Subscribe to Gizbot

ಐಫೋನ್ X ನೋಟ್ ಕಾಪಿ ಮಾಡಿದ LG: G7, G7+ ಸ್ಮಾರ್ಟ್‌ಫೋನ್ ಫೋಟೋ ಲೀಕ್..!

Written By:

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸದ್ಯ ಒಂದ ಹಿಂದೆ ಒಂದರಂತೆ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುತ್ತಿದೆ, ಸ್ಮಾರ್ಟ್‌ಫೋನ್ ತಯಾರಿಕ ಕಂಪನಿಗಳಾದ ಒಪ್ಪೋ, ವಿವೋ ಮತ್ತು LG ಒಂದೇ ಮಾದರಿಯ ಟಾಪ್ ಎಂಡ್ ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದು, ಈ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ ನಲ್ಲಿ ಕಾರ್ಯನಿರ್ವಹಿಸಲಿವೆ. ಆದರೆ ನೋಡಲು ಒಂದೇ ಮಾದರಿಯಲ್ಲಿ ಕಾಣಿಸುವ ಸ್ಮಾರ್ಟ್‌ಫೋನ್‌ಗಳು ಐಫೋನ್ X ಮಾದರಿಯ ವಿನ್ಯಾಸವನ್ನು ಕಾಪಿ ಮಾಡಿದ ಹಾಗೆ ಇವೇ.

ಐಫೋನ್ X ನೋಟ್ ಕಾಪಿ ಮಾಡಿದ LG: G7, G7+ ಸ್ಮಾರ್ಟ್‌ಫೋನ್ ಫೋಟೋ ಲೀಕ್..!

ಸದ್ಯ LG ಕಂಪನಿಯೂ G7 ಮತ್ತು G7 ಪ್ಲಸ್ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡುವ ಸನಿಹದಲ್ಲಿದ್ದು, ಈ ಎರಡು ಸ್ಮಾರ್ಟ್‌ಫೋನ್‌ಗಳು ಹೇಗೆ ಕಾಣಿಸಲಿವೆ ಎನ್ನುವ ಪ್ರೋಮೆಷನ್ ಫೋಟೋವೊಂದನ್ನು ಬಿಡುಗಡೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಮಾರುಕಟ್ಟೆಯಲ್ಲಿ LG G7 ಮತ್ತು G7 ಪ್ಲಸ್ ಸ್ಮಾರ್ಟ್‌ಫೋನ್‌ ಲೆಮನ್ ಗ್ರೀನ್ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಜೂನ್ ನಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐಫೋನ್ ‍X ಮಾದರಿ:

ಐಫೋನ್ ‍X ಮಾದರಿ:

LG G7 ಮತ್ತು G7 ಪ್ಲಸ್ ಸ್ಮಾರ್ಟ್‌ಫೋನ್‌ ಗಳು ಮುಂಭಾಗದಲ್ಲಿ ಐಫೋನ್ X ಮಾದರಿಯಲ್ಲಿ ಕಾಣಿಸಿಕೊಳ್ಳುತ್ತಿವೆ. ಮುಂಭಾಗದ ಡಿಸ್‌ಪ್ಲೇ ಮಧ್ಯದಲ್ಲಿ ನೋಚ್ ಕಾಣಬಹುದಾಗಿದೆ. ಆದರೆ ಹಿಂಭಾಗದಲ್ಲಿ ಮಾತ್ರ ಮಧ್ಯಭಾಗದಲ್ಲಿ ಡ್ಯುಯಲ್ ಕ್ಯಾಮೆರಾ, LED ಫ್ಲಾಷ್ ಮತ್ತು ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ನೀಡಲಾಗಿದೆ.

ವಿಶೇಷ ಡಿಸ್‌ಪ್ಲೇ:

ವಿಶೇಷ ಡಿಸ್‌ಪ್ಲೇ:

LG G7 ಮತ್ತು G7 ಪ್ಲಸ್ ಸ್ಮಾರ್ಟ್‌ಫೋನ್‌ ನಲ್ಲಿ ವಿಶೇಷ ಡಿಸ್‌ಪ್ಲೇಯನ್ನು ಕಾಣುವ ಸಾಧ್ಯತೆ ಇದ್ದು, ಮಾರುಕಟ್ಟೆಯಲ್ಲಿ ಹೊಸದಾಗಿ ಟ್ರೆಂಡ್ ಹುಟ್ಟಿಸಿರುವ 19:9 ಅನುಪಾತಕ್ಕಿಂತಲೂ ದೊಡ್ಡ ಪ್ರಮಾಣದ ಡಿಸ್‌ಪ್ಲೇ ಈ ಸ್ಮಾರ್ಟ್‌ಫೋನಿನಲ್ಲಿ ನಾವು ನೋಡಬಹುದಾಗಿದೆ. 6.01 ಇಂಚಿನ 19.5:9 ಅನುಪಾತದ ಡಿಸ್‌ಪ್ಲೇಯನ್ನು ಅಳವಡಿಲಾಗಿದ್ದು, MLED+ ಡಿಸ್‌ಪ್ಲೇ ಇದಾಗಿದೆ. FHD+ ಗುಣಮಟ್ಟವನ್ನು ಈ ಡಿಸ್‌ಪ್ಲೇ ಹೊಂದಿದೆ.

ವೇಗದ ಪ್ರೋಸೆಸರ್:

ವೇಗದ ಪ್ರೋಸೆಸರ್:

LG G7 ಮತ್ತು G7 ಪ್ಲಸ್ ಸ್ಮಾರ್ಟ್‌ಫೋನ್‌ನಲ್ಲಿ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 845 SoC ಚಿಪ್‌ಸೆಟ್ ಅನ್ನು ಕಾಣಬಹುದಾಗಿದೆ. ಇದರೊಂದಿಗೆ G7 ಸ್ಮಾರ್ಟ್‌ಫೋನಿನಲ್ಲಿ 4GB RAM ಮತ್ತು 64GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದ್ದು, G7+ ಸ್ಮಾರ್ಟ್‌ಫೋನಿನಲ್ಲಿ 6GB RAM ಮತ್ತು 128GB ಇಂಟರ್ನಲ್ ಮೆಮೊರಿಯನ್ನು ಅಳವಡಿಲಾಗಿದೆ. ಈ ಎರಡು ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಸಂಚಲನವನ್ನು ಹುಟ್ಟು ಹಾಕಲಿವೆ.

ಡ್ಯುಯಲ್ ಕ್ಯಾಮೆರಾ:

ಡ್ಯುಯಲ್ ಕ್ಯಾಮೆರಾ:

LG G7 ಮತ್ತು G7 ಪ್ಲಸ್ ಸ್ಮಾರ್ಟ್‌ಫೋನ್‌ ಹಿಂಭಾಗದಲ್ಲಿ 16 MP + 16 MP ಡ್ಯುಯಲ್ ಕ್ಯಾಮೆರಾವನ್ನು ನೋಡಬಹುದಾಗಿದೆ. ಈ ಕ್ಯಾಮೆರಾಗಳು f/1.6 ಅಪರ್ಚನಲ್ಲಿ ಫೋಟೋಗಳನ್ನು ಕ್ಲಿಕಿಸಲು ಶಕ್ತವಾಗಿವೆ. ಇದಲ್ಲದೇ 3000mAh ಬ್ಯಾಟರಿಯನ್ನು ಈ ಫೋನಿನಲ್ಲಿ ಕಾಣಬಹುದಾಗಿದೆ.

Bike-Car ಜಾತಕ ಹೇಳುವ ಆಪ್..!
ಬೆಲೆಗಳು:

ಬೆಲೆಗಳು:

LG G7 ಮತ್ತು G7 ಪ್ಲಸ್ ಸ್ಮಾರ್ಟ್‌ಫೋನ್‌ಗಳು ಕ್ರಮವಾಗಿ ರೂ.54,700 ಮತ್ತು 60,700ಕ್ಕೆ ದೊರೆಯಲಿದೆ ಎನ್ನಲಾಗಿದ್ದು, ಮೊದಲಿಗೆ ಸೌಥ್ ಕೋರಿಯಾದಲ್ಲಿ ದೊರೆಯಲಿದ್ದು, ನಂತರ ಇತರೇ ದೇಶಗಳಲ್ಲಿ ಲಭ್ಯವಿರಲಿದೆ. ಭಾರತೀಯ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್‌ಫೋನ್‌ಗಳು ಲಾಂಚ್ ಆಗಲಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
LG G7, G7+ Leaked Banner Suggests iPhone X-Like Notch and Edge-to-Edge Display. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot