Subscribe to Gizbot

ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲಿದೆ LG G7 ಸ್ಮಾರ್ಟ್ ಫೋನ್: ಯಾವ ಕಾರಣಕ್ಕೆ ಅಂದ್ರಾ..?

Posted By: -

 ಮೇ ತಿಂಗಳಿನಲ್ಲಿ ಲಾಂಚ್ ಆಗಲಿರುವ LG G7 ಸ್ಮಾರ್ಟ್ ಫೋನ್ ಕುರಿತಂತೆ ಸಾಕಷ್ಟು ರೂಮರ್ ಗಳು ಲಭ್ಯವಾಗಿದ್ದು, ಮೊದಲ ಬಾರಿಗೆ ಈ ಸ್ಮಾರ್ಟ್ ಫೋನ್ ಫೋಟೋ ಸಹ ದೊರೆತಿದೆ. ಈ ಹಿಂದಿನ LG ಟಾಪ್ ಎಂಡ್ ಸ್ಮಾರ್ಟ್ ಫೋನ್ ಗಿಂತಲೂ ಉತ್ತಮ ವಿನ್ಯಾಸ ಮತ್ತು ಗುಣಮಟ್ಟವನ್ನು ಈ ಸ್ಮಾರ್ಟ್ ಫೋನ್ ಹೊಂದಿರಲಿದೆ ಎನ್ನಲಾಗಿದ್ದು, ಇದಕ್ಕಾಗಿಯೇ LG ಸಾಕಷ್ಟು ಶ್ರಮವನ್ನು ವಹಿಸಿದೆ.

ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲಿದೆ LG G7 ಸ್ಮಾರ್ಟ್ ಫೋನ್: ಯಾವ ಕಾರಣಕ್ಕೆ ಅಂದ್ರ

ಈ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ರೂ.52,000ದ ಆಸುಪಾಸಿನಲ್ಲಿ ದೊರೆಯಲಿದೆ ಎನ್ನಲಾಗಿದ್ದು, ಮಾರುಕಟ್ಟೆಯಲ್ಲಿರುವ ಟಾಪ್ ಎಂಡ್ ಸ್ಮಾರ್ಟ್ ಫೋನ್ ಗಳಿಗೆ ಹೆಚ್ಚಿನ ಸ್ಪರ್ಧೆಯನ್ನು ನೀಡಲಿದೆ. ಈ ಹಿನ್ನಲೆಯಲ್ಲಿ LG G7 ಸ್ಮಾರ್ಟ್ ಫೋನ್ ಬಿಡುಗಡೆಯೂ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ.

ಟಾಪ್ ಎಂಡ್ ಫೀಷರ್:

LG G7 ಸ್ಮಾರ್ಟ್ ಫೋನ್ ನಲ್ಲಿ ಟಾಪ್ ಎಂಡ್ ಪ್ರೋಸೆಸರ್ ಅನ್ನು ಕಾಣಬಹುದಾಗಿದ್ದು, ಕ್ವಾಲ್ಕಮ್ ಸ್ನಾಪ್ ಡ್ರಾಗನ್ 845 ಚಿಪ್ ಸೆಟ್ ಅನ್ನು ಈ ಸ್ಮಾರ್ಟ್ ಫೋನಿನಲ್ಲಿ ನೀಡಲಾಗಿದೆ. ಅಲ್ಲದೇ ಈ ಹಿಂಭಾಗದಲ್ಲಿ ಡ್ಯುಯಲ್ ಲೈನ್ಸ್ ಕ್ಯಾಮೆರಾವನ್ನು ನೀಡಲಾಗಿದ್ದು, ಕೃತಕ ಬುದ್ಧಿಮತ್ತೆಯನ್ನು ಬಳಕೆ ಮಾಡಿಕೊಳ್ಳಲಾಗಿದೆ. ಅಲ್ಲದೇ 3000mAh ಬ್ಯಾಟರಿಯನ್ನು ಇದರಲ್ಲಿ ನೀಡಲಾಗಿದೆ.

ಐಫೋನ್ X ಮಾದರಿ:

LG G7 ಸ್ಮಾರ್ಟ್ ಫೋನ್ ಮುಂಭಾಗದಲ್ಲಿ ಐಫೋನ್ X ವಿನ್ಯಾಸದ ಮಾದರಿಯನ್ನು ಕಾಪಿ ಮಾಡಿದ ರೀತಿಯಲ್ಲಿ ಕಾಣಿಸಲಿದ್ದು, OLED ಡಿಸ್ ಪ್ಲೇಯನ್ನು ಇದರಲ್ಲಿ ನೀಡಲಾಗಿದೆ. 6.01 ಇಂಚಿನ ಡಿಸ್ ಪ್ಲೇಯನ್ನು ಇದರಲ್ಲಿ ನೀಡಲಾಗಿದ್ದು, ಇದು 18:9 ಅನುಪಾತದಿಂದ ಕೂಡಿರಲಿದೆ.

How To Link Aadhaar With EPF Account Without Login (KANNADA)

G7 ಪ್ಲಸ್ ಸಹ ಬರಲಿದೆ:

ಇದಲ್ಲದೇ LG G7 ಸ್ಮಾರ್ಟ್ ಫೋನ್ ನೊಂದಿಗೆ LG ಮತ್ತೊಂದು ಸ್ಮಾರ್ಟ್ ಪೋನ್ ಅನ್ನು ಲಾಂಚ್ ಮಾಡುವ ಸಾಧ್ಯತೆ ಇದೆ. LG G7 ಪ್ಲಸ್ ಸ್ಮಾರ್ಟ್ ಫೋನ್ ಬಿಡುಗಡೆ ಮಾಡುವ ಸಾಧ್ಯತೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿಸಲಿದೆ.

English summary
LG G7 will reportedly launch in May: Price, specs and features. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot