Subscribe to Gizbot

ಇಂದು ಲೆನೊವೊ ಕೆ8 ಪ್ಲಸ್ ಲಾಂಚ್..ಕಡಿಮೆ ಬೆಲೆಗೆ ಡ್ಯುಯಲ್ ಕ್ಯಾಮೆರಾ ಫೋನ್?!!

Written By:

ಲೆನೊವೊ ಕೆ8 ಸರಣಿಯ ಎರಡನೇ ಸ್ಮಾರ್ಟ್‌ಫೋನ್ ಲೆನೊವೊ ಕೆ8 ಪ್ಲಸ್ ಇಂದು (ಸೆಪ್ಟಂಬರ್ 6) ಬಿಡುಗಡೆಯಾಗುತ್ತಿದೆ.! ಲೆನೊವೊ ಕೆ8 ನೋಟ್ ಸ್ಮಾರ್ಟ್ಫೋನ್ ಬಿಡುಗಡೆಯಾಗದ ಒಂದು ತಿಂಗಳಿನ ಅಂತರದಲ್ಲಷ್ಟೇ ಲೆನೊವೊ ಕೆ8 ಪ್ಲಸ್ ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತಿದ್ದು, ಈ ಸ್ಮಾರ್ಟ್‌ಫೋನ್ ಎಲ್ಲರಿಗೂ ಕುತೋಹಲ ಮೂಡಿಸಿದೆ.!!

ಡ್ಯುಯಲ್ ಕ್ಯಾಮೆರಾ, ಒಕ್ಟಾ-ಕೋರ್ ಮೀಡಿಯಾಟೆಕ್ MT6757CD ಪ್ರೊಸೆಸರ್‌ನಂತಹ ಅದ್ಬುತ ಫೀಚರ್ಸ್ಗಳನ್ನು ಒಳಗೊಂಡು ಲೆನೊವೊ ಕೆ8 ಪ್ಲಸ್ ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತಿದ್ದು, ಫೋನ್‌ ಬೆಲೆ 10,000 ರಿಂದ ರೂ. 13,000 ರೂ ಆಗಿರಬಹುದು ಎಂದು ಹೇಳಲಾಗುತ್ತಿದೆ.!! ಹಾಗಾದರೆ, ಫೋನ್ ಬೇರೆ ಏನೆಲ್ಲಾ ಫೀಚರ್ಸ್ ಹೊಂದಿದೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿನ್ಯಾಸ ಮತ್ತು ಡಿಸ್‌ಪ್ಲೇ

ವಿನ್ಯಾಸ ಮತ್ತು ಡಿಸ್‌ಪ್ಲೇ

ಲೆನೊವೊ ಕೆ8 ಪ್ಲಸ್ ಸಹ ಕೆ8 ನೋಟ್ ರೀತಿಯಲ್ಲಿಯೇ 5.5ಇಂಚ್ ಡಿಸ್‌ಪ್ಲೇ ಹೊಂದಿದ್ದು, ಡಿಸ್‌ಪ್ಲೇ ವಿನ್ಯಾಸಹ ಬಗ್ಗೆ ಇನ್ನು ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಆದರೆ, ಕೆ8 ನೋಟ್ ಫೋನ್‌ಗಿಂತಲೂ ಕೆ8 ಪ್ಲಸ್ ಫೋನ್ ಹೆಚ್ಚು ರೆಸ್ಯಲೇಷನ್ ಡಿಸ್‌ಪ್ಲೇ ಹೊಂದಲಿದೆ ಎನ್ನಲಾಗಿದೆ.

ಪ್ರೊಸೆಸರ್ ಮತ್ತು RAM

ಪ್ರೊಸೆಸರ್ ಮತ್ತು RAM

ಒಕ್ಟಾ-ಕೋರ್ ಮೀಡಿಯಾಟೆಕ್ MT6757CD ಪ್ರೊಸೆಸರ್ ಲೆನೋವೋ ಕೆ8 ಪ್ಲಸ್ ಅನ್ನು ಅಲಂಕರಿಸಿದ್ದು, ಲೆನೊವೊ ಕಂಪೆನಿಯ ಅತ್ಯುತ್ತಮ ಪ್ರೊಸೆಸರ್ ಇದಾಗಿದೆ.!! ಇನ್ನು ಆಂಡ್ರಾಯ್ಡ್ 7.1.1 ನ್ಯೂಗಾ ಹಾಗೂ 3GB/4GB RAM ಮೂಲಕ ಸ್ಮಾರ್ಟ್‌ಫೋನ್ ಬಿಡುಗಡೆಯಾಗಲಿದೆ ಎನ್ನಲಾಗಿದೆ.

ಕ್ಯಾಮೆರಾ ಹೇಗಿರಲಿದೆ?

ಕ್ಯಾಮೆರಾ ಹೇಗಿರಲಿದೆ?

ಲೆನೋವೋ ಕೆ8 ಪ್ಲಸ್ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದೆ ಎಂದು ತಿಳಿದುಬಂದಿದೆ. 13MPಯ ಎರಡು ರಿಯರ್ ಕ್ಯಾಮೆರಾಗಳಲು, ಮತ್ತು 13MP ಸೆಲ್ಫೀ ಕ್ಯಾಮೆರಾ ಫೋನ್ ಅಲಂಕರಿಸುವ ಸಾಧ್ಯತೆ ಇದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಬೇರೆ ಏನೆಲ್ಲಾ ಫೀಚರ್ಸ್?

ಬೇರೆ ಏನೆಲ್ಲಾ ಫೀಚರ್ಸ್?

ಲೆನೋವೋ ಕೆ8 ಪ್ಲಸ್ ಚಿತ್ರದಲ್ಲಿರುವಂತೆ ಫೋನ್ 3.5mm ಹೆಡ್ಫೋನ್ ಜಾಕ್, ಹಿಂಭಾಗದಲ್ಲಿ ಫಿಂಗರ್ಪ್ರಿಂಟ್ ಸ್ಕ್ಯಾನರ್ ಲಭ್ಯವಿರಲಿದೆ. ಆದರೆ, ಬ್ಯಾಟರಿ ಶಕ್ತಿ ಎಷ್ಟಿದೆ ಎಂದು ಇನ್ನು ಮಾಹಿತಿ ಸಿಕ್ಕಿಲ್ಲ.!! ಲೆನೋವೋ ಕೆ8 ನೋಟ್ ಮಾತ್ರ 4000mAh ಬ್ಯಾಟರಿ ಶಕ್ತಿಯನ್ನು ಹೊಂದಿತ್ತು.

ಓದಿರಿ:ಆಪ್‌ ಇನ್‌ಸ್ಟಾಲ್ ಮಾಡುವಾಗ ಭಾರತೀಯರು ಮಾತ್ರ ಮಾಡುತ್ತಿರುವ 7 ತಪ್ಪುಗಳಿವು!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
A teaser page on Flipkart has confirmed that the Lenovo K8 Plus will be launched in India on September 6 to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot