Subscribe to Gizbot

ಫೆಬ್ರವರಿ 25ಕ್ಕೆ ಆಂಡ್ರಾಯ್ಡ್ ಪ್ರಪಂಚ ನಡುಗಿಸಲಿದೆ 2000 ಬೆಲೆಯ ನೋಕಿಯಾ ಸ್ಮಾರ್ಟ್‌ಫೋನ್!!

Written By:

ಆಂಡ್ರಾಯ್ಡ್ ಮಾರುಕಟ್ಟೆಯಲ್ಲಿ ಪುಟಿದೇಳುತ್ತಿರುವ ನೋಕಿಯಾ ಕಂಪೆನಿ ಮತ್ತೆರಡು ಸ್ಮಾರ್ಟ್‌ಪೋನ್‌ಗಳನ್ನು ಶೀಘ್ರದಲ್ಲಿಯೇ ಮಾರುಕಟ್ಟೆಗೆ ತರಲು ಮುಂದಾಗಿದೆ. ಇದೇ ತಿಂಗಳು 25 ನೇ ತಾರೀಖು ನೋಕಿಯಾ 7 ಪ್ಲಸ್ ಮತ್ತು ನೋಕಿಯಾ 1 ಸ್ಮಾರ್ಟ್‌ಪೋನ್‌ಗಳೆರಡು ಮಾರುಕಟ್ಟೆಗೆ ಬಿಡುಗಡೆಯಾಗುತ್ತಿವೆ ಎಂದು ಮಾಧ್ಯಮಗಳು ಖಚಿತಪಡಿಸಿವೆ.!!

ನೋಕಿಯಾ 1 ಆಂಡ್ರಾಯ್ಡ್ ಗೊ ಆವೃತ್ತಿಯಲ್ಲಿ ಮಾರುಕಟ್ಟೆಗೆ ಕಾಲಿಡುತ್ತಿದ್ದು, ಕೇವಲ 2000 ರೂಪಾಯಿಗಳಗೆ ಮಾರಾಟಕ್ಕೆ ಇಡಲಾಗುತ್ತದೆ ಎನ್ನುವ ಸುದ್ದಿ ಈಗಾಗಲೇ ವೈರೆಲ್ ಆಗಿದೆ. ಇದರ ಜತೆಗೆ ಮತ್ತೊಂದು ಹೈ ಎಂಡ್ ಸ್ಮಾರ್ಟ್‌ಪೋನ್ ಡ್ಯುಯಲ್ ಕ್ಯಾಮೆರಾ ಹಾಗೂ ಆಂಡ್ರಾಯ್ಡ್ ಒನ್ ಮೂಲಕ ಮಾರುಕಟ್ಟೆಗೆ ದಾಳಿಮಾಡುತ್ತಿದೆ.!!

 ಆಂಡ್ರಾಯ್ಡ್ ಪ್ರಪಂಚ ನಡುಗಿಸಲಿದೆ 2000 ಬೆಲೆಯ ನೋಕಿಯಾ ಸ್ಮಾರ್ಟ್‌ಫೋನ್!!

ಈಗಾಗಲೇ ಆನ್‌ಲೈನಿನಲ್ಲಿ ನೋಕಿಯಾ 7 ಪ್ಲಸ್ ಮತ್ತು ನೋಕಿಯಾ 1 ಸ್ಮಾರ್ಟ್‌ಪೋನ್‌ಗಳ ಚಿತ್ರಗಳು ಸಹ ಲೀಕ್ ಆಗಿದ್ದು, ಎರಡೂ ಪೋನ್‌ಗಳ ವಿಶೇಷತೆ ವೈರೆಲ್ ಆಗಿದೆ.! ಹಾಗಾದರೆ, ನೋಕಿಯಾ 7 ಪ್ಲಸ್ ಮತ್ತು ನೋಕಿಯಾ 1 ಸ್ಮಾರ್ಟ್‌ಪೋನ್‌ಗಳ ಫೀಚರ್ಸ್ ಏನೇನಿವೆ? ಸ್ಮಾರ್ಟ್‌ಫೋನ್ ವಿಶೇಷತೆಗಳೇನು? ಎಂಬುದನ್ನು ಮುಂದೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೋಕಿಯಾ 7 ಪ್ಲಸ್: ಡಿಸ್‌ಪ್ಲೇ ಮತ್ತು ವಿನ್ಯಾಸ?

