ಸೆಲ್ಫೀ ತೆಗೆದುಕೊಳ್ಳುವಾಗ ಬಿಲ್ಡಿಂಗ್ ಮೇಲಿಂದ ಬಿದ್ದ ಹುಡುಗ!

By Gizbot Bureau
|

ಮುಂಬೈ ಪೋಲೀಸರು ಟ್ವೀಟರ್ ನಲ್ಲಿ ಹಾಕಿದ ವೀಡಿಯೋ ಖಂಡಿತ ಎಂತವರನ್ನು ಬೆಚ್ಚಿಬೀಳಿಸುತ್ತೆ. ಹೌದು ಇದು ಸೆಲ್ಫೀ ತೆಗೆದುಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡ ಬಾಲಕನ ವೀಡಿಯೋ.. ಅಬ್ಬಬ್ಬಾ ಹುಚ್ಚಿರಬೇಕು! ಆದರೆ ಇಂತಹ ಹುಚ್ಚು ಖಂಡಿತ ಯಾರಿಗೂ ಒಳ್ಳೆಯದಲ್ಲ!

ಸೆಲ್ಫೀ ತೆಗೆದುಕೊಳ್ಳಲು ಹೋಗಿ ಸಾವು!

ಈ ವೀಡಿಯೋದಲ್ಲಿ ಒಬ್ಬ ಹುಡುಗ ಸೆಲ್ಫೀ ತೆಗೆದುಕೊಳ್ಳುವುದಕ್ಕೆಂದು ಟೆರೇಸ್ ಏರುತ್ತಾನೆ ಮತ್ತು ಟೆರೇಸ್ ನ ತುದಿಯಲ್ಲಿ ನಿಂತು ಸೆಲ್ಫೀ ಕ್ಲಿಕ್ಕಿಸಿಕೊಳ್ಳುವುದಕ್ಕೆ ಮುಂದಾಗುತ್ತಾನೆ. ಆದರೆ ದುರಂತವೆಂದರೆ ಆತನ ಬ್ಯಾಲೆನ್ಸ್ ತಪ್ಪಿ ಕೆಳಗೆ ಬೀಳುತ್ತಾನೆ.

ಜಾಗೃತಿ ಅಭಿಯಾನ:

ಜಾಗೃತಿ ಅಭಿಯಾನ:

ಮುಂಬೈ ಪೋಲೀಸರು ಜಾಗೃತಿ ಅಭಿಯಾನದ ಅಂಗವಾಗಿ ಈ ವೀಡಿಯೋವನ್ನು ತಮ್ಮ ಅಧಿಕೃತ ಮುಂಬೈ ಪೋಲೀಸರ ಟ್ವೀಟರ್ ಅಕೌಂಟಿನಲ್ಲಿ ಹಂಚಿಕೊಂಡಿದ್ದಾರೆ ಮತ್ತು ನಾಗರೀಕರಿಗೆ ಇಂತಹ ಅಜಾಗರೂಕತೆಯ ಕೆಲಸಗಳಿಗೆ ಮುಂದಾಗದಂತೆ ಎಚ್ಚರಿಸಿದ್ದಾರೆ.

ಭಯಾನಕ ಸೆಲ್ಫೀ:

ಭಯಾನಕ ಸೆಲ್ಫೀ:

ಬಹಳ ಭಯಾನಕವಾಗಿರುವ ಸೆಲ್ಫೀ ತೆಗೆದುಕೊಳ್ಳುವುದಕ್ಕೆ ಮುಂದಾಗುತ್ತೀರಾ? ಮತ್ತೊಂದು ಬೇಜವಾಬ್ದಾರಿಯುತ ಕೆಲಸ ನಿಮ್ಮಿಂದಾಗಿಬಿಡಬಹುದು! ಯಾವುದಕ್ಕೂ ಈ ವೀಡಿಯೋವನ್ನೊಮ್ಮೆ ನೋಡಿ ಎಂದು ಮುಂಬೈ ಪೋಲೀಸರು ಹೇಳಿದ್ದಾರೆ.

ಭಾರತದಲ್ಲಿ ಮೃತಪಟ್ಟವರ ಸಂಖ್ಯೆ:

ಭಾರತದಲ್ಲಿ ಮೃತಪಟ್ಟವರ ಸಂಖ್ಯೆ:

ವರದಿಯ ಪ್ರಕಾರ 2011 ರಿಂದ ಇದುವರೆಗೂ ಸುಮಾರು 120 ಮಂದಿ ಸೆಲ್ಫೀ ತೆಗೆದುಕೊಳ್ಳುವುದಕ್ಕೆ ತೆರಳಿ ಭಾರತದಲ್ಲಿ ಮೃತಪಟ್ಟಿದ್ದಾರೆ. ಇದು ವಿಶ್ವದಲ್ಲೇ ಅತೀ ಹೆಚ್ಚಿನ ಸಂಖ್ಯೆಯಾಗಿದೆ. ಇವರುಗಳು ಚಲಿಸುತ್ತಿರುವ ರೈಲು, ಕಾರು ಇತ್ಯಾದಿಗಳ ಬಳಿ ಸೆಲ್ಫೀ ತೆಗೆದುಕೊಳ್ಳಲು ತೆರಳಿರುವುದು ಮತ್ತು ದೊಡ್ಡ ದೊಡ್ಡ ಬಿಲ್ಡಿಂಗ್ ನ ತುದಿಯಲ್ಲಿ ಸೆಲ್ಫೀ ತೆಗೆದುಕೊಳ್ಳಲು ತೆರಳಿ ಮೃತಪಟ್ಟಿರುತ್ತಾರೆ.

ಇತ್ತೀಚೆಗೆ 27 ವರ್ಷದ ವ್ಯಕ್ತಿಯೊಬ್ಬ ಜಮ್ಶೆಡ್ ಪುರ ದಲ್ಲಿ ಗೂಡ್ಸ್ ರೈಲಿನ ಬಳಿ ಸೆಲ್ಫೀ ತೆಗೆದುಕೊಳ್ಳಲು ಹೋಗಿ ಸುಟ್ಟು ಹೋಗಿ ನಂತರ ಮೃತಪಟ್ಟಿರುವ ಘಟನೆ ನಡೆದಿದೆ.

ಆಪ್ ಅಭಿವೃದ್ಧಿ:

ಇದೇ ಕಾರಣಕ್ಕೆ ಕಳೆದ ವರ್ಷ ಸೆಲ್ಫೀ ತೆಗೆದುಕೊಳ್ಳಲು ಹೋಗಿ ಸಾಯುವುದು ಮತ್ತು ಗಾಯಗಳನ್ನು ಮಾಡಿಕೊಳ್ಳುವುದನ್ನು ತಡೆಯುವ ಉದ್ದೇಶದಿಂದ ಇಂಡಿಯನ್ ಇನ್ಸ್ಟಿಟ್ಯೂಷನ್ ಆಫ್ ಟೆಕ್ನಾಲಜಿ ರೂಪರ್ ನವರು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧಾರಿತ ಆಪ್ ವೊಂದನ್ನು ಅಭಿವೃದ್ಧಿ ಪಡಿಸಿದ್ದಾರೆ ಮತ್ತು ಇದು ಬಳಕೆದಾರರ ಮೊಬೈಲ್ ಫೋನಿನ ಸುತ್ತಲಿನ ವಾತಾವರಣವನ್ನು ಅಂದಾಜಿಸಿ ಅಲ್ಲಿ ಆಪತ್ತು ಇದೆಯೇ ಇಲ್ಲವೇ ಎಂಬುದರ ಬಗೆಗಿನ ಅಲರ್ಟ್ ನ್ನು ನೀಡುತ್ತದೆ. ಪ್ರೊಫೆಸರ್ ಡಾ. ಅಭಿನವ್ ದಾಲ್ ಮತ್ತು ಅವರ ವಿದ್ಯಾರ್ಥಿಗಳಾಗಿರುವ ಜಿತೇಂದರ್ ಸಿಂಗ್, ಹರ್ಷವರ್ಧನ್ ದೊಗ್ರಾ ಅವರು ಅಭಿವೃದ್ಧಿ ಪಡಿಸಿರುವ ಈ ಆಪ್ ನ ಹೆಸರು ಗರಡಾ.

ಮುಂಬೈ ಪೋಲೀಸರು ಹಾಕಿರುವ ಈ ವೀಡಿಯೋ ನೋಡಿಯಾದರೂ ಜನರು ಜಾಗೃತವಾದರೆ ಅಷ್ಟೇ ಸಾಕು!

Best Mobiles in India

Read more about:
English summary
Mumbai Police tweets video of boy falling from building while taking selfie

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X