ಜಿಯೋ ಸೆಲೆಬ್ರೆಷನ್ ಪ್ಯಾಕ್‌; ಪ್ರತಿ ದಿನ 2GB ಉಚಿತ ಡೇಟಾ.!!

|

ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಕಾಂತ್ರಿ ಮಾಡಿದ 'ರಿಲಾಯನ್ಸ್‌ ಜಿಯೋ' ಕಂಪನಿಯು ಕಡಿಮೆ ದರಕ್ಕೆ ಅತ್ಯುತ್ತಮ ಡೇಟಾ ಆಫರ್‌ಗಳನ್ನು ಪರಿಚಯಿಸಿ ಗ್ರಾಹಕರಿಗೆ ನೆಚ್ಚಿನ ಟೆಲಿಕಾಂ ಕಂಪನಿ ಎಂದೇ ಗುರುತಿಸಿಕೊಂಡಿದೆ. ಇದೀಗ ಜಿಯೋ ಸೆಲೆಬ್ರೆಷನ್ ಪ್ಯಾಕ್‌' ಹೆಸರಿನಲ್ಲಿ ಆಫರ್ ಒಂದನ್ನು ತನ್ನ ಗ್ರಾಹಕರಿಗೆ ಪರಿಚಯಿಸಿದ್ದು, ಈ ಪ್ಯಾಕ್‌ನಡಿ ಗ್ರಾಹಕರಿಗೆ ಭರ್ಜರಿ ಉಚಿತ ಡೇಟಾ ದೊರೆಯಲಿದೆ.

ಜಿಯೋ ಸೆಲೆಬ್ರೆಷನ್ ಪ್ಯಾಕ್‌; ಪ್ರತಿ ದಿನ 2GB ಉಚಿತ ಡೇಟಾ.!!

ಹೌದು, ರಿಲಾಯನ್ಸ್ ಜಿಯೋ ತನ್ನ ಬಳಕೆದಾರರಿಗೆ ಸೆಲೆಬ್ರೆಷನ್ ಪ್ಯಾಕ್‌ ಅನ್ನು ನೀಡಿದ್ದು, ಬಳಕೆದಾರರಿಗೆ ಪ್ರತಿ ದಿನ 2GB ಉಚಿತ ಡೇಟಾ ದೊರೆಯಲಿದ್ದು, ಇದರೊಂದಿಗೆ ಅಡಿಷನಲ್‌ 6GB ಡೇಟಾ ಸಹ ಪಡೆದುಕೊಳ್ಳಬಹುದಾಗಿದೆ. ಇದೇ ಮಾರ್ಚ 15 ರಿಂದ ಬಳಕೆದಾರರಿಗೆ ಲಭ್ಯವಾಗಿರುವ ಈ ಆಫರ್‌ ಇದೇ ಮಾರ್ಚ್‌ 17ರ(ನಾಳೆ) ವರೆಗೂ ದೊರೆಯಲಿದೆ. ಈ ಆಫರ್‌ ಜಿಯೋ ಪ್ರೈಮ್‌ ಬಳಕೆದಾರರಿಗೆ ದೊರೆಯಲಿದೆ.

ಜಿಯೋ ಸೆಲೆಬ್ರೆಷನ್ ಪ್ಯಾಕ್‌; ಪ್ರತಿ ದಿನ 2GB ಉಚಿತ ಡೇಟಾ.!!

ಕಳೆದ ಸೆಪ್ಟಂಬರ್‌ನಲ್ಲಿ ರಿಲಾಯನ್ಸ್‌ ಜಿಯೋ ತನ್ನ ಎರಡು ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಬಳರಕೆದಾರರಿಗೆ 'ಸೆಲೆಬ್ರೆಷನ್ ಪ್ಯಾಕ್‌' ಅನ್ನು ಪರಿಚಯಿಸಿ ಭರ್ಜರಿ ಡೇಟಾ ಆಫರ್‌ ನೀಡಿತ್ತು. ಅದೇ ರೀತಿ ಇದೀಗ ಮತ್ತೆ ಸೆಲೆಬ್ರೆಷನ್ ಪ್ಯಾಕ್‌ ಮೂಲಕ ಡೇಟಾ ನೀಡುತ್ತಿದೆ. ಆದರೆ ಈ ಸೆಲೆಬ್ರೆಷನ್ ಪ್ಯಾಕ್‌ ರಿಲಾಯನ್ಸ್ ಜಿಯೋ ಪ್ರೈಮ್‌ ಬಳಕೆದಾರರಿಗೆ ಮಾತ್ರ ಲಭ್ಯವಾಗಲಿದೆ ಎನ್ನಲಾಗಿದೆ.

ಸಂಪೂರ್ಣ ಉಚಿತವಾಗಿದ್ದು, ಆಟೋಮ್ಯಾಟಿಕ್ ಆಗಿ ಬಳಕೆದಾರರಿಗೆ ಈ ಸೌಲಭ್ಯ ದೊರೆತಿರುತ್ತದೆ. ಈ ಆಫರ್‌ನಲ್ಲಿ ಕೇವಲ 2GB ಉಚಿತ ಡೇಟಾದ ಬಗ್ಗೆ ಮಾತ್ರ ಆಫರ್‌ ತಿಳಿಸಿದ್ದು, ಕರೆ ಮತ್ತು ಎಸ್‌ಎಮ್‌ಎಸ್‌ ಕುರಿತು ಯಾವುದೇ ಆಫರ್‌ ನೀಡುವ ಕುರಿತು ಮಾಹಿತಿ ನೀಡಿಲ್ಲ. ಹೀಗಾಗಿ ಪ್ರಸ್ತುತ ನಿಮ್ಮ ಕರೆ ಮತ್ತು ಎಸ್‌ಎಮ್‌ಎಸ್‌ ಪ್ಲಾನ್‌ ಇರುವ ಹಾಗೇ ಮುಂದುವರಿಯಲಿದೆ.

ಜಿಯೋ ಸೆಲೆಬ್ರೆಷನ್ ಪ್ಯಾಕ್‌; ಪ್ರತಿ ದಿನ 2GB ಉಚಿತ ಡೇಟಾ.!!

ನೀವು ಜಿಯೋ ಪ್ರೈಮ್‌ ಬಳಕೆದಾರರಾಗಿದ್ದರೇ, ನಿಮ್ಮ ಸ್ಮಾರ್ಟ್‌ಫೋನ್‌ ಮೈಜಿಯೋ ಆಪ್‌ ಡೌನಲೋಡ್‌ ಮಾಡಿಕೊಳ್ಳಿ ನಂತರ ನಿಮ್ಮ ಜಿಯೋ ನಂಬರ್‌ನೊಂದಿಗೆ ರಿಜಿಸ್ಟರ್‌ ಮಾಡಿಕೊಳ್ಳಿ, ನಂತರ ಮೈ ಪ್ಲಾನ್‌ ಸೆಲೆಕ್ಟ್‌ ಮಾಡಿ ಆನಂತರ ಕರೆಂಟ್‌ ಪ್ಲಾನ್‌ ಎಂಬ ಆಯ್ಕೆನ್ನು ಸೆಲೆಕ್ಟ್‌ ಮಾಡಿ ಆಗ ಜಿಯೋ ಸೆಲೆಬ್ರೆಷನ್ ಪ್ಯಾಕ್‌ ಆಕ್ಟಿವ್‌ ಆಗಿದೆಯಾ ಅಥವಾ ಇಲ್ಲವಾ ಎಂಬುದನ್ನು ತಿಳಿಯಿರಿ.

Best Mobiles in India

English summary
Reliance Jio’s latest ‘Jio Celebration Pack’ offers users 2GB data per day. Here’s how to check if you’ve received the offer.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X