ಆಂಡ್ರಾಯ್ಡ್ 10 ಹೊಂದಿರುವ ಎಲ್ ಜಿ ಸ್ಮಾರ್ಟ್ ಫೋನ್ ಗಳು

By Gizbot Bureau
|

ಮಾರುಕಟ್ಟೆಗೆ ಎಂಟ್ರಿ ಕೊಡುವ ಡಿವೈಸ್ ಗಳಲ್ಲಿ ಇದೀಗ ಗೂಗಲ್ ನ ಆಂಡ್ರಾಯ್ಡ್ 10 ಓಎಸ್ ಸರ್ವೇಸಾಮಾನ್ಯವೆನಿಸಿದೆ. ಸದ್ಯ ಹೆಚ್ಚಿನ ಡಿವೈಸ್ ಗಳು ಆಂಡ್ರಾಯ್ಡ್ 9 ಪೈ ನಲ್ಲಿ ರನ್ ಆಗುತ್ತದೆ. ಆದರೆ ಕೆಲವು ಡಿವೈಸ್ ಗಳು ಆಂಡ್ರಾಯ್ಡ್ 10 ಗೆ ಅಪ್ ಗ್ರೇಡ್ ಆಗಲಿದೆ. ಆಂಡ್ರಾಯ್ಡ್ 11 ಸದ್ಯದಲ್ಲೇ ಮಾರುಕಟ್ಟೆಗೆ ಎಂಟ್ರಿ ಕೊಡುವ ಸಾಧ್ಯತೆ ಇದ್ದು ಇದೀಗ ಹೆಚ್ಚಿನ ಡಿವೈಸ್ ಗಳು ಆಂಡ್ರಾಯ್ಡ್ 10 ನಿಂದಲೇ ಬಿಡುಗಡೆಯಾಗುತ್ತದೆ.

ಆಂಡ್ರಾಯ್ಡ್

ಆಂಡ್ರಾಯ್ಡ್ 10 ಡಿವೈಸ್ ಗಳ ಬಗ್ಗೆ ನಾವು ಮಾತನಾಡುವಾಗ ಎಲ್ಲಾ ಬ್ರ್ಯಾಂಡಿನ ಡಿವೈಸ್ ಗಳು ಕೂಡ ಇದಕ್ಕೆ ಅಪ್ ಗ್ರೇಡ್ ಆಗುತ್ತಿದೆ.ಅದಕ್ಕೆ ಎಲ್ ಜಿ ಕೂಡ ಹೊರತಾಗಿಲ್ಲ ಮತ್ತು ಸದ್ಯ ಬಿಡುಗಡೆಗೊಳ್ಳುವ ಹಲವು ಎಲ್ ಜಿ ಡಿವೈಸ್ ಗಳಲ್ಲಿ ಆಂಡ್ರಾಯ್ಡ್ 10 ಓಎಸ್ ಇರಲಿದೆ. ಅಂತಹ ಕೆಲವು ಎಲ್ ಜಿ ಡಿವೈಸ್ ಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

ಎಲ್ ಜಿ ಕೆ61

ಎಲ್ ಜಿ ಕೆ61

ಎಲ್ ಜಿ ಕೆ61 ಅಧಿಕೃತವಾಗಿ ಈ ವರ್ಷದ ಫೆಬ್ರವರಿಯಲ್ಲಿ ಬಿಡುಗಡೆಯಾಗಿದೆ. ಸದ್ಯದಲ್ಲೇ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಇದರಲ್ಲಿ 6.5-ಇಂಚಿನ IPS LCD ಡಿಸ್ಪ್ಲೇ, MIL-STD-810G ಕಾಂಪ್ಲಯನ್ಸ್, 128GB ಸ್ಟೋರೇಜ್ ವ್ಯವಸ್ಥೆ, 4GB RAM ಮತ್ತು 4000mAh ಬ್ಯಾಟರಿ ಇರಲಿದೆ.

ಎಲ್ ಜಿ ವೆಲ್ವೆಟ್

ಎಲ್ ಜಿ ವೆಲ್ವೆಟ್

ಎಲ್ ಜಿ ವೆಲ್ವೆಟ್ ಅತೀ ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಸ್ಮಾರ್ಟ್ ಫೋನ್ ಆಗಿದ್ದು ಮೇ 7 ರಂದು ಪ್ರಕಟಗೊಂಡಿದೆ.ಈ ಸ್ಮಾರ್ಟ್ ಫೋನ್ ಬಗ್ಗೆ ಹಲವು ವದಂತಿಗಳು ಹಬ್ಬಿದ್ದವು. ಇದು 6.8-ಇಂಚಿನ OLED ಡಿಸ್ಪ್ಲೇ, ಡುಯಲ್ ಸ್ಕ್ರೀನ್ ಆಕ್ಸಸರಿ ಬೆಂಬಲ ಮತ್ತು ಹಿಂಭಾಗದ ಕವರ್ ಮತ್ತು ಡಿಸ್ಪ್ಲೇ ಜೊತೆಗೆ ಕರ್ವ್ಡ್ ಸೈಡ್ ಗಳು ಮತ್ತು ಸ್ಟೀರಿಯೋ ಸ್ಪೀಕರ್ ಗಳು, ಟ್ರಿಪಲ್ ಕ್ಯಾಮರಾ ಸೆಟ್ ಅಪ್ ಸೇರಿದಂತೆ ಹಲವು ವೈಶಿಷ್ಟ್ಯತೆಗಳಿರುವ ಬಗ್ಗೆ ಹೇಳಲಾಗುತ್ತಿದೆ.

