3,499ಕ್ಕೆ me 4 ಸ್ಮಾರ್ಟ್‌ಫೋನ್: ಫ್ಲಿಪ್ ಕಾರ್ಟ್‌ನಲ್ಲಿ ಮಾತ್ರವೇ ಲಭ್ಯ..!!

Written By:

ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಐವಿಯೋಮಿ ಹೊಸದಾಗಿ ಲಾಂಚ್ ಮಾಡಿರುವ ಐವಿಯೋಮಿ Me 4 ಮತ್ತು Me 5 ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡಲಿದೆ. ಅದರಲ್ಲೂ ಬಜೆಟ್ ಸ್ಮಾರ್ಟ್‌ಫೋನ್ ಗಳ ವಿಭಾಗದಲ್ಲಿ ಸಾಕಷ್ಟು ಸ್ಪರ್ಧೆಯನ್ನು ನೀಡಲಿದೆ.

3,499ಕ್ಕೆ me 4 ಸ್ಮಾರ್ಟ್‌ಫೋನ್: ಫ್ಲಿಪ್ ಕಾರ್ಟ್‌ನಲ್ಲಿ ಮಾತ್ರವೇ ಲಭ್ಯ..!!

ಓದಿರಿ: ಜುಲೈ 21ಕ್ಕೆ ಜಿಯೋ 4G ಫೋನ್ ಲಾಂಚ್: ಬಿಡುಗಡೆಗೆ ಮುಂಚೆಯೇ ದಾಖಲೆ ನಿರ್ಮಾಣ..!

ಫ್ಲಿಪ್ ಕಾರ್ಟಿನಲ್ಲಿ ಮಾತ್ರವೇ ಈ ಸ್ಮಾರ್ಟ್‌ಫೋನ್ ಗಳು ದೊರೆಯಲಿದೆ. ಅದುವೇ ರೂ. 3,499 ಮತ್ತು ರೂ.,4,499 ಗಳಿಗೆ ದೊರೆಯಲಿದೆ. ಈ ಸ್ಮಾರ್ಟ್‌ಫೋನ್ ಗಳು 4G ಸಫೋರ್ಟ್ ಮಾಡಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಂಡ್ರಾಯ್ಡ್ ನ್ಯಾಗಾ ಸಫೋರ್ಟ್:

ಆಂಡ್ರಾಯ್ಡ್ ನ್ಯಾಗಾ ಸಫೋರ್ಟ್:

ಐವಿಯೋಮಿ Me 4 ಮತ್ತು Me 5 ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ ನ್ಯಾಗಾ ಸಫೋರ್ಟ್ ಮಾಡಲಿದೆ ಎನ್ನಲಾಗಿದೆ. ಈ ಸ್ಮಾರ್ಟ್‌ಫೋನ್ ಗಳು ಗೊಲ್ಡನ್, ಬ್ಲಾಕ್, ಗ್ರೇ ಬಣ್ಣಗಳಲ್ಲಿ ದೊರೆಯಲಿದೆ.

Me 5 ಸ್ಮಾರ್ಟ್‌ಫೋನ್ ವಿಶೇಷತೆ:

Me 5 ಸ್ಮಾರ್ಟ್‌ಫೋನ್ ವಿಶೇಷತೆ:

Me 5 ಸ್ಮಾರ್ಟ್‌ಫೋನ್ ನಲ್ಲಿ 5 ಇಂಚಿನ IPS ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. 8MP ಹಿಂಭಾಗದ ಕ್ಯಾಮೆರಾ ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು ನೀಡಲಾಗಿದೆ. ಇದರೊಂದಿಗೆ 2GB RAM, 3000 mAh ಬ್ಯಾಟರಿ ಸೇರಿದಂತೆ 16GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದು. ವೇಗದ ಕಾರ್ಯಚರಣೆಗಾಗಿ 1.2GHz ಕ್ವಾಡ್ ಕೋರ್ ಪ್ರೋಸೆಸರ್ ಇದರಲ್ಲಿದ್ದು, 128 GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ಹೊಂದಿದೆ ಎನ್ನಲಾಗಿದೆ.

Me 4 ಸ್ಮಾರ್ಟ್‌ಫೋನ್ ವಿಶೇಷತೆ:

Me 4 ಸ್ಮಾರ್ಟ್‌ಫೋನ್ ವಿಶೇಷತೆ:

Me 4 ಸ್ಮಾರ್ಟ್‌ಫೋನ್ ನಲ್ಲಿ ಹಿಂಭಾಗದಲ್ಲಿ ಮತ್ತು ಮುಂಭಾಗದಲ್ಲಿ 5MP ಕ್ಯಾಮೆರಾವನ್ನು ಕಾಣಬಹುದಾಗಿದೆ. ಇದರಲ್ಲಿ 4.5 ಇಂಚಿನ ಡಿಸ್‌ಪ್ಲೇಯನ್ನು ಅಳವಡಿಸಲಾಗಿದ್ದು, 2000mAh ಬ್ಯಾಟರಿ ಇದರಲ್ಲಿದೆ. ಅಲ್ಲದೇ 1.1GHz ವೇಗದ ಪ್ರೋಸೆಸರ್ ಇದ್ದು, 1GB RAM ಇದರಲ್ಲಿದೆ. 64 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವು ಇದೆ.

ಎರಡು ಫೋನಿನಲ್ಲಿ ಡ್ಯುಯಲ್ ಸಿಮ್:

ಎರಡು ಫೋನಿನಲ್ಲಿ ಡ್ಯುಯಲ್ ಸಿಮ್:

ಐವಿಯೋಮಿ Me 4 ಮತ್ತು Me 5 ಸ್ಮಾರ್ಟ್‌ಫೋನ್‌ ನಲ್ಲಿ ಡ್ಯುಯಲ್ ಸಿಮ್ ಹಾಕಿಕೊಳ್ಳುವ ಅವಕಾಶವನ್ನು ಹೊಂದಿವೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
iVOOMi launched the iVOOMi Me 4 and Me 5 on Flipkart at a price of Rs 3,499 and 4,499, respectively. Apparently, it is a Flipkart-exclusive sale. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot