ಫುಲ್‌ವರ್ಷನ್ ಡಿಸ್‌ಪ್ಲೇಯ LG Q6 ಲಾಂಚ್: ಸ್ಮಾರ್ಟ್‌ಫೋನ್ ಇತಿಹಾಸದಲ್ಲಿ ಹೊಸ ಅಧ್ಯಾಯ ಶುರು

ಈ ಸ್ಮಾರ್ಟ್‌ಫೋನ್‌ನಲ್ಲಿ ಫೇಸ್‌ ರೆಕಾಗ್ನೆಷನ್ ಟೆಕ್ನಾಲಜಿಯನ್ನು ಕಾಣಬಹುದಾಗಿದ್ದು, ಬಜೆಟ್ ಬೆಲೆಯ ಫೋನಿನಲ್ಲಿ ಇಷ್ಟೊಂದು ಆಯ್ಕೆಗಳನ್ನು ನೀಡುತ್ತಿರುವುದು ಇದೇ ಮೊದಲಾಗಿದ್ದು,

|

LG ಎಲೆಕ್ಟ್ರಾನಿಕ್ ಅಧಿಕೃತವಾಗಿ Q ಸರಣಿಯ ಮೊದಲ ಸ್ಮಾರ್ಟ್‌ಫೋನ್ ಲಾಂಚ್ ಮಾಡಿದ್ದು, LG Q6 ಭಾರತೀಯ ಮಾರುಕಟ್ಟೆಯಲ್ಲಿ ರೂ. 14,990 ಕ್ಕೆ ದೊರೆಯುತ್ತಿದೆ. ಇದು LG ಹೊಸದಾಗಿ ಪರಿಚಯಿಸಿರುವ ಫುಲ್ ವರ್ಷನ್ ಡಿಸ್‌ಪ್ಲೇ ಟೆಕ್ನಾಲಜಿಯ ಮೊದಲ ಸ್ಮಾರ್ಟ್‌ಪೋನ್‌ ಆಗಿದೆ, ಅದುವೇ ಬಜೆಟ್ ಬೆಲೆಯಲ್ಲಿ ದೊರೆಯುತ್ತಿದೆ.

ಅಲ್ಲದೇ ಈ ಸ್ಮಾರ್ಟ್‌ಫೋನ್‌ನಲ್ಲಿ ಫೇಸ್‌ ರೆಕಾಗ್ನೆಷನ್ ಟೆಕ್ನಾಲಜಿಯನ್ನು ಕಾಣಬಹುದಾಗಿದ್ದು, ಬಜೆಟ್ ಬೆಲೆಯ ಫೋನಿನಲ್ಲಿ ಇಷ್ಟೊಂದು ಆಯ್ಕೆಗಳನ್ನು ನೀಡುತ್ತಿರುವುದು ಇದೇ ಮೊದಲಾಗಿದ್ದು, ಬಜೆಟ್ ಸ್ಮಾರ್ಟ್‌ಫೋನಿನ ಕ್ಯಾಟಗಿರಿಯನ್ನು ಇದು ಬದಲಾಯಿಸಲಿದೆ ಎನ್ನಲಾಗಿದೆ.

ಬಜೆಟ್ ಬೆಲೆಯಲ್ಲಿ ಫುಲ್ ವರ್ಷನ್ ಡಿಸ್‌ಪ್ಲೇ:

ಬಜೆಟ್ ಬೆಲೆಯಲ್ಲಿ ಫುಲ್ ವರ್ಷನ್ ಡಿಸ್‌ಪ್ಲೇ:

ಈ ವರ್ಷದಲ್ಲಿ ಬಿಡುಗಡೆಯಾದ ಬೆಸ್ಟ್ ಸ್ಮಾರ್ಟ್‌ಫೋನ್‌ಗಳಲ್ಲಿ LG Q6 ಸಹ ಒಂದಾಗಲಿದೆ. ಈ ಫೋನಿನಲ್ಲಿ ಫುಲ್ ವರ್ಷನ್ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಅದುವೇ ಬೆಜೆಟ್ ಬೆಲೆಯಲ್ಲಿ FHD ಡಿಸ್‌ಪ್ಲೇ ಜೊತೆಗೆ ಫುಲ್ ವರ್ಷನ್ ಅನ್ನು ನೀಡಲಾಗುತ್ತಿದೆ. ಇದು ವಿಡಿಯೋ ನೋಡಲು, ಗೇಮ್ ಆಡಲು ಮತ್ತು ಮಲ್ಟಿ ಟಾಸ್ಕಿಂಗ್‌ಗೆ ಸಹಾಯಕಾರಿಯಾಗಿದೆ. ಇದಲ್ಲದೇ ಒಂದು ಬಾರಿ ಉಚಿತವಾಗಿ ಸ್ಕ್ರಿನ್ ರಿಪ್ಲೇಸ್ ಮಾಡಿಕೊಡಲಿದೆ.

ಉತ್ತಮ ಮತ್ತು ಆಕರ್ಷಕ ವಿನ್ಯಾಸ:

LG Q6 ಸ್ಮಾರ್ಟ್‌ಫೋನ್ ಮೆಟಲ್ ಬಾಡಿಯನ್ನು ಹೊಂದಿದ್ದು, ಕೈನಲ್ಲಿ ಹಿಡಿದುಕೊಂಡರೆ ಕಡಿಮೆ ಭಾರವನ್ನು ಹೊಂದಿದೆ. ಅಲುಮಿನಿಯಂ ನಿಂದ ಹೊರ ಕವಚವನ್ನು ನಿರ್ಮಿಸಲಾಗಿದೆ. ವಿಮಾನಗಳಲ್ಲಿ ಇದನ್ನು ಬಳಸಿಕೊಳ್ಳಲಾಗುತ್ತದೆ. ಕೈನಲ್ಲಿ ಹಿಡಿದುಕೊಂಡು ಬಳಕೆ ಮಾಡಿಕೊಳ್ಳುವ ಅನುಭವು ಉತ್ತಮವಾಗಿದೆ. ಸ್ಲಿಮ್ ಆಗಿದೆ.

ಸೆಕ್ಯೂರ್ ಫೇಸ್‌ ಅನ್‌ಲಾಕ್:

ಸೆಕ್ಯೂರ್ ಫೇಸ್‌ ಅನ್‌ಲಾಕ್:

ಇದೇ ಮೊದಲ ಬಾರಿಗೆ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್ ನಲ್ಲಿ ಫೇಸ್‌ ಬಯೋಮೆಟ್ರಿಕ್ ಕಾಣಬಹುದಾಗಿದೆ. ಇದು ನಿಮ್ಮ ಮುಖವನ್ನು ನೋಡಿ ಲಾಕ್ ಓಪನ್ ಮಾಡಲಿದೆ. ಇದರಲ್ಲಿ ಇರುವ ಫೇಸ್‌ರೆಗ್ನೀಷನ್ ಅತ್ಯಂತ ಆಧುನಿಕವಾಗಿದೆ. ಪಿನ್ ಕೋಡ್, ಪ್ಯಾಟ್ರನ್ ಇಲ್ಲದೇ ಲಾಕ್ ಓಪನ್ ಮಾಡಲಿದೆ. ಮುಂಭಾಗದ ಕ್ಯಾಮರಾ ನಿಮ್ಮನ್ನು ನೋಡಿದರೆ ಸಾಕು ಅನ್‌ಲಾಕ್ ಆಗಲಿದೆ.

100 ಡಿಗ್ರಿ ವೈಡ್ ಸೆಲ್ಪಿ ಕ್ಯಾಮೆರಾ:

100 ಡಿಗ್ರಿ ವೈಡ್ ಸೆಲ್ಪಿ ಕ್ಯಾಮೆರಾ:

ಸ್ಮಾರ್ಟ್‌ಫೋನ್ ಎಂದ ಮೇಲೆ ಸೆಲ್ಪಿ ಕ್ಯಾಮರಾ ಉತ್ತಮವಾಗಿ ಇರಲೇ ಬೇಕು ಇದಕ್ಕಾಗಿ ಇದರಲ್ಲಿ 5MPಯ 100 ಡಿಗ್ರಿ ಸೆಲ್ಫಿ ಕ್ಯಾಮೆರಾವನ್ನು ಕಾಣಬಹುದಾಗಿದೆ. ಇದು ನಿಮ್ಮ ಗ್ರೂಪ್ ಸೆಲ್ಫಿಗೆ ಹೇಳಿ ಮಾಡಿಸಿದಂತಿದೆ. ಅಲ್ಲದೇ ಇದರಲ್ಲಿ ಕ್ಯಾಮೆರಾದಲ್ಲಿ ಸೋಶಿಯಲ್ ಮೀಡಿಯಾ ಶೇರಿಂಗ್ ಆಯ್ಕೆಯನ್ನು ನೀಡಲಾಗಿದೆ. ಈ ಆಪ್ ಮೂಲಕವೇ ಶೇರ್ ಮಾಡಬಹುದು. ಹಿಂಭಾಗದಲ್ಲಿ 13MP ಕ್ಯಾಮೆರಾ ನೀಡಲಾಗಿದ್ದು, ಜೊತೆಗೆ LED ಫ್ಲಾಷ್ ಲೈಟ್ ಸಹ ನೀಡಲಾಗಿದೆ. ಅಲ್ಲದೇ ಕ್ರಿಯೇಟಿಮ್ ಶೂಟ್ ಮೊಡ್ ಸಹ ನೀಡಲಾಗಿದೆ.

ಪವರ್ ಫುಲ್ ಹಾರ್ಡ್‌ವೇರ್:

ಪವರ್ ಫುಲ್ ಹಾರ್ಡ್‌ವೇರ್:

LG Q6 ಸ್ಮಾರ್ಟ್‌ಫೋನಿನಲ್ಲಿ ಆಕ್ಟಾಕೋರ್ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 435 ಪ್ರೋಸೆಸರ್ ಇದರೊಂದಿಗೆ ಆಡ್ರಿನೋ 505 GPU ನೀಡಲಾಗಿದೆ. ಅಲ್ಲದೇ 3GB RAM ಇದರಲ್ಲಿದೆ. ಜೊತೆಗೆ 32GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದು. ಅಲ್ಲದೇ SD ಕಾರ್ಡ್ ಹಾಕಿಕೊಂಡು 2TB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದು. ಇನ್ನು ಈ ಫೋನಿನಲ್ಲಿ 3,000 mAh ಬ್ಯಾಟರಿಯನ್ನು ಅಳವಡಿಸಲಾಗಿದೆ.

ಆಂಡ್ರಾಯ್ಡ್ ನ್ಯಾಗಾ;

LG Q6 ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 7.1.1 ನ್ಯಾಗಾ ದಲ್ಲಿ ಕಾರ್ಯಚರಣೆ ನಡೆಸಲಿದೆ. ಇದರೊಂದಿಗೆ LG UX 6.0 ಸಹ ಇರಲಿದೆ. ಅಲ್ಲದೇ ಗೂಗಲ್ ಅಸಿಸ್ಟೆಂಟ್ ಸಹ ಕಾಣಬಹುದಾಗಿದ್ದು, ಗೂಗಲ್ ಆಪ್ ಗಳೆಲ್ಲವೂ ಇರಲಿದೆ. LG Q6 ಅಮೆಜಾನ್ ನಲ್ಲಿ ರೂ.14,990 ಕ್ಕೆ ದೊರೆಯಲಿದ್ದು, ಬ್ಲಾಕ್, ಪ್ಲಾಟಿನಂ ಮತ್ತು ಗೋಲ್ಡ್ ಬಣ್ಣದಲ್ಲಿ ದೊರೆಯಲಿದೆ.

Best Mobiles in India

Read more about:
English summary
LG Electronics has officially announced the company's first Q series smartphone- #LGQ6 in the Indian market. Priced at Rs. 14,990. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X