ಒಂದು ಮೊಬೈಲ್ ಐದು ಕ್ಯಾಮೆರಾ! ಬರ್ತಿದೆ ಎಲ್‌ಜಿಯ ಹೊಸ ಸ್ಮಾರ್ಟ್‌ಪೋನ್!

By GizBot Bureau
|

ಫೋನ್ ಖರೀದಿಸುವ ಪ್ರತಿಯೊಬ್ಬರೂ ಕೂಡ ಮೊದಲು ನೋಡುವುದು ಆ ಫೋನಿನ ಕ್ಯಾಮರಾ ಹೇಗಿದೆ ಅಂತ. ಯಾಕೆಂದರೆ ಈಗಿನ ಯುವಜನತೆಗೆ ಫೋಟೋಗಳ ಮೇಲೆ, ವೀಡಿಯೋಗಳ ಮೇಲೆ ಅಷ್ಟೊಂದು ಕ್ರೇಝ್ ಇದೆ. ಕೂತಲ್ಲಿ, ನಿಂತಲ್ಲಿ, ಹೋದಲ್ಲಿ, ಬಂದಲ್ಲಿ ಫೋಟೋ ಕ್ಲಿಕ್ಕಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದು ಈಗಿನ ಟ್ರೆಂಡ್. ಹಾಗಾಗಿ ಮೊಬೈಲ್ ತಯಾರಿಕಾ ಕಂಪೆನಿಗಳೂ ಕೂಡ ದಿನದಿಂದ ದಿನಕ್ಕೆ ಫೋನಿನ ಕ್ಯಾಮರಾಗಳ ವಿಷಯದಲ್ಲಿ ಹೆಚ್ಚು ವೈಶಿಷ್ಟ್ಯತೆಗಳನ್ನು, ಅವಕಾಶಗಳನ್ನು ನೀಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.

ಮಾತನಾಡಲು ಮೊಬೈಲ್, ಫೋಟೋ ಕ್ಲಿಕ್ಕಿಸಲು ಕ್ಯಾಮರಾ ಹಿಡಿಯುವ ಜಮಾನ ಇದಲ್ಲ. ಎರಡೂ ಕೆಲಸ ಒಂದೇ ಡಿವೈಸ್ ನಲ್ಲಿ ಫಟಾಫಟ್ ಆಗಬೇಕು ಮತ್ತು ಅಷ್ಟದಿಕ್ಕುಗಳನ್ನೂ ಫೋಟೋದಲ್ಲಿ ಸೆರೆಹಿಡಿಯುವ ಅಧ್ಬುತ ಆಯ್ಕೆಗಳು ಅದರಲ್ಲಿ ಇರಬೇಕು. ನಿಮ್ಮ ಮನಸ್ಸಿನ ಕಲ್ಪನೆಯ ಸಾಕಾರ ರೂಪದ ಫೋಟೋ ಅದಾಗಿರಬೇಕು ಎಂದೇ ಎಲ್ಲರೂ ಇಚ್ಛಿಸುತ್ತಾರೆ. ಅದೇ ಕಾರಣಕ್ಕೆ ನೋಡಿ ಮೊಬೈಲ್ ಕಂಪೆನಿಗಳು ದಿನದಿಂದ ದಿನಕ್ಕೆ ಹೆಚ್ಚೆಚ್ಚು ಅಧ್ಬುತ ಕ್ಯಾಮರಾ ಆಯ್ಕೆಯನ್ನು ಮೊಬೈಲ್ ನಲ್ಲಿ ನೀಡುತ್ತಿವೆ.

ಒಂದು ಮೊಬೈಲ್ ಐದು ಕ್ಯಾಮೆರಾ! ಬರ್ತಿದೆ ಎಲ್‌ಜಿಯ ಹೊಸ ಸ್ಮಾರ್ಟ್‌ಪೋನ್!

ಮೊದಲು ಒಂದೇ ಕ್ಯಾಮರಾಕ್ಕೆ ಸೀಮಿತವಾಗಿರುತ್ತಿದ್ದ ಮೊಬೈಲ್ ಗಳು ನಂತರ ಎರಡು ಕ್ಯಾಮರಾಗಳನ್ನು ಒಳಗೊಂಡಿರಲು ಆರಂಭವಾದವು. ನಂತರ ಮುಂದೊಂದು, ಹಿಂದೆರಡು ಅಂತ ಸೆಲ್ಫೀ ಯುಗ ಆರಂಭವಾಯ್ತು. ಈಗ ಮೂರು ಕ್ಯಾಮರಾ ಅಲ್ಲ, ಬದಲಾಗಿ ಒಂದೇ ಮೊಬೈಲ್ ನಲ್ಲಿ 5 ಕ್ಯಾಮರಾವಿರುವ ಫೋನ್ ಮಾರುಕಟ್ಟೆಗೆ ಬರುವ ಕಾಲ ಸನ್ನಿಹಿತವಾಗಿದೆ. ಇಂತಹ ಪ್ರಯತ್ನಕ್ಕೆ ಕೈ ಹಾಕಿರುವುದು ಎಲ್ ಜಿ ಕಂಪೆನಿ..

ಎಲ್ ಜಿ ಈಗಾಗಲೇ 2 ಫ್ಲಾಗ್ ಶಿಪ್ ವಿ ಸರಣಿಯ ಮೊಬೈಲ್ ನ್ನು ಈ ವರ್ಷ ಮಾರುಕಟ್ಟೆಗೆ ಪರಿಚಯಿಸಿ ಆಗಿದೆ. ಎಲ್ ಜಿ ವಿ30 ThinQ ಮತ್ತು ವಿ35 ThinQ ಎರಡೂ ಕೂಡ ಕಳೆದ ಬಾರಿಯ ಎಲ್ ಜಿ ವಿ30 ಯ ವಿನ್ಯಾಸವನ್ನೇ ಹೊಂದಿದ್ದು ಇದರಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ಇತ್ತು. ಒಳ್ಳೆಯದೇನೆಂದರೆ ಇದರಲ್ಲಿ ನಾಚ್ ಇಲ್ಲದ ಕೆಲವೇ ಕೆಲವು ಫ್ಲಾಗ್ ಶಿಪ್ ಗಳಲ್ಲಿ ಇದೂ ಒಂದಾಗಿತ್ತು , ಕೆಟ್ಟದ್ದೇನೆಂದರೆ ಇದರಲ್ಲಿ ಹೊಸತು ಏನೂ ಇರಲಿಲ್ಲ.

ಆದರೆ ಮುಂದೆ ಹೀಗಾಗಲಿಕ್ಕಿಲ್ಲ, ಯಾಕೆಂದರೆ ಎಲ್ ಜಿ ಸಂಸ್ಥೆ ಈಗಾಗಲೇ ಎಲ್ ಜಿ ವಿ40 ThinQ ಎಂದು ಕರೆಯಲಾಗುತ್ತೆ ಎಂದು ಹೇಳಲಾಗುವ ಒಂದು ಮೊಬೈಲ್ ಬಗ್ಗೆ ಸಾಕಷ್ಟು ಕೆಲಸ ಮಾಡುತ್ತಿದೆ ಮತ್ತು ಮಾಹಿತಿಯ ಪ್ರಕಾರ ಇದರಲ್ಲಿ 5 ಕ್ಯಾಮರಾಗಳು ಇರಲಿವೆಯಂತೆ ಜೊತೆ ಫೇಸ್ ಅನ್ ಲಾಕ್ ಮತ್ತು ಹಲವಾರು ವೈಶಿಷ್ಟ್ಯತೆಗಳನ್ನು ಒಳಗೊಂಡಿರಲಿದೆ ಎನ್ನಲಾಗುತ್ತಿದೆ.

ಒಂದು ಮೊಬೈಲ್ ಐದು ಕ್ಯಾಮೆರಾ! ಬರ್ತಿದೆ ಎಲ್‌ಜಿಯ ಹೊಸ ಸ್ಮಾರ್ಟ್‌ಪೋನ್!

ಆಂಡ್ರಾಯ್ಡ್ ಪೋಲೀಸ್ ವರದಿಯ ಪ್ರಕಾರ ಎಲ್ ಜಿ ಸಂಸ್ಥೆ ಎಲ್ ಜಿ ವಿ40 ಮೊಬೈಲ್ ನ ಪ್ರಮುಖ ವೈಶಿಷ್ಟ್ಯತೆಗಳ ಬಗ್ಗೆ ಕೆಲಸ ನಿರ್ವಹಿಸುತ್ತದೆ, ಪ್ರಮುಖ ವೈಶಿಷ್ಟ್ಯತೆ ಎಂದರೆ 5 ಕ್ಯಾಮರಾ. ಒಂದು ವೇಳೆ ಇದು ನಿಜವೇ ಆಗಿದ್ದರೆ, 5 ಕ್ಯಾಮರಾಗಳನ್ನ ಒಳಗೊಂಡ ಮೊದಲ ಫೋನ್ ನ್ನು ವಿಶ್ವಕ್ಕೆ ಬಿಡುಗಡೆಗೊಳಿಸಿದ ಕೀರ್ತಿ ಎಲ್ ಜಿ ಸಂಸ್ಥೆಗೆ ಲಭ್ಯವಾಗುತ್ತದೆ.

ಮಾಹಿತಿಯ ಪ್ರಕಾರ ಹುವಾಯಿ ಪಿ20 ಪ್ರೋ ನಂತೆ ಮೂರು ಕ್ಯಾಮರಾಗಳು ಹಿಂಭಾಗದಲ್ಲಿದ್ದರೆ ಎರಡು ಕ್ಯಾಮರಾ ಗಳು ಮುಂಭಾಗದಲ್ಲಿ ಇರಲಿವೆಯಂತೆ. ಮುಂಭಾಗದ ಎರಡು ಕ್ಯಾಮರಾಗಳು ಅಭಿವೃದ್ಧಿ ಪಡಿಸಿದ ಮುಖದ ಗುರುತಿಸುವಿಕೆಗೆ ಹೆಚ್ಚಿನ ನೆರವು ನೀಡುತ್ತದೆ ಮತ್ತು ಮುಖದ 3ಡಿ ಮ್ಯಾಪಿಂಗ್ ನ್ನು ಕೂಡ ಮಾಡಲಿದೆಯಂತೆ. ಆದರೆ ಇದರ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.

ಮಾಹಿತಿಯ ಪ್ರಕಾರ ಎಲ್ ಜಿ ಜಿ 7 ನಲ್ಲಿರುವಂತಹ ಡಿಸ್ಪ್ಲೇ ಎಲ್ ಜಿ ವಿ40 ಯಲ್ಲೂ ಮುಂದುವರಿಯುತ್ತದೆ. ಬಹುಷ್ಯಃ ಇದು ಗ್ರಾಹಕರಿಗೆ ನಿರಾಶೆಯನ್ನುಂಟು ಮಾಡಬಹುದು. ಆದರೆ ಇದು OLED ಅಥವಾ LCD ಆಗಿರುತ್ತದೆಯಾ ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ.

ಒಂದು ಮೊಬೈಲ್ ಐದು ಕ್ಯಾಮೆರಾ! ಬರ್ತಿದೆ ಎಲ್‌ಜಿಯ ಹೊಸ ಸ್ಮಾರ್ಟ್‌ಪೋನ್!

ಮೂರು ಕ್ಯಾಮರಾ ಗಳ ವಿಚಾರವನ್ನೇ ಮತ್ತೆ ಹೇಳುವುದಾದರೆ ಎಲ್ ಜಿ ಸಂಸ್ಥೆ ಪಿ20 ಪ್ರೋ ನಿಂದ ಪ್ರೊತ್ಸಾಹಿಸಲ್ಪಟ್ಟಿದೆ. ಯಾಕೆಂದರೆ ಇದುವೇ ಮೂರು ಹಿಂಭಾಗದ ಕ್ಯಾಮರಾವನ್ನು ಒಳಗೊಂಡ ಮೊದಲ ಫೋನ್ ಆಗಿದೆ. ಸದ್ಯ ಎಲ್ ಜಿ ಕೂಡ ಉತ್ತಮ ಕ್ಯಾಮರಾ ಫೋನ್ ಬಿಡುಗಡೆಗೊಳಿಸಿದ ಕೀರ್ತಿಯನ್ನು ಪಡೆಯಲು ಇಚ್ಛಿಸುತ್ತಿರುವಂತಿದೆ ಮತ್ತು ಆ ನಿಟ್ಟಿನಲ್ಲಿ ವಿ40 ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ.

ಫಿಂಗರ್ ಫ್ರಿಂಟ್ ಸೆನ್ಸರ್, ಗೂಗಲ್ ಅಸಿಸ್ಟೆಂಟ್ ಬಟನ್ ಮತ್ತು ಹಿಂಭಾಗದ ಪೆನಲ್ ಗ್ಲಾಸ್ ನಿಂದ ಕೂಡಿದ್ದು, ವಯರ್ ಲೆಸ್ ಚಾರ್ಜಿಂಗ್ ಗೆ ಇದು ಬೆಂಬಲ ನೀಡುತ್ತದೆ ಎಂದು ವರದಿ ಹೇಳುತ್ತಿದೆ. ಸ್ನ್ಯಾಪ್ ಡ್ರ್ಯಾಗನ್ 845 ಚಿಪ್ ಸೆಟ್ ನ್ನು ಒಳಗೊಂಡಿದ್ದು, Quad DAC ಬೆಂಬಲವನ್ನೇ ಇದರಲ್ಲೂ ಎಲ್ ಜಿ ಮುಂದುವರಿಸಲಿದೆಯಂತೆ.

ಇದು ಎಲ್ ಜಿ ವಿ40 ಬಗ್ಗೆ ಸಿಕ್ಕಿರುವ ಮೊದಲ ಅಲ್ಪವೇ ಮಾಹಿತಿಯಾಗಿದ್ದು, ಕೆಲವೇ ತಿಂಗಳಲ್ಲಿ ಇನ್ನಷ್ಟು ವಿವರಗಳು ಹೊರಬೀಳುವ ನಿರೀಕ್ಷೆ ಇದೆ. ನಿಜಕ್ಕೂ ಎಲ್ ಜಿ ವಿ40 ಬಗ್ಗೆ ಕಂಪೆನಿಯ ಪ್ಲಾನ್ ಏನು ಎಂಬ ಬಗ್ಗೆ ಸದ್ಯದಲ್ಲೇ ನಿಖರ ಮಾಹಿತಿ ಸಿಗಬಹುದು. ಬಹುಶ್ಯಃ 2018 ರ ನಂತರ ಈ ಫೋನ್ ಮಾರುಕಟ್ಟೆಯನ್ನು ಪ್ರವೇಶಿಸಬಹುದು.

Best Mobiles in India

English summary
LG V40 may come with five cameras, notch display and 3D face unlock. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X