ಬಜೆಟ್‌ ಬೆಲೆಯ 'ಎಲ್‌ಜಿ W10' ಫೋನಿನ ಸ್ಪೆಷಲ್ ಫೀಚರ್ಸ್‌ ಏನು ಗೊತ್ತಾ?

|

ಎಲೆಕ್ಟ್ರಾನಿಕ್ಸ್ ವಲಯದಲ್ಲಿ ಹೆಸರುವಾಸಿಯಾಗಿರುವ 'ಎಲ್‌ಜಿ' ಕಂಪನಿಯು ಹೆಚ್ಚಾಗಿ ಹೈ ಎಂಡ್‌ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನೇ ಬಿಡುಗಡೆ ಮಾಡಿದ್ದು, ಆದರೆ ಈಗ ಬಹುನಿರೀಕ್ಷಿತ ಎಲ್‌ಜಿ W10 ಮತ್ತು ಎಲ್‌ಜಿ W30 ಸ್ಮಾರ್ಟ್‌ಫೋನ್‌ಗಳನ್ನು ಕಂಪನಿಯು ಬಜೆಟ್‌ ಬೆಲೆಯಲ್ಲಿ ಬಿಡುಗಡೆ ಮಾಡಿ ಅಚ್ಚರಿ ಮೂಡಿಸಿದೆ. ಬಹುಶಃ ಭಾರತೀಯ ಮೊಬೈಲ್‌ ಮಾರುಕಟ್ಟೆಯಲ್ಲಿ ಹೆಚ್ಚಿನ ಜನಪ್ರಿಯತೆ ಸಾಧಿಸಲು ಎಲ್‌ಜಿ ಈ ಹಾದಿಯನ್ನು ಕಂಡುಕೊಂಡಿದೆ ಎನ್ನಲಾಗಿದೆ.

ಬಜೆಟ್‌ ಬೆಲೆಯ 'ಎಲ್‌ಜಿ W10' ಫೋನಿನ ಸ್ಪೆಷಲ್ ಫೀಚರ್ಸ್‌ ಏನು ಗೊತ್ತಾ?

ಹೌದು, ಎಲ್‌ಜಿ ಕಂಪನಿಯು ಇತ್ತೀಚಿಗಷ್ಟೆ (ಜೂನ್‌ 26) ಎಲ್‌ಜಿ W10 ಮತ್ತು ಎಲ್‌ಜಿ W30 ಸ್ಮಾರ್ಟ್‌ಫೋನ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಇವುಗಳಲ್ಲಿ 'ಎಲ್‌ಜಿ W10' 8,999ರೂ. ಆಗಿದ್ದು, 'ಎಲ್‌ಜಿ W30' 9,999ರೂ.ಗಳ ಬಜೆಟ್‌ ಪ್ರೈಸ್‌ಟ್ಯಾಗ್‌ ಅನ್ನು ಹೊಂದಿವೆ. ಆದರೆ 'ಎಲ್‌ಜಿ W10' ಸ್ಮಾರ್ಟ್‌ಫೋನ್‌ ಎಂಟ್ರಿ ಲೆವೆಲ್‌ ಸ್ಮಾರ್ಟ್‌ಫೋನ್‌ ಕೇಟಗರಿಯಲ್ಲಿ ಇತರೆ ಸ್ಮಾರ್ಟ್‌ಫೋನ್‌ಗಳಿಗೆ ಭಾರಿ ಪೈಪೋಟಿ ನೀಡಲಿದೆ.

ಬಜೆಟ್‌ ಬೆಲೆಯ 'ಎಲ್‌ಜಿ W10' ಫೋನಿನ ಸ್ಪೆಷಲ್ ಫೀಚರ್ಸ್‌ ಏನು ಗೊತ್ತಾ?

ಹಾಗೆಯೇ ಎಲ್‌ಜಿ W10 ಸ್ಮಾರ್ಟ್‌ಫೋನ್‌ AI ಆಧಾರಿತ ಕ್ಯಾಮೆರಾ ಫೀಚರ್ಸ್‌ ಮತ್ತು 4,000mAh ಬ್ಯಾಟರಿ ಪವರ್‌ ಫೀಚರ್‌ಗಳಿಂದ ಗ್ರಾಹಕರನ್ನು ಸೆಳೆಯುವ ಲಕ್ಷಣಗಳನ್ನು ಸೂಚಿಸಿದೆ. ಜೊತೆಗೆ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಹಾಗೂ ಆಂಡ್ರಾಯ್ಡ್‌ 9.0 ಓಎಸ್‌ ಎಂಬಲ ಪಡೆದಿದೆ. ಹಾಗಾದರೇ 'ಎಲ್‌ಜಿ W10' ಸ್ಮಾರ್ಟ್‌ಫೋನ್‌ ಇತರೆ ಏನೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಓದಿರಿ : 'ಆಂಡ್ರಾಯ್ಡ್‌ ಮತ್ತು ಐಫೋನ್‌ ಬಳಕೆದಾರರಿಗೆ ಆಘಾತಕರ ಸುದ್ದಿ ನೀಡಿದ ವಾಟ್ಸಪ್! ಓದಿರಿ : 'ಆಂಡ್ರಾಯ್ಡ್‌ ಮತ್ತು ಐಫೋನ್‌ ಬಳಕೆದಾರರಿಗೆ ಆಘಾತಕರ ಸುದ್ದಿ ನೀಡಿದ ವಾಟ್ಸಪ್!

ಎಲ್‌ಜಿ W10 ಡಿಸ್‌ಪ್ಲೇ

ಎಲ್‌ಜಿ W10 ಡಿಸ್‌ಪ್ಲೇ

ಎಲ್‌ಜಿ W10 ಸ್ಮಾರ್ಟ್‌ಫೋನ್‌ 720 x 1512 ಪಿಕ್ಸಲ್‌ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ 6.19 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಫುಲ್‌ವಿಜನ್‌ LCD ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 271 ppi ಆಗಿದ್ದು, ಸ್ಕ್ರೀನ್‌ನಿಂದ ಬಾಹ್ಯಬಾಡಿಯ ನಡುವಿನ ಅಂತರವು ಶೇ.80.7%ರಷ್ಟು ಆಗಿದೆ. ಹಾಗೆಯೇ ಡಿಸ್‌ಪ್ಲೇಯ ಅನುಪಾತವು 18.9:9 ಆಗಿದೆ.

ಎಲ್‌ಜಿ W10 ಪ್ರೊಸೆಸರ್‌

ಎಲ್‌ಜಿ W10 ಪ್ರೊಸೆಸರ್‌

ಎಲ್‌ಜಿ W10 ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್‌ MT6762 ಹಿಲಿಯೊ P22 ಪ್ರೊಸೆಸರ್‌ ಶಕ್ತಿಯನ್ನು ಹೊಂದಿದ್ದು, ಪವರ್‌VR GE8320 ಜಿಪಿಯು ಅನ್ನು ಒಳಗೊಂಡಿದೆ. ಆಂಡ್ರಾಯ್ಡ್‌ 9.0 ಓಎಸ್‌ ಬೆಂಬಲವನ್ನು ಪಡೆದಿದ್ದು, 3GB RAM ಮತ್ತು 32 GB ಆಂತರಿಕ ಸ್ಟೋರೇಜ್‌ ಅವಕಾಶವನ್ನು ಹೊಂದಿದೆ. ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಸಂಗ್ರಹವನ್ನು 256GB ವರೆಗೂ ವಿಸ್ತರಿಸಬಹುದು.

ಓದಿರಿ : 'ಬಿಗ್‌ ಬ್ಯಾಟರಿ ಲೈಫ್' ಸ್ಮಾರ್ಟ್‌ಫೋನ್‌ಗಳಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್‌ ಆಫರ್‌! ಓದಿರಿ : 'ಬಿಗ್‌ ಬ್ಯಾಟರಿ ಲೈಫ್' ಸ್ಮಾರ್ಟ್‌ಫೋನ್‌ಗಳಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್‌ ಆಫರ್‌!

ಎಲ್‌ಜಿ W10 ಕ್ಯಾಮೆರಾ

ಎಲ್‌ಜಿ W10 ಕ್ಯಾಮೆರಾ

ಎಲ್‌ಜಿ W10 ಸ್ಮಾರ್ಟ್‌ಫೋನ್‌ ಹಿಂಭಾಗದಲ್ಲಿ ಡ್ಯುಯಲ್‌ ರೇರ್‌ ಕ್ಯಾಮೆರಾ ಆಯ್ಕೆಯನ್ನು ಒಳಗೊಂಡಿದೆ. ಪ್ರಮುಖ ಕ್ಯಾಮೆರಾವು 13ಎಂಪಿ (PDAF) ಸಾಮರ್ಥ್ಯದಲ್ಲಿದ್ದರೇ, ಇನ್ನು ಸೆಕೆಂಡರಿ ಕ್ಯಾಮೆರಾವು 5ಎಂಪಿ ಸಾಮರ್ಥ್ಯದಲ್ಲಿದ್ದು, ಡೆಪ್ತ್‌ ಸೆನ್ಸಾರ್‌ ಹೊಂದಿದೆ. ಮತ್ತು ಸೆಲ್ಫಿ ಕ್ಯಾಮೆರಾವು 8ಎಂಪಿ ಸಾಮರ್ಥ್ಯದಲ್ಲಿದ್ದು, ಎಲ್‌ಇಡಿ ಫ್ಲ್ಯಾಶ್‌ ಆಯ್ಕೆಯನ್ನು ಸಹ ಒಳಗೊಂಡಿದೆ.

ಎಲ್‌ಜಿ W10 ಬ್ಯಾಟರಿ

ಎಲ್‌ಜಿ W10 ಬ್ಯಾಟರಿ

ಎಲ್‌ಜಿ W10 ಸ್ಮಾರ್ಟ್‌ಫೋನ್‌ 4000mAh ಸಾಮರ್ಥ್ಯದ ಬ್ಯಾಟರಿ ಪವರ್‌ ಅನ್ನು ಒಳಗೊಂಡಿದ್ದು, ಇದರೊಂದಿಗೆ ಅತ್ಯುತ್ತಮ ಚಾರ್ಜರ್‌ ಸೌಲಭ್ಯವನ್ನು ಪಡೆದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ನಲ್ಲಿ ವೈಫೈ, ಬ್ಲೂಟೂತ್ 4.2, GPS/ A-GPS, ವೈಫೈ ಡೈರೆಕ್ಟ್‌, ಫಿಂಗರ್‌ಪ್ರಿಂಟ್ ಸೆನ್ಸಾರ್‌ (ರೇರ್‌ ಮೌಂಟೆಡ್‌) ಸೌಲಭ್ಯಗಳನ್ನು ಸಹ ನೀಡಲಾಗಿದೆ.

ಓದಿರಿ : ಸ್ಮಾರ್ಟ್‌ಫೋನ್‌ ಚಾರ್ಜ್‌ ಮಾಡುವಾಗ ಈ ಕ್ರಮಗಳನ್ನು ಮರೆಯದೇ ಅನುಸರಿಸಿ!ಓದಿರಿ : ಸ್ಮಾರ್ಟ್‌ಫೋನ್‌ ಚಾರ್ಜ್‌ ಮಾಡುವಾಗ ಈ ಕ್ರಮಗಳನ್ನು ಮರೆಯದೇ ಅನುಸರಿಸಿ!

Best Mobiles in India

English summary
LG W10 smartphone was launched on 26th June 2019. The phone comes with a 6.19-inch touchscreen display. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X