ಮಾರುಕಟ್ಟೆಯಲ್ಲಿ ಮತ್ತೆ ಮೊಟೊ ಆರ್ಭಟಕ್ಕೆ ಇಲ್ಲಿದೇ ಮುನ್ನುಡಿ: ಒಂದಲ್ಲಾ ಎರಡು..!

|

ಸದ್ಯ ಮಾರುಕಟ್ಟೆಯಲ್ಲಿ ಆಂಡ್ರಾಯ್ಡ್ ಒನ್ ಸ್ಮಾರ್ಟ್‌ಪೋನ್‌ಗಳ ಹಾವಳಿಯೂ ಹೆಚ್ಚಾಗಿದೆ. ಶಿಯೋಮಿ ಲಾಂಚ್ ಮಾಡಿದ Mi A2 ಸ್ಮಾರ್ಟ್‌ಫೋನ್ ಹೆಚ್ಚಿನ ಬೇಡಿಕೆಯನ್ನು ಸೃಷ್ಠಿಕೊಂಡಿದ್ದು, ಹಾಗೆಯೇ ನೋಕಿಯಾ ಸ್ಮಾರ್ಟ್‌ಫೋನ್‌ಗಳು ಅಧಿಕ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಗೆ ಮೊಟೊರೊಲಾ ಸಹ ಒಟ್ಟಿಗೆ ಆಂಡ್ರಾಯ್ಡ್ ಒನ್‌ನಲ್ಲಿ ಕಾರ್ಯನಿರ್ವಹಿಸುವ ಎರಡು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲಿದೆ.

ಮಾರುಕಟ್ಟೆಯಲ್ಲಿ ಮತ್ತೆ ಮೊಟೊ ಆರ್ಭಟಕ್ಕೆ ಇಲ್ಲಿದೇ ಮುನ್ನುಡಿ: ಒಂದಲ್ಲಾ ಎರಡು..!

ಮೂಲಗಳು ತಿಳಿಸಿರುವಂತೆ ಮಾರುಕಟ್ಟೆಗೆ ಮೊಟೊರೊಲಾ ನೂತನವಾಗಿ ಮೊಟೊರೊಲಾ ಒನ್ ಮತ್ತು ಮೊಟೊರೊಲಾ ಒನ್ ಪವರ್ ಎನ್ನುವ ಎರಡು ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಲಿದೆ. ಈ ಸ್ಮಾರ್ಟ್‌ಫೋನ್‌ಗಳು ಇದುವರೆಗೆ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡ ಮೊಟೊ ಸ್ಮಾರ್ಟ್‌ಫೋನ್‌ಗಳಿಗಿಂತ ಭಿನ್ನವಾಗಿರಲಿದೆ ಎನ್ನುವ ಮಾತು ಕೇಳಿಬಂದಿದೆ.

ಮೊಟೊರೊಲಾ ಒನ್:

ಮೊಟೊರೊಲಾ ಒನ್:

ಆಂಡ್ರಾಯ್ಡ್ ಒನ್ ನಲ್ಲಿ ಕಾರ್ಯನಿರ್ವಹಿಸುವ ಮೊಟೊರೊಲಾ ಒನ್ ಸ್ಮಾರ್ಟ್‌ಫೋನಿನಲ್ಲಿ HD+ ಗುಣಮಟ್ಟದ 5.9 ಇಂಚಿನ ನೋಚ್ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದರೊಂದಿಗೆ ಸ್ನಾಪ್‌ಡ್ರಾಗನ್ 625 ಪ್ರೋಸೆಸರ್ ಅನ್ನು ಅಳವಡಿಸಲಾಗಿದೆ. ಜೊತೆಗೆ ಆಡ್ರಿನೋ 506 GPUವನ್ನು ನೀಡಲಾಗಿದೆ. 4 GB RAM ಮತ್ತು 64 GB ಇಂಟರ್ನಲ್ ಮೆಮೊರಿಯೂ ಇದೆ.

