Just In
- 4 hrs ago
ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ, ನೀವು Rank ಪಡೆಯಲು ಈ ಆಪ್ಗಳನ್ನು ಬಳಕೆ ಮಾಡಿ!
- 5 hrs ago
ನಿಮ್ಮ ಉಂಗುರದ ಗಾತ್ರವನ್ನು ಫೋನ್ ಮೂಲಕವೇ ಅಳತೆ ಮಾಡಿ: ಹೇಗೆ ಗೊತ್ತಾ?
- 5 hrs ago
ಫೈರ್-ಬೋಲ್ಟ್ನ ಈ ಸ್ಮಾರ್ಟ್ವಾಚ್ ಖರೀದಿಗೆ ಲಭ್ಯ!..ಇದರ ಲುಕ್ಗೆ ನೀವು ಕ್ಲೀನ್ ಬೋಲ್ಡ್!
- 6 hrs ago
ಸೋನಿ ಸಂಸ್ಥೆಯಿಂದ ಹೊಸ ಮಾದರಿಯ ವಾಕ್ಮ್ಯಾನ್ ಲಾಂಚ್!..ಜಬರ್ದಸ್ತ್ ಫೀಚರ್ಸ್!
Don't Miss
- News
ಆರ್ಥಿಕ ಸಂಕಷ್ಟದ ನಡುವೆಯೇ ಪಾಕಿಸ್ತಾನದಲ್ಲಿ ಮತ್ತೊಂದು ದುರಂತ: ಮಸೀದಿಯಲ್ಲಿ ಆತ್ಮಹುತಿ ದಾಳಿ- 46 ಸಾವು, 150 ಮಂದಿಗೆ ಗಾಯ
- Sports
IND W vs WI W: ಭಾರತದ ಉತ್ತಮ ಆಲ್ರೌಂಡ್ ಪ್ರದರ್ಶನ: ವೆಸ್ಟ್ ಇಂಡೀಸ್ ವಿರುದ್ಧ 8 ವಿಕೆಟ್ಗಳ ಭರ್ಜರಿ ಜಯ
- Lifestyle
ಜನವರಿ 30ಕ್ಕೆ ಶನಿ ಅಸ್ತ: 35 ದಿನದವರೆಗೆ ಈ 6 ರಾಶಿಯವರು ಹೆಚ್ಚು ಜಾಗ್ರತೆವಹಿಸಬೇಕು
- Movies
ವಿಷ್ಣು ಸ್ಮಾರಕಕ್ಕೆ ಕಾರಣರಾದ ಇಬ್ಬರಿಗೆ ಧನ್ಯವಾದ ಅರ್ಪಿಸಿದ ನಟ ದರ್ಶನ್
- Finance
ಫೆಬ್ರವರಿ 1ರಿಂದ ಯಾವೆಲ್ಲ ಹಣಕಾಸು ನಿಯಮ ಬದಲಾವಣೆಯಾಗಲಿದೆ?
- Automobiles
ಭಾರತದಲ್ಲಿ ಅಬ್ಬರಿಸಲು ಬಿಡುಗಡೆಯಾಯ್ತು ಹೀರೋ Xoom 110 ಸ್ಕೂಟರ್: ಬೆಲೆ ರೂ.68,599...!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮೊಬೈಲ್ ಬಳಸುವವರು ಈ 5 ಸುರಕ್ಷತಾ ಕ್ರಮವನ್ನು ಮರೆಯಲೇಬಾರದು!