ಎಲ್ ಜಿ ವಿ60 ThinQ

ಎಲ್ ಜಿ ವಿ60 ThinQ

ಎಲ್ ಜಿ ವಿ60 ThinQ ಡುಯಲ್ ಸ್ತ್ರೀನ್ ನ್ನು ಹೊಂದಿದ್ದು ಮಲ್ಟಿಟಾಸ್ಕಿಂಗ್ ಗೆ ಬಳಕೆದಾರರಿಗೆ ಬೆಂಬಲ ನೀಡುತ್ತದೆ. ಇದು 6.8-ಇಂಚಿನ ಡಿಸ್ಪ್ಲೇ, ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 865 SoC, 8GB RAM ಮತ್ತು ಇತರೆ ಹಲವು ವೈಶಿಷ್ಟ್ಯತೆಗಳನ್ನು ಹೊಂದಿರಲಿದೆ.

ಎಲ್ ಜಿ ಕೆ41ಎಸ್

ಎಲ್ ಜಿ ಕೆ41ಎಸ್

ಕಳೆದ ಕೆಲವು ತಿಂಗಳ ಹಿಂದೆಯೇ ಪ್ರಕಟಗೊಂಡಿರುವ ಡಿವೈಸ್ ಇದಾಗಿದ್ದು ಭಾರತೀಯ ಮಾರುಕಟ್ಟೆಗೆ ಯಾವಾಗ ಪ್ರವೇಶಿಸಲಿದೆ ಎಂಬ ಕಾತುರತೆ ಇದೆ. ಎಲ್ ಜಿ ಕೆ41ಎಸ್ 6.5-ಇಂಚಿನ IPS LCD ಡಿಸ್ಪ್ಲೇ, 4000mAh ಬ್ಯಾಟರಿ, ಆಕ್ಟಾ ಕೋರ್ ಪ್ರೊಸೆಸರ್, 3GB RAM, ಮತ್ತು 32GB ಸ್ಟೋರೇಜ್ ವ್ಯವಸ್ಥೆ ಇದರಲ್ಲಿ ಇರಲಿದೆ.

ಎಲ್ ಜಿ ಕೆ51ಎಸ್

ಎಲ್ ಜಿ ಕೆ51ಎಸ್

ಎಲ್ ಜಿ ಕೆ51ಎಸ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳ್ಳಲು ಕಾಯುತ್ತಿದೆ. ಈ ಸ್ಮಾರ್ಟ್ ಫೋನ್ ನಲ್ಲಿ 6.5-ಇಂಚಿನ IPS LCD ಡಿಸ್ಪ್ಲೇ, 4000mAh ಬ್ಯಾಟರಿ, 3GB RAM, 64GB ಸ್ಟೋರೇಜ್ ಜಾಗ , ಆಕ್ಟಾ ಕೋರ್ ಪ್ರೊಸೆಸರ್ 2.3GHz ಮತ್ತು ಇತ್ಯಾದಿ ವ್ಯವಸ್ಥೆ ಇರಲಿದೆ.

ಎಲ್ ಜಿ ಸ್ಟೈಲ್ 3

ಎಲ್ ಜಿ ಸ್ಟೈಲ್ 3

ಎಲ್ ಜಿ ಸ್ಟೈಲ್ 3 6.10-ಇಂಚಿನ ಡಿಸ್ಪ್ಲೇ ಜೊತೆಗೆ 1440 x 3120 ಪಿಕ್ಸಲ್ಸ್ ರೆಸಲ್ಯೂಷನ್ ಮತ್ತು 19.5:9 ಆಸ್ಪೆಕ್ಟ್ ಅನುಪಾತ ಹೊಂದಿರಲಿದೆ. 1.7GHz ಆಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್, 4GB RAM ಮತ್ತು ಇತ್ಯಾದಿ ವ್ಯವಸ್ಥೆಯನ್ನು ಹೊಂದಿರಲಿದೆ.

Best Mobiles in India

English summary
LG is also keen on rolling out timely updates to its devices and launching devices with the latest software and hardware aspects. Likewise, we have come up with a list of upcoming LG smartphones that we expect to launch with Android 10 out-of-the-box. Take a look at the same from below.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X