Home
ಮೊಬೈಲ್

ಮೈಕ್ರೋಸಾಫ್ಟ್ ಲ್ಯೂಮಿಯಾ 535 ಭಾರತಕ್ಕೆ ಶೀಘ್ರದಲ್ಲಿ!!!

By Shwetha

ಮೈಕ್ರೋಸಾಫ್ಟ್ ಇತ್ತೀಚೆಗೆ ಲ್ಯೂಮಿಯಾ 535 ಅನ್ನು ಬಿಡುಗಡೆ ಮಾಡಿದ್ದು ಇದು ನೋಕಿಯಾ ಬ್ರ್ಯಾಂಡ್ ಅನ್ನು ಹೊಂದಿಲ್ಲ ಎಂಬುದು ಇದರ ವಿಶೇಷತೆಯಾಗಿದೆ. ಕಡಿಮೆ ಬೆಲೆಯಲ್ಲಿ ಅದ್ಭುತ ವಿಶೇಷತೆಗಳನ್ನು ಒದಗಿಸುತ್ತಿರುವ ಮೈಕ್ರೋಸಾಫ್ಟ್‌ನ ಕಡಿಮೆ ಬಜೆಟ್ ಫೋನ್ ಇದಾಗಿದೆ.

ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚಿನ ಅವಕಾಶವನ್ನು ನೀಡುತ್ತಿರುವ ಭಾರತದಲ್ಲಿ ಲ್ಯೂಮಿಯಾ 535 ಅನ್ನು ಬಳಕೆದಾರರ ಅಭಿರುಚಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ. ಅದಕ್ಕಾಗಿಯೇ ಮೈಕ್ರೋಸಾಫ್ಟ್ ಭಾರತದಲ್ಲಿ ಫೋನ್ ಅಭಿವೃದ್ಧಿಯನ್ನು ಗಮನಿಸಿ ಲ್ಯೂಮಿಯಾ 535 ಅನ್ನು ಲಾಂಚ್ ಮಾಡಿದೆ.

ಇದನ್ನೂ ಓದಿ: ಖರೀದಿಸಲು ಅತ್ಯುತ್ತಮವಾಗಿರುವ 2 ಜಿಬಿ RAM ಫೋನ್ಸ್

ಇನ್ನು ಸಂಪರ್ಕ ಮತ್ತು ಸಾಫ್ಟ್‌ವೇರ್ ವಿಶೇಷತೆಗಳನ್ನು ಒಳಗೊಂಡು ಫೋನ್ ಬಜೆಟ್ ಹ್ಯಾಂಡ್‌ಸೆಟ್ ಆಗಿ ಗಮನ ಸೆಳೆದಿದೆ. ಇಂದಿನ ಲೇಖನದಲ್ಲಿ ಮೈಕ್ರೋಸಾಫ್ಟ್ 535 ನ ವಿಶೇಷತೆಗಳನ್ನು ಅರಿತುಕೊಳ್ಳೋಣ.

#1

#1

ಲ್ಯೂಮಿಯಾ 535 ವಿಂಡೋಸ್ 8.1 ಅನ್ನು ಚಾಲನೆ ಮಾಡುತ್ತಿದ್ದು, ಡೆನೀಮ್ ನವೀಕರಣವನ್ನು ಡಿವೈಸ್ ಒಳಗೊಂಡಿದೆ. ಎಲ್ಲಾ ವಿಂಡೋಸ್ ಫೋನ್ 8 ಡಿವೈಸ್‌ಗಳು ಅಂದರೆ ನೋಕಿಯಾ ಲ್ಯೂಮಿಯಾ ಮತ್ತು ಮೈಕ್ರೋಸಾಫ್ಟ್ ಲ್ಯೂಮಿಯಾವನ್ನು ಭವಿಷ್ಯದಲ್ಲಿ ವಿಂಡೋಸ್ 10 ಗೆ ಅಪ್‌ಗ್ರೇಡ್ ಮಾಡಬಹುದಾಗಿದೆ.

#2

#2

ಇನ್ನು ಕ್ಯಾಮೆರಾಗಳ ವಿಷಯಕ್ಕೆ ಬಂದಾಗ ಇದು ಅತಿ ಗಂಭೀರವಾಗಿದೆ. ಫೋನ್‌ನಲ್ಲಿರುವ ಕ್ಯಾಮೆರಾಗಳು 5 ಎಮ್‌ಪಿಯಾಗಿದ್ದು ಸೆಲ್ಫೀ ಫೋಟೋ ತೆಗೆಯಲು ಹೇಳಿ ಮಾಡಿಸಿರುವ ಡಿವೈಸ್ ಇದಾಗಿದೆ. ಇದು ಎಲ್‌ಇಡಿ ಫ್ಲ್ಯಾಶ್ ಅನ್ನು ಕೂಡ ಒಳಗೊಂಡಿದೆ.

#3

#3

ನಿಜಕ್ಕೂ ಅತಿ ಗಂಭೀರವಾಗಿರುವ ಅಪ್ಲಿಕೇಶನ್‌ಗಳನ್ನು ಲ್ಯೂಮಿಯಾ 535 ಹೊಂದಿದೆ. ವಿಂಡೋಸ್ ಫೋನ್‌ನೊಂದಿಗೆ ಅಪ್ಲಿಕೇಶನ್ ಕ್ಯಾಟಲಾಗ್ ಬಂದಿದ್ದು ಸರಿಯಾದ ದಿಕ್ಕಿನಲ್ಲಿ ಈ ಅಪ್ಲಿಕೇಶನ್ ನಿಮಗೆ ಪ್ರಯೋಜನಕಾರಿಯಾಗಿ ಪರಿಣಮಿಸಲಿದೆ. ಈ ಫೋನ್ ಒನ್ ಡ್ರೈವ್, ಸ್ಕೈಪ್, ಎಮ್‌ಎಸ್ ಆಫೀಸ್ ಮತ್ತು ಒನ್ ನೋಟ್‌ನೊಂದಿಗೆ ಬಂದಿದೆ.

#4

#4

ಇನ್ನು ಲ್ಯೂಮಿಯಾ 535 ಆಕರ್ಷಕ ವಿನ್ಯಾಸದೊಂದಿಗೆ ಕಣ್ಸೆಳೆಯುವಂತಿದ್ದು, ಇದು ವರ್ಣರಂಜಿತ ವಿನ್ಯಾಸವನ್ನು ಪಡೆದುಕೊಂಡು ಮನಕ್ಕೆ ಮುದವನ್ನು ನೀಡುವಂತಿದೆ. ಇದು ಲ್ಯೂಮಿಯಾ ಬ್ರ್ಯಾಂಡ್ ಅಡಿಯಲ್ಲಿ ಬಂದಿದ್ದು ಆಂತರಿಕ ಸಂಗ್ರಹಣಾ ಸಾಮರ್ಥ್ಯ ನಿಜಕ್ಕೂ ಚೇತೋಹಾರಿಯಾಗಿದೆ. ಫೋನ್ 1950mAh ಬ್ಯಾಟರಿಯೊಂದಿಗೆ ಬಂದಿದ್ದು, ಡ್ಯುಯಲ್ ಸಿಮ್ ಮತ್ತು ಮೈಕ್ರೋ ಎಸ್‌ಡಿ ಬೆಂಬಲವನ್ನು ಪಡೆದುಕೊಂಡಿದೆ.

#5

#5

ಡಿವೈಸ್ ದೊಡ್ಡದಾದ 5 ಇಂಚಿನ ಡಿಸ್‌ಪ್ಲೇ ಜೊತೆಗೆ ಬಂದಿದ್ದು, ಇದರ ರೆಸಲ್ಯೂಶನ್ 960x540 ಯಾಗಿದೆ. ಇನ್ನು ಬೆಲೆಯನ್ನು ಪರಿಗಣಿಸುವುದಾದರೆ ನಿಜಕ್ಕೂ ಇದು ಹೇಳಿಮಾಡಿಸಿದ ಫೋನ್ ಆಗಿದೆ. ಇನ್ನು ಫೋನ್ ಸ್ನ್ಯಾಪ್‌ಡ್ರಾಗನ್ 200 ಕ್ವಾಡ್ ಕೋರ್ ಪ್ರೊಸೆಸರ್ ಜೊತೆಗೆ ಬಂದಿದ್ದು, ಫೋನ್ 1 ಜಿಬಿ RAM ಅನ್ನು ಒದಗಿಸುತ್ತಿದೆ. ಮೈಕ್ರೋಸಾಫ್ಟ್ ಲ್ಯೂಮಿಯಾ 535 ಅನ್ನು ನವೆಂಬರ್ 26 ರಂದು ಲಾಂಚ್ ಮಾಡಲಿದ್ದು ಇದರ ಬೆಲೆ ರೂ 10,000 ಆಗಿದೆ.

Best Mobiles in India

English summary
This article tells about Microsoft Lumia 535 Coming Soon To India: 5 Facts about Windows Phone 8.1 Powered Smartphone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+