ದಿನಗಳು ಉರುಳಿದಂತೆ ನಮ್ಮ ದೈನಂದಿನ ಚಟುವಟಿಕೆಗಳು ತಾಂತ್ರಿಕವಾಗುತ್ತಿವೆ. ನಮ್ಮನ್ನ ಸ್ಮಾರ್ಟ್ ಆಗಿಸುತ್ತಿರುವ ತಂತ್ರಜ್ಞಾನ ಕೆಲವು ಸಮಸ್ಯೆಯನ್ನೂ ಕೂಡ ತಂದೊಡ್ಡುತ್ತಿವೆ ಎಂದರೆ ಅತಿಶಯೋಕ್ತಿ ಆಗಲಾರದು. ಹೌದು ನಮ್ಮ ವಯಕ್ತಿಕ ಡಾಟಾಗಳು ಮತ್ತು ಸೂಕ್ಷ್ಮ ಮಾಹಿತಿಗಳು ಸೋರಿಕೆಯಾಗುವ ಭಯ ಸೃಷ್ಟಿಯಾಗಿದೆ.

ಮೊಬೈಲ್ ನಿಂದ ಸೃಷ್ಟಿಯಾಗುವ ಆತಂಕ, ವಯಕ್ತಿಕ ಡಾಟಾ ಮತ್ತು ಹಣವನ್ನು ಮೊಬೈಲ್ ಅಸುರಕ್ಷತೆಯಿಂದಾಗಿ ಕಳೆದುಕೊಳ್ಳುವಿಕೆ ಇತ್ಯಾದಿ ಸಮಸ್ಯೆಗಳಿಗೆ ಬಲಿಯಾಗುವುದನ್ನು ತಡೆಯುವುದು ಹೇಗೆ ಎಂಬ ಬಗ್ಗೆ McAfee ಇಂಡಿಯಾದ ಇಂಜಿನಿಯರಿಂಗ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಜೊತೆಗೆ ಉಪಾಧ್ಯಕ್ಷರೂ ಆಗಿರುವ ವೆಂಕಟ್ ಕೃಷ್ಣಾಪುರ ಅವರು ಕೆಲವು ಪ್ರಮುಖ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನಾವಿಲ್ಲಿ ಅಂತಹ ಕೆಲವು ಅಂಶಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದು ನಿಮ್ಮ ಡಿವೈಸ್ ನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವಿಕೆಯ ಬಗ್ಗೆ ತಿಳಿಸಿಕೊಡುತ್ತಿದ್ದೇವೆ.

ನಿಮಗೆ ತಿಳಿಯದೇ ಇನ್ಸ್ಟಾಲ್ ಆಗುವ ಅಥವಾ ಮಾಡಿಕೊಳ್ಳುವ ಅನುಮಾನಾಸ್ಪದ ಆಪ್ಸ್ ಗಳ ಬಗ್ಗೆ ಜಾಗೃತರಾಗಿರಿ:
ಅಪರಿಚಿತ ಸೈಟ್ ಗಳಿಂದ ಅಥವಾ ಥರ್ಡ್ ಪಾರ್ಟಿ ಸೈಟ್ಸ್ ಗಳಿಂದ ಆಪ್ಸ್ ಗಳನ್ನು ಇನ್ಸ್ಟಾಲ್ ಮಾಡುವುದನ್ನು ಆದಷ್ಟು ಕಡಿಮೆ ಮಾಡುವುದು ಅಥವಾ ನಿಲ್ಲಿಸುವುದಕ್ಕೆ ಬಳಕೆದಾರರಿಗೆ ಸೂಚನೆ ನೀಡಲಾಗುತ್ತದೆ. ಯಾಕೆಂದರೆ ಹೆಚ್ಚಿನ ದುರುದ್ದೇಶಪೂರಿತ ಆಪ್ಸ್ ಗಳು ಬಳಕೆದಾರರನ್ನು ವಿಭಿನ್ನವಾಗಿ ಟಾರ್ಗೆಟ್ ಮಾಡುತ್ತವೆ. ಹಾಗಾಗಿ ಆಪ್ಸ್ ಗಳ ಇನ್ಸ್ಟಾಲೇಷನ್ ನಲ್ಲಿ ಈ ವಿಚಾರವನ್ನು ನೆನಪಿನಲ್ಲಿ ಇಟ್ಟುಕೊಂಡು ಫಾಲೋ ಮಾಡುವುದು ಒಂದು ಸಾಮಾನ್ಯ ನಿಯಮಗಳಲ್ಲಿ ಒಂದೆನಿಸಿದೆ.
ಗೂಗಲ್ ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್ ನಿಂದಲೇ ಬಳಕೆದಾರರು ಆಪ್ಸ್ ಗಳನ್ನು ಇನ್ಸ್ಟಾಲ್ ಮಾಡಿಕೊಳ್ಳುವುದು ಒಳಿತು. ಮಾಲ್ವೇರ್ ಗಳಿಗೆ ಬಲಿಯಾಗದಂತೆ ತಡೆಯುವುದಕ್ಕೆ ಇವು ನಿಮಗೆ ನೆರವು ನೀಡುತ್ತದೆ.
ಸಾಮಾಜಿಕ ಜಾಲತಾಣಗಳಿಂದ ಅಥವಾ ಟೆಕ್ಸ್ಟ್ ಮೆಸೇಜ್ ಗಳಿಂದ ಲಭ್ಯವಾಗುವ ಲಿಂಕ್ ಗಳ ಬಗ್ಗೆ ಜಾಗೃತರಾಗಿರಿ. ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಅವುಗಳನ್ನು ಡೌನ್ ಲೋಡ್ ಮಾಡುವ ಮುನ್ನ ಸ್ವಲ್ಪ ಅಧ್ಯಯನ ಕೈಗೊಳ್ಳಿ. ಯಾವುದೇ ಆಪ್ ನ್ನು ಹೊರಗಡೆಯಿಂದ ಡೌನ್ ಲೋಡ್ ಮಾಡುವುದಕ್ಕೆ ನೀವು ಬಯಸಿದ್ದೇ ಆದಲ್ಲಿ ಅದರ ರೇಟಿಂಗ್ ನ್ನು ಒಮ್ಮೆ ಪರೀಕ್ಷೆ ಮಾಡಿಕೊಳ್ಳಿ. ಆಪ್ ನ ಡೆವಲಪರ್ ವಿವರ, ಡೌನ್ ಲೋಡ್ ಸ್ಟ್ಯಾಟಿಸ್ಟಿಕ್ಸ್, ಆಪ್ ರಿವ್ಯೂಗಳು ಮತ್ತು ವ್ಯಾಕರಣದ ಎರರ್ ಗಳು ಮತ್ತು ವಿವರಣೆಯಲ್ಲಿರುವ ತಪ್ಪುಗಳು ಇವುಗಳ ಬಗ್ಗೆ ಪರೀಕ್ಷೆ ಮಾಡಿಕೊಳ್ಳಿ. ಫೇಕ್ ಆಪ್ ಗಳಲ್ಲಿ ಸಾಮಾನ್ಯವಾಗಿ ತಪ್ಪುಗಳಿರುತ್ತವೆ.

ಹೆಚ್ಚು ಜಾಗೃತರಾಗಿ PIN ಕೋಡ್ ಅಥವಾ ಪಾಸ್ ವರ್ಡ್ ಗಳನ್ನು ಬಳಕೆ ಮಾಡಿ:
ಸಾಮಾನ್ಯ ಪಾಸ್ ವರ್ಡ್ ಗಳಾಗಿರುವ 1234,12345, ಪಾಸ್ ವರ್ಡ್ 1 ಇತ್ಯಾದಿಗಳನ್ನು ಇಟ್ಟುಕೊಳ್ಳಬೇಡಿ. ಕೆಲವು ತಿಂಗಳ ಮುಂಚೆ ಸ್ಪ್ಯಾಶ್ ಡಾಟಾ ಇಂತಹ ಪಾಸ್ ವರ್ಡ್ ಗಳ ವಿಚಿತ್ರ ವರದಿಯೊಂದನ್ನು ಮಾಡಿತ್ತು.ಒಂದೇ ರೀತಿಯ ಪಾಸ್ ವರ್ಡ್ ಗಳನ್ನು ಇಟ್ಟುಕೊಂಡಿರುವ ಹಲವು ಬಳಕೆದಾರರ ಬಗ್ಗೆ ಕೂಡ ವಿವರಣೆ ನೀಡಲಾಗಿತ್ತು. ಪಾಸ್ ವರ್ಡ್ ವಿಚಾರದಲ್ಲಿ ನಿಮ್ಮ ನಿಶ್ಕಾಳಜಿಯು ದೊಡ್ಡ ದೊಡ್ಡ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆ ಇರುತ್ತದೆ. ಹ್ಯಾಕರ್ ಗಳಿಗೆ ಒಂದೇ ರೀತಿಯ ಪಾಸ್ ವರ್ಡ್ ಗಳನ್ನು ಹುಡುಕಾಟ ನಡೆಸಿ ಅವರಿಗೆ ಬೇಕಾದ ಮಾಹಿತಿಯನ್ನು ಕಲೆ ಹಾಕಿಕೊಳ್ಳುವುದು ಬಹಳ ಸುಲಭದ ಕೆಲಸವಾಗಿದೆ.
ಒಂದೇ ರೀತಿಯ ಪಾಸ್ ವರ್ಡ್ ಗಳನ್ನು ಇತ್ತೀಚೆಗೆ ಡೌನ್ ಲೋಡ್ ಮಾಡಿರುವ ಆಪ್ ಗಳಲ್ಲಿ ಬಳಕೆ ಮಾಡಬೇಡಿ. ಹೀಗೆ ಪಾಸ್ ವರ್ಡ್ ಗಳನ್ನು ಸುಲಭವಾಗಿ ಊಹಿಸುವಂತೆ ಇಟ್ಟುಕೊಳ್ಳುವುದರಿಂದ ಕಳ್ಳರಿಗೆ ನಿಮ್ಮ ಮನೆಯ ಬಾಗಿಲನ್ನು ಕದಿಯುವುದಕ್ಕೆ ನೀವೇ ತೆರೆದು ಕೊಟ್ಟಂತೆ ಎಂಬುದನ್ನು ಮರೆಯಬೇಡಿ. ಯಾವತ್ತೂ ಕೂಡ ಟು-ಫ್ಯಾಕ್ಟರ್ ಅಥೆಂಟಿಕೇಷನ್ ನ್ನು ಆಯ್ಕೆ ಮಾಡಿ. ಹೆಚ್ಚಿನವರು ಇದನ್ನು ನಿರ್ಲಕ್ಷಿಸುತ್ತಾರೆ.

ಫೋನ್ ನ್ನು ಯಾವಾಗಲೂ ನವೀಕರಿಸಿ ಮತ್ತು ಎನ್ಕ್ರಿಪ್ಶನ್ ನಿಂದ ರಕ್ಷಣೆ ಮಾಡಿಕೊಳ್ಳಿ:
ಬಳಕೆದಾರರು ಯಾವಾಗಲೂ ಕೂಡ ತಮ್ಮ ಫೋನ್ ನ್ನು ಅಪ್ ಟು ಡೇಟ್ ಇಟ್ಟುಕೊಳ್ಳಬೇಡಿ. ಆಗಾಗ ಬರುವ ಅಪ್ ಡೇಟ್ ಗಳನ್ನು ಮಾಡಿಕೊಳ್ಳುತ್ತಿರಬೇಕು. ಗೂಗಲ್ ಮತ್ತು ಆಪಲ್ ಸಂಸ್ಥೆಗಳು ಬಿಡುಗಡೆಗೊಳಿಸುವ ಅಪ್ ಡೇಟ್ ಗಳನ್ನು ತತ್ ಕ್ಷಣವೇ ಮಾಡಿಕೊಳ್ಳಿ. ಹೆಚ್ಚಿನ ಭದ್ರತಾ ಸಮಸ್ಯೆಗಳಿಗೆ ಇದು ಪರಿಹಾರ ನೀಡುತ್ತದೆ. ನಿಮ್ಮ ಫೋನ್ ನಿಂದ ಮಹತ್ವದ ಮಾಹಿತಿ ಸೋರಿಕೆಯಾಗುವುದನ್ನು ನಿಮ್ಮ ಅಪ್ ಡೇಟ್ ಪ್ರಕ್ರಿಯೆಯಿಂದ ತಡೆಯುವುದಕ್ಕೆ ಸಾಧ್ಯವಾಗುತ್ತದೆ.
ಓಎಸ್ ಅಪ್ ಡೇಟ್ ವಿಚಾರದಲ್ಲಿ ಹಲವು ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳು ಸಮಯಕ್ಕೆ ಸರಿಯಾಗಿ ಅಪ್ ಡೇಟ್ ನೀಡುವುದಕ್ಕೆ ವಿಫಲವಾಗುತ್ತಿವೆ. ಮಾಸಿಕ ಸೆಕ್ಯುರಿಟಿ ಪ್ಯಾಚ್ ಗಳನ್ನು ಮಾಡಲಾಗುತ್ತಿದೆ. ಆದರೆ ಹೆಚ್ಚಿನ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ ಸಮಯಕ್ಕೆ ಸರಿಯಾಗಿ ಅಪ್ ಡೇಟ್ ಸಿಗುತ್ತದೆ.
ಹೆಚ್ಚುವರಿಯಾಗಿ ನಿಮ್ಮ ಡಾಟಾವನ್ನು ಎನ್ಕ್ರಿಪ್ಟ್ ಮಾಡುವುದನ್ನು ಮರೆಯಬೇಡಿ. ಆ ಮೂಲಕ ಹ್ಯಾಕರ್ ಗಳು ಸುಲಭದಲ್ಲಿ ನಿಮ್ಮ ಡಾಟಾವನ್ನು ಕದಿಯುವುದನ್ನು ತಪ್ಪಿಸುವುದಕ್ಕೆ ಸಾಧ್ಯವಾಗುತ್ತದೆ. ಕೋಡ್ ಗೊತ್ತಿದ್ದರೆ ಮಾತ್ರವೇ ಹ್ಯಾಕರ್ ಗಳಿಗೆ ನಿಮ್ಮ ಡಾಟಾವನ್ನು ಕನ್ವರ್ಟ್ ಮಾಡುವುದಕ್ಕೆ ಸಾಧ್ಯವಾಗುತ್ತದೆ.
ಆ ಕೋಡ್ ನೀವೇ ಜನರೇಟ್ ಮಾಡಿರುವಂತ ಸೌಲಭ್ಯವು ಎನ್ಕ್ರಿಪ್ಶನ್ ನಲ್ಲಿ ಲಭ್ಯವಾಗುವುದರಿಂದ ನಿಮ್ಮ ಡಾಟಾ ಸುರಕ್ಷಿತವಾಗಿರುವುದು ಖಾತ್ರಿ. ಒಂದು ವೇಳೆ ಡಾಟಾ ಕದಿಯಲಾಗಿದೆ ಎಂಬುದು ನಿಮಗೆ ಪತ್ತೆಯಾದರೆ ನೀವು ಫೋನಿನಿಂದ ಅವುಗಳನ್ನು ಡಿಲೀಟ್ ಮಾಡುವುದಕ್ಕೂ ಕೂಡ ಅವಕಾಶವಿರುತ್ತದೆ.ಕಾಂಪ್ರಹೆನ್ಸೀವ್ ಮೊಬೈಲ್ ಸೆಕ್ಯುರಿಟಿ ಸಾಫ್ಟ್ ವೇರ್ ಗಳನ್ನು ಇನ್ಸ್ಟಾಲ್ ಮಾಡಿಕೊಳ್ಳುವುದು ಒಳಿತು.
ಆದರೆ ಹೀಗೆ ಇನ್ಸ್ಟಾಲ್ ಮಾಡುವಾಗ ನಂಬಿಕಸ್ಥ ಪ್ರೊವೈಡರ್ ನ್ನು ಮಾತ್ರ ಉಪಯೋಗಿಸಿ. ನೂತನ ಸ್ಕ್ಯಾಮ್ ಮತ್ತು ವಾರ್ನಿಂಗ್ ಸೈನ್ ಗಳ ಬಗ್ಗೆ ಯಾವಾಗಲೂ ತಿಳಿದುಕೊಳ್ಳುತ್ತಿರಬೇಕು

ಫೋನ್ ಅಪ್ಲಿಕೇಷನ್ ಗಳು ಹೊಂದಿರುವ “ಅನುಮತಿಗಳು”ಮತ್ತು “ಪ್ರವೇಶ”ಗಳ ಬಗ್ಗೆ ಪರಿಶೀಲಿಸಿ:
ನೀವು ಇನ್ಸ್ಟಾಲ್ ಮಾಡುವ ಆಪ್ ಗಳು ಯಾವೆಲ್ಲ ಪರ್ಮಿಷನ್ ಅಥವಾ ಅನುಮತಿಗಳನ್ನು ಕೇಳುತ್ತಿವೆ ಎಂಬುದರ ಬಗ್ಗೆ ಯಾವಾಗಲೂ ಕೂಡ ಕೇರ್ ಫುಲ್ ಆಗಿರಿ. ನೀವು ಅನುಮತಿಸದೇ ಇದ್ದಲ್ಲಿ ಅವು ಕಾರ್ಯ ನಿರ್ವಹಿಸುವುದಿಲ್ಲ ಕಾಂಟ್ಯಾಕ್ಟ್ಸ್, ಕ್ಯಾಮರಾ, ಲೊಕೇಷನ್, ಗ್ಯಾಲರಿ, ಸೆನ್ಸರ್ ಮತ್ತು ಇತ್ಯಾದಿಗಳಿಗೆ ಹೆಚ್ಚಿನ ಆಪ್ಸ್ ಗಳು ಅನುಮತಿಯನ್ನು ಬೇಡುತ್ತವೆ. ಆಪ್ ಗೆ ಕೆಲಸ ಮಾಡಲು ನಿಜಕ್ಕೂ ಇವುಗಳ ಅನುಮತಿಯ ಅಗತ್ಯವಿದೆಯೇ ಎಂಬುದನ್ನು ಸರಿಯಾಗಿ ಪರೀಕ್ಷೆ ಮಾಡಿ. ನೀವು ಅನಗತ್ಯವಾಗಿ ಎಲ್ಲದಕ್ಕೂ ಅನುಮತಿ ನೀಡಿದರೆ ಹ್ಯಾಕರ್ ಗಳು ಸುಲಭವಾಗಿ ನಿಮ್ಮ ಫೋನ್ ನ್ನು ಪ್ರವೇಶಿಸುವ ಸಾಧ್ಯತೆ ಇರುತ್ತದೆ. ತಮ್ಮದೇ ಸ್ವಂತ ಮಾಲ್ವೇರ್ ಮೂಲಕ ಆಪ್ಸ್ ಗಳನ್ನು ಡೌನ್ ಲೋಡ್ ಮಾಡಿ ನಿಮ್ಮ ಲಾಗಿನ್ ಕ್ರಿಡೆನ್ಶಿಯಲ್ಸ್ ಬಳಸಿ ದುರುದ್ದೇಶಪೂರಿತ ಕೆಲಸಕ್ಕೆ ಬಳಸಿಕೊಳ್ಳುವ ಸಾಧ್ಯತೆ ಇದೆ.

ಸಾರ್ವಜನಿಕ ವೈ-ಫೈ ನೆಟ್ ವರ್ಕ್ ಗಳು ಸುರಕ್ಷಿತವೆಂದು ನಿಮಗನ್ನಿಸುತ್ತವೆಯೇ?
ಸಾರ್ವಜನಿಕ ವೈಫೈ ಬಳಕೆ ಮಾಡುವುದು ಸುರಕ್ಷಿತವಲ್ಲ. ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು ಎಂಬ ಬೋರ್ಡ್ ಕೆಲವು ಸಾರ್ವಜನಿಕ ಸ್ಥಳಗಳಲ್ಲಿ ನೇತು ಹಾಕಿರುತ್ತಾರಲ್ಲ ಹಾಗೆಯೇ ಇದೂ ಕೂಡ. ಸೈಬರ್ ಕ್ರಿಮಿನಲ್ ಗಳು ನಿಮ್ಮ ಯಾವುದೇ ಅನ್-ಎನ್ಕ್ರಿಪ್ಟ್ ಆಗಿರುವ ಡಾಟಾವನ್ನು ಸಾರ್ವಜನಿಕ ವೈಫೈಯನ್ನು ನೀವು ಬಳಕೆ ಮಾಡಿದಾಗ ಕದಿಯುವ ಸಾಧ್ಯತೆ ಇರುತ್ತದೆ. ನಿಮ್ಮ ಡಾಟಾ, ಇಮೇಲ್, ಫೋನ್ ನಂಬರ್, ಕ್ರೆಡಿಟ್ ಕಾರ್ಡ್ ಮತ್ತು ಇತರೆ ವಿವರಗಳಿಗೆ ಹ್ಯಾಕರ್ ಗಳು ಪ್ರವೇಶಿಸುವ ಸಾಧ್ಯತೆ ಸಾರ್ವಜನಿಕ ವೈಫೈ ಗಳಲ್ಲಿ ಅಧಿಕವಾಗಿರುತ್ತದೆ.
ಯಾವುದೇ ಸೆನ್ಸಿಟೀವ್ ಡಾಟಾವನ್ನು ಮತ್ತು ಆನ್ ಲೈನ್ ಟ್ರಾನ್ಸ್ಯಾಕ್ಷನ್ ನ್ನು ಸಾರ್ವಜನಿಕ ವೈಫೈ ನೆಟ್ ವರ್ಕ್ ಬಳಸಿ ಮಾಡಬೇಡಿ. ವರ್ಚುವಲ್ ಪ್ರೈವೇಟ್ ನೆಟ್ ವರ್ಕ್ ನ್ನು ಈ ಉದ್ದೇಶಕ್ಕೆ ಬಳಸುವುದು ಒಳ್ಳೆಯದು. ಆ ಮೂಲಕ ನಿಮ್ಮ ಡಾಟಾ ಸುರಕ್ಷಿತವಾಗಿರಲು ಸಾಧ್ಯವಾಗುತ್ತದೆ. 2019 ರಲ್ಲಿ McAfee ಕೂಡ ಈ ಮಾಹಿತಿಯನ್ನು ಹೊರಹಾಕಿದ್ದು ಬ್ಯಾಂಕಿಂಗ್ ಫ್ರಾಡ್ ಗಳು, ಜಾಹೀರಾತು ಟ್ರೋಜನ್ಸ್ ಗಳು ಮತ್ತು, ಆಡ್ ಕ್ಲಿಕ್ ಫ್ರಾಡ್ ಗಳು, ಬಿಲ್ಲಿಂಗ್ ಫ್ರಾಡ್ ಗಳು ಇತ್ಯಾದಿಗಳು ಸಾರ್ವಜನಿಕ ವೈಫೈ ನಿಂದ ಅಧಿಕವಾಗಿದೆ ಎಂದು ತಿಳಿಸಿತ್ತು.
ಹಾಗಾಗಿ ಅಂತರ್ಜಾಲ ಸೇವೆಯನ್ನು ಬಳಸುವ ಮುನ್ನ ಈ ಮೇಲಿನ ಎಲ್ಲಾ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡಿರುವುದು ನಿಮ್ಮ ಹಿತದೃಷ್ಟಿಯಿಂದ ಒಳ್ಳೆಯದು.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470