ಮೊಟೊರೊಲಾ ಒನ್ ಕ್ಯಾಮೆರಾ:

ಮೊಟೊರೊಲಾ ಒನ್ ಕ್ಯಾಮೆರಾ:

ಹಿಂಭಾಗದಲ್ಲಿ ಮೊಟೊರೊಲಾ ಒನ್ ಡ್ಯುಯಲ್ ಕ್ಯಾಮೆರಾವನ್ನು ಹೊಂದಿದೆ. 13MP + 2MP ಕ್ಯಾಮೆರಾವನ್ನು ಕಾಣಬಹುದಾಗಿದೆ. ಇದರೊಂದಿಗೆ ಮುಂಭಾಗದಲ್ಲಿ 8MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದರೊಂದಿಗೆ 3000mAh ಬ್ಯಾಟರಿಯನ್ನು ನೀಡಲಾಗಿದ್ದು, ಇದರೊಂದಿಗೆ ಟರ್ಬೋ ಚಾರ್ಜರ್ ಅನ್ನು ನೀಡಲಾಗಿದೆ. ವೇಗವಾಗಿ ಚಾರ್ಜ್ ಮಾಡುವ ಸಲುವಾಗಿದೆ.

ಮೊಟೊರೊಲಾ ಒನ್ ಪವರ್:

ಮೊಟೊರೊಲಾ ಒನ್ ಪವರ್:

ಆಂಡ್ರಾಯ್ಡ್ ಒನ್ ನಲ್ಲಿ ಕಾರ್ಯನಿರ್ವಹಿಸುವ ಮೊಟೊರೊಲಾ ಒನ್ ಪವರ್ ಸ್ಮಾರ್ಟ್‌ಫೋನಿನಲ್ಲಿ FHD+ ಗುಣಮಟ್ಟದ 6.2 ಇಂಚಿನ ನೋಚ್ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದರೊಂದಿಗೆ ಸ್ನಾಪ್‌ಡ್ರಾಗನ್ 636 ಪ್ರೋಸೆಸರ್ ಅನ್ನು ಅಳವಡಿಸಲಾಗಿದೆ. ಜೊತೆಗೆ ಆಡ್ರಿನೋ 509 GPUವನ್ನು ನೀಡಲಾಗಿದೆ. 3 GB / 4 GB RAM ಮತ್ತು 32 GB / 64 GB ಇಂಟರ್ನಲ್ ಮೆಮೊರಿಯೂ ಇದೆ.

ಮೊಟೊರೊಲಾ ಒನ್ ಪವರ್ ಕ್ಯಾಮೆರಾ:

ಮೊಟೊರೊಲಾ ಒನ್ ಪವರ್ ಕ್ಯಾಮೆರಾ:

ಹಿಂಭಾಗದಲ್ಲಿ ಮೊಟೊರೊಲಾ ಒನ್ ಪವರ್ ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾವನ್ನು ಹೊಂದಿದೆ. 16MP + 5MP ಕ್ಯಾಮೆರಾವನ್ನು ಕಾಣಬಹುದಾಗಿದೆ. ಇದರೊಂದಿಗೆ ಮುಂಭಾಗದಲ್ಲಿ 8MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದರೊಂದಿಗೆ 3000mAh ಬ್ಯಾಟರಿಯನ್ನು ನೀಡಲಾಗಿದ್ದು, ಇದರೊಂದಿಗೆ ಟರ್ಬೋ ಚಾರ್ಜರ್ ಅನ್ನು ನೀಡಲಾಗಿದೆ. ವೇಗವಾಗಿ ಚಾರ್ಜ್ ಮಾಡುವ ಸಲುವಾಗಿದೆ.

ಮುಂದಿನ ತಿಂಗಳು ಲಾಂಚ್:

ಮುಂದಿನ ತಿಂಗಳು ಲಾಂಚ್:

ಭಾರತದಲ್ಲಿ ಹೆಚ್ಚಿನ ಪ್ರಮಾಣದ ಸ್ಟಾಕ್ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಬೇಡಿಕೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ಮುಂದಿನ ತಿಂಗಳಿನಲ್ಲಿ ಈ ಸ್ಮಾರ್ಟ್‌ಫೋನ್‌ ಲಾಂಚ್ ಆಗಲಿದೆ ಎನ್ನಲಾಗಿದೆ. ಬೆಲೆ ಸಹ ಕಡಿಮೆ ಇರುವ ಸಾಧ್ಯತೆ ಇದೆ, ಈ ಬಗ್ಗೆ ಯಾವುದೇ ಮಾಹಿತಿ ಲೀಕ್ ಆಗಿಲ್ಲ.

Best Mobiles in India

English summary
latest Android One smartphones from Motorola. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X