ಟಾಪ್‌ಎಂಡ್‌ ಫೋನ್‌ಗಳಿಗೆ ನಡುಕ: ನೋಕಿಯಾ 8 ಬೆಲೆ ಲೀಕ್ ಆಯ್ತು! ಬಿಡುಗಡೆ ಎಂದು?

ನೋಕಿಯಾ 8 ಬೆಲೆ ಕುರಿತು ಅಧಿಕೃತ ಮಾಹಿತಿಯೂ ಲೀಕ್ ಆಗಿದ್ದು, ಶೀಘ್ರವೇ ಈ ಫೋನ್ ಲಾಂಚ್ ಮಾಡಲು ನೋಕಿಯಾ ತಯಾರಿ ನಡೆಸಿದೆ.

|

ತೀವ್ರ ಕುತೂಹಲವನ್ನು ಕೆರಳಿಸಿರುವ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಗಳಲ್ಲಿ ಟಾಪ್ ಎಂಡ್ ಫೋನ್ ಎಂದು ಗುರುತಿಸಿಕೊಂಡಿರುವ ನೋಕಿಯಾ 8 ಬೆಲೆ ಕುರಿತು ಅಧಿಕೃತ ಮಾಹಿತಿಯೂ ಲೀಕ್ ಆಗಿದ್ದು, ಶೀಘ್ರವೇ ಈ ಫೋನ್ ಲಾಂಚ್ ಮಾಡಲು ನೋಕಿಯಾ ತಯಾರಿ ನಡೆಸಿದೆ.

ಟಾಪ್‌ಎಂಡ್‌ ಫೋನ್‌ಗಳಿಗೆ ನಡುಕ: ನೋಕಿಯಾ 8 ಬೆಲೆ ಲೀಕ್ ಆಯ್ತು! ಬಿಡುಗಡೆ ಎಂದು?

ಓದಿರಿ: ಉಚಿತ ಜಿಯೋ ಫೋನ್ ಕೊಳ್ಳುವುದು ಹೇಗೆ? ಜಿಯೋ ಹೇಳಿಕೊಟ್ಟ ಸರಳ ವಿಧಾನ ಇಲ್ಲಿದೆ..!!

ನೋಕಿಯಾ 8 ಕುರಿತು ಮಾಹಿತಿ ನೀಡಿರುವ GSM ಆರಿನಾ ವೆಬ್‌ಸೈಟ್, ನೋಕಿಯಾ 8 ಬೆಲೆಯೂ 600-700 ಯೂರೋಗಳಾಗಲಿದ್ದು, ಭಾರತೀಯ ರೂಪಾಯಿಗಳಲ್ಲಿ ಸರಿ ಸುಮಾರು 45,000 ಆಗಲಿದೆ. ಬೆಲೆ ಮಾತ್ರವಲ್ಲದೇ ಈ ಫೋನಿನ ಹಲವು ವಿಶೇಷತೆಗಳ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ.

ಆಗಸ್ಟ್ 16 ರಂದು ಲಾಂಚ್:

ಆಗಸ್ಟ್ 16 ರಂದು ಲಾಂಚ್:

HMD ಗ್ಲೋಬಲ್ ಸಂಸ್ಥೆಯೂ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಗಸ್ಟ್ 16 ರಂದು ನೋಕಿಯಾ 8 ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲಿದೆ ಎನ್ನಲಾಗಿದೆ. ಈ ಫೋನಿನ ಬೆಲೆ ಭಾರತೀಯ ಮಾರುಕಟ್ಟೆಯಲ್ಲಿ ರೂ.35,000 ದಿಂದ ರೂ.45,000ದ ಅಸುಪಾಸಿನಲ್ಲಿ ಇರಲಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ.

ಮೂರು ಬಣ್ಣದಲ್ಲಿ ಲಭ್ಯ:

ಮೂರು ಬಣ್ಣದಲ್ಲಿ ಲಭ್ಯ:

ನೋಕಿಯಾ 8 ಸ್ಮಾರ್ಟ್‌ಫೋನ್ ಒಟ್ಟು ಮೂರು ಬಣ್ಣದಲ್ಲಿ ಲಭ್ಯವಿರಲಿದೆ. ಸದ್ಯ ಲೀಕ್ ಆಗಿರುವ ಫೋಟೊದಲ್ಲಿ ಕಾಪರ್ ಗೋಲ್ಡ್ ಬಣ್ಣದ ಫೋನ್ ಕಾಣಿಸಿಕೊಂಡಿದೆ. ಇದರೊಂದಿಗೆ ಸಿಲ್ವರ್ ಮತ್ತು ಬ್ಲೂ ಬಣ್ಣದಲ್ಲಿ ಈ ಫೋನ್ ದೊರೆಯುವ ಸಾಧ್ಯತೆಗಳಿದೆ.

ಟಾಪ್ ಸ್ನಾಪ್‌ಡ್ರಾಗನ್ ಪ್ರೋಸೆಸರ್:

ಟಾಪ್ ಸ್ನಾಪ್‌ಡ್ರಾಗನ್ ಪ್ರೋಸೆಸರ್:

ನೋಕಿಯಾದ ಈ ಟಾಪ್ ಎಂಡ್ ಫೋನಿನಲ್ಲಿ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 835 ಪ್ರೋಸೆಸರ್ ಕಾಣಬಹುದಾಗಿದ್ದು, ಇದು ಮಾರುಕಟ್ಟೆಯಲ್ಲಿ ಲಭ್ಯವಿರುವ ವೇಗದ ಪ್ರೋಸೆಸರ್ ಆಗಿದೆ. ಸದ್ಯ ಲಭ್ಯವಿರುವ ಬಹುತೇಕ ಟಾಪ್ ಎಂಡ್ ಫೋನ್ ಗಳಲ್ಲಿ ಇದೇ ಪ್ರೋಸೆಸರ್ ಅನ್ನು ಬಳಸಲಾಗಿದೆ.

4GB/6GB RAM ಇರಲಿದೆ:

4GB/6GB RAM ಇರಲಿದೆ:

ನೋಕಿಯಾ 8 ಸ್ಮಾರ್ಟ್‌ಫೋನಿನಲ್ಲಿ 4GB/6GB ಆವೃತ್ತಿಯಲ್ಲಿ ದೊರೆಯಲಿದ್ದು, ಇದರೊಂದಿಗೆ 64 GB ಇಂಟರ್ನಲ್ ಮೆಮೊರಿಯನ್ನು ಹೊಂದಿರಲಿದೆ.

ಡ್ಯುಯಲ್ ಕ್ಯಾಮೆರಾ ಸೆಟಪ್:

ಡ್ಯುಯಲ್ ಕ್ಯಾಮೆರಾ ಸೆಟಪ್:

ಇದೇ ಮಾದರಿಯಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಇದರಲ್ಲಿ ಕಾಣಬಹುದಾಗಿದ್ದು, ಫೋಟೋಗ್ರಫಿಗೆ ಹೇಳಿ ಮಾಡಿಸಿದಂತಿದೆ. ಇದಕ್ಕಾಗಿಯೇ ಕಾರ್ಲ್ ಝೈಸ್ ಲೈನ್ಸ್ ಇರುವ ಕ್ಯಾಮೆರಾವನ್ನು ಅಳವಡಿಸಿಕೊಂಡಿದೆ.

ಇನ್ನೇನಿದೆ..?

ಇನ್ನೇನಿದೆ..?

ಇದಲ್ಲದೇ ನೋಕಿಯಾ 8 ಸ್ಮಾರ್ಟ್‌ಫೋನಿನಲ್ಲಿ ಮುಂಭಾಗದಲ್ಲಿಯೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ನೀಡಲಾಗಿದ್ದು, ಇದರೊಂದಿಗೆ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಕಾಣಬಹುದಾಗಿದೆ.

Best Mobiles in India

Read more about:
English summary
Nokia 8 will definitely sit in the premium range segment and compete against a few flagship devices. to know more visit kananda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X