ವಿಂಡೋಸ್‌ ಫೋನ್‌ ತಯಾರಿಸಲು ಮೈಕ್ರೋಸಾಫ್ಟ್‌‌ನಿಂದ ಧನ ಸಹಾಯ!

Posted By:

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳ ಭರಾಟೆ ನಡುವೆ ಮಾರುಕಟ್ಟೆಯಲ್ಲಿ ವಿಂಡೋಸ್‌ ಓಎಸ್‌ ಫೋನ್‌ ಉತ್ಪಾದನೆ ಹೆಚ್ಚಿಸಲು ಮೈಕ್ರೋಸಾಫ್ಟ್‌ ಯೋಜನೆ ರೂಪಿಸಿದ್ದು,ವಿಶ್ವ ಟಾಪ್‌ ಸ್ಮಾರ್ಟ್‌ಫೋನ್‌ ತಯಾರಕ ಕಂಪೆನಿಗಳಿಗೆ ಮೈಕ್ರೋಸಾಫ್ಟ್‌‌ ಹಣಕಾಸಿನ ನೆರವು ನೀಡಲು ಮುಂದಾಗಿದೆಯಂತೆ.

ಮೈಕ್ರೋಸಾಫ್ಟ್‌ ಸ್ಯಾಮ್‌ಸಂಗ್‌,ಸೋನಿ,ಹುವಾವೇ ಕಂಪೆನಿಗಳಿಗೆ ಹಣಕಾಸಿನ ನೆರವು ನೀಡಲು ಉದ್ದೇಶಿಸಿದೆ ಎಂದು ರಷ್ಯಾದ ಮೊಬೈಲ್‌ ಫೋನ್‌ ವಿಮರ್ಷಕ Eldar Murtazin ಟ್ವೀಟರ್‌‌ನಲ್ಲಿ ಹೇಳಿದ್ದಾರೆ.ಸ್ಯಾಮ್‌ಸಂಗ್‌ಗೆ 1.2 ಶತಕೋಟಿ ಡಾಲರ್‌‌,ಸೋನಿಗೆ 500 ದಶಲಕ್ಷ ಡಾಲರ್‌‌,ಹುವಾವೇಗೆ 600 ದಶಲಕ್ಷ ಡಾಲರ್‌‌,ಉಳಿದ ಕಂಪೆನಿಗಳಿಗೆ 300 ದಶಲಕ್ಷ ಡಾಲರ್‌ ನೀಡಲು ಮುಂದಾಗಿದೆ ಎಂದು ಟ್ವೀಟ್‌ ಮಾಡಿದ್ದಾರೆ.

<blockquote class="twitter-tweet blockquote" lang="en"><p>Windows phone 8 in 2014 - Samsung 1.2 bln USD, Sony 0.5 bln, Huawei 0.6 bln, others - 0.3 bln. Thats "support" from MS to develop one (1!)hs</p>— Eldar Murtazin (@eldarmurtazin) <a href="https://twitter.com/eldarmurtazin/statuses/423313559192612864">January 15, 2014</a></blockquote> <script async src="//platform.twitter.com/widgets.js" charset="utf-8"></script>
ಗಾರ್ಟ್‌ನರ್‌ ಮಾಹಿತಿಯಂತೆ ವಿಶ್ವದಲ್ಲಿ ಕಳೆದ ವರ್ಷ‌ ಶೇ.79.0 ಆಂಡ್ರಾಯ್ಡ್ ಸ್ಮಾರ್ಟ್‌‌ಫೋನ್‌ಗಳು ಮಾರಾಟವಾಗಿದ್ದರೆ,ಶೇ.3.3ರಷ್ಟುವಿಂಡೋಸ್‌ ಫೋನ್‌ಗಳು ಮಾತ್ರ ಮಾರಾಟವಾಗಿದ್ದವು.
 ವಿಂಡೋಸ್‌ ಫೋನ್‌ ತಯಾರಿಸಲು ಮೈಕ್ರೋಸಾಫ್ಟ್‌‌ನಿಂದ ಧನ ಸಹಾಯ!

ಮಾರುಕಟ್ಟೆಯಲ್ಲಿ ಸದ್ಯ ಹೆಚ್ಚಾಗಿ ಮೈಕ್ರೋಸಾಫ್ಟ್‌‌ ಮಾಲೀಕತ್ವದ ನೋಕಿಯಾ ಕಂಪೆನಿ ವಿಂಡೋಸ್‌ ಓಎಸ್‌ ಸ್ಮಾರ್ಟ್‌ಫೋನ್‌‌ಗಳನ್ನು ಬಿಡುಗಡೆ ಮಾಡಿಕೊಂಡು ಬಂದಿದೆ.ಆಪಲ್‌,ಬ್ಲ್ಯಾಕ್‌ಬೆರಿ ಹೊರತು ಪಡಿಸಿ ಉಳಿದ ಸ್ಮಾರ್ಟ್‌ಫೋನ್‌ ತಯಾರಕ ಕಂಪೆನಿಗಳು ಹೆಚ್ಚಾಗಿ ಆಂಡ್ರಾಯ್ಡ್‌ ಓಎಸ್‌ ಸ್ಮಾರ್ಟ್‌ಫೋನ್‌‌‌ ಬಿಡುಗಡೆ ಮಾಡುತ್ತಿವೆ.ಹೀಗಾಗಿ ಈ ವರ್ಷ‌ ಮಾರುಕಟ್ಟೆಯಲ್ಲಿ ವಿಂಡೋಸ್‌ ಫೋನ್‌ ಉತ್ಪಾದನೆ ಹೆಚ್ಚಿಸಲು ಮೈಕ್ರೋಸಾಫ್ಟ್‌ ಈ ತಂತ್ರ ಅನುಸರಿಸಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ಮೈಕ್ರೋಸಾಫ್ಟ್ ಆಫೀಸ್‌ ಹೇಗಿದೆ ನೋಡಿದ್ದೀರಾ?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot