ನಾಳೆ 'ಲೆನೊವೋ ಕೆ6 ನೋಟ್' ಸ್ಮಾರ್ಟ್‌ಫೋನ್ ಭಾರತದಲ್ಲಿ ಲಾಂಚ್‌: ವಿಶೇಷತೆಗಳು..!

Written By:

ಲೆನೊವೋ ಇತ್ತೀಚೆಗೆ ತಾನೆ 'ಕೆ6 ಪವರ್' ಸ್ಮಾರ್ಟ್‌ಫೋನ್‌ ಅನ್ನು ಲಾಂಚ್ ಮಾಡಿದೆ. ಇದರ ಹಿಂದೆಯೇ ಈಗ ಭಾರತದಲ್ಲಿ 'ಲೆನೊವೋ ಕೆ6 ನೋಟ್' ಡಿವೈಸ್‌ ಅನ್ನು ಡೆಸೆಂಬರ್ 14 ರಂದು ಪರಿಚಯಿಸುತ್ತಿದೆ. ಈ ಡಿವೈಸ್‌ ಅನ್ನು ಮೊದಲು ಐಎಫ್‌ಎ 2016 ಅಲ್ಲಿ ಪರಿಚಯಿಸಲಾಗಿತ್ತು. ಆದರೆ ಈಗ ನಾಳೆ ಭಾರತದಲ್ಲಿ ಲಾಂಚ್‌ ಮಾಡಲಾಗುತ್ತಿದೆ.

ಚೀನಾ ಸ್ಮಾರ್ಟ್‌ಫೋನ್‌ ಕಂಪನಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಇಮೇಜ್ ಟೀಸರ್‌ ಅನ್ನು ಪೋಸ್ಟ್‌ ಮಾಡಿದ್ದು, ಅದು ಲೆನೊವೋ ಕೆ6 ನೋಟ್ ಡಿವೈಸ್ ಆಗಿದೆ. ಲೆನೊವೋ ಕೆ ಸೀರೀಸ್ ಡಿವೈಸ್‌ ಆದ ಕೆ6 ನೋಟ್ ನಾಳೆ ಲಾಂಚ್‌ ಆಗುತ್ತಿದ್ದು, ಫೀಚರ್‌ಗಳೇನು ಎಂಬುದನ್ನು ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಿಸ್‌ಪ್ಲೇ

ಡಿಸ್‌ಪ್ಲೇ

ಲೆನೊವೋ ಕೆ6 ನೋಟ್ 5.5 ಇಂಚಿನ ಪೂರ್ಣ ಎಚ್‌ಡಿ ಡಿಸ್‌ಪ್ಲೇ ಹೊಂದಿದ್ದು, ಸ್ನಾಪ್‌ಡ್ರಾಗನ್ 430 ಪ್ರೊಸೆಸರ್ ಚಾಲಿತವಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ಟೋರೇಜ್‌ ಫೀಚರ್‌ಗಳು

ಸ್ಟೋರೇಜ್‌ ಫೀಚರ್‌ಗಳು

ಕೆ6 ನೋಟ್ ಎರಡು ಸ್ಟೋರೇಜ್‌ ಆಪ್ಶನ್‌ಗಳಲ್ಲಿ ಬಂದಿದ್ದು, 3GB RAM/32GB ಮತ್ತು 4GB RAM/32GB ಸ್ಟೋರೇಜ್‌ ವೈವಿಧ್ಯತೆಯಲ್ಲಿ ಬಂದಿದೆ. ಆದರೆ ಎರಡು ವೈವಿಧ್ಯತೆಯ ಡಿವೈಶ್‌ಗಳಲ್ಲಿಯೂ ಆಂತರಿಕ ಮೆಮೊರಿಯನ್ನು 128GB ವರೆಗೂ ಮೈಕ್ರೋಎಸ್‌ಡಿ ಕಾರ್ಡ್‌ ಮೂಲಕ ವಿಸ್ತರಿಸಬಹುದು. ಆದರೆ ಈ ಎರಡು ವೈವಿಧ್ಯತೆಯ ಡಿವೈಸ್‌ಗಳನ್ನು ಭಾರತದಲ್ಲಿ ಲಾಂಚ್‌ ಮಾಡುವ ಬಗ್ಗೆ ಖಚಿತ ಮಾಹಿತಿ ಇಲ್ಲ.

ಕ್ಯಾಮೆರಾ

ಕ್ಯಾಮೆರಾ

16MP ಡ್ಯುಯಲ್ ಎಲ್‌ಇಡಿ ಫೇಸಿಂಗ್ ಫ್ಲ್ಯಾಶ್‌ನ ಹಿಂಭಾಗ ಕ್ಯಾಮೆರಾ ಹೊಂದಿದ್ದು, 8MPಯ ಸೆಲ್ಫೀ ಕ್ಯಾಮೆರಾ ಫೀಚರ್ ಹೊಂದಿದೆ.

 ಬ್ಯಾಟರಿ ಮತ್ತು ಸಂಪರ್ಕ

ಬ್ಯಾಟರಿ ಮತ್ತು ಸಂಪರ್ಕ

4,000mAh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, 4G LTE, ಡ್ಯುಯಲ್ ಸಿಮ್‌ ಸಪೋರ್ಟ್, ಬ್ಲೂಟೂತ್ 4.1 ಮತ್ತು ಜಿಪಿಎಸ್ ಸಪೋರ್ಟ್‌ ಹೊಂದಿದೆ. ಫೋನ್‌ ಡೋಲ್‌ಬೈ ATMOS ಆಡಿಯೋ ಟೆಕ್ನಾಲಜಿ ಹೊಂದಿದೆ.

ಸಾಫ್ಟ್‌ವೇರ್ ಮತ್ತು ಇತರೆ

ಸಾಫ್ಟ್‌ವೇರ್ ಮತ್ತು ಇತರೆ

ಲೆನೊವೋ ಕೆ6 ನೋಟ್ ಆಂಡ್ರಾಯ್ಡ್ 6.0 ಮಾರ್ಷ್‌ಮಲ್ಲೊ ಓಎಸ್ ಚಾಲಿತವಾಗಿದೆ. ಲೆನೊವೋ ಸ್ಮಾರ್ಟ್‌ಫೋನ್ ಖರೀದಿ ಬೆಲೆ ಬಗ್ಗೆ ಯಾವುದೇ ಮುನ್ಸೂಚನೆ ನೀಡಿಲ್ಲ. ಆದರೆ ರೂ.14,990 ಬೆಲೆಗೆ ಆಫರ್ ಮಾಡಬಹುದು ಎಂಬ ನಿರೀಕ್ಷೆ ಇದೆ. ಈ ಬೆಲೆಗೆ ಲಾಂಚ್ ಆದಲ್ಲಿ ಡಿವೈಸ್ ಮೊಟೊ ಜಿ4, ಮಿ ಮ್ಯಾಕ್ಸ್ ಮತ್ತು ಜೂಕ್ ಝಡ್ 1 ಡಿವೈಸ್‌ಗಳ ಮುಂದೆ ಭಾರಿ ಪ್ರಮಾಣದ ಪ್ರತಿಸ್ಪರ್ಧೆ ಎದುರಿಸಬೇಕಾಗುತ್ತದೆ. ಲೆನೊವೋ ಇತ್ತೀಚೆಗೆ ತಾನೆ ಕೆ6 ಪವರ್ ಅನ್ನು 5.5 ಇಂಚಿನ ಡಿಸ್‌ಪ್ಲೇ ಮತ್ತು 4050mAh ಬ್ಯಾಟರಿ ಫೀಚರ್ ನೊಂದಿಗೆ ಬಿಡುಗಡೆ ಮಾಡಿತ್ತು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Lenovo K6 Note coming to India on December 14. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot