ಇಂದು 12pmಗೆ ಜಿಯೋ ಪೋನ್ 2 ಫ್ಲಾಷ್‌ ಸೇಲ್: ನೀವು ಖರೀದಿಸಬೇಕಾ..?

|

ಕಳೆದ ತಿಂಗಳೆ ಬಿಡುಗಡೆಯಾಗಿದ್ದ ಜಿಯೋ ಫೋನ್ 2 ಇಂದಿನಿಂದ ಮಾರುಕಟ್ಟೆಯಲ್ಲಿ ಸೇಲ್‌ಗೆ ನಲ್ಲಿ ದೊರೆಯಲಿದೆ. ಆಗಸ್ಟ್ 15 ರಿಂದ ಜಿಯೋ ಗಿಗಾ ಫೈಬರ್ ಸೇವೆಗೆ ರಿಜಿಸ್ಟ್ರೇಷನ್ ಆರಂಭವಾಗಿದೆ. ಇದೇ ಮಾದರಿಯಲ್ಲಿ ಇಂದು (ಆಗಸ್ಟ್ 16) 12pmಗೆ ರಿಂದ ಜಿಯೋ ಫೋನ್ 2 ಸೇಲ್ ಶುರುವಾಗಲಿದೆ. ಈ ಹಿನ್ನಲೆಯಲ್ಲಿ ನೀವು ಈ ಫೋನ್‌ ಅನ್ನು ಖರೀದಿ ಮಾಡಬೇಕು ಎಂದಿದ್ದರೆ ನಿಮಗೆ ಬೇಕಾದ ಮಾಹಿತಿಯೂ ಇಲ್ಲಿದೆ.

ಇಂದು 12pmಗೆ ಜಿಯೋ ಪೋನ್ 2 ಫ್ಲಾಷ್‌ ಸೇಲ್: ನೀವು ಖರೀದಿಸಬೇಕಾ..?

ಜಿಯೋ ಫೋನ್ 2ಫ್ಲಾಷ್ ಸೇಲ್ ನಲ್ಲಿ ಖರೀದಿಸಲು ಜಿಯೋ ಅಧಿಕೃತ ವೆಬ್‌ಸೈಟ್ ಜಿಯೋ ಡಾ.ಕಾಮ್‌ನಲ್ಲಿ ಆಗ್‌ ಇನ್ ಆಗಬೇಕಾಗಿದೆ. ಆಗಸ್ಟ್ 16 ರಂದು ಮಧ್ಯಾಹ್ನ 12ಕ್ಕೆ ಸೇಲ್ ಆರಂಭವಾಗಲಿದೆ. ಈ ಸಂದರ್ಭದಲ್ಲಿ ನೀವು ಫೋನ್ ಅನ್ನು ಖರೀದಿ ಮಾಡಬೇಕಾಗಿದೆ. ಈ ಹಿನ್ನಲೆಯಲ್ಲಿ ಜಿಯೋ ಫೋನ್ ಕುರಿತ ಮಾಹಿತಿಯೂ ಮುಂದಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಜಿಯೋ ಫೋನ್‌ 2 ಭಾರೀ ಬೇಡಿಕೆಯನ್ನು ಸೃಷ್ಠಿಸಿಕೊಂಡಿದೆ ಎನ್ನಲಾಗಿದೆ.

ವಾಟ್ಸ್‌ಆಪ್-ಫೇಸ್‌ಬುಕ್‌:

ವಾಟ್ಸ್‌ಆಪ್-ಫೇಸ್‌ಬುಕ್‌:

ಜಿಯೋ ಫೋನ್ 2 ಜಿಯೋ ಆಪ್‌ಗಳಾದ ಮೈ ಜಿಯೋ, ಜಿಯೋ ಮ್ಯೂಸಿಕ್, ಜಿಯೋ ಟಿವಿಯಂತಹ ಆಪ್‌ಗಳನ್ನು ಹೊಂದಿದೆ. ಇದೇ ಮಾದರಿಯಲ್ಲಿ ಜಿಯೋ ಫೋನ್‌ 2 ನಲ್ಲಿ ಸೋಶಿಯಲ್ ಮೀಡಿಯಾ ಆಪ್‌ಗಳಾದ ಫೇಸ್‌ಬುಕ್‌, ವಾಟ್ಸ್‌ಆಪ್ ಮತ್ತು ಯೂಟ್ಯೂಬ್‌ಗಳನ್ನು ಕಾಣಬಹುದಾಗಿದೆ. ಇದರಿಂದಾಗಿ ಈ ಫೋನ್ ಇನ್ನಷ್ಟು ದೊಡ್ಡ ಮಟ್ಟಲ್ಲಿ ಬಳಕೆದಾರರನ್ನು ಹೊಂದಲಿದೆ ಎನ್ನಲಾಗಿದೆ.

ಉತ್ತಮವಾದ KaiOS ಸಿಸ್ಟಮ್:

ಉತ್ತಮವಾದ KaiOS ಸಿಸ್ಟಮ್:

ಜಿಯೋ ಫೋನ್ 2 KaiOS ಸಿಸ್ಟಮ್ ಅನ್ನು ಅಳವಡಿಸಲಾಗಿದೆ. ಇದು ಹೆಚ್ಚಿನ ಆಪ್‌ಡೇಟ್ ಅನ್ನು ಪಡೆದಂತೆ ಫೋನ್ ಇನ್ನಷ್ಟು ಸ್ಮಾರ್ಟ್ ಆಗಲಿದೆ ಎನ್ನಲಾಗಿದೆ. ಹೀಗಾಗಿ ಮುಂದಿನ ದಿನದಲ್ಲಿ ಇನ್ನಷ್ಟು ಹೆಚ್ಚಿನ ಆಯ್ಕೆಗಳು ದೊರೆಯಲಿದೆ. ಅನೇಕ ಫೀಚರ್ ಫೋನ್‌ಗಳು ಇದೇ ಮಾದರಿಯ OSಗಳನ್ನು ಬಳಕೆ ಮಾಡಿಕೊಳ್ಳುತ್ತಿವೆ.

ಉತ್ತಮ ವಿನ್ಯಾಸ:

ಉತ್ತಮ ವಿನ್ಯಾಸ:

ಹೊಸ ಜಿಯೋ ಫೋನ್ 2 ವಿನ್ಯಾಸ ಮತ್ತು ಡಿಸ್‌ಪ್ಲೇ ಜಿಯೋ ಫೋನ್‌ಗಿಂತಲೂ ವಿಭಿನ್ನವಾಗಿದೆ. ಹೊಸ ಫೋನ್‌ನಲ್ಲಿ QWERTY ಕೀಪ್ಯಾಡ್‌ ಜತೆಗೆ 4 ವೇ ನ್ಯಾವಿಗೇಷನ್ ಪ್ಯಾಡ್‌ನ್ನು ಕಾಣಬಹುದಾಗಿದೆ. ಇದು ಸಹ ಹಳೇ ಮಾದರಿಯಲ್ಲಿ 2.4 ಇಂಚಿನ QVGA ಡಿಸ್‌ಪ್ಲೇ ಹೊಂದಿದೆ ಎನ್ನಲಾಗಿದೆ.

ಜಿಯೋ ಫೋನ್ 2 ಕ್ಯಾಮೆರಾ:

ಜಿಯೋ ಫೋನ್ 2 ಕ್ಯಾಮೆರಾ:

ಜಿಯೋ ಫೋನ್ 2ನಲ್ಲಿ 2 MP ಹಿಂಬದಿ ಕ್ಯಾಮೆರಾ ಮತ್ತು 0.3 MP (VGA) ಕ್ಯಾಮೆರಾವನ್ನು ಮುಂಬದಿಯಲ್ಲಿ ಕಾಣಬಹುದಾಗಿದೆ. ಉತ್ತಮವಾದ ವಿಡಿಯೋ ರೆಕಾರ್ಡಿಂಗ್ ಮಾಡುವ ಸೌಲಭ್ಯ ಹೊಂದಿದ್ದು, ಬಳಕೆದಾರರು ಉತ್ತಮ ಚಿತ್ರಗಳನ್ನು ಸೆರೆಹಿಡಿಯಲು ಶಕ್ತವಾಗಿದ್ದಾರೆ.

ರೂ.2999ಕ್ಕೆ ಮಾರಾಟ:

ರೂ.2999ಕ್ಕೆ ಮಾರಾಟ:

2016ರಲ್ಲಿ ಲಾಂಚ್ ಆದ ಜಿಯೋ ಫೋನ್ ಕೇವಲ ರೂ.1500ಕ್ಕೆ ಲಭ್ಯವಿತ್ತು. ಈ ಬಾರಿ ಲಾಂಚ್ ಆಗಲಿರುವ ಜಿಯೋ ಫೋನ್ 2 ರೂ.2,999ಕ್ಕೆ ಮಾರಾಟವಾಗಲಿದೆ. 4G VoLTE, FM ರೇಡಿಯೋ, ವೈ-ಫೈ, GPS ಮತ್ತು NFC ಫೀಚರ್‌ಗಳನ್ನು ಹೊಂದಿದೆ. 2000 mAh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ಫೀಚರ್‌ ಫೋನ್‌ನಲ್ಲಿ ಬೆಸ್ಟ್‌ ಎನಿಸಬಹುದು.

ಜಿಯೋ ಗಿಗಾ ಫೈಬರ್ ರಿಜಿಸ್ಟ್ರೇಷನ್ ಶುರು: ಉಚಿತ ಮೂರು ತಿಂಗಳು ಬ್ರಾಡ್‌ ಬ್ಯಾಂಡ್, 600 TV ಚಾನಲ್‌ ..!

ಜಿಯೋ ಗಿಗಾ ಫೈಬರ್ ರಿಜಿಸ್ಟ್ರೇಷನ್ ಶುರು: ಉಚಿತ ಮೂರು ತಿಂಗಳು ಬ್ರಾಡ್‌ ಬ್ಯಾಂಡ್, 600 TV ಚಾನಲ್‌ ..!

ಭಾರತೀಯ ಬ್ರಾಡ್‌ಬ್ಯಾಂಡ್ ಲೋಕದಲ್ಲಿ ಹೊಸ ಸಾಧ್ಯತೆಯನ್ನು ತೋರಿಸಿಕೊಡಲಿರುವ ರಿಲಯನ್ಸ್ ಮಾಲೀಕತ್ವದ ಜಿಯೋ ಗಿಗಾ ಫೈಬರ್ ರಿಜಿಸ್ಟ್ರೇಷನ್ ಶುರುವಾಗಿದೆ. ಮೂರು ತಿಂಗಳು ಉಚಿತ ಬ್ರಾಡ್‌ ಬ್ಯಾಂಡ್- ಉಚಿತ 600 TV ಚಾನಲ್‌ಗಳು ದೊರೆಯುವ ಸಾಧ್ಯತೆ ಇದೆ. ಈ ಸೇವೆಗಳನ್ನು ಸೇವೆಯನ್ನು ಪಡೆದುಕೊಳ್ಳುವ ಸಲುವಾಗಿ ರಿಜಿಸ್ಟ್ರೇಷನ್ ಅನ್ನು ಜಿಯೋ ಓಪನ್ ಮಾಡಿದೆ. ನೀವು ಜಿಯೋ ಗಿಗಾ ಫೈಬರ್ ಸೇವೆಯನ್ನು ಪಡೆದುಕೊಳ್ಳಬೇಕು ಎಂದರೆ ನೀವು ಮೊದಲಿಗೆ ರಿಜಿಸ್ಟರ್ ಆಗಬೇಕಾಗಿದೆ.


ಜಿಯೋ ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಜಿಯೋ, ತನ್ನ ಫೈಬರ್ ಬ್ರಾಡ್ ಬ್ರಾಂಡ್ ಸೇವೆ 'ಗಿಗಾ ಫೈಬರ್' ನೋಂದಣಿಗೆ ಚಾಲನೆ ನೀಡಿದೆ. 1 GBPS ವೇಗದಲ್ಲಿ ಇಂಟರ್ನೆಟ್ ಸೇವೆಯನ್ನು ನೀಡಲಿದ್ದು, ಮೊಬೈಲ್ ಡೇಟಾ ಕ್ರಾಂತಿಯಲ್ಲಿ ಪ್ರಮುಖ ಪಾತ್ರವಹಿಸಿದ ಮಾದರಿಯಲ್ಲಿ, ಬ್ರಾಡ್ ಬ್ಯಾಂಡ್ ಲೋಕದಲ್ಲಿಯೂ ಹೊಸ ಕಾಂತ್ರಿಗೆ ನಾಂದಿ ಹಾಡಲಿದೆ. ಈ ಹಿನ್ನಲೆಯಲ್ಲಿ ನೀವು ಗಿಗಾ ಫೈಬರ್ ಸೇವೆಯನ್ನು ಪಡೆಯಲು ಬೇಕಾದ ಮಾಹಿತಿಯು ಮುಂದಿದೆ.

ಒಟ್ಟು 1100 ನಗರಗಳು:

ಒಟ್ಟು 1100 ನಗರಗಳು:

ದೇಶದಲ್ಲಿ ಇರುವ 1100 ನಗರಗಳಲ್ಲಿ ಜಿಯೋ ತನ್ನ ಗಿಗಾ ಫೈಬರ್ ಸೇವೆಯನ್ನು ಆರಂಭಿಸಲಿದೆ ಎನ್ನಲಾಗಿದೆ. ಸದ್ಯ ರಿಜಿಸ್ಟರ್ ಮಾಡಿಕೊಳ್ಳುವ ಅವಕಾಶವನ್ನು ಮಾತ್ರವೇ ನೀಡಲಾಗಿದ್ದು, ಲಾಂಚ್ ಆಗುವ ಕುರಿತು ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಈಗಾಗಲೇ ಸುಮಾರು ನಗರಗಳಲ್ಲಿ ಟೆಸ್ಟಿಂಗ್ ಸೇವೆಯನ್ನು ನೀಡುತ್ತಿದೆ.

ರಿಜಿಸ್ಟೆರೆಷನ್ ಮಾಡಿಕೊಳ್ಳುವುದು ಹೇಗೆ..?

ರಿಜಿಸ್ಟೆರೆಷನ್ ಮಾಡಿಕೊಳ್ಳುವುದು ಹೇಗೆ..?

ಮೊದಲಿಗೆ ನೀವು ಜಿಯೋ ಗಿಗಾ ಫೈಬರ್ ರಿಜಿಸ್ಟರ್ ಮಾಡಿಕೊಳ್ಳಲು ಜಿಯೋ ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕಾಗಿದೆ. ನಂತರದಲ್ಲಿ ಅಲ್ಲಿರುವ ಜಿಯೋ ಗಿಗಾ ಫೈಬರ್ ಪೇಜ್ ಅನ್ನು ಓಪನ್ ಮಾಡಬೇಕಾಗಿದೆ.

ಹಂತ 02:

ಹಂತ 02:

ನಂತರದಲ್ಲಿ ನೀವು ನಿಮ್ಮ ಆಡ್ರಸ್ ಅನ್ನು ಎಂಟ್ರಿ ಮಾಡಬೇಕಾಗಿದೆ. ಮೊದಲೆ ನಿಮ್ಮ ಆಕೌಂಟ್‌ ನಿಂದಾಗಿ ಆಡ್ರೆಸ್ ಅಲ್ಲಿಯೇ ಇರಲಿದೆ. ಇದಾದ ನಂತರದಲ್ಲಿ ಸಬಿಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಹಂತ 03:

ಹಂತ 03:

ಮುಂದಿನ ಪೇಜ್‌ನಲ್ಲಿ ನಿಮ್ಮ ಹೆಸರು ಮತ್ತು ಫೋನ್ ನಂಬರ್ ಅನ್ನು ಎಂಟ್ರಿ ಮಾಡಬೇಕಾಗಿದೆ. ಇದಾದ ನಂತರದಲ್ಲಿ OTP ಜನರೇಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕಾಗಿದೆ. ಇದಾದ ನಂತರದಲ್ಲಿ ನಿಮ್ಮ ಮೊಬೈಲ್ ನಂಬರ್‌ಗೆ OTPಯೊಂದು ಬರಲಿದೆ.

ಹಂತ 04:

ಹಂತ 04:

ಇದಾದ ನಂತರದಲ್ಲಿ ನೀವು ನಿಮ್ಮ ಫೋನಿನಲ್ಲಿ ಬಂದಿರುವ OTPಯನ್ನು ಎಂಟ್ರಿ ಮಾಡಬೇಕಾಗಿದೆ. ಇದಾದ ನಂತರದಲ್ಲಿ ಮತ್ತೆ ನೀವು ಸಬಿಟ್ ಬಟನ್ ಅನ್ನು ಒತ್ತಬೇಕಾಗಿದೆ. ಹೀಗೆ ಮಾಡಿದಲ್ಲಿ ನೀವು ಜಿಯೋ ಗಿಗಾ ಫೈಬರ್ ಖರೀದಿಸಲು ನೋಂದಣಿ ಮಾಡಿಕೊಂಡಂತಾಗಲಿದೆ.

