'ಮೊಟೊ ಎಂ' ಖರೀದಿಗೆ ಫ್ಲಿಪ್‌ಕಾರ್ಟ್‌ನಲ್ಲಿ ರೂ.15,000 ವರೆಗೆ ಎಕ್ಸ್‌ಚೇಂಜ್‌ ಆಫರ್: ಇಂದಿನಿಂದ ಲಭ್ಯ..!

ಮೊಟೊ ಎಂ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯವಿದ್ದು, ಸ್ಮಾರ್ಟ್‌ಫೋನ್‌ ಖರೀದಿಗೆ 15,000 ರೂ ವರೆಗೆ ಎಕ್ಸ್‌ಚೇಂಜ್‌ ಆಫರ್ ಲಭ್ಯ. ಫೋನ್‌ ಆರಂಭಿಕ ಬೆಲೆ ರೂ.15,999.

By Suneel
|

ಲೆನೊವೋ ಮೊಟೊ ಬ್ರ್ಯಾಂಡ್ ಬುಧವಾರ ಮುಂಬೈನಲ್ಲಿ ಮೊಟೊ ಎಂ ಸ್ಮಾರ್ಟ್‌ಫೋನ್‌ ಅನ್ನು ಲಾಂಚ್‌ ಮಾಡಿತ್ತು. ಗುರುವಾರದಿಂದ ಫ್ಲಿಪ್‌ಕಾರ್ಟ್‌ನಲ್ಲಿ ಮೊಟೊ ಎಂ ಸ್ಮಾರ್ಟ್‌ಫೋನ್‌ ಖರೀದಿಗೆ ಲಭ್ಯವಿದೆ. ಸ್ಮಾರ್ಟ್‌ಫೋನ್ ಎರಡು ರೀತಿಯ RAM/ ಸ್ಟೋರೇಜ್‌ಗಳ ರೂಪಾಂತರಗಳಲ್ಲಿ ಬಿಡುಗಡೆ ಆಗಿದ್ದು, 3GB RAM/32GB ಸ್ಟೋರೇಜ್‌ ಮತ್ತು 4GB RAM/64GB ಸ್ಟೋರೇಜ್‌ನೊಂದಿಗೆ ಬಂದಿದೆ. ಅನುಕ್ರಮವಾಗಿ ಇವುಗಳ ಬೆಲೆ ರೂ. 15,999 ಮತ್ತು ರೂ.17,999 ಇದೆ. ಸ್ಮಾರ್ಟ್‌ಫೋನ್‌ ಖರೀದಿಯಲ್ಲಿ ವಿಶೇಷತೆ ಎಂದರೆ ಫ್ಲಿಪ್‌ಕಾರ್ಟ್ ಕೆಲವು ಲಾಂಚ್‌ ಆಫರ್‌ ಅನ್ನು ಈ ಫೋನ್ ಖರೀದಿಯಲ್ಲಿ ನೀಡುತ್ತಿದೆ.

'ಮೊಟೊ ಎಂ'ಖರೀದಿಗೆ ಫ್ಲಿಪ್‌ಕಾರ್ಟ್‌ನಲ್ಲಿ ರೂ.15,000 ವರೆಗೆ ಎಕ್ಸ್‌ಚೇಂಜ್‌ ಆಫರ್

ಫ್ಲಿಪ್‌ಕಾರ್ಟ್ ಎಕ್ಸ್‌ಚೇಂಜ್‌ ಆಫರ್ ಅನ್ನು ನೀಡುತ್ತಿದ್ದು, 'ಮೊಟೊ ಎಂ' ಖರೀದಿಸುವವರು ತಮ್ಮ ಹಳೆಯ ಫೋನ್‌ ವಿನಿಮಯ ಮಾಡಿಕೊಳ್ಳಬಹುದು. ಡಿಸ್ಕೌಂಟ್ ಗರಿಷ್ವ ರೂ.15,000 ವರೆಗೆ ನೀಡಲಾಗುತ್ತಿದೆ. ಮೊಟೊ ಎಂ ಎಕ್ಸ್‌ಚೇಂಜ್‌ ಡಿಸ್ಕೌಂಟ್ ಬದಲಾಯಿಸುವ ಹಳೆಯ ಫೋನ್‌ ಆಧಾರಿತವಾಗಿರುತ್ತದೆ. ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ ಹೆಚ್ಚುವರಿ ಆಗಿ ರೂ.2,000 ಆಫರ್‌ ನೀಡುತ್ತಿದೆ ಮತ್ತು ನಿರಂತರ ಎಕ್ಸ್‌ಚೇಂಜ್ ಡಿಸ್ಕೌಂಟ್ ಅನ್ನು ನೀಡುತ್ತಿದೆ.

ಮೊಟೋ ಎಂ ಸ್ಮಾರ್ಟ್‌ಫೋನ್‌ ಖರೀದಿಸಲು ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಟ್ ಬಳಸಿದಲ್ಲಿ ಶೇ.5 ರಷ್ಟು ಆಫರ್, ಸಿಟಿ ಬ್ಯಾಂಕ್‌ ಕ್ರೆಡಿಟ್ ಕಾರ್ಟ್‌ ಬಳಸಿದಲ್ಲಿ ರೂ.1,000 ಕ್ಯಾಶ್‌ಬ್ಯಾಕ್‌ ಆಫರ್ ನೀಡಲಾಗುತ್ತಿದೆ. ಫ್ಲಿಪ್‌ಕಾರ್ಟ್ ರೂ.776 ಆರಂಭಿಕ ಇಎಂಐ ಆಫರ್ ಅನ್ನು 64GB ಸ್ಟೋರೇಜ್ ಡಿವೈಸ್ ಖರೀದಿಗೆ ನೀಡುತ್ತಿದೆ. ಫ್ಲಿಪ್‌ಕಾರ್ಟ್ ಮೊಟೊರೊಲಾ ಪಲ್ಸ್ 2 ವೇರಿಡ್ ಹೆಡ್‌ಸೆಟ್ ಮತ್ತು ಚೆವ್‌ರಾನ್ ಶಾಕ್ ಪ್ರೂಫ್‌ ಕೇಸ್‌ ಅನ್ನು ಶೇ.32 ರಷ್ಟು ಡಿಸ್ಕೌಂಟ್‌ನೊಂದಿಗೆ ಮೊಟೊ ಎಂ ಖರೀದಿ ಜೊತೆ ನೀಡುತ್ತಿದೆ.

ಸಂಪೂರ್ಣ ಮೆಟಲ್‌ ಬಾಡಿ

ಸಂಪೂರ್ಣ ಮೆಟಲ್‌ ಬಾಡಿ

ಮೊಟೊ ಎಂ ಡಿವೈಸ್, ಮೊಟೊ ಜಿ4 ಮತ್ತು ಮೊಟೊ ಜಿ4 ಪ್ಲಸ್ ರೀತಿಯಲ್ಲಿ ನೀರು ನಿರೋಧಕವಾಗಿದ್ದು, ಮೆಟಲ್‌ ಯುನಿಬಾಡಿ ವಿನ್ಯಾಸ ಹೊಂದಿದೆ. ಹಿಂದೆ ರೌಂಡೆಡ್ ವಿನ್ಯಾಸ ಮತ್ತು 5.5 ಇಂಚಿನ ಪೂರ್ಣ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ ಹೊಂದಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 ಪ್ರೊಸೆಸರ್ ಮತ್ತು ಬ್ಯಾಟರಿ

ಪ್ರೊಸೆಸರ್ ಮತ್ತು ಬ್ಯಾಟರಿ

ಮೊಟೊ ಎಂ 2.2GHz ಕ್ವಾಡ್ ಕೋರ್ ಮೀಡಿಯಾಟೆಕ್ ಹೀಲಿಯೋ ಪಿ15 ಪ್ರೊಸೆಸರ್ ಮತ್ತು 3050mAh ಬ್ಯಾಟರಿ ಫೀಚರ್ ಹೊಂದಿದೆ. ಪ್ರಮುಖ ವ್ಯತ್ಯಾಸವನ್ನು ಫಿಂಗರ್‌ಪ್ರಿಂಟ್ ಸೆನ್ಸಾರ್ ಫೀಚರ್‌ನಲ್ಲಿ ನೋಡಬಹುದು. ಈ ಮೊಟೊ ಎಂ ಡಿವೈಸ್‌ನಲ್ಲಿ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಅನ್ನು ಹಿಂಭಾಗದಲ್ಲಿ ಸೆಟಪ್‌ ಮಾಡಲಾಗಿದೆ. ಆಂಡ್ರಾಯ್ಡ್ 6.0 ಮಾರ್ಷ್‌ಮಲ್ಲೊ ಓಎಸ್‌ ಚಾಲಿತವಾಗಿದೆ.

ನೀರು ನಿರೋಧಕ ಮತ್ತು ಸ್ಟೋರೇಜ್ ಫೀಚರ್

ನೀರು ನಿರೋಧಕ ಮತ್ತು ಸ್ಟೋರೇಜ್ ಫೀಚರ್

ಮೊಟೊ ಎಂ ಡಿವೈಸ್ ನೀರು ನಿರೋಧಕ ಮೆಟಲ್‌ ಬಾಡಿ ಹೊಂದಿದ್ದು, ಸ್ಮಾರ್ಟ್‌ಫೋನ್ ಎರಡು ರೀತಿಯ RAM/ ಸ್ಟೋರೇಜ್‌ಗಳ ರೂಪಾಂತರಗಳಲ್ಲಿ ಬಿಡುಗಡೆ ಆಗಿದ್ದು, 3GB RAM/32GB ಸ್ಟೋರೇಜ್‌ ಮತ್ತು 4GB RAM/64GB ಸ್ಟೋರೇಜ್‌ನೊಂದಿಗೆ ಬಂದಿದೆ. ಅನುಕ್ರಮವಾಗಿ ಇವುಗಳ ಬೆಲೆ ರೂ. 15,999 ಮತ್ತು ರೂ.17,999 ಇದೆ. 128GB ವರೆಗೆ ಮೈಕ್ರೋ ಎಸ್‌ಡಿ ಕಾರ್ಟ್‌ ಮೂಲಕ ವಿಸ್ತರಣೆ ಮಾಡಬಹುದು.

 ಕ್ಯಾಮೆರಾ

ಕ್ಯಾಮೆರಾ

ಮೊಟೊ ಎಂ ಡಿವೈಸ್ 1 ಮೈಕ್ರೋಮೀಟರ್ ಪಿಕ್ಸೆಲ್‌ ಅಳತೆಯ 16MP ಉನ್ನತ ಮಟ್ಟದ ರೆಶಲ್ಯೂಶನ್‌ ಹಿಂಭಾಗ ಕ್ಯಾಮೆರಾ ಮತ್ತು 8MP ಸೆಲ್ಫಿ ಕ್ಯಾಮೆರಾ ಹೊಂದಿದೆ.

ಸಂಪರ್ಕಗಳು ಮತ್ತು ಇತರೆ

ಸಂಪರ್ಕಗಳು ಮತ್ತು ಇತರೆ

4G ಜೊತೆಗೆ VoLTE, ವೈಫೈ 802.11ac, ಬ್ಲೂಟೂತ್ v4.1, ಜಿಪಿಎಸ್/ ಎ-ಜಿಪಿಎಸ್, USB ಟೈಪ್‌-ಸಿ (ಯುಎಸ್‌ಬಿ 3.1), NFC, and 3.5mm ಸಂಪರ್ಕ ಆಪ್ಶನ್‌ಗಳನ್ನು ಹೊಂದಿದೆ. ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ 20,000 ರೂಗಿಂತ ಕಡಿಮೆ ಬೆಲೆಯಲ್ಲಿ ಲಾಂಚ್‌ ಮಾಡುವ ಸಾಧ್ಯತೆಗಳಿವೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Moto M Goes on Sale on Flipkart With Launch Offers Including Up to Rs. 15,000 Discount on Exchange. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X