ಇದು ಐಫೋನ್ ಗಳಿಂದ ಒನ್ ಪ್ಲಸ್ 6ಟಿ ಗೆ ನಿಮ್ಮ ಫೋನನ್ನು ಬದಲಾಯಿಸಲು ಇದು ಉತ್ತಮ ಸಮಯ

|

ಒನ್ ಪ್ಲಸ್ ವಿಶ್ವದ ಪ್ರಸಿದ್ಧ ಬ್ರ್ಯಾಂಡ್. ಪ್ರೀಮಿಂಯ ಸ್ಮಾರ್ಟ್ ಫೋನ್ ಗಳಿಂದಾಗಿ ಜನರಿಗೆ ಹೆಚ್ಚು ಇಷ್ಟವಾಗಿದೆ. ಇದೀಗ ಈ ಬ್ರ್ಯಾಂಡ್ ತನ್ನ ಭವಿಷ್ಯದ ಸ್ಮಾರ್ಟ್ ಫೋನ್ ಎಂದು ಹೇಳಿರುವ ಒನ್ ಪ್ಲಸ್ 6ಟಿಯನ್ನು ಬಿಡುಗಡೆಗೊಳಿಸಿದೆ.

ಇದು ಐಫೋನ್ ಗಳಿಂದ ಒನ್ ಪ್ಲಸ್ 6ಟಿ ಗೆ ನಿಮ್ಮ ಫೋನನ್ನು ಬದಲಾಯಿಸಲು ಇದು ಉತ್ತಮ ಸಮಯ

ಇದು ನೂತನ ತಂತ್ರಜ್ಞಾನವನ್ನು ಒಳಗೊಂಡಿದೆ- ಇನ್ ಡಿಸ್ಪ್ಲೇ ಸ್ಕ್ರೀನ್ ಅನ್ ಲಾಕ್, ಡುಯಲ್ ಲೆನ್ಸ್ ಕ್ಯಾಮರಾ ಮತ್