Subscribe to Gizbot

ಭಾರತದಲ್ಲಿಂದು ಬಿಡುಗಡೆಯಾಯ್ತು "ನೋಕಿಯಾ 8 ಸಿರೊಕೊ"!..ಬೆಲೆ ಮತ್ತು ಫೀಚರ್ಸ್ ಕಂಪ್ಲೀಟ್ ಡೀಟೆಲ್ಸ್!!

Written By:

ನೋಕಿಯಾ ಕಂಪೆನಿಯ ಬಹುನಿರೀಕ್ಷಿತ ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್ ನೋಕಿಯಾ 8 ಸಿರೊಕೊ ಇಂದು ಭಾರತದ ಮೊಬೈಲ್ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ನವದೆಹಲಿಯಲ್ಲಿ ಇಂದು ಆಯೋಜನೆಯಾಗಿದ್ದ ಸಮಾರಂಭದಲ್ಲಿ ಹೆಚ್‌ಎಮ್‌ಡಿ ಗ್ಲೋಬಲ್ ನೋಕಿಯಾದ ಹೈ ಎಂಡ್ ಫ್ಲಾಶ್‌ಶಿಪ್ ಸ್ಮಾರ್ಟ್‌ಫೋನ್ ನೋಕಿಯಾ 8 ಸಿರೊಕೊ ಫೋನ್ ಅನ್ನು ಪರಿಚಯಿಸಿದೆ.!

ಕಳೆದ ವರ್ಷ ಬಿಡುಗಡೆಯಾಗಿದ್ದ ನೋಕಿಯಾ 8 ಸ್ಮಾರ್ಟ್‌ಪೋನಿಗಿಂತಲೂ ಹೆಚ್ಚು ಫೀಚರ್ಸ್ ಹೊತ್ತು ನೂತನ ನೋಕಿಯಾ 8 ಸಿರೊಕೊ ಸ್ಮಾರ್ಟ್‌ಪೋನ್ ಮಾರುಕಟ್ಟೆಗೆ ಕಾಲಿಟ್ಟಿದೆ. ನೋಕಿಯಾ 8 ಸ್ಮಾರ್ಟ್‌ಫೋನಿಗಿಂತಲೂ ಹೆಚ್ಚು RAM, ಸ್ಟೋರೇಜ್ ಹಾಗೂ ಬದಲಾಗಿರುವ ಡಿಸ್‌ಪ್ಲೇಯನ್ನು ಅಳವಡಿಸಿಕೊಂಡು ನೋಕಿಯಾ 8 ಸಿರೊಕೊ ಫೋನ್ ಇದೀಗ ಎಂಟ್ರಿ ನೀಡಿದೆ.

ಭಾರತದಲ್ಲಿಂದು ಬಿಡುಗಡೆಯಾಯ್ತು

ನೋಕಿಯಾ 8 ಸ್ಮಾರ್ಟ್‌ಫೋನ್ ಕೇವಲ 5.2 ಇಂಚಿನ ಕ್ಯುಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದರೆ, ನೋಕಿಯಾ 8 ಸಿರೊಕೊ 5.5 ಇಂಚಿನ ಪಿ-ಒಎಲ್ಇಡಿ ಡಿಸ್‌ಪ್ಲೇಯನ್ನು ಹೊಂದಿದೆ. ಹಾಗಾದರೆ, ಇಂದು ಬಿಡುಗಡೆಯಾಗಿರುವ ನೋಕಿಯಾ 8 ಸಿರೊಕೊ ಸ್ಮಾರ್ಟ್‌ಫೋನ್ ಏನೆಲ್ಲಾ ಫೀಚರ್ಸ್ ಹೊಂದಿದೆ? ಸ್ಮಾರ್ಟ್‌ಫೋನ್ ವಿಶೇಷತೆಗಳೇನು? ಬೆಲೆ ಎಷ್ಟು? ಎಂಬುದನ್ನು ಮುಂದೆ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೋಕಿಯಾ 8 ಸಿರೊಕೊ ವಿನ್ಯಾಸ!

ನೋಕಿಯಾ 8 ಸಿರೊಕೊ ವಿನ್ಯಾಸ!

ಗ್ಲಾಸ್ ಬ್ಯಾಕ್ ಹಾಗೂ ವೈರ್‌ಲೆಸ್ ಚಾರ್ಜಿಂಗ್ ತಂತ್ರಜ್ಞಾನವಿರುವ ವಿನ್ಯಾಸವವಿರುವ ನೋಕಿಯಾ 8 ಸಿರೊಕೊ IP67 ಸರ್ಟಿಫೈಡ್ ಸ್ಟೇನ್ಲೆಸ್ ಸ್ಟೀಲ್ ಫ್ರೇಮ್ ವಿನ್ಯಾಸವನ್ನು ಹೊಂದಿದೆ. 16:9 ಅನುಪಾತದ 5.5-ಇಂಚಿನ ಪಿ-ಓಎಲ್‌ಇಡಿ ಡಿಸ್‌ಪ್ಲೇ, ಕ್ವಾಡ್ ಹೆಚ್‌ಡಿ ರೆಸೊಲ್ಯೂಶನ್ ಹಾಗೂ 2.5ಡಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಅನ್ನು ಸ್ಮಾರ್ಟ್‌ಫೋನಿನಲ್ಲಿ ನೀಡಲಾಗಿದೆ.

ಪ್ರೊಸೆಸರ್ ಮತ್ತು RAM

ಪ್ರೊಸೆಸರ್ ಮತ್ತು RAM

ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 835 SoC ಪ್ರೊಸೆಸರ್ ಜೊತೆಗೆ 2.5 GHz ಆಕ್ಟಾ-ಕೋರ್ ಕ್ರಿಯಾ 280 ಪ್ರೊಸೆಸರ್ ಅನ್ನು ನೋಕಿಯಾ 8 ಸಿರೊಕೊ ಸ್ಮಾರ್ಟ್‌ಫೋನಿನಲ್ಲಿ ನೀಡಲಾಗಿದೆ. ಅಡ್ರಿನೊ 540 ಜಿಪಿಯು ಹಾಗೂ GB RAM ಹಾಗೂ 128 ಜಿಬಿ ಆಂತರಿಕ ಮೆಮೊರಿಯನ್ನು ಸ್ಮಾರ್ಟ್‌ಫೋನ್ ಹೊಂದಿದೆ. ಮೆಮೊರಿಯನ್ನು 256 ಜಿಬಿ ವರೆಗೆ ವಿಸ್ತರಿಸಿಕೊಳ್ಳಬಹುದಾಗಿದೆ.

ಸ್ಮಾರ್ಟ್‌ಫೋನ್ ಕ್ಯಾಮೆರಾ ಹೇಗಿವೆ?

ಸ್ಮಾರ್ಟ್‌ಫೋನ್ ಕ್ಯಾಮೆರಾ ಹೇಗಿವೆ?

ನೋಕಿಯಾ 8 ಸಿರೊಕೊ ಸ್ಮಾರ್ಟ್‌ಫೋನ್ ಎರಡು ಡ್ಯುಯಲ್ ರಿಯರ್ ಕ್ಯಾಮೆರಾಗಳನ್ನು ಹೊಂದಿದೆ. ಎಫ್ / 1.75 ಅಪಾರ್ಚರ್ ಹೊಂದಿರುವ 12 ಎಂಪಿ ಕ್ಯಾಮೆರಾ ಹಾಗೂ ಎಫ್ / 2.6 ಅಪಾರ್ಚರ್ ಹೊಂದಿರುವ 13 ಎಂಪಿ ಕ್ಯಾಮೆರಾಗಳು ಸ್ಮಾರ್ಟ್‌ಫೋನಿನಲ್ಲಿವೆ. ಎಫ್ / 2.0 ಅಪಾರ್ಚರ್‌ನ 5 ಎಂಪಿ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ನೋಕಿಯಾ 8 ಸಿರೊಕೊ ಬ್ಯಾಟರಿ!

ನೋಕಿಯಾ 8 ಸಿರೊಕೊ ಬ್ಯಾಟರಿ!

ನೋಕಿಯಾದ ಹೈ ಎಂಡ್ ಫ್ಲಾಶ್‌ಶಿಪ್ ಸ್ಮಾರ್ಟ್‌ಫೋನ್ ನೋಕಿಯಾ 8 ಸಿರೊಕೊ 3,260 mAh ಬ್ಯಾಟರಿಯನ್ನು ಹೊಂದಿದೆ. ಸ್ಮಾರ್ಟ್‌ಫೋನ್ ಬ್ಯಾಟರಿ ಕ್ವಿಚಾರ್ಜ್ 4.0 ತಂತ್ರಜ್ಞಾನದೊಂದಿಗೆ ಕೇವಲ 60 ನಿಮಿಷಗಳಲ್ಲಿ ಶೇ. 80 ರಷ್ಟು ಚಾರ್ಜ್ ಆಗಲಿದೆ. ಇನ್ನು ವಿಶೇಷವಾಗಿ ಸ್ಮಾರ್ಟ್‌ಫೋನ್ ವೈರ್ಲೆಸ್ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದೆ.

ಇತರೆ ಏನೆಲ್ಲಾ ಫೀಚರ್ಸ್?

ಇತರೆ ಏನೆಲ್ಲಾ ಫೀಚರ್ಸ್?

ಯುಎಸ್‌ಬಿ ಟೈಪ್-ಸಿ 3.1, ವೈ-ಫೈ, ಬ್ಲೂಟೂತ್ 5.0, ಜಿಪಿಎಸ್, ಎನ್ಎಫ್‌ಸಿ ಸಂಪರ್ಕಗಳು, ನೋಕಿಯಾ OZO ಆಡಿಯೋ 3 ಮೈಕ್ಸ್, ಹಿಂಬಾಗದಲ್ಲಿ ಫಿಂಗರ್ಪ್ರಿಂಟ್ ಸ್ಕ್ಯಾನರ್‌ ಅನ್ನು ನೋಕಿಯಾ 8 ಸಿರೊಕೊ ಸ್ಮಾರ್ಟ್‌ಫೋನ್ ಹೊಂದಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 8.0 ಓರಿಯೊ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯಾಚರಣೆ ನೀಡಲಿದೆ.

ನೋಕಿಯಾ 8 ಸಿರೊಕೊ ಬೆಲೆ ಎಷ್ಟು?

ನೋಕಿಯಾ 8 ಸಿರೊಕೊ ಬೆಲೆ ಎಷ್ಟು?

ಟೆಂಪೆರ್ಡ್ ಬ್ಲೂ, ಪಾಲಿಶ್ಡ್ ಬ್ಲೂ, ಸ್ಟೀಲ್ ಮತ್ತು ಪಾಲಿಶ್ಡ್ ಕಾಪರ್ ಹೀಗೆ ನಾಲ್ಕಿ ಬಣ್ಣಗಳಲ್ಲಿ ಬಿಡುಗಡೆಯಾಗಿರುವ ನೋಕಿಯಾ 8 ಸಿರೊಕೊ ಭಾರತದ ಮಾರುಕಟ್ಟೆಗೆ 45,999 ರೂಪಾಯಿಗಳಿಗೆ ಬಿಡುಗಡೆಯಾಗಿದೆ. ಏಪ್ರಿಲ್ 30 ರಿಂದ ಪ್ರಮುಖ ಆನ್‌ಲೈನ್ ಇ-ಜಾಲತಾಣ ಫ್ಲಿಪ್‌ಕಾರ್ಟ್‌ನಲ್ಲಿ ಸ್ಮಾರ್ಟ್‌ಫೋನ್ ಅನ್ನು ಖರೀದಿಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
HMD Global at an event in New Delhi today launched the new Nokia 6 and the Nokia 7 Plus smartphones in India. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot