ಮಾರ್ಚ್‌ 5ಕ್ಕ ಲಾಂಚ್‌ ಆಗಲಿದೆ ಇಸ್ರೋದ ಜಿಯೋ ಇಮೇಜಿಂಗ್‌ ಉಪಗ್ರಹ

By Gizbot Bureau
|

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತೊಂದು ಮಹತ್ತರ ಮೈಲಿಗಲ್ಲು ಸ್ಥಾಪಿಸಲು ಸಿದ್ಧವಾಗಿದೆ. ಇದೇ ಮಾರ್ಚ್‌ 5ರಂದು GSLV-F10 ಉಡಾವಣಾ ವಾಹನದಿಂದ ಜಿಯೋ ಇಮೇಜಿಂಗ್‌ ಉಪಗ್ರಹ GISAT-1ನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗುವುವುದು ಎಂದು ಇಸ್ರೋ ತಿಳಿಸಿದೆ. ಉಪಗ್ರಹ ಉಡಾವಣೆಗೆ ಎಲ್ಲಾ ರೀತಿಯ ತಯಾರಿಯನ್ನು ಇಸ್ರೋ ಮಾಡಿಕೊಳ್ಳುತ್ತಿದೆ.

ಉಪಗ್ರಹ

ಉಪಗ್ರಹ ಉಡಾವಣೆ ಮಾರ್ಚ್‌ 5 ಸಂಜೆ 5.43ಕ್ಕೆ ನಡೆಯಲಿದೆ. ಜಿಯೋ ಸಿಂಕ್ರೊನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (GSLV-F10) ಶ್ರೀಹರಿಕೋಟಾದ ಎಸ್‌ಡಿಎಸ್‌ಸಿ ಶಾರ್‌ನ ಎರಡನೇ ಲಾಂಚ್ ಪ್ಯಾಡ್‌ನಿಂದ ಜಿಯೋ ಇಮೇಜಿಂಗ್ ಉಪಗ್ರಹವನ್ನು (GISAT-1) ಉಡಾವಣೆ ಮಾಡಲಿದೆ.

GISAT-1

ಸುಮಾರು 2,275 ಕೆಜಿ ತೂಕದ GISAT-1 ಅತ್ಯಾಧುನಿಕ ಭೂ ವೀಕ್ಷಣಾ ಉಪಗ್ರಹವಾಗಿದ್ದು, ಇದನ್ನು GSLV-F10 'ಜಿಯೋ ಸಿಂಕ್ರೊನಸ್ ವರ್ಗಾವಣೆ ಕಕ್ಷೆಯಲ್ಲಿ' ಇಡಲಾಗುವುದು. ತರುವಾಯ, ಉಪಗ್ರಹವು ಅದರ ಆನ್‌ಬೋರ್ಡ್ ಪ್ರೊಪಲ್ಷನ್ ವ್ಯವಸ್ಥೆ ಬಳಸಿಕೊಂಡು ಅಂತಿಮ ಜಿಯೋಸ್ಟೇಷನರಿ ಕಕ್ಷೆ ತಲುಪುತ್ತದೆ.

GSLV

ಈ GSLV ಹಾರಾಟದಲ್ಲಿ ನಾಲ್ಕು ಮೀಟರ್ ವ್ಯಾಸದ ಓಜಿವ್ ಆಕಾರದ ಪೇಲೋಡ್ ಫೇರಿಂಗ್‌ನ್ನು ಮೊದಲ ಬಾರಿಗೆ ಹಾರಿಸಲಾಗುತ್ತಿದೆ. ಇದು ಜಿಎಸ್‌ಎಲ್‌ವಿಯ ಹದಿನಾಲ್ಕನೆಯ ಹಾರಾಟ ಎಂದು ಬಾಹ್ಯಾಕಾಶ ಸಂಸ್ಥೆ ಇಸ್ರೋ ತಿಳಿಸಿದೆ.

ಜಿಯೋ

ಜಿಯೋ ಸ್ಟೇಷನರಿ ಕಕ್ಷೆಯಿಂದ ಕಾರ್ಯನಿರ್ವಹಿಸುವ GISAT-1 ಮೋಡ ಮುಕ್ತ ಪರಿಸ್ಥಿತಿಗಳಲ್ಲಿ ಮತ್ತು ಮಧ್ಯಂತರದಲ್ಲಿ ಭಾರತೀಯ ಉಪಖಂಡದ ನೈಜ ಸಮಯದ ವೀಕ್ಷಣೆಗೆ, ಅನುಕೂಲವಾಗಲಿದೆ ಎಂದು ಹೇಳಲಾಗಿದೆ.

Most Read Articles
Best Mobiles in India

Read more about:
English summary
ISRO Geo Imaging GISAT-1 Satellite Launching On March 5

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X