ವೇಗದ ಇಂಟರ್ನೆಟ್:

ವೇಗದ ಇಂಟರ್ನೆಟ್:

ಸದ್ಯ ಮಾರುಕಟ್ಟೆಯಲ್ಲಿ ಹೆಚ್ಚು ಎಂದರೆ 100 Mbps ವೇಗದ ಸೇವೆಯನ್ನು ಮಾತ್ರವೇ ಕಾಣಬಹುದಾಗಿದೆ. ಆದರೆ ಜಿಯೋ ಗಿಗಾ ಫೈಬರ್ ನಿಮಗೆ 1 Gbps ವೇಗದಲ್ಲಿ ಇಂಟರ್ನೆಟ್ ಸೇವೆಯನ್ನು ನೀಡಲಿದೆ. ಇದರಿಂದಾಗಿ ನಿಮ್ಮ ಮನೆಯನ್ನು ಸ್ಮಾರ್ಟ್ ಆಗಿಸಿಕೊಳ್ಳಬಹುದಾಗಿದೆ.

ಮೂರು ತಿಂಗಳು ಉಚಿತ:

ಮೂರು ತಿಂಗಳು ಉಚಿತ:

ಮೂಲಗಳ ಪ್ರಕಾರ ಮೊದಲ ಮೂರು ತಿಂಗಳು ಜಿಯೋ ಉಚಿತ ಸೇವೆಯೂ ಬಳಕೆದಾರರಿಗೆ ನೀಡಲಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ. ಜಿಯೋ ತನ್ನ ನೂತನ ಗಿಗಾ ಫೈಬರ್ ಸೇವೆಯನ್ನು ಆರಂಭಿಸುವ ಬಗ್ಗೆ ಮಾತ್ರವೇ ಮಾಹಿತಿ ಬಿಟ್ಟುಕೊಟ್ಟಿದ್ದು, ಇದಕ್ಕಿಂತ ಹೆಚ್ಚಾಗಿ ಯಾವುದೇ ಮಾಹಿತಿ ಲೀಕ್ ಆಗಿಲ್ಲ.

ಸ್ಮಾರ್ಟ್ ಮನೆ:

ಸ್ಮಾರ್ಟ್ ಮನೆ:

ಬ್ರಾಂಡ್ ಬ್ಯಾಂಡ್ ಸೇವೆಯಲ್ಲಿ ವೇಗದ ಇಂಟರ್ನೆಟ್ ಸೇವೆಯೂ ದೊರೆಯಲಿದ್ದು, ಒಂದೇ ಕನೆಕ್ಷನ್ ಅನ್ನು ನಿಮ್ಮ ಮನೆಯನ್ನು ಸ್ಮಾರ್ಟ್ ಮನೆಯಾಗಿಸಿ ಕೊಳ್ಳಬಹುದಾಗಿದೆ. ಮನೆಯಲ್ಲಿರುವ ಟಿವಿ, ಸಿಸಿಟಿವಿ, ಸ್ಮಾರ್ಟ್‌ ಸ್ಪೀಕರ್ ಸೇರಿಂದಂತೆ ಎಲ್ಲಾ ವಸ್ತುಗಳನ್ನು ಕೆನೆಕ್ಟ್ ಮಾಡಿಕೊಳ್ಳಬಹುದಾಗಿದೆ.

ಉಚಿತ ಟಿವಿ:

ಉಚಿತ ಟಿವಿ:

ಇದರೊಂದಿಗೆ ಉಚಿತ ಟಿವಿ ಚಾನಲ್‌ಗಳನ್ನು ಪಡೆದುಕೊಳ್ಳಬುದಾಗಿದೆ. 600ಕ್ಕೂ ಹೆಚ್ಚು ಚಾನಲ್‌ಗಳು, ಸಾವಿರಕ್ಕೂ ಹೆಚ್ಚು ಸಿನಿಮಾಗಳನ್ನು ನೋಡಬಹುದಾಗಿದೆ. ಇದಲ್ಲದೇ ಎಲ್ಲಾ ಜಿಯೋ ಸೇವೆಯೂ ಉಚಿತವಾಗಿ ದೊರೆಯಲಿದೆ

Best Mobiles in India

Read more about:
English summary
Jio Phone 2 to Be Available on Flash Sale Today. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X