ಹೊಸ ವರ್ಷಕ್ಕೆ ಎಲ್‌ಜಿಯಿಂದ ಕೆ-ಸರಣಿಯ ನಾಲ್ಕು ಸ್ಮಾರ್ಟ್‌ಪೋನ್‌ಗಳು ಲಾಂಚ್

Written By:

ಸ್ಮಾರ್ಟ್‌ಪೋನ್ ರೇಸ್ ನಿಂದ ಕೊಂಚ ಹಿಂದೆ ಸೆರೆದಿದ್ದ ಎಲ್‌ಜಿ ಮತ್ತೆ ಮಾರುಕಟ್ಟೆಯಲ್ಲಿ ಅಬ್ಬರಿಸಲು ಸಿದ್ಧತೆ ನಡೆಸಿದ್ದು, ಕೆ ಸರಣಿಯ ನಾಲ್ಕು ಸ್ಮಾರ್ಟ್‌ಪೋನ್‌ಗಳನ್ನು ಹೊಸ ವರ್ಷದ ಸಂಭ್ರಮದಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸಿದೆ.

ಈ-ಸಿಗರೇಟ್ ಬಳಸುವವರೇ ಹುಷಾರ್..! ಒಮ್ಮೆ ಈ ಶಾಕಿಂಗ್ ವಿಡಿಯೋ ನೋಡಿ

2017ರ ಜನವರಿಯಲ್ಲಿ ನಡೆಯಲಿರುವ ಕನ್ಸ್ಯೂಮರ್ ಎಲೆಕ್ಟ್ರಾನಿಕ್ ಶೋ ನಲ್ಲಿ ಎಲ್‌ಜಿ ಕೆ ಸರಣಿಯ K-3, K-4, K-8 ಮತ್ತು K-10 ಸ್ಮಾರ್ಟ್‌ಪೋನ್‌ಗಳನ್ನು ಬಿಡುಗೆಡೆ ಮಾಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
K-3 ಸ್ಮಾರ್ಟ್‌ಪೋನ್ ವಿಶೇಷತೆಗಳು:

K-3 ಸ್ಮಾರ್ಟ್‌ಪೋನ್ ವಿಶೇಷತೆಗಳು:

ಇದೊಂದು ಬಜೆಟ್ ಸ್ಮಾರ್ಟ್‌ಪೋನ್ ಆಗಿದ್ದು, 4.5 ಇಂಚಿನ ಟೆಚ್ ಡಿಸ್‌ಪ್ಲೇ ಹೊಂದಿದೆ. 5MP ಹಿಂಬದಿ ಕ್ಯಾಮೆರಾ ಮತ್ತು 2MP ಮುಂಬದಿ ಕ್ಯಾಮೆರಾ ಹೊಂದಿದೆ. 2100 mAh ತೆಗೆಯಬಹುದಾದ ಬ್ಯಾಟರಿ ಇದ್ದು, 1.1 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 210 ಪ್ರೊಸೆಸರ್ ಜೊತೆಯಲ್ಲಿ 1GB RAM ಮತ್ತು 8GB ಇಂಟರ್ನಲ್ ಮೆಮೊರಿ ಹೊಂದಿದೆ. ಜೊತೆಗೆ 32 GB ವರೆಗೆ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

K-4 ಸ್ಮಾರ್ಟ್‌ಪೋನ್ ವಿಶೇಷತೆಗಳು:

K-4 ಸ್ಮಾರ್ಟ್‌ಪೋನ್ ವಿಶೇಷತೆಗಳು:

K-4 ಸ್ಮಾರ್ಟ್‌ಪೋನ್‌ನಲ್ಲಿ 4.7 ಇಂಚಿನ ದೊಡ್ಡದಾದ ಟೆಚ್ ಡಿಸ್‌ಪ್ಲೇ ಇದ್ದು, 2500 mAh ಬ್ಯಾಟರಿ, 8 MP ಹಿಂಬದಿ ಕ್ಯಾಮೆರಾ ಮತ್ತು 5MP ಮುಂಬದಿ ಕ್ಯಾಮೆರಾ ಹೊಂದಿದೆ. 1.1 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗ್ 210 ಪ್ರೊಸೆಸರ್ ಜೊತೆಯಲ್ಲಿ 1GB RAM ಮತ್ತು 8GB ROM ಇದ್ದು. ಜೊತೆಯಲ್ಲಿ 32 GB ವರೆಗೆ ಮೆಮೊರಿ ಕಾರ್ಡ್ ಹಾಕಿಕೊಳ್ಳಬಹುದಾಗಿದೆ.

K-8 ಸ್ಮಾರ್ಟ್‌ಪೋನ್ ವಿಶೇಷತೆಗಳು:

K-8 ಸ್ಮಾರ್ಟ್‌ಪೋನ್ ವಿಶೇಷತೆಗಳು:

5 ಇಂಚಿನ ದೊಡ್ಡದಾದ 720p ಗುಣಮಟ್ಟದ ಟೆಚ್ ಡಿಸ್‌ಪ್ಲೇ K-8 ಸ್ಮಾರ್ಟ್‌ಪೋನ್‌ನಲ್ಲಿದ್ದು, 13 MP ಹಿಂಬದಿ ಕ್ಯಾಮೆರಾ ಮತ್ತು 5MP ಮುಂಬದಿ ಕ್ಯಾಮೆರಾ ಇದೆ. 1.1 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗ್ 210 ಪ್ರೊಸೆಸರ್ ಜೊತೆಯಲ್ಲಿ 1GB RAM ಮತ್ತು 8GB ROM ಇದ್ದು. ಜೊತೆಯಲ್ಲಿ 32 GB ವಿಸ್ತರಿಸುವ ಅವಕಾಶ ಇದೆ.

K-10 ಸ್ಮಾರ್ಟ್‌ಪೋನ್ ವಿಶೇಷತೆಗಳು:

K-10 ಸ್ಮಾರ್ಟ್‌ಪೋನ್ ವಿಶೇಷತೆಗಳು:

K ಸರಣಿಯಲ್ಲಿ K-10 ಸ್ಮಾರ್ಟ್‌ಪೋನ್ ಅತ್ಯಂತ ದೊಡ್ಡದಾಗಿದ್ದು, 720p ಗುಣಮಟ್ಟದ 5.3 ಇಂಚಿನ ದೊಡ್ಡದಾದ ಡಿಸ್‌ಪ್ಲೇ ಹೊಂದಿದ್ದು, ಮುಂಭಾಗದಲ್ಲಿ 5MP ವೈಡ್ ಆಂಗಲ್ ಕ್ಯಾಮೆರಾ ಹೊಂದಿದ್ದು, ಫಿಂಗರ್ ಪ್ರಿಂಟ್ ಸ್ಕ್ಯಾನರ್ ಹೊಂದಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
LG has announced its four new K series smartphones ahead of Consumer Electronics Show 2017. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot