ಮುಂಬರುವ ಈ ಸ್ಮಾರ್ಟ್ ಫೋನ್ ಗಳು ಸಾಕಷ್ಟು ವದಂತಿಗಳನ್ನು ಸೃಷ್ಟಿಸಿವೆ

By Gizbot Bureau
|

ಸ್ಯಾಮ್ ಸಂಗ್ ಕೈಗೆಟುಕುವ ಬೆಯ ಮತ್ತು ಮಧ್ಯಮ ರೇಂಜಿನ ಸ್ಮಾರ್ಟ್ ಫೋನ್ ಗಳಿಗೆ ಭಾರೀ ಪ್ರಸಿದ್ಧಿಯಾಗಿದೆ. ಇನ್ನು ಫ್ಲ್ಯಾಗ್ ಶಿಪ್ ಫೋನ್ ಗಳಾಗಿರುವ ಗ್ಯಾಲಕ್ಸಿ ಎಸ್ ಸರಣಿಗಳು ಮತ್ತು ಗ್ಯಾಲಕ್ಸಿ ನೋಟ್ ಸರಣಿಗಳು ಕೂಡ ಜನರಿಗೆ ಬಹಳ ಮೆಚ್ಚುಗೆಯಾಗಿವೆ. ಕಳೆದ ಹಲವು ವರ್ಷಗಳಿಂದ ಕಂಪೆನಿಯು ಕೂಡ ಸಾಕಷ್ಟು ಮಧ್ಯಮ ರೇಂಜಿನ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆಗೊಳಿಸಿದೆ.

ಗ್ಯಾಲಕ್ಸಿ ಎ

ಗ್ಯಾಲಕ್ಸಿ ಎ ಸರಣಿ ಫೋನ್ ಗಳು ಸ್ಯಾಮ್ ಸಂಗ್ ಸಂಸ್ಥೆಯ ಮಧ್ಯಮ ರೇಂಜಿನ ಸ್ಮಾರ್ಟ್ ಫೋನ್ ಗಳ ಲೈನ್ ಅಪ್ ಆಗಿದ್ದು ಪ್ರೀಮಿಯಂ ಫೀಚರ್ ಗಳನ್ನು ಹೊಂದಿವೆ ಮತ್ತು ಗ್ಯಾಲಕ್ಸಿ ಎಂ ಸರಣಿಯು ಕೈಗೆಟುಕುವ ಬೆಲೆಯ ಸ್ಮಾರ್ಟ್ ಫೋನ್ ಆಗಿದೆ. ಇವುಗಳು ರಿಯಲ್ ಮಿ ಮತ್ತು ಶಿಯೋಮಿ ಸ್ಮಾರ್ಟ್ ಫೋನ್ ಗಳ ಜೊತೆಗೆ ಸ್ಪರ್ಧೆಗೆ ಇಳಿಯಲಿವೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ51

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ51

ಗ್ಯಾಲಕ್ಸಿ ಎಂ ಸರಣಿ ಫೋನ್ ಗಳಲ್ಲೇ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ51 ಅತ್ಯಂತ ಶಕ್ತಿಯುತವಾಗಿರುವ ಸ್ಮಾರ್ಟ್ ಫೋನ್ ಆಗಿರಲಿದೆ. ಇದು ಮಿಡ್ ರೇಂಜಿನಲ್ಲೇ ಮೇಲ್ದರ್ಜೆಯದ್ದಾಗಿದ್ದು ಆಕ್ಟಾ ಕೋರ್ ಪ್ರೊಸೆಸರ್ ಜೊತೆಗೆ ಕನಿಷ್ಟ 6GB RAM ಮತ್ತು 64GB ಸ್ಟೋರೇಜ್ ವ್ಯವಸ್ಥೆಯನ್ನು ಹೊಂದಿರಲಿದೆ. ಈ ಸ್ಮಾರ್ಟ್ ಫೋನ್ 64MP ಪ್ರೈಮರಿ ಸೆನ್ಸರ್ ಜೊತೆಗೆ 4K ವೀಡಿಯೋ ಸ್ಟ್ರೀಮಿಂಗ್ ಗೆ ಬೆಂಬಲ ನೀಡುವ ನಿರೀಕ್ಷೆ ಇದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ51 5ಜಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ51 5ಜಿ

ಹೆಸರೇ ಸೂಚಿಸುವಂತೆ ಸ್ಯಾಮ್ ಸಂಗ್ ಗ್ಯಾಲಕ್ಸಿ ಎ51 5G ಗೆ ಬೆಂಬಲ ನೀಡಲಿದ್ದು ಮಧ್ಯಮ ರೇಂಜಿನಲ್ಲಿ ಸ್ಯಾಮ್ ಸಂಗ್ ಸಂಸ್ಥೆಯಿಂದ ಬಿಡುಗಡೆಗೊಳ್ಳಲಿರುವ ಮೊದಲ 5ಜಿ ಬೆಂಬಲಿತ ಫೋನ್ ಆಗಿರಲಿದೆ. ಈ ಡಿವೈಸ್ 5G ಕೆಪೇಬಲ್ ಆಗಿರುವ ಚಿಪ್ ಸೆಟ್ ನ್ನು ಹೊಂದಿರುತ್ತದೆ ಮತ್ತು ದೊಡ್ಡ ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್ ಗೆ ಬೆಂಬಲ ನೀಡಲಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ71 5ಜಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ71 5ಜಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ71 5ಜಿ ಫೋನ್ ಗ್ಯಾಲಕ್ಸಿ ಎ51 5ಜಿ ಫೋನ್ ಗಿಂತ ಹೆಚ್ಚೇ ಶಕ್ತಿಯುತವಾಗಿರಲಿದೆ ಮತ್ತು ಸ್ವಲ್ಪ ದೊಡ್ಡದಾದ ಸ್ಕ್ರೀನ್, ದೊಡ್ಡ ಬ್ಯಾಟರಿ ಮತ್ತು ಹೆಚ್ಚು ಶಕ್ತಿಶಾಲಿಯಾಗಿರುವ ಪ್ರೊಸೆಸರ್ ವ್ಯವಸ್ಥೆಯನ್ನು ಹೊಂದಿರಲಿದೆ. ಇದರಲ್ಲಿ ಅಧಿಕ ಪ್ರದರ್ಶನವಿರುವ ಕ್ಯಾಮರಾ ಸೆಟ್ ಅಪ್ ಇರಲಿದೆ ಮತ್ತು 48MP ಅಥವಾ 64MP ಪ್ರೈಮರಿ ಕ್ಯಾಮರಾ ಸೆನ್ಸರ್ ವ್ಯವಸ್ಥೆಯನ್ನು ಹೊಂದಿರುವ ಸಾಧ್ಯತೆ ಇದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ11

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ11

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ11 4ಜಿ ಸ್ಮಾರ್ಟ್ ಫೋನ್ ಆಗಿರಲಿದೆ ಮತ್ತು ಇದರ ಬೆಲೆ 10,000 ರುಪಾಯಿಗಳಾಗಿದ್ದು ಕೈಗೆಟುಕುವ ಬೆಲೆಯದ್ದಾಗಿರುತ್ತದೆ. ಗ್ಯಾಲಕ್ಸಿ ಎಂ11 ದೊಡ್ಡ ಸ್ಕ್ರೀನ್ ಮತ್ತು ದೊಡ್ಡ ಬ್ಯಾಟರಿ ಮತ್ತು ಒಂದು ಬಾರಿ ಚಾರ್ಜ್ ಮಾಡಿದರೆ ಎರಡು ದಿನ ಫೋನ್ ಬಳಕೆಗೆ ಬೆಂಬಲ ನೀಡುತ್ತದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ ಎ91

ಸ್ಯಾಮ್ಸಂಗ್ ಗ್ಯಾಲಕ್ಸಿ ಎ91

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ91 ಹಾರ್ಡ್ ವೇರ್ ನಲ್ಲಿ ಅತ್ಯಂತ ಶಕ್ತಿಯಾಗಿರುತ್ತದೆ. ಮೇಲ್ದರ್ಜೆಯ ಮಿಡ್ ರೇಂಜಿನ ಅಥವಾ ಫ್ಲ್ಯಾಗ್ ಶಿಪ್ ಗ್ರೇಡ್ ಪ್ರೊಸೆಸರ್ ನ್ನು ಹೊಂದಿರುತ್ತದೆ. ಇದರಲ್ಲಿ 8GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಇರುತ್ತದೆ ಮತ್ತು 2020 ಕ್ಕೆ ಬಿಡುಗಡೆಗೊಳ್ಳಲಿದೆ.

Best Mobiles in India

English summary
List Of Upcoming Samsung Rumored Smartphones Highly Expected In 2020

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X