Subscribe to Gizbot

2 ಸೆಕೆಂಡ್‌ಗಳಲ್ಲಿ 70,000 ಮಾರಾಟ ಕಂಡ ಲೀಕೊ ಸ್ಮಾರ್ಟ್‌ಫೋನ್

Written By:

ಬರೇ 2 ಸೆಕೆಂಡ್‌ಗಳಲ್ಲಿ ಲೀ 1 ಎಸ್ ಸ್ಮಾರ್ಟ್‌ಫೋನ್ 70,000 ಮಾರಾಟವನ್ನು ಕಂಡಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಫೆಬ್ರವರಿ 2 ರಂದು 1200 ಗಂಟೆಗಳಲ್ಲಿ ಲೀಕೊ ಕಂಪೆನಿ ಈ ದಾಖಲೆಯನ್ನು ಮಾಡಿದೆ. ಫ್ಲ್ಯಾಶ್ ಸೇಲ್‌ಗೂ ಮುನ್ನವೇ, ರಿಜಿಸ್ಟ್ರೇಶನ್ ನಂಬರ್ 605,000 ದಾಖಲೆಯನ್ನು ತಲುಪಿತ್ತು. ಭಾರತದಲ್ಲಿ ಈ ಅಂತರಾಷ್ಟ್ರೀಯ ಕಂಪೆನಿ ಈ ಮೂಲಕ ಹೊಸ ದಾಖಲೆಯನ್ನೇ ಸೃಷ್ಟಿ ಮಾಡಿದೆ. ಅದ್ಭುತ ಫೀಚರ್‌ಗಳು ಮತ್ತು ಅತ್ಯಾಕರ್ಷಕ ಬೆಲೆ ಲೀಕೊ ಕಂಪೆನಿಯ ಫೋನ್‌ಗಳ ಯಶಸ್ಸಿಗೆ ಕಾರಣವಾಗಿದೆ.

ಬನ್ನಿ ಇಂದಿನ ಲೇಖನದಲ್ಲಿ ಈ ಫೋನ್ ಮಾಡಿದ ದಾಖಲೆ ಮತ್ತು ಫೋನ್ ಕುರಿತಾದ ಇನ್ನಷ್ಟು ಅಂಶಗಳನ್ನು ಕೆಳಗಿನ ಸ್ಲೈಡರ್‌ಗಳ ಮೂಲಕ ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪ್ರಿ - ಸೇಲ್ ರಿಜಿಸ್ಟ್ರೇಶನ್

ಮೂರು ಅತ್ಯದ್ಭುತ ದಾಖಲೆ

ಮೂರು ಅತ್ಯದ್ಭುತ ದಾಖಲೆಗಳನ್ನು ಲೀಕೊ ಸೃಷ್ಟಿಸಿದೆ. ಸಿಂಗಲ್ ಫ್ಲ್ಯಾಶ್ ಸೇಲ್‌ನಲ್ಲಿ ಹೆಚ್ಚಿನ ಸಂಖ್ಯೆಯ ಫೋನ್‌ಗಳು ಮಾರಾಟವಾಗಿರುವುದು, ಅದೂ ಕೂಡ ಅತ್ಯಂತ ಕಡಿಮೆ ಸಮಯದಲ್ಲಿ ಕಂಪೆನಿ ಈ ದಾಖಲೆಯನ್ನು ಸಾಧಿಸಿರುವುದು. ಅಂತೆಯೇ ಹೆಚ್ಚು ಸಂಖ್ಯೆಯ ಪ್ರಿ - ಸೇಲ್ ರಿಜಿಸ್ಟ್ರೇಶನ್ ಕಂಪೆನಿಯ ಸಾಧನೆಗೆ ಗರಿಯನ್ನು ಮೂಡಿಸಿದೆ.

ಅತ್ಯದ್ಭುತ ಅನ್ವೇಷಣೆಗಳು ಮತ್ತು ಮಾರುಕಟ್ಟೆ ನೀತಿ ನಿಯಮ

ಕಾತರಮಯ ಕ್ಷಣ

ಲೀಕೊ ಲಾಂಚ್ ಹೆಚ್ಚಿನ ದೇಶಗಳಿಗೆ ಕಾತರಮಯ ಕ್ಷಣಗಳಾಗಿದ್ದು ಕಂಪೆನಿಯ ಅತ್ಯದ್ಭುತ ಅನ್ವೇಷಣೆಗಳು ಮತ್ತು ಮಾರುಕಟ್ಟೆ ನೀತಿ ನಿಯಮಗಳಿಂದ ಇದನ್ನು ಸಾಧಿಸಿದೆ.

ಜನವರಿ 20

ಭಾರತೀಯ ಮಾರುಕಟ್ಟೆ ಪ್ರವೇಶ

ಜನವರಿ 20 ರಂದು ಕಂಪೆನಿ ಅಧಿಕೃತವಾಗಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದ್ದು ಅತಿ ದೊಡ್ಡ ಈವೆಂಟ್ ಒಂದನ್ನೇ ಇದಕ್ಕಾಗಿ ಸೃಷ್ಟಿಸಿತ್ತು. ಇದಕ್ಕಾಗಿ 1,000 ಅತಿಥಿಗಳನ್ನು, ಇಂಡಸ್ಟ್ರಿಯ ಟಾಪ್ ವ್ಯಕ್ತಿಗಳನ್ನು ಇದಕ್ಕಾಗಿ ಕರೆಯಿಸಿತ್ತು.

ಲೀ ಮ್ಯಾಕ್ಸ್ ಮತ್ತು ಲೀ 1 ಎಸ್

ಎರಡು ಸೂಪರ್ ಫೋನ್‌

ಲೀಕೊ ಎರಡು ಸೂಪರ್ ಫೋನ್‌ಗಳಾದ ಲೀ ಮ್ಯಾಕ್ಸ್ ಮತ್ತು ಲೀ 1 ಎಸ್ ಅನ್ನು ಲಾಂಚ್ ಮಾಡಿತ್ತು. ಇದನ್ನು ಫ್ಲ್ಯಾಗ್‌ಶಿಪ್ ಕಿಲ್ಲರ್ ಎಂಬುದಾಗಿಯೇ ಕಂಪೆನಿ ಕರೆದಿದ್ದು ಮಧ್ಯಮ ಗತಿಯ ಮಾರುಕಟ್ಟೆಯನ್ನು ಆಕರ್ಷಿಸಲು ತನ್ನ ಆಕರ್ಷಿಕ ಫೀಚರ್ ಮತ್ತು ಕೈಗೆಟಕುವ ಬೆಲೆಯ ಯೋಜನೆಯನ್ನು ರೂಪಿಸಿತ್ತು.

10 ದಿನಗಳಲ್ಲಿ 3 ಲಕ್ಷ

ಲೀ 1 ಎಸ್ ರಿಜಿಸ್ಟ್ರೇಶನ್ 1 ಲಕ್ಷವನ್ನು ಮೀರಿತ್ತು

ಲಾಂಚ್ ಮಾಡಿದ ಬರೇ 24 ಗಂಟೆಗಳಲ್ಲಿ ಲೀ 1 ಎಸ್ ರಿಜಿಸ್ಟ್ರೇಶನ್ 1 ಲಕ್ಷವನ್ನು ಮೀರಿತ್ತು, ಅದೂ ಐದು ದಿನಗಳಲ್ಲಿ ಎಂಬುದು ಕಂಪೆನಿಯ ಹೆಗ್ಗಳಿಕೆಯಾಗಿದೆ. ನಂತರ ಇದರ ಮಿತಿಯು 10 ದಿನಗಳಲ್ಲಿ 3 ಲಕ್ಷಕ್ಕೆ ಏರಿದ್ದು ಫ್ಲಿಪ್‌ಕಾರ್ಟ್‌ನಲ್ಲಿ 5.3 ಲಕ್ಷಗಳಿಗಿಂತಲೂ ಹೆಚ್ಚಿನ ಮಾರಾಟವನ್ನು ಕಂಡಿದೆ.

ಗ್ರಾಹಕರು ಇಟ್ಟಿರುವ ನಂಬಿಕೆ

2 ಸೆಕೆಂಡ್‌ಗಳಲ್ಲಿ ಕಂಪೆನಿ 70,000 ಮ್ಯಾಜಿಕ್ ಸಂಖ್ಯೆ

ಕಂಪೆನಿಯ ಸಾಧನೆಯ ಬಗ್ಗೆ ಲೀಕೊ ಇಂಡಿಯಾದ ಸಿಒಒ ಅತುಲ್ ಜೈನ್ ಹೆಮ್ಮೆ ವ್ಯಕ್ತಪಡಿಸಿದ್ದು, 2 ಸೆಕೆಂಡ್‌ಗಳಲ್ಲಿ ಕಂಪೆನಿ 70,000 ಮ್ಯಾಜಿಕ್ ಸಂಖ್ಯೆಯನ್ನು ನಾವು ಪ್ರವೇಶಿಸಿದ್ದೇವೆ. ನಮ್ಮ ಮೇಲೆ ಗ್ರಾಹಕರು ಇಟ್ಟಿರುವ ನಂಬಿಕೆಗೆ ನಾವು ಅಭಾರಿಯಾಗಿದ್ದು, ನಮ್ಮ ಉತ್ಪನ್ನಗಳನ್ನು ಬಳಸುವುದು ಅದೊಂದು ಉತ್ತಮ ಅನುಭವವಾಗಿದೆ ಎಂಬುದಾಗಿ ಅವರು ತಿಳಿಸಿದ್ದಾರೆ.

ಮೆಟಲ್ ಯೂನಿಬಾಡಿ

ವಿಶ್ವದ ಪ್ರಥಮ ಮಿರರ್ ಸರ್ಫೇಸ್ ಫಿಂಗರ್ ಸ್ಕ್ಯಾನರ್

ರೂ 10,999 ಕ್ಕೆ ಲೀ 1 ಎಸ್ ಮೆಟಲ್ ಯೂನಿಬಾಡಿಯನ್ನು ಪಡೆದುಕೊಂಡಿದ್ದು, ವಿಶ್ವದ ಪ್ರಥಮ ಮಿರರ್ ಸರ್ಫೇಸ್ ಫಿಂಗರ್ ಸ್ಕ್ಯಾನರ್ ಆಗಿ ಫೋನ್ ಖ್ಯಾತಿಯನ್ನು ಪಡೆದುಕೊಂಡಿದೆ. ಫೋನ್ 5.5 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಹೇಲಿಯೊ x10 ಟರ್ಬೊ ಪ್ರೊಸೆಸರ್ ಇದರಲ್ಲಿದೆ.

ಯುಎಸ್‌ಬಿ ಟೈಪ್ ಸಿ ಪೋರ್ಟ್

ಡ್ಯುಯಲ್ ಸಿಮ್ ಕಾರ್ಡ್ ಸ್ಲಾಟ್ಸ್

3 ಜಿಬಿ RAM ಅನ್ನು ಡಿವೈಸ್ ಒಳಗೊಂಡಿದ್ದು 32 ಜಿಬಿ ಸಂಗ್ರಹಣಾ ಸಾಮರ್ಥ್ಯವನ್ನು ಫೋನ್ ಹೊಂದಿದೆ. ಡ್ಯುಯಲ್ ಸಿಮ್ ಕಾರ್ಡ್ ಸ್ಲಾಟ್ಸ್, 4ಜಿ ಎಲ್‌ಟಿಇ ಬೆಂಬಲ ಮತ್ತು ಯುಎಸ್‌ಬಿ ಟೈಪ್ ಸಿ ಪೋರ್ಟ್ ಅನ್ನು ಇದು ಪಡೆದುಕೊಂಡಿದೆ.

ವೈಡ್ ಆಂಗಲ್ ಸೆಲ್ಫಿ

ಕ್ಯಾಮೆರಾ

ಡಿವೈಸ್ 13 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾವನ್ನು ಪಡೆದಿದ್ದು, 5 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾವನ್ನು ಹೊಂದಿದೆ. ಇದು ವೈಡ್ ಆಂಗಲ್ ಸೆಲ್ಫಿ ತೆಗೆಯಲು ಹೇಳಿಮಾಡಿಸಿದಂತಿದೆ.

ಹೆಚ್ಚಿನ ಮಾರಾಟ

3 ತಿಂಗಳಲ್ಲಿ 3 ಮಿಲಿಯನ್ ಯೂನಿಟ್‌

ಇತರ ಮಾರುಕಟ್ಟೆಗಳಲ್ಲೂ ಫೋನ್ ಜನಪ್ರಿಯತೆಯನ್ನು ಪಡೆದುಕೊಂಡಿದ್ದು 3 ತಿಂಗಳಲ್ಲಿ 3 ಮಿಲಿಯನ್ ಯೂನಿಟ್‌ಗಿಂತಲೂ ಹೆಚ್ಚಿನ ಮಾರಾಟವನ್ನು ಡಿವೈಸ್ ಕಂಡುಕೊಂಡಿದೆ.

ಫೋನ್‌ನ ಇನ್ನೊಂದು ಪ್ರತ್ಯೇಕತೆ

ವೇಗವಾದ ಚಾರ್ಜಿಂಗ್

ಫೋನ್‌ನ ಇನ್ನೊಂದು ಪ್ರತ್ಯೇಕತೆ ಅಂದರೆ ವೇಗವಾದ ಚಾರ್ಜಿಂಗ್ ಆಗಿದೆ. 5 ನಿಮಿಷಗಳ ಚಾರ್ಜ್ ನಿಮಗೆ 3.5 ಗಂಟೆಗಳ ಟಾಕ್ ಟೈಮ್ ಅನ್ನು ಒದಗಿಸುತ್ತದೆ. ವ್ಯವಹಾರಸ್ಥರಿಗೆ ಅಂದರೆ ಹೆಚ್ಚು ಸಮಯ ಫೋನ್‌ನಲ್ಲಿ ವ್ಯಸ್ಥರಾಗಿರುವವರಿಗೆ ಈ ಫೋನ್ ಹೆಚ್ಚು ಸಹಕಾರಿ ಎಂದೆನಿಸಲಿದೆ.

ಇನ್ನಷ್ಟು ಓದಿ

ಗಿಜ್‌ಬಾಟ್ ಲೇಖನಗಳು

ಲೀಕೊ ಸೂಪರ್ ಫೋನ್ ಯಶಸ್ಸಿನ ಗುಟ್ಟೇನು?
ಎಲ್ಇ 1 ಎಸ್: 20 ಸೆಕೆಂಡ್‌ಗಳಲ್ಲಿ 95000 ಆರ್ಡರ್‌ ಕಂಡ ಬಜೆಟ್ ಫೋನ್
ವಿಶ್ವದ ಅತ್ಯುತ್ತಮ ಫೋನ್ ಎಂಬ ಹೆಗ್ಗಳಿಕೆ: ಲಿಇಕೊ ಸ್ಮಾರ್ಟ್‌ಫೋನ್
ಸ್ಮಾರ್ಟ್‌ಫೋನ್‌ "Le 1s" ಬಜೆಟ್‌ ಬೆಲೆಯಲ್ಲಿ ಭರ್ಜರಿ ಖರೀದಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Le 1s receives a record 95000 orders received within 20 seconds ! Prior to the flash sale today, the registration number reached a record high of 10.30 lacs.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot