Subscribe to Gizbot

ರೂ.2400ಕ್ಕೆ ಆಂಡ್ರಾಯ್ಡ್ ಒರಿಯೊ(ಗೋ) ಲಾವಾ Z50 ಮಾರಾಟ: ಆಫ್‌ಲೈನ್‌-ಆನ್‌ಲೈನ್‌ ಮಾರುಕಟ್ಟೆಯಲ್ಲಿ ಅಬ್ಬರ.!

Written By:

ಭಾರತೀಯ ಮಾರುಕಟ್ಟೆಯನ್ನು ಗುರಿಯಾಗಿ ಇರಿಸಿಕೊಂಡು ಗೂಗಲ್ ಅಭಿವೃದ್ಧಿಪಡಿಸಿರುವ ಆಂಡ್ರಾಯ್ಡ್ ಗೋ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಮೊದಲ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದೆ. ಲಾವಾ Z50 ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಈ ಸ್ಮಾರ್ಟ್‌ಫೋನ್ ಎಫೆಕ್ಟಿವ್ ಬೆಲೆ ರೂ.2400ಕ್ಕೆ ದೊರೆಯಲಿದ್ದು, ಆಂಡ್ರಾಯ್ಡ್ ಒರಿಯೊ (ಗೋ ಆವೃತ್ತಿ)ಯಲ್ಲಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ಫೋನ್ ಅಸಲಿ ಬೆಲೆ ರೂ.4400 ಆಗಲಿದೆ.

ಲಾವಾ Z50 ಭಾರತೀಯ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಆಂಡ್ರಾಯ್ಡ್ ಒರಿಯೊ (ಗೋ ಆವೃತ್ತಿ)ಯ ಸ್ಮಾರ್ಟ್‌ಫೋನ್ ಆಗಿದ್ದು, ಕಳೆದ ತಿಂಗಳಿನಲ್ಲಿ ಈ ಸ್ಮಾರ್ಟ್‌ಫೋನ್‌ ಅನ್ನು ಲಾವಾ ಮಾರುಕಟ್ಟೆಗೆ ಪರಿಚಯ ಮಾಡಿತ್ತು. ಈ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಟಾಪ್ ಎಂಡ್ ಸ್ಟಾಕ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆ ಅನುಭವವನ್ನು ನೀಡಲಿದೆ ಎನ್ನಲಾಗಿದ್ದು, ಇದರಿಂದಾಗಿ ಶುದ್ಧ ಆಂಡ್ರಾಯ್ಡ್ ಬಳಕೆ ಮಾಡುವ ಬಯಕೆ ಇದ್ದವರು ಲಾವಾ Z50 ಸ್ಮಾರ್ಟ್‌ಫೋನ್ ಖರೀದಿ ಮಾಡಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
4.5 ಇಂಚಿನ ಡಿಸ್‌ಪ್ಲೇ:

4.5 ಇಂಚಿನ ಡಿಸ್‌ಪ್ಲೇ:

ಲಾವಾ Z50 ಸ್ಮಾರ್ಟ್‌ಫೋನಿನಲ್ಲಿ 4.5 ಇಂಚಿನ FWVGA ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಅಲ್ಲದೇ ಈ ಡಿಸ್‌ಪ್ಲೇ ಸುರಕ್ಷತೆಗಾಗಿ 2.5D ಕರ್ವಡ್ ಗ್ಲಾಸ್ ಅನ್ನು ಅಳವಡಿಸಲಾಗಿದೆ. ಬಜೆಟ್ ಬೆಲೆಯಲ್ಲಿ ದೊರೆಯುತ್ತಿರುವ ಕಾರಣಕ್ಕಾಗಿ ಕಡಿಮೆ ಗುಣಮಟ್ಟದ ಡಿಸ್‌ಪ್ಲೇಯೂ ಇದಾಗಿದೆ.

ಮೀಡಿಯಾಟೆಕ್ ಪ್ರೋಸೆಸರ್:

ಮೀಡಿಯಾಟೆಕ್ ಪ್ರೋಸೆಸರ್:

ಲಾವಾ Z50 ಸ್ಮಾರ್ಟ್‌ಫೋನಿನಲ್ಲಿ 1.1GHz ವೇಗದ ಕ್ವಾಡ್‌ಕೋರ್ ಮೀಡಿಯಾ ಟೆಕ್ MT6737M ಚಿಪ್‌ಸೆಟ್ ಅನ್ನು ಅಳವಡಿಸಲಾಗಿದ್ದು, ಹೆಚ್ಚಿನ ಗ್ರಾಫಿಕ್ ಬಳಕೆದಾಗಿ ಆಡ್ರಿನೋ 304 GPUವನ್ನು ಸಹ ನೀಡಲಾಗಿದೆ. ಬಜೆಟ್ ಫೋನ್ ಆದರೂ ಗೇಮ್‌ಗಳನ್ನು ಆಡಬಹುದಾಗಿದೆ.

1GB RAM:

1GB RAM:

ಲಾವಾ Z50 ಸ್ಮಾರ್ಟ್‌ಫೋನ್ ಗೂಗಲ್ ಗೋ ಆವೃತ್ತಿಯ ಆಪ್‌ಗಳನ್ನು ನೀಡುವುದರಿಂದಾಗಿ ಹೆಚ್ಚಿನ RAM ಅವಶ್ಯಕತೆ ಇಲ್ಲ. ಇದಕ್ಕಾಗಿ 1GB RAM ನೀಡಲಾಗಿದೆ. ಇದ್ಲಲದೇ 8GB ಇಂಟರ್ನಲ್ ಮೆಮೊರಿಯನ್ನು ಈ ಸ್ಮಾರ್ಟ್‌ಫೋನ್ ಹೊಂದಿದೆ. SD ಕಾರ್ಡ್ ಹಾಕಿಕೊಳ್ಳುವ ಮೂಲಕ 128GB ವರೆಗೂ ಮೆಮೊರಿಯನ್ನು ಹೆಚ್ಚಿಸಿಕೊಳ್ಳುವ ಅವಕಾಶವು ಇದೆ.

ಕ್ಯಾಮೆರಾ:

ಕ್ಯಾಮೆರಾ:

ಲಾವಾ Z50 ಸ್ಮಾರ್ಟ್‌ಫೋನಿನಲ್ಲಿ ಉತ್ತಮ ಕ್ಯಾಮೆರಾವನ್ನು ನೀಡಲಾಗಿದ್ದು, ಹಿಂಭಾಗ ಮತ್ತು ಮುಂಭಾಗದಲ್ಲಿ 5MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಅಲ್ಲದೇ ಎರಡು ಕಡೆಗಳಲ್ಲಿ LED ಫ್ಲಾಷ್ ಲೈಟ್‌ಗಳನ್ನು ಸಹ ನೀಡಲಾಗಿದ್ದು, ಉತ್ತಮ ಫೋಟೋಗಳನ್ನು ಸೆರೆಹಿಡಿಯಲು ಇದು ಸಹಾಯ ಮಾಡಲಿದೆ.

ಬ್ಯಾಟರಿ:

ಬ್ಯಾಟರಿ:

ಲಾವಾ Z50 ಸ್ಮಾರ್ಟ್‌ಫೋನ್ 2000mAh ಬ್ಯಾಟರಿಯನ್ನು ನೀಡಲಾಗಿದ್ದು, 4G VoLTE ಸಪೋರ್ಟ್ ಮಾಡಲಿದೆ. ಬ್ಲೂಟೂತ್, ವೈ-ಫೈ ಸಂಪರ್ಕವನ್ನು ಇದರಲ್ಲಿ ಪಡೆದುಕೊಳ್ಳಬಹುದಾಗಿದೆ. ಬ್ಲಾಕ್ ಮತ್ತು ಗೋಲ್ಡ್ ಬಣ್ಣದಲ್ಲಿ ಈ ಸ್ಮಾರ್ಟ್‌ಫೋನ್ ಮಾರಾಟವಾಗಲಿದೆ. ಎರಡು ವರ್ಷಗಳ ವ್ಯಾರೆಂಟಿಯೂ ಜೊತೆಗಿದೆ.

ಏರ್‌ಟೆಲ್ ಆಫರ್:

ಏರ್‌ಟೆಲ್ ಆಫರ್:

ಇದಲ್ಲದೇ ಲಾವಾ Z50 ಸ್ಮಾರ್ಟ್‌ಫೋನ್ ಕೊಳ್ಳುವವರಿಗೆ ಏರ್‌ಟೆಲ್ ಆಫರ್ ನೀಡುವ ಮೂಲಕ ಹೆಚ್ಚಿನ ಬಳಕೆದಾರರನ್ನು ಸೆಳೆಯುತ್ತಿದೆ. ರೂ.2000 ಕ್ಯಾಷ್ ಬ್ಯಾಕ್ ಅನ್ನು ಈ ಸ್ಮಾರ್ಟ್‌ಫೋನ್ ಮೇಲೆ ಘೋಷಣೆ ಮಾಡಿದೆ. ಇದಕ್ಕಾಗಿ ಈ ಸ್ಮಾರ್ಟ್‌ಫೋನ್ ಬಳಕೆದಾರರು ಪ್ರತಿ ತಿಂಗಳು ಏರ್‌ಟೆಲ್‌ ರಿಚಾರ್ಜ್ ಮಾಡಿಸಿಕೊಳ್ಳಬೇಕಾಗಿದೆ.

ನಿಮ್ಮ Aadhaar ದುರುಪಯೋಗವಾಗಿದೆಯೇ..? ಪತ್ತೆ ಹಚ್ಚುವುದು ಹೇಗೆ..?
ದೊರೆಯುವುದು ಎಲ್ಲಿ:

ದೊರೆಯುವುದು ಎಲ್ಲಿ:

ಲಾವಾ Z50 ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಈಗಾಗಲೇ ಮಾರಾಟವಾಗುತ್ತಿದ್ದು, ಮೊಬೈಲ್ ರಿಟೇಲ್ ಸ್ಟೋರ್‌ಗಳಲ್ಲಿ ದೊರೆಯುತ್ತಿದೆ. ಇದಲ್ಲದೇ ಫ್ಲಿಪ್‌ಕಾರ್ಟ್, ಅಮೆಜಾನ್ ಮತ್ತು ಸ್ನಾಪ್‌ಡೀಲ್‌ಗಳಲ್ಲಿಯೂ ಈ ಸ್ಮಾರ್ಟ್‌ಫೋನ್ ಮಾರಾಟವಾಗುತ್ತಿದೆ. ಆನ್‌ಲೈನ್‌ ಮತ್ತು ಆಫ್‌ಲೈನ್‌ ಮಾರುಕಟ್ಟೆಯಲ್ಲಿ ಹೊಸ ಹವಾ ಎಬ್ಬಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Lava Z50 Android Oreo (Go edition) smartphone available at an effective price of Rs. 2400. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot