ಜಿಯೋ ಸಪೋರ್ಟ್ ಆಗುವ 'ಜೆಲ್ಲಿ 4G' ಸ್ಮಾರ್ಟ್‌ಫೋನ್ ಖರೀದಿಸಲು ಕ್ಯೂ ನಿಲ್ತೀರಾ!! ಬೆಲೆ ಎಷ್ಟು ಗೊತ್ತಾ?

ಆಂಡ್ರಾಯ್ಡ್ 7.0 ನ್ಯೂಗಾ ಮತ್ತು 2.45 ಇಂಚ್ ಸ್ಕ್ರೀನ್ ಹೊಂದಿರುವ ಈ ನೂತನ ಮೊಬೈಲ್ ಈಗಾಗಲೇ ಎಲ್ಲಡೆ ಟ್ರೆಂಡ್ ಸೃಷ್ಟಿಸಿದೆ.!!

|

ಇಂದು ಮೊಬೈಲ್‌ಗಳು ಮಾಯವಾಗಿ ಸ್ಮಾರ್ಟ್‌ಫೋನ್‌ಗಳು ಪ್ರಪಂಚವನ್ನು ಆಳುತ್ತಿವೆ. ಕೇವಲ 10 ವರ್ಷಗಳಲ್ಲಿ ಬದಲಾದ ಮೊಬೈಲ್ ತಂತ್ರಜ್ಞಾನ ಇನ್ನು ಕೆಲವೇ ವರ್ಷಗಳಲ್ಲಿ ಎಲ್ಲಿ ಹೋಗಿ ಮುಟ್ಟಲಿದೆಯೋ ಯಾರು ಊಹಿಸಲು ಸಾಧ್ಯವಾಗುತ್ತಿಲ್ಲ. ಆದರೆ, ಈಗ ಆಂಡ್ರಾಯ್ಡ್ 7.0 ನ್ಯೂಗಾ ಹೊಂದಿರುವ "ಜೆಲ್ಲಿ" ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ.!!

ಹೌದು, ನೀವು ನಂಬಲೇಬೇಕು. ಶಾಂಘೈ ಮೂಲದ ಯುನಿಹಡ್ರ್ಜ ಕಂಪೆನಿ ಈ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದು, ಕೇವಲ ಹೈ ಎಂಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರ ಲಭ್ಯವಿರುವ ಆಂಡ್ರಾಯ್ಡ್ ನ್ಯೂಗಾ ಸಾಫ್ಟ್‌ವೇರ್ ಇದೀಗ ಕಡಿಮೆ ಬೆಲೆಯ ಸ್ಮಾರ್ಟ್‌ಫೊನ್‌ಗೂ ಲಭ್ಯವಾಗಿದೆ. ಕೇವಲ 2.45 ಇಂಚ್ ಸ್ಕ್ರೀನ್ ಹೊಂದಿರುವ ಈ ನೂತನ ಮೊಬೈಲ್ ಈಗಾಗಲೇ ಎಲ್ಲಡೆ ಟ್ರೆಂಡ್ ಸೃಷ್ಟಿಸಿದೆ.!!

ಹಾಗಾದರೆ, ಆಂಡ್ರಾಯ್ಸ್ 7.0 ನ್ಯೂಗಾ ಸಾಫ್ಟ್‌ವೇರ್ ಹೊಂದಿರುವ ನೂತನ 4G ಜೆಲ್ಲಿ ಸ್ಮಾರ್ಟ್‌ಫೋನ್ ಬೆಲೆಎಷ್ಟು? ಭಾರತದಲ್ಲಿ ಬಿಡುಗಡೆ ಯಾವಾಗ? ಬೇರೆ ಏನೆಲ್ಲಾ ಫಿಚರ್‌ಗಳನ್ನು ಹೊಂದಿದೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಅತ್ಯಂತ ಚಿಕ್ಕ ಡಿಸ್‌ಪ್ಲೇ ಸ್ಮಾರ್ಟ್‌ಫೋನ್!!

ಅತ್ಯಂತ ಚಿಕ್ಕ ಡಿಸ್‌ಪ್ಲೇ ಸ್ಮಾರ್ಟ್‌ಫೋನ್!!

ನೂತನವಾಗಿ ಬಿಡುಗಡೆಯಾಗಿರುವ ಜೆಲ್ಲಿ ಸ್ಮಾರ್ಟ್‌ಫೋನ್ ಪ್ರಪಂಚದಲ್ಲಿಯೇ ಅತ್ಯಂತ ಚಿಕ್ಕ ಸ್ಮಾರ್ಟ್‌ಫೋನ್ ಎಂಬ ಕೀರ್ತಿಗೆ ಪಾತ್ರವಾಗಿದೆ. ಕೇವಲ 2.45 ಇಂಚ್ ಡಿಸ್‌ಪ್ಲೇ ಹೊಂದಿರುವ ಈ ಸ್ಮಾರ್ಟ್‌ಫೋನ್ 240*432 ಸ್ಕ್ರೀನ್ ರೆಶ್ಯೂ ಹೊಂದಿದೆ.

ಕ್ವಾಡ್‌ಕೋರ್ ಪ್ರೊಸೆಸರ್.!!

ಕ್ವಾಡ್‌ಕೋರ್ ಪ್ರೊಸೆಸರ್.!!

ಜಿಲ್ಲಿ ಸ್ಮಾರ್ಟ್‌ಫೊನ್ ಕ್ವಾಡ್‌ಕೋರ್ ಕ್ಲಾಕಡ್ 1.1GHz ಪ್ರೊಸೆಸರ್ ಹೊಂದಿದ್ದು, 950mAh ಬ್ಯಾಟರಿ ಮೂಲಕ ಕಾರ್ಯನಿರ್ವಹಿಸುತ್ತದೆ.!! ಕ್ವಾಡ್‌ಕೋರ್ ಕ್ಲಾಕಡ್ 1.1GHz ಪ್ರೊಸೆಸರ್ ಹೊಂದಿದೆ ಎನ್ನಲಾಗಿರುವ ಈ ಚಿಪ್‌ಸೆಟ್ ಅತ್ಯುತ್ತಮ ಗುಣಮಟ್ಟದಾಗಿರುತ್ತದೆ.

RAM ಮತ್ತು ಆಂತರಿಕ ಮೆಮೊರಿ ಎಷ್ಟು?

RAM ಮತ್ತು ಆಂತರಿಕ ಮೆಮೊರಿ ಎಷ್ಟು?

GB RAM ಮತ್ತು 8GB ಆಂತರಿಕ ಮೆಮೊರಿ ಹಾಗೂ 2GB RAM ಮತ್ತು 16GB ಆಂತರಿಕ ಮೆಮೊರಿ ಹೊಂದಿರುವ ಎರಡು ವೇರಿಯಂಟ್‌ಗಳಲ್ಲಿ ಜಿಲ್ಲಿ ಸ್ಮಾರ್ಟ್‌ಫೊನ್ ಲಭ್ಯವಿದೆ.!!

4G ವೋಲ್ಟ್ ಮತ್ತು ಡ್ಯುಯಲ್ ಸಿಮ್!!

4G ವೋಲ್ಟ್ ಮತ್ತು ಡ್ಯುಯಲ್ ಸಿಮ್!!

ಜೆಲ್ಲಿ ಸ್ಮಾರ್ಟ್‌ಫೋನ್ ಹೊಂದಿರುವ ಅತ್ಯಂತ ಮಹತ್ವದ ಫಿಚರ್ 4G ವೋಲ್ಟ್ ಸಪೋರ್ಟ್!! ಹೌದು, ಜಿಯೋಗೆ ಸಪೋರ್ಟ್ ಆಗುವ 4G ವೋಲ್ಟ್ ಫೀಚರ್‌ ಅನ್ನು ಈ ಸ್ಮಾರ್ಟ್‌ಫೋನ್ ಹೊಂದಿದೆ. ಮತ್ತು ಎರಡು ನ್ಯಾನೊ ಸಿಮ್‌ಗಳನ್ನು ಸ್ಮಾರ್ಟ್‌ಫೋನ್‌ನಲ್ಲಿ ಹೊಂದಬಹುದಾಗಿದೆ.!!

ಬೆಲೆ ಎಷ್ಟು? ಭಾರತದಲ್ಲಿ ಬಿಡುಗಡೆ ಯಾವಾಗ?

ಬೆಲೆ ಎಷ್ಟು? ಭಾರತದಲ್ಲಿ ಬಿಡುಗಡೆ ಯಾವಾಗ?

ಅತ್ಯಂತ ಹೆಚ್ಚು ಫಿಚರ್ ಹೊಂದಿರುವ ಜೆಲ್ಲಿ ಸ್ಮಾರ್ಟ್‌ಫೋನ್ 59 ಡಾಲರ್‌ ಬೆಲೆ ಹೊಂದಿದ್ದು, ಭಾರತೀಯ ರೂಪಾಯಿಗಳ ಲೆಕ್ಕದಲ್ಲಿ 3700 ರೂಪಾಯಿಗಳಾಗುತ್ತವೆ. ವೈಟ್, ಬ್ಲೂ ಮತ್ತು ಬ್ಲಾಕ್ ಕಲರ್‌ ಹೊಂದಿರುವ ಈ ಸ್ಮಾರ್ಟ್‌ಫೋನ್ ಆಗಸ್ಟ್‌ನಲ್ಲಿ ಬಿಡುಗಡೆಯಾಗುತ್ತಿದೆ ಎನ್ನಲಾಗಿದೆ.!!

Best Mobiles in India

English summary
Jelly is the smallest 4G phone ever. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X