ನೋಕಿಯಾ 8 ಸಿರೋಕ್ಕೋ vs ನೋಕಿಯಾ 7 ಪ್ಲಸ್ vs ನೋಕಿಯಾ 8 : ಯಾವುದು ಉತ್ತಮ?
HMD ಗ್ಲೋಬಲ್ ಸಂಸ್ಥೆಯು ಏಪ್ರಿಲ 4 ರಂದು ನಡೆದ ಸಮಾರಂಭವೊಂದರಲ್ಲಿ ನೋಕಿಯಾ 8 ಸಿರೋಕ್ಕೋ, ನೋಕಿಯಾ 7 ಪ್ಲಸ್ ಮತ್ತು ನೋಕಿಯಾ 6 ಸ್ಮಾರ್ಟ್ಫೋನ್ ಗಳನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಈ ಸ್ಮಾರ್ಟ್ಫೋನ್ ಗಳ ಬೆಲೆ ಕ್ರಮವಾಗಿ ರೂ 49,999, ರೂ 25,999 ಮತ್ತು ರೂ 16,999 ನಿಗದಿಪಡಿಸಲಾಗಿದೆ. ನೋಕಿಯಾ 6 ಏಪ್ರಿಲ್ 6 ರಿಂದ ಖರೀದಿಗೆ ಲಭ್ಯವಾಗಲಿದ್ದು, ಉಳಿದ ಎರಡು ಮಾಡೆಲ್ಗಳು ಏಪ್ರಿಲ್ 20ರಿಂದ ಪ್ರಿ-ಆರ್ಡರ್ ಗೆ ಲಭ್ಯವಾಗಲಿದೆ. ಅಲ್ಲದೆ ಈ ಮೊಬೈಲ್ ಗಳ ಖರೀದಿಯ ಮೇಲೆ ಗ್ರಾಹಕರಿಗೆ ಆಕರ್ಷಕ ಲಾಂಚ್ ಆಫರ್ಗಳು ಮತ್ತು ಕ್ಯಾಶ್ಬ್ಯಾಕ್ ಆಫರ್ಗಳು ಕೂಡ ಲಭಿಸಲಿದೆ.

ಈ ಲೇಖದಲ್ಲಿ ನಾವು ನೋಕಿಯಾ 8 ಸಿರೋಕ್ಕೋ, ನೋಕಿಯಾ 7 ಪ್ಲಸ್ ಮತ್ತು ನೋಕಿಯಾ 8 ಮೊಬೈಲ್ಗಳನತುಲನೆಯನ್ನು ನಡೆಸಿದ್ದು ಅದರ ಗುಣಾತ್ಮಕ ಮತ್ತು ಋಣಾತ್ಮಕ ಅಂಶಗಳನ್ನು ನಿಮಗಾಗಿ ಸಂಪಾದಿಸಿದ್ದೇವೆ.

ವಿನ್ಯಾಸ
ಈ ಎಲ್ಲಾ ನೋಕಿಯಾ ಫೋನ್ಗಳು ತುಂಬ ತೆಳುವಾಗಿ ಮತ್ತು ಆಕರ್ಷಕವಾಗಿ ಕಂಡರೂ ಗಟ್ಟಿಮುಟ್ಟಾಗಿ ಇದ್ದು ನೋಕಿಯಾ ಬ್ರ್ಯಾಂಡ್ ನ ಹೆಸರಿಗೆ ತಕ್ಕಂತೆ ಇವೆ. ನೋಕಿಯಾ 8 ಸಿರೋಕ್ಕೋ, ನೋಕಿಯಾ 7 ಪ್ಲಸ್ ಮತ್ತು ನೋಕಿಯಾ 8 ಮೊಬೈಲ್ಗಳನ್ನು 6000 ಶ್ರೇಣಿಯ ಅಲ್ಯುಮಿನಿಯಂ ನ ಒಂದೇ ಬ್ಲಾಕ್ ನಿಂದ ತಯಾರಿಸಲಾಗಿದ್ದು, ಮುಂಬದಿಯಲ್ಲಿ ಗ್ಲಾಸ್ ಇದ್ದು ಗೋರಿಲ್ಲಾ ಗ್ಲಾಸ್ ನ ರಕ್ಷಣಾ ಕವಚ ಹೊಂದಿದೆ. ನೋಕಿಯಾ 7 ಪ್ಲಸ್ ನಲ್ಲಿ ಕಾಪರ್ ಎಡ್ಜ್ ಇದ್ದು ನೋಕಿಯಾ 8 ನಲ್ಲಿ ಇದು ಇಲ್ಲವಾಗಿದೆ. ಇನ್ನು ನೋಕಿಯಾ 8 ಸಿರೋಕ್ಕೋ ನಲ್ಲಿ ಸ್ಟೇಯ್ನ್ಲೆಸ್ ಸ್ಟೀಲ್ ನ ಫ್ರೇಮ್ ಇದೆ.
ನೋಕಿಯಾ 8 ಸಿರೋಕ್ಕೋ 95% ಗೋರಿಲ್ಲಾ ಗ್ಲಾಸ್ 5 ಹೊಂದಿದ್ದು ಬಿದ್ದರೂ ಹಾಳಾಗದಂತೆ ವಿನ್ಯಾಸಗೊಳಿಸಲಾಗಿದೆ. ನೋಕಿಯಾ 8 ಸ್ಪ್ಲಾಶ್ ರೆಸಿಸ್ಟೆನ್ಸ್ ಗೆ IP54 ಸರ್ಟಿಫೈಡ್ ಆಗಿದ್ದರೆ, ನೋಕಿಯಾ 8 ಸಿರೋಕ್ಕೋ ಡಸ್ಟ್ ಮತ್ತು ವಾಟರ್ ರೆಸಿಸ್ಟೆನ್ಸ್ ಗೆ IP67 ಸರ್ಟಿಫೈಡ್ ಆಗಿದೆ. ನೋಕಿಯಾ 8 ಹೋಮ್ ಬಟನ್ ಹೊಂದಿದ್ದು ಅದು ಫಿಂಗರ್ಪ್ರಿಂಟ್ ಸೆನ್ಸರ್ ಆಗಿ ಕೂಡ ಕೆಲಸ ಮಾಡುತ್ತದೆ. ಉಳಿದ ಎರಡು ಮಾಡೆಲ್ಗಳು ಫುಲ್ ಸ್ಕ್ರೀನ್ ವಿನ್ಯಾಸ ಹೊಂದಿದ್ದು ಅಂಚಿನಿಂದ ಅಂಚಿನವರೆಗೂ ಡಿಸ್ಪ್ಲೇ ಹೊಂದಿದೆ. ಹಾಗಾಗಿ ಇದರಲ್ಲಿ ಹೋಮ್ ಬಟನ್ ಇಲ್ಲ ಮತ್ತು ಫಿಂಗರ್ಪ್ರಿಂಟ್ ಸೆನ್ಸರ್ ಫೋನ್ ನ ಹಿಂಭಾಗದಲ್ಲಿದೆ.

ಡಿಸ್ಪ್ಲೇ
ನೋಕಿಯಾ 8 ಸಿರೋಕ್ಕೋ 5.5 ಇಂಚ್ pOLED ಡಿಸ್ಪ್ಲೇ ಹೊಂದಿದ್ದು 2560X1440 ಪಿಕ್ಸೆಲ್ಗಳ QHD ರೆಸೊಲ್ಯೂಶನ್ ಮತ್ತು 16:9 ಆಸ್ಪೆಕ್ಟ್ ಅನುಪಾತ ಹೊಂದಿದೆ. ನೋಕಿಯಾ 8 ಕೂಡ ಇದೇ ರೀತಿಯ ರೆಸಲ್ಯೂಶನ್ ಮತ್ತು ಆಸ್ಪೆಕ್ಟ್ ಅನುಪಾತ ಹೊಂದಿದ್ದು, 5.3 ಇಂಚ್ IPS LCD ಪ್ಯಾನಲ್ ಹೊಂದಿದೆ. ಇನ್ನು ನೋಕಿಯಾ 7 ಇವೆರಡಕ್ಕಿಂತ ಉತ್ತಮ ಡಿಸ್ಪ್ಲೇ ಹೊಂದಿದ್ದು, ಇದರಲ್ಲಿದೆ 6 ಇಂಚ್ IPS LCD ಡಿಸ್ಪ್ಲೇ 2160X1080 ಪಿಕ್ಸೆಲ್ಗಳ FHD ರೆಸೊಲ್ಯೂಶನ್ ಮತ್ತು 18:9 ಆಸ್ಪೆಕ್ಟ್ ಅನುಪಾತದೊಂದಿಗೆ. ಆದರೆ ಇದರಲ್ಲಿ ನೋಕಿಯಾ 8 ಮತ್ತು ನೋಕಿಯಾ 8 ಸಿರೋಕ್ಕೋ ನಲ್ಲಿರುವ 'ಆಲ್ವೇಸ್ ಆನ್' ಫೀಚರ್ ಇಲ್ಲವಾಗಿದೆ.

ಹಾರ್ಡ್ವೇರ್
ನೋಕಿಯಾ 8 ಮತ್ತು ನೋಕಿಯಾ 8 ಸಿರೋಕ್ಕೋ ಸ್ಮಾರ್ಟ್ಫೋನ್ಗಳೆರಡೂ ಒಕ್ಟಾಕೋರ್ ಸ್ನ್ಯಾಪ್ಡ್ರಾಗನ್ 835 SoC ಹೊಂದಿದೆ. ಭಾರತದಲ್ಲಿ ಲಾಂಚ್ ಆಗಿರುವ ನೋಕಿಯಾ 8 4GB RAM ಮತ್ತು 64GB ಸ್ಟೋರೇಜ್ ಹೊಂದಿದ್ದರೆ ನೋಕಿಯಾ 8 ಸಿರೋಕ್ಕೋ 6GB RAM ಮತ್ತು 128GB ಸ್ಟೋರೇಜ್ ಸಾಮರ್ಥ್ಯ ಹೊಂದಿದೆ. ನೋಕಿಯಾ 7 ಪ್ಲಸ್ ಒಕ್ಟಾಕೋರ್ ಸ್ನ್ಯಾಪ್ಡ್ರಾಗನ್ 660 SoC ಪ್ರಾಸೆಸರ್ ಹೊಂದಿದ್ದು, 4GB RAM ಮತ್ತು 64GB ಸ್ಟೋರೇಜ್ ಸಾಮರ್ಥ್ಯ ಹೊಂದಿದೆ. ಈ ಎಲ್ಲಾ ಮೊಬೈಲ್ಗಳ ಸ್ಟೋರೇಜ್ ಸಾಮರ್ಥ್ಯವನ್ನು 256GB ವರೆಗೆ ವಿಸ್ತರಿಸಬಹುದಾಗಿದೆ.
ನೋಕಿಯಾ 8 ಸಿರೋಕ್ಕೋ 3260 mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು Qi ವೈರ್ಲೆಸ್ ಚಾರ್ಜಿಂಗ್ ಮತ್ತು ಕ್ವಿಕ್ ಚಾರ್ಜ್ 4.0 ಫೀಚರ್ ಹೊಂದಿದೆ. ನೋಕಿಯಾ 8 3090 mAh ಬ್ಯಾಟರಿ ಹೊಂದಿದ್ದು ಕ್ವಿಕ್ ಚಾರ್ಜ್ 3.0 ಫೀಚರ್ ಹೊಂದಿದೆ. ಇನ್ನು ನೋಕಿಯಾ 7 ಪ್ಲಸ್ ಹಿರಿದಾದ 3800 mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು ವೇಗವಾಗಿ ಚಾರ್ಜ ಆಗುತ್ತದಲ್ಲದೆ 2 ದಿನಗಳ ಕಾಲ ಕಾರ್ಯನಿರ್ವಹಿಸುತ್ತದೆ.

ಕ್ಯಾಮೆರಾ
ನೋಕಿಯಾ 8 ಸಿರೋಕ್ಕೂ ಮತ್ತು ನೋಕಿಯಾ 7 ಪ್ಲಸ್ ಗಳೆರಡೂ ಝೇಯ್ಸ್ ಆಪ್ಟಿಕ್ಸ್ ನ ಡ್ಯುಯಲ್ ರೇರ್ ಕ್ಯಾಮೆರಾ ಸೆಟಪ್ ಹೊಂದಿದ್ದು 12MP ಪ್ರೈಮರಿ ಸೆನ್ಸರ್ f/1.75 ಅಪರ್ಚರ್ ಮತ್ತು ವೈಡ್ ಆಂಗಲ್ ಲೆನ್ಸ್ ಜೊತೆಗೆ ಹಾಗೂ 2X ಆಪ್ಟಿಕಲ್ ಝೂಮ್ ಮತ್ತು f/2.6 ಅಪರ್ಚರ್ ನ 13MP ಸೆಕೆಂಡರಿ ಸೆನ್ಸರ್ ಹೊಂದಿದೆ. ಇದರೊಂದಿಗೆ ಡ್ಯುಯಲ್ ಟೋನ್ LED-ಫ್ಲ್ಯಾಶ್ ಕೂಡ ಇದೆ. ಇನ್ನು ಮುಂಭಾಗದಲ್ಲಿ f/2.0 ಅಪರ್ಚರ್ ಮತ್ತು ಝೇಯ್ಸ್ ಆಪ್ಟಿಕ್ಸ್ ನ 16MP ಸೆಲ್ಫೀ ಕ್ಯಾಮೆರಾ ಕೂಡ ಇದೆ. ನೋಕಿಯಾ 8 ಕಾರ್ಲ್ ಝೇಯ್ಸ್ ಬ್ರ್ಯಾಂಡಿಂಗ್ ನ ಡ್ಯುಯಲ್ ರೇರ್ ಕ್ಯಾಮೆರಾ ಸೆಟಪ್ ಹೊಂದಿದೆ.
ನೋಕಿಯಾ 8 13MP ಡ್ಯುಯಲ್ ಲೆನ್ಸ್ ರೇರ್ ಕ್ಯಾಮೆರಾ ಸೆಟಪ್ ಹೊಂದಿದ್ದು, ಅದರಲ್ಲಿ RGB ಮತ್ತು ಮೋನೋಕ್ರೋಮ್ ಸೆನ್ಸರ್ಗಳಿದ್ದು ಜೊತೆಗೆ OIS, PDAF ಮತ್ತು f/2.0 ಅಪರ್ಚರ್ ಹೊಂದಿದೆ. ಅಲ್ಲದೆ ಇದರಲ್ಲಿದೆ 13MP ಸೆಲ್ಫೀ ಕ್ಯಾಮೆರಾ PDAF, ಡಿಸ್ಪ್ಲೇ ಫ್ಲ್ಯಾಶ್ ಮತ್ತು f/2.0 ಅಪರ್ಚರ್ ನೊಂದಿಗೆ.

ಸಾಫ್ಟ್ವೇರ್
ನೋಕಿಯಾ 8 ಸಿರೋಕ್ಕೋ ಮತ್ತು ನೋಕಿಯಾ 7 ಪ್ಲಸ್ ಆಂಡ್ರಾಯ್ಡ್ 8.0 ಓರಿಯೋ ಓಎಸ್ ಹೊಂದಿದ್ದು ಆಂಡ್ರಾಯ್ಡ್ 8.1 ಓರಿಯೋ ಅಪ್ಡೇಟ್ ಪಡೆಯಲುಲ ಅರ್ಹವಾಗಿದೆ. ನೋಕಿಯಾ 8 ಆಂಡ್ರಾಯ್ಡ್ 7.1.1 ನುಗಾಟ್ ನೊಂದಿಗೆ ಲಾಂಚ್ ಆಗಿತ್ತಾದರೂ ಈಗಾಗಲೇ ಆಂಡ್ರಾಯ್ಡ್ 8.1 ಓರಿಯೋ ಅಪ್ಡೇಟ್ ಪಡೆದಿದೆ. ಈ ಎಲ್ಲಾ ಸ್ಮಾರ್ಟ್ಫೋನ್ಗಳು ಆಂಡ್ರಾಯ್ಡ್ ಒನ್ ಆದರಿಸಿದ್ದು, ಸ್ಟಾಕ್ ಆಂಡ್ರಾಯ್ಡ್ ನ ಅನುಭವ ನೀಡುತ್ತದೆ.


ಫಲಿತಾಂಶ
ನೋಕಿಯಾ 8 ಸಿರೋಕ್ಕೋ ನ ಬೆಲೆ ರೂ 49,999 ಆಗಿದ್ದು, ನೋಕಿಯಾ 7 ಪ್ಲಸ್ ನ ಬೆಲೆ ರೂ 25,999 ಮತ್ತು ನೋಕಿಯಾ 8 ಸ್ಮಾರ್ಟ್ಫೋನ್ ನ ಬೆಲೆ ಭಾರತದಲ್ಲಿ ರೂ 36,999 ಆಗಿದೆ. ಇನ್ನು ಡಿಸ್ಪ್ಲೇ ಕುರಿತು ಹೇಳುವುದಾದರೆ, ಮೂರು ಮೊಬೈಲ್ಗಳ ಪೈಕಿ ನೋಕಿಯಾ 7 ಪ್ಲಸ್ ಉದ್ದನೆಯ ಮತ್ತು ಹೆಚ್ಚು ಆಕರ್ಷಕ ಡಿಸ್ಪ್ಲೇ ಹೊಂದಿದೆ. ಇನ್ನು ಹಾರ್ಡ್ವೇರ್ ಕುರಿತು ಹೇಳಿದರೆ, ನೋಕಿಯಾ 8 ಮತ್ತು ನೋಕಿಯಾ 8 ಸಿರೋಕ್ಕೋ ಉತ್ತಮ ಕಾರ್ಯಕ್ಷಮತೆ ತೋರುತ್ತದೆ.
ಅಲ್ಲದೆ ನೋಕಿಯಾ 8 ಸಿರೋಕ್ಕೋ ಅಧಿಕ RAM ಮತ್ತು ಸ್ಟೋರೇಜ್ ಸಾಮರ್ಥ್ಯ ಹೊಂದಿದೆ. ಎಲ್ಲಾ ಮೊಬೈಲ್ಗಳ ಕ್ಯಾಮೆರಾ ಬಹುತೇಕ ಸಮಾನವಾಗಿದ್ದು, ಎಲ್ಲದರಲ್ಲಿಯೂ ಪ್ರೋ ಕ್ಯಾಮೆರಾ ಮೋಡ್, ಫೇಸ್ ಅನ್ಲಾಕ್ ಮತ್ತು ಬೋತೀ ಫೀಚರ್ ಇದೆ. ಹಾಗಾಗಿ ಇವುಗಳ ಬೆಲೆಯೇ ಈ ಮೊಬೈಲ್ಗಳ ನಡುವಿನ ಪ್ರಮುಖ ವ್ಯತ್ಯಾಸವಾಗಿದ್ದು, ನಿಮ್ಮ ಬಜೆಟ್ ಗೆ ಅನುಗುಣವಾಗಿ ಮೊಬೈಲ್ ಅನ್ನು ಆಯ್ಕೆ ಮಾಡಬಹುದು. ಅಲ್ಲದೆ ಅಧಿಕ ಬ್ಯಾಟರಿ ಸಾಮರ್ಥ್ಯದ ಮೊಬೈಲ್ ಅನ್ನು ನೀವು ಬಯಸುತ್ತಿದ್ದರೆ ನೋಕಿಯಾ 7 ಉತ್ತಮ ಆಯ್ಕೆಯಾಗುತ್ತದೆ.


Click it and Unblock the Notifications








