ಲೀಕೊದೊಂದಿಗೆ ಜಿಯೋ ಒಪ್ಪಂದ, ಬಳಕೆದಾರರಿಗೆ ಭರ್ಜರಿ ಆಫರ್ಸ್

Written By:

ಜಾಗತಿಕ ಇಂಟರ್ನೆಟ್ ಮತ್ತು ತಂತ್ರಜ್ಞಾನ ನಿಪುಣ ಲೀಕೊ ಇದೀಗ ರಿಲಾಯನ್ಸ್ ಜಿಯೋದೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದ್ದು "ಜಿಯೋ ವೆಲ್‌ಕಮ್ ಆಫರ್" ಅನ್ನು ಬಳಕೆದಾರರಿಗೆ ಒದಗಿಸುವ ಮೂಲಕ ಉಚಿತ ಅನಿಯಮಿತ ಕರೆ ಮತ್ತು ಡೇಟಾ ಸೇವೆಯನ್ನು ಬಳಕೆದಾರರಿಗೆ ಲಭ್ಯವಾಗಿಸುವ ಯೋಜನೆಯನ್ನು ಇದು ಆರಂಭಿಸಿದೆ.

ಓದಿರಿ: ಭಾರತೀಯ ಬಳಕೆದಾರರ ಅಚ್ಚುಮೆಚ್ಚಿನ ಫೋನ್ ಆದ ಲೀಕೊ

ಪ್ರಸ್ತುತ ಆಫರ್‌ನೊಂದಿಗೆ, ತಮ್ಮ ಡೇಟಾ ಶುಲ್ಕದ ತಲೆಬಿಸಿಯಿಲ್ಲದೆ ತಮ್ಮ ಸೂಪರ್ ಫೋನ್‌ಗಳಲ್ಲಿ ಬಳಕೆದಾರರು ತಮ್ಮ ಮೆಚ್ಚಿನ ಪ್ರೊಗ್ರಾಮ್‌ಗಳನ್ನು ವೀಕ್ಷಿಸಬಹುದಾಗಿದೆ. ಇದು 31, ಡಿಸೆಂಬರ್ 2016 ರವರೆಗೆ ಲಭ್ಯವಿದೆ. ರಿಲಾಯನ್ಸ್ ಜಿಯೋ ವೆಬ್‌ಸೈಟ್‌ಗೆ ಭೇಟಿ ನೀಡುವುದರ ಮೂಲಕ ಬಳಕೆದಾರರು ತಮಗೆ ಹೊಂದುವ ಯೋಜನೆಗಳನ್ನು ಆರಿಸಿಕೊಳ್ಳಬಹುದಾಗಿದೆ.

ಓದಿರಿ: ಲೀಕೊ ಲಿ ಮಿಲಿಯನ್ ಜಾಯ್ ಆಫರ್ಸ್ ವಿಶೇಷತೆ ಏನು?

ಲೀಕೊ ಇಂಡಿಯಾದ ಸ್ಮಾರ್ಟ್ ಇಲೆಕ್ಟ್ರಾನಿಕ್ಸ್ ಸಿಒಒ ಅತುಲ್ ಜೈನ್ ಹೇಳುವಂತೆ ಲೀಕೊ ಯಶಸ್ವಿಯಾಗಿ ಹಾರ್ಡ್‌ವೇರ್, ಸಾಫ್ಟ್‌ವೇರ್ ಮತ್ತು ಸೇವಾ ಇಕೋ ಸಿಸ್ಟಮ್ ಅನ್ನು ನಿರ್ಮಿಸಿದೆ ಇದು ನಮ್ಮ ಗ್ರಾಹಕರಿಗೆ ಅನಿಯಮಿತ ಡಿಜಿಟಲ್ ಅಪ್‌ಗ್ರೇಡ್ ಅನ್ನು ಸಕ್ರಿಯಗೊಳಿಸಿದೆ ಎಂದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಉತ್ತಮ ಯೋಜನೆ

ಉತ್ತಮ ಯೋಜನೆ

ಲೀಕೊ ಭಾರತೀಯ ಗ್ರಾಹಕರಿಗೆ ಒಂದು ಉತ್ತಮ ಯೋಜನೆಯನ್ನು ಒದಗಿಸುತ್ತಿದ್ದು ಈಗ ಜಿಯೋದ ಸಮ್ಮಿಲನದೊಂದಿಗೆ ನಮ್ಮ ಸೂಪರ್ ಫೋನ್‌ಗಳ ವಿಶೇಷತೆಯನ್ನು ಬಳಸುವ ಅವಕಾಶವನ್ನು ಬಳಕೆದಾರರಿಗೆ ನೀಡುತ್ತಿದ್ದು ಇದು ಈ ಹಿಂದೆಗಿಂತಲೂ ಉತ್ತಮ ಅನುಭವದ 4ಜಿ ಯನ್ನು ಸ್ಮಾರ್ಟ್‌ಫೋನ್ ಪ್ರಿಯರಿಗೆ ನೀಡಲಿದೆ.

"ಜಿಯೋ ವೆಲ್‌ಕಮ್ ಆಫರ್"

"ಜಿಯೋ ವೆಲ್‌ಕಮ್ ಆಫರ್" ಅನ್ನು ಯಾವುದೇ ಪ್ರಸ್ತುತವಿರುವ ಲೀಕೊ ಸೂಪರ್ ಫೋನ್‌ಗಳಾದ ಲೀ 1ಎಸ್, 1ಎಸ್ ಇಕೋ, ಲೀ2, ಲೀ ಮ್ಯಾಕ್ಸ್ ಮತ್ತು ಲೀ ಮ್ಯಾಕ್ಸ್ 2 ನಲ್ಲಿ ಆಫರ್ ಅನ್ನು ಬಳಸಿಕೊಳ್ಳಬಹುದಾಗಿದೆ. ಲೀ 2 ಮತ್ತು ಲೀ ಮ್ಯಾಕ್ಸ್ 2 ನಲ್ಲಿ ವೋಲ್ಟ್ ಕರೆಗಳನ್ನು ಗ್ರಾಹಕರು ಮಾಡಬಹುದಾಗಿದೆ.

ಹೈ ಡೆಫಿನೇಶನ್ ವಾಯ್ಸ್ ಕರೆ

ಹೈ ಡೆಫಿನೇಶನ್ ವಾಯ್ಸ್ ಕರೆ

ಹೈ ಡೆಫಿನೇಶನ್ ವಾಯ್ಸ್ ಕರೆಗಳನ್ನು ಎಲ್‌ಟಿಇ ನೆಟ್‌ವರ್ಕ್‌ನಾದ್ಯಂತ ಆನಂದಿಸಲು ಮತ್ತು ತ್ವರಿತ ಕರೆ ಕನೆಕ್ಟ್ ಅನ್ನು ಬಳಸಲು ಈಗ ಕಂಪೆನಿ ಅನುಕೂಲವನ್ನು ಮಾಡಿಕೊಟ್ಟಿದೆ.

ಪ್ರಥಮ ಸೂಪರ್ ಫೋನ್‌

ಪ್ರಥಮ ಸೂಪರ್ ಫೋನ್‌

ಪ್ರಥಮ ಸೂಪರ್ ಫೋನ್‌ಗಳಾದ ಲೀಕೊ ಲೀ 1ಎಸ್, ಲೀ 1 ಎಸ್ ಇಕೋ ಮತ್ತು ಲೀ ಮ್ಯಾಕ್ಸ್ ಡಿವೈಸ್‌ಗಳು ಜಿಯೋ ಜಾಯಿನ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದ್ದು ಧ್ವನಿ ಕರೆಗಳನ್ನು ಆನಂದಿಸಬಹುದಾಗಿದೆ.

ಅತ್ಯಪೂರ್ಣ ವಿಶೇಷತೆ

ಅತ್ಯಪೂರ್ಣ ವಿಶೇಷತೆ

ಭಾರತದಲ್ಲಿ ಅವರುಗಳ ಲಾಂಚ್ ಆದ ನಂತರ, ಲೀಕೊ ಸೂಪರ್ ಫೋನ್‌ಗಳು ಅತ್ಯಪೂರ್ಣ ವಿಶೇಷತೆಗಳೊಂದಿಗೆ ಬಂದಿದ್ದು ಉತ್ತಮ ದರದೊಂದಿಗೆ ಗ್ರಾಹಕರ ಮನಗೆಲ್ಲುವಂತಿದೆ. ಹೆಚ್ಚುವರಿ ಅಂಶಗಳೊಂದಿಗೆ ಉತ್ತಮ ಡಿವೈಸ್‌ಗಳನ್ನು ಒದಗಿಸುವ ಪ್ರಥಮ ಕಂಪೆನಿಯಾಗಿ ಲೀಕೊ ಹೊರಹೊಮ್ಮಿದೆ.

ಲೀಕೊ ಸೂಪರ್ ಫೋನ್‌ಗಳ ಖರೀದಿ

ಲೀಕೊ ಸೂಪರ್ ಫೋನ್‌ಗಳ ಖರೀದಿ

ಲೀಕೊ ಸೂಪರ್ ಫೋನ್‌ಗಳ ಖರೀದಿಯೊಂದಿಗೆ, ಬಳಕೆದಾರರು ಲೀಕೊ ಸದಸ್ಯತ್ವವನ್ನು ಪಡೆದುಕೊಳ್ಳಬಹುದಾಗಿದ್ದು 2000 + ಚಲನಚಿತ್ರಗಳು ಮತ್ತು 100 + ಲೈವ್ ಟಿವಿ ಚಾನಲ್‌ಗಳನ್ನು ಬಳಕೆದಾರರು ಆರಿಸಿಕೊಳ್ಳಬಹುದಾಗಿದೆ.

"ಜಿಯೋ ವೆಲ್‌ಕಮ್ ಆಫರ್" ಲಭಿಸುವ ಕೆಲವೊಂದು ಹಂತಗಳು

  • ಗೂಗಲ್ ಪ್ಲೇ ಸ್ಟೋರ್‌ನಿಂದ ಮೈಜಿಯೋ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಕೂಪನ್ ಕೋಡ್ ಅನ್ನು ಜನರೇಟ್ ಮಾಡಲು ಅಪ್ಲಿಕೇಶನ್ ಹಂತಗಳನ್ನು ಅನುಸರಿಸಿ.
  • ಕೂಪನ್ ಕೋಡ್ ಜನರೇಟ್ ಆದ ನಂತರ, ಕೆವೈಸಿ ಡಾಕ್ಯುಮೆಂಟ್‌ಗಳ ಪಟ್ಟಿಯನ್ನು ನೀವು ಕಂಡುಕೊಳ್ಳಬಹುದು. ಸಿಮ್ ಆಕ್ಟಿವೇಟ್ ಆಗಲು ಇದನ್ನು ಸಲ್ಲಿಸಬೇಕಾಗುತ್ತದೆ. ನಂತರದ್ದನ್ನು ಕ್ಲಿಕ್ ಮಾಡುವ ಮೂಲಕ, ಹತ್ತಿರದ ರಿಲಾಯನ್ಸ್ ಡಿಜಿಟಲ್ ಸ್ಟೋರ್ ಅನ್ನು ಲೊಕೇಟ್ ಮಾಡಲು ಬಳಕೆದಾರರಿಗೆ ಅಪ್ಲಿಕೇಶನ್ ಸಹಾಯ ಮಾಡುತ್ತದೆ
  • ಬಳಕೆದಾರರು ಖುದ್ದು ಸ್ಟೋರ್‌ಗೆ ಭೇಟಿ ನೀಡಬೇಕು ಮತ್ತು ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು. ಎಲ್ಲಾ ಡಾಕ್ಯುಮೆಂಟ್‌ಗಳ ಯಶಸ್ವಿ ದೃಢೀಕರಣದ ನಂತರ, ಜಿಯೋ ಸಿಮ್ ಕಾರ್ಡ್ ಅನ್ನು ಬಳಕೆದಾರರಿಗೆ ನೀಡಲಾಗುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Global Internet and technology conglomerate, LeEco has now partnered with Reliance Jio for its "Jio Welcome Offer" which by virtue of the unparalleled offer of free unlimited voice and data services opens up.
Please Wait while comments are loading...
Opinion Poll

Social Counting

Gadget Finder

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot