!!

1G ಸಹ ಇದೆ.! ಆದರೆ, ನೀವು ಕೇಳೀಲ್ಲ.!!

2G, 3G ಮತ್ತು 4G ಗಳ ಬಗ್ಗೆ ನೀವು ಈಗಾಗಲೇ ಕೇಳಿರುತ್ತೀರಾ. ಆದರೆ, ಮೊಬೈಲ್ ತಂತ್ರಜ್ಞಾನದಲ್ಲಿ 1G ಸಹ ಇದೆ.! ಮೊಬೈಲ್ ಫೋನ್‌ಗಳು ಹುಟ್ಟಿದಾಗ ಅವುಗಳು ಅನಲಾಗ್ ತಂತ್ರಜ್ಞಾನವನ್ನು ಬಳಸುತ್ತಿದ್ದವು. ಈ ತಂತ್ರಜ್ಞನದಿಂದ ಕರೆಗಳನ್ನು ಮಾತ್ರ ಮಾಡಬಹುದಾಗಿತ್ತು.!! ಈ ತಂತ್ರಜ್ಞಾನವನವನೇ ದೂರವಾಣಿಯ 1ಜಿ ಎಂದು ಕರೆಯುತ್ತಾರೆ.!!

ಎಸ್‌ಎಮ್‌ಎಸ್ ಕಾಲದಲ್ಲಿ 2ಜಿ!!

ಎಸ್‌ಎಮ್‌ಎಸ್ ಕಾಲದಲ್ಲಿ 2ಜಿ!!

ಮೊಬೈಲ್ ಬಳಸಿ ಕರೆ ಮಾಡುವುದರ ಜೊತೆಗೆ ದತ್ತಾಂಶದ ವರ್ಗಾವಣೆಯನ್ನೂ (ಡೇಟಾ) ಸಾಧ್ಯವಾಗಿಸಿದ ಜನರೇಶನ್ 2ಜಿ.! 2ಜಿ ಕಾಲದಲ್ಲಿ ಎಸ್ಸೆಮ್ಮೆಸ್ ಸೌಲಭ್ಯವು ಜನಪ್ರಿಯವಾಗಿದ್ದನ್ನು ನೀವು ನೋಡಬಹುದು. ಹೆಚ್ಚು ವೇಗದ ಎಜ್ ಸೌಲಭ್ಯಗಳ ಪರಿಚಯವಾದದ್ದೂ ಇದರ ಜೊತೆಯಲ್ಲಿಯೇ.!!

ಲೇಟೆಸ್ಟ್ ತಂತ್ರಜ್ಞಾನ 4ಜಿ.!!

ಲೇಟೆಸ್ಟ್ ತಂತ್ರಜ್ಞಾನ 4ಜಿ.!!

ಇಂಟರ್‌ನೆಟ್ ಬಳಕೆ 2G ಮತ್ತು 3G ಕಾಲದಲ್ಲಿಯೇ ಮೊಬೈಲ್‌ನಲ್ಲಿದ್ದರೂ ಸಹ ಅತ್ಯುತ್ತಮ ಅಂತರ್ಜಾಲವನ್ನು ಒದಗಿಸುತ್ತಿರುವ ಲೇಟೆಸ್ಟ್ ತಂತ್ರಜ್ಞಾನವೇ ಈ 4G.!! ವೀಡಿಯೋಗಳನ್ನು ಸರಾಗವಾಗಿ ನೋಡಬಹುದಾದ, ತಡೆಇಲ್ಲದೆ TVಯ ನೇರ ಪ್ರಸಾರ ನೋಡಬಹುದಾದ ಮೊದಲ ತಂತ್ರಜ್ಞಾನ ದು ಎಂದರೆ ತಪ್ಪಾಗುವುದಿಲ್ಲ.!!

4G ಎಲ್​ಟಿಇ ಮತ್ತು 4G ವೋಲ್ಟ್ ಎಂದರೆ ಗೊತ್ತಾ?

4G ಎಲ್​ಟಿಇ ಮತ್ತು 4G ವೋಲ್ಟ್ ಎಂದರೆ ಗೊತ್ತಾ?

4G ಎಲ್​ಟಿಇ ಮತ್ತು 4G ವೋಲ್ಟ್ ಎಂಬುದನ್ನು ಬಳಕೆ ಮಾಡುವುದನ್ನು ನೀವು ನೋಡಬಹುದು. ಇಲ್ಲಿ 4ಜಿ ತಂತ್ರಜ್ಞಾನ್ನೇ 4G ಎಲ್​ಟಿಇ ಎಂದು ಗುರುತಿಸುತ್ತಾರೆ. ಇದರ ವಿಸೃತ ರೂಪ ‘ಲಾಂಗ್ ಟಮ್ರ್ ಎವಲೂಷನ್' ಎಂಬುದು. ಇನ್ನು ದತ್ತಾಂಸದಲ್ಲಿಯೇ ಕಾಲ್ ಮಾಡುವ ತಂತ್ರಜ್ಞಾನವನ್ನು 4G ವೋಲ್ಟ್ ಎಂದು ಗುರುತಿಸುತ್ತಾರೆ.! ವೋಲ್ಟ್ ಎಂದರೆ ‘ವಾಯ್ಸ್ ಓವರ್ ಎಲ್​ಟಿಇ

ಭವಿಷ್ಯದ ತಂತ್ರಜ್ಞಾನ 5G!!

ಭವಿಷ್ಯದ ತಂತ್ರಜ್ಞಾನ 5G!!

4G ಸೇವೆಗೆ ತೃಪ್ತಿಪಟ್ಟಿರುವ ಮೊಬೈಲ್ ತಂತ್ರಜ್ಞಾನಕ್ಕೆ ಈಗ ಹೊಸದಾಗಿ ಕಾಲಿಡುತ್ತಿರುವುದು ಈ 5G ತಂತ್ರಜ್ಞಾನ.!! ಈಗ ಇರುವ ಎಂಬಿಪಿಎಸ್ ವೇಗವನ್ನು ಹಲವಾರು ಪಟ್ಟು ಹೆಚ್ಚಿಸಿ ಜಿಬಿಪಿಎಸ್ ವೇಗಕ್ಕೆ ಕರೆದೊಯಗಯುವ ತಂತ್ರಜ್ಞಾನವೇ 5G.!! ಉದಾಹರಣೆಗೆ ಒಮದು ಸಿನಿಮಾ ಡೌನ್‌ಲೋಡ್ ಮಾಡಲು ಒಂದು ಸೆಕೆಂಡ್ ಸಾಕಾಗಬಹುದು ಎಂದರೆ ನೀವು ನಂಬಲೇಬೇಕು!!

ಭಾರತದಲ್ಲಿಂದು ಪೂರ್ಣ ಡಿಸ್‌ಪ್ಲೇ ಫೋನ್ ಭಾರತದಲ್ಲಿಂದು ಪೂರ್ಣ ಡಿಸ್‌ಪ್ಲೇ ಫೋನ್ "ಶಿಯೋಮಿ ಮೈ ಮಿಕ್ಸ್ 2" ಬಿಡುಗಡೆ!!

Best Mobiles in India

English summary
The government has set up a high-level forum for drawing a roadmap for the launch of 5G services by 2020, to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X