ನೋಕಿಯಾ 7 ಪ್ಲಸ್: ಡಿಸ್‌ಪ್ಲೇ ಮತ್ತು ವಿನ್ಯಾಸ?

ನೋಕಿಯಾ 7 ಸ್ಮಾರ್ಟ್‌ಫೋನ್ 18:9 ಅನುಪಾತದ 6 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಡ್ಯುಯಲ್ ಕ್ಯಾಮೆರಾ ಹಾಗೂ ಹಿಂಬಾಗದಲ್ಲಿ ಫಿಂಗರ್‌ಪ್ರಿಂಟರ್ ಅನ್ನು ಹೊಂದಿರುವ ಸ್ಮಾರ್ಟ್‌ಫೋನ್ ಸಣ್ಣ ಬೆಜೆಲ್‌ಗಳನ್ನು ಹೊಂದಿದೆ. ಚಿತ್ರಗಳಲ್ಲಿ ಕಾಣುವಂತೆ ಸ್ಮಾರ್ಟ್‌ಪೋನ್ ಹೈ ಎಂಡ್ ವಿನ್ಯಾಸವನ್ನು ಹೊಂದಿದೆ ಎನ್ನಬಹುದು.!!

ನೋಕಿಯಾ 7 ಪ್ಲಸ್: RAM ಮತ್ತು ಪ್ರೊಸೆಸರ್?

ನೋಕಿಯಾ 7 ಪ್ಲಸ್: RAM ಮತ್ತು ಪ್ರೊಸೆಸರ್?

ಸ್ನ್ಯಾಪ್‌ಡ್ರಾಗನ್ 660 ಆಕ್ಟಕೋರ್ ಪ್ರೊಸೆಸರ್ ಹಾಗೂ 4/6GB RAM ನೊಂದಿಗೆ ನೋಕಿಯಾ 7 ಪ್ಲಸ್ ಮಾರುಕಟ್ಟೆಗೆ ಕಾಲಿಡುತ್ತಿದೆ. 64GB ಆಂತರಿಕ ಮೆಮೊರಿಯನ್ನು ಹೊಂದಿರುವ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ಓರಿಯೋ (ಆಂಡ್ರಾಯ್ಡ್ 8.0)ಮೂಲಕ ಕಾರ್ಯನಿರ್ವಹಣೆ ನೀಡಲಿದೆ ಎಂದು ಹೇಳಲಾಗಿದೆ.!!

ನೋಕಿಯಾ 7 ಪ್ಲಸ್: ಡ್ಯುಯಲ್ ಕ್ಯಾಮೆರಾ!!

ನೋಕಿಯಾ 7 ಪ್ಲಸ್: ಡ್ಯುಯಲ್ ಕ್ಯಾಮೆರಾ!!

ನೋಕಿಯಾ 7 ಪ್ಲಸ್ ಸ್ಮಾರ್ಟ್‌ಫೋನ್ 12 ಎಂಪಿ + 13 ಎಂಪಿ ಡ್ಯುಯಲ್ ರಿಯರ್ ಕ್ಯಾಮೆರಾ ಹಾಗೂ 16MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ ಎನ್ನಲಾಗಿದೆ. ಜತೆಗೆ ಫೇಸ್‌ ಡಿಟೆಕ್ಶನ್ ಆಟೋಫೋಕಸ್, 2 ಎಕ್ಸ್ ಆಪ್ಟಿಕಲ್ ಝೂಮ್, ಕಾರ್ಲ್ ಝೈಸ್ ಆಪ್ಟಿಕ್ಸ್, ಡ್ಯೂಯಲ್ ಎಲ್ಇಡಿ ಡ್ಯೂಯಲ್ ಟೋನ್ ಫ್ಲಾಶ್ ಎಲ್ಲವೂ ಲಭ್ಯವಿವೆಯಂತೆ.!!

ನೋಕಿಯಾ 7 ಪ್ಲಸ್: ಬ್ಯಾಟರಿ?

ನೋಕಿಯಾ 7 ಪ್ಲಸ್: ಬ್ಯಾಟರಿ?

ನೋಕಿಯಾ 7 ಪ್ಲಸ್ ಸ್ಮಾರ್ಟ್‌ಫೋನ್ ಬ್ಯಾಟರಿ ಬಗ್ಗೆ ರೂಮರ್ಸ್ ಕ್ರಿಯೇಟ್ ಮಾಡಿರುವ ಹೆಚ್‌ಎಮ್‌ಡಿ ಈ ವರೆಗೆ ಒಂದು ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಆದರೆ ವಿಶ್ವಾಸಾರ್ಹ ಕೆಲವು ಮಾಧ್ಯಮಗಳ ಪ್ರಕಾರ, ನೋಕಿಯಾ 7 ಪ್ಲಸ್ ಫೋನ್ 3,350mAh ನಾನ್ ರಿಮುವೆಬೆಲ್ ಬ್ಯಾಟರಿಯನ್ನು ಹೊಂದಿದೆ ಎಂದು ಹೇಳಲಾಗಿದೆ.!

ನೋಕಿಯಾ 7 ಪ್ಲಸ್: ಇತರೆ ಏನಲ್ಲಾ ಫೀಚರ್ಸ್?

ನೋಕಿಯಾ 7 ಪ್ಲಸ್: ಇತರೆ ಏನಲ್ಲಾ ಫೀಚರ್ಸ್?

18W, 9V/2A ಫಾಸ್ಟ್ ಚಾರ್ಜಿಂಗ್, ಫೋಟೊ/ವಿಡಿಯೋ ಎಡಿಟರ್, ಯುಎಸ್‌ಬಿ ಆನ್‌ ದ ಗೊ, 3.5mm ಆಡಿಯೋಜಾಕ್, ಆಡ್ರಿನೊ 512 ಜಿಪಿಯು ಹಾಗೂ ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್ ಅನ್ನು ಸ್ಮಾರ್ಟ್‌ಫೋನ್ ಹೊಂದಿರಲಿದೆ.! ಬಹುತೇಕ ಹೈ ಎಂಡ್ ಫೀಚರ್ಸ್ ಹೊಂದಿರುವ ಈ ಫೋನ್ ಬೆಲೆಯೂ ಹೆಚ್ಚಾಗಿರಲಿದೆ ಎನ್ನಬಹುದು.!!

ನೋಕಿಯಾ 1 ಸ್ಮಾರ್ಟ್‌ಫೋನ್! (ಆಂಡ್ರಾಯ್ಡ್ ಗೊ)

ನೋಕಿಯಾ 1 ಸ್ಮಾರ್ಟ್‌ಫೋನ್! (ಆಂಡ್ರಾಯ್ಡ್ ಗೊ)

ಈಗಾಗಲೇ ಮಾರುಕಟ್ಟೆಯಲ್ಲಿ ಹವಾ ಎಬ್ಬಿಸಿರುವ ನೋಕಿಯಾ 1 ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ಗೋ ಆವೃತ್ತಿಯಲ್ಲಿ ಮಾರುಕಟ್ಟೆಗೆ ಕಾಲಿಡುತ್ತಿದೆ. ಅತ್ಯಂತ ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್ ಅನ್ನು ಜನರಿಗೆ ನೀಡಬೇಕು ಎನ್ನುವ ನಿಟ್ಟಿನಲ್ಲಿ ನೋಕಿಯಾ 1 ಸ್ಮಾರ್ಟ್‌ಫೋನ್ ಕೇವಲ 2000 ಕ್ಕೆ ಬಿಡುಗಡೆಯಾಗಲಿದೆಯಂತೆ.!!

ನೋಕಿಯಾ 1: ಡಿಸ್‌ಪ್ಲೇ ಮತ್ತು ವಿನ್ಯಾಸ?

ನೋಕಿಯಾ 1: ಡಿಸ್‌ಪ್ಲೇ ಮತ್ತು ವಿನ್ಯಾಸ?

ಬಿಡುಗಡೆಯಾಗಲಿದೆ ಎನ್ನುವ ನೋಕಿಯಾ 1 ಫೋನ್ 4.5 ಇಂಚ್ ಡಿಸ್‌ಪ್ಲೇ ಹೊಂದಿರಲಿದೆ. ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಇದಾಗಿರುವುದರಿಂದ ವಿನ್ಯಾಸ ಕೂಡ ಸಾಮಾನ್ಯ ಸ್ಮಾರ್ಟ್‌ಫೋನುಗಳಂತೆಯೇ ಇದೆ ಎನ್ನಬಹುದು.!

ನೋಕಿಯಾ 1: RAM ಮತ್ತು ಪ್ರೊಸೆಸರ್?

ನೋಕಿಯಾ 1: RAM ಮತ್ತು ಪ್ರೊಸೆಸರ್?

ನೋಕಿಯಾ 1 ಸ್ಮಾರ್ಟ್‌ಫೋನ್ 1GB RAM ಹಾಗೂ 16GB ಮೆಮೊರಿ ವೆರಿಯಂಟ್‌ನಲ್ಲಿ ಮಾರುಕಟ್ಟೆಗೆ ಕಾಲಿಡುತ್ತಿದೆ. ಆಂಡ್ರಾಯ್ಡ್ ಗೊ ಆವೃತ್ತಿಯಲ್ಲಿ ಕಾರ್ಯನಿರ್ವಹಣೆ ನೀಡುವ ಈ ಸ್ಮಾರ್ಟ್‌ಫೋನ್ ಹೊಂದಿರಬಹುದಾದ ಪ್ರೊಸೆಸರ್ ಮಾಹಿತಿ ಸಿಕ್ಕಿಲ್ಲ.!!

ನೋಕಿಯಾ 1 ಇತರೆ ಫೀಚರ್ಸ್?

ನೋಕಿಯಾ 1 ಇತರೆ ಫೀಚರ್ಸ್?

3000mAh ಬ್ಯಾಟರಿ, 5MP ಮತ್ತು 2MP ಕ್ಯಾಮೆರಾ, ವೈ-ಫೈ ಹಾಗೂ ಡ್ಯಯಲ್ ಸಿಮ್ ಆಯ್ಕೆಯನ್ನು ಸ್ಮಾರ್ಟ್‌ಫೋನಿನಲ್ಲಿ ನೀಡಲಾಗಿದೆ. ಅತ್ಯಂತ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಕಾಲಿಟ್ಟು ಗೂಗಲ್‌ನ ಆಸೆಯಂತೆ ಆಮಡ್ರಾಯ್ಡ್ ಗೊ ಮೂಲಕ ಜನರಿಗೆ ಉತ್ತಮ ಆಂಡ್ರಾಯ್ಡ್ ಅನುಭವ ನೀಡಲು ನೋಕಿಯಾ 1 ಸಿದ್ದವಾಗಿದೆ.!!

ಓದಿರಿ:ಶಾಕಿಂಗ್ ನ್ಯೂಸ್!!..ವಿಶ್ವಕ್ಕೆ ತಿಳಿಯದಂತೆ ಭಾರತದಲ್ಲಿಯೇ ತಯಾರಾಗಿದೆ 'ರೆಡ್ ಮಿ ನೋಟ್ 5'!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
HMD Global is all set to unveil its smartphones for 2018 on February 25. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot