Subscribe to Gizbot

ಬೆಂಗಳೂರು To ನಾರ್ಥ್ ಕೊರಿಯಾಗೆ ಒಲಾ ಕ್ಯಾಬ್: ಬಿಲ್ ಎಷ್ಟಾಗಬಹುದು..!?

Written By:

ಆಪ್ ಆಧಾರಿತ ಕ್ಯಾಬ್ ಸೇವೆಯನ್ನು ನೀಡುವ ಉಬರ್ ಮತ್ತು ಒಲಾಗಳು ಮಾಡುವ ಎಡವಟ್ಟುಗಳು ಒಂದೆರಡಲ್ಲ. ಮೊನ್ನೆ ತಾನೇ ಉಬರ್ ಕುಡುಕನಿಗೆ ಲಕ್ಷ ರೂ. ಟ್ಯಾಕಿ ಬಿಲ್ ನೀಡಿದ್ದ ಪ್ರಕರಣ ಮರೆಯುವ ಮುನ್ನವೇ, ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬರಿಗೆ ಉತ್ತರ ಕೊರಿಯಾಕ್ಕೆ ಕ್ಯಾಬ್ ಬುಕ್ ಮಾಡಿದ ಒಲಾ, ತಲೆ ತಿರುಗುವಂತೆ ಬಿಲ್ ಅನ್ನು ನೀಡಿದ್ದು, ಇದಲ್ಲದೇ ಮನೆ ಮುಂದಕ್ಕೆ ಕ್ಯಾಬ್ ಕಳುಹಿಸಲು ಮುಂದಾಗಿದೆ.

ಬೆಂಗಳೂರು To ನಾರ್ಥ್ ಕೊರಿಯಾಗೆ ಒಲಾ ಕ್ಯಾಬ್: ಬಿಲ್ ಎಷ್ಟಾಗಬಹುದು..!?

ಬೆಂಗಳೂರಿನ ಮೂಲದ ರೋಹಿತ್ ಎನ್ನುವವರು ಒಲಾ ಆಪ್ ನಲ್ಲಿ ಬೆಂಗಳೂರಿನಿಂದ ಉತ್ತರ ಕೋರಿಯಾಕ್ಕೆ ಕ್ಯಾಬ್ ಬುಕ್ ಮಾಡಿದ್ದಾರೆ. ಪ್ರತಿ ಕಿ.ಮೀಗೆ ರೂ.10 ರಂತೆ ಬೆಂಗಳೂರಿನಿಂದ ಉತ್ತರ ಕೋರಿಯಾಕ್ಕೆ ಕಿಲೋ ಮೀಟರ್ ಲೆಕ್ಕ ಹಾಕಿ 13840 ಕಿ.ಮೀ ದೂರಕ್ಕೆ ರೂ.149088 ಬಿಲ್ ಮಾಡಿದ ಒಲಾ, ಮನೆ ಮುಂದಕ್ಕೆ ಕ್ಯಾಬ್ ಕಳುಹಿಸಲು ಸಿದ್ಧತೆ ನಡೆಸಿದೆ.

ಓದಿರಿ: ಜಿಯೋ ವಿರುದ್ಧ ಬೆಸ್ಟ್‌ ಆಫರ್ ಕೊಟ್ಟ ಏರ್‌ಟೆಲ್‌: ಮಾರುಕಟ್ಟೆಯಲ್ಲಿ ಈ ಮಾದರಿ ಆಫರ್ ಇಲ್ಲವೇ ಇಲ್ಲ.!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಶೆಡ್ಯೂಲ್

ಶೆಡ್ಯೂಲ್

ನಾಲ್ಕು ಜನರು ಕೂರುವಂತೆ ಮಿನಿ ಕಾರನ್ನು ಬುಕ್‌ ಮಾಡಿದ ರೋಹಿತ್, ತಮ್ಮ ಪ್ರಯಾಣವನ್ನು ಶೆಡ್ಯೂಲ್ ಮಾಡಿದ್ದರು. ಎಲ್ಲಿಂದ ಎಲ್ಲಿಗೆ ಬುಕ್ ಮಾಡಿದ್ದಾರೆ ಎನ್ನುವುದನ್ನು ಯೋಚಿಸದ ಓಲಾ, ಶೆಡ್ಯೂಲ್ ಮಾಡಿದ್ದ ಸಮಯಕ್ಕೆ ಮುಂಚೆ ಕ್ಯಾಬ್ ಸಂಖ್ಯೆ, ಚಾಲಕನ ಹೆಸರು ಸೇರಿದಂತೆ ಎಲ್ಲಾ ಮಾಹಿತಿಯನ್ನು ರೋಹಿತ್ ಅವರಿಗೆ ಮೇಸೆಜ್ ಮಾಡಿದೆ.

ಟ್ಟಿಟರ್‌ನಲ್ಲಿ ಮಾಹಿತಿ:

ಟ್ಟಿಟರ್‌ನಲ್ಲಿ ಮಾಹಿತಿ:

ಬೆಂಗಳೂರಿನಿಂದ ಉತ್ತರ ಕೋರಿಯಾಕ್ಕೆ ತಮ್ಮ ಪ್ರಯಾಣವನ್ನು ಆರಂಭಿಸಲು OTPಯನ್ನು ಸೆಂಡ್ ಮಾಡಿರುವ ಒಲಾ, ತನ್ನ ಬೇಜವಾಬ್ದಾರಿತನವನ್ನು ಪ್ರದರ್ಶಿಸಿದೆ. ಈ ಘಟನೆಯ ಕುರಿತು ಟ್ವಿಟರ್ ನಲ್ಲಿ ಚಿತ್ರ ಸಮೇತ ದಾಖಲಿಸಿರುವ ರೋಹಿತ್, ಒಲಾ ಸೇವೆಯ ಬೇಜವಾಬ್ದಾರಿತನವನ್ನು ಎಲ್ಲರಿಗೂ ತಿಳಿಸಿದ್ದಾರೆ.

ಒಲಾ ಬೇಜವಾಬ್ದಾರಿ:

ಒಲಾ ಬೇಜವಾಬ್ದಾರಿ:

ಈ ಕುರಿತು ಒಲಾ ಕಂಪನಿಗೆ ಟ್ಟಿಟ್ ಮಾಡಿದ ರೋಹಿತ್, ಒಲಾ ಉತ್ತರ ಕೋರಿಯಾಗೆ ಕ್ಯಾಬ್ ಸೇವೆ ಇದೆಯೇ ಎಂದು ಕಾಲೆಳೆದಿದ್ದಾರೆ. ಆದರೆ ಇದಕ್ಕೆ ಉತ್ತರಿಸಿರುವ ಒಲಾ ನಿಮ್ಮ ಫೋನಿನಲ್ಲಿಯೇ ತೊಂದರೆ ಇರಬೇಕು. ಒಮ್ಮೆ ರಿಸ್ಟಾರ್ಟ್ ಮಾಡಿ ಎಂಬ ಸಲಹೆಯನ್ನು ನೀಡಿದೆ. ತಮ್ಮ ತಪ್ಪನ್ನು ಒಪ್ಪಿಕೊಳ್ಳುವ ಮನಸ್ಸು ಮಾಡಿಲ್ಲ.

ನೀವು ಬುಕ್ ಮಾಡಬೇಕಾದರೆ ಎಚ್ಚರ:

ನೀವು ಬುಕ್ ಮಾಡಬೇಕಾದರೆ ಎಚ್ಚರ:

ಮುಂದಿನ ಬಾರಿ ನೀವು ಒಲಾ ಕ್ಯಾಬ್ ಬುಕ್ ಮಾಡಬೇಕಾಗಿದರೆ ಎಚ್ಚರ ವಹಿಸುವುದು ಅಗತ್ಯ, ತಿಳಿಯದೆ ತಪ್ಪು ಆಡ್ರಸ್ ಕೊಟ್ಟರೆ ಸುಮ್ಮನೆ ಹಣ ಕಳೆದುಕೊಳ್ಳಬೇಕಾಗುತ್ತದೆ. ಸರಿಯಾದ ಆಡ್ರಸ್ ನೀಡಿ ಒಲಾ ಬುಕ್ ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Bike-Car ಜಾತಕ ಹೇಳುವ ಆಪ್..!

ಓದಿರಿ: ಐಫೋನ್ X ಅಲ್ಲ, ಟ್ರೆಂಡ್ ಬದಲಾಯಿಸುವ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್: 19:9 ಡಿಸ್‌ಪ್ಲೇ, ಇನ್‌-ಡಿಸ್‌ಪ್ಲೇ ಸ್ಕ್ಯಾನರ್.!

English summary
Bangalore To North Korea, Ola Scheduled It & Billed Him Rs 1.49 Lakh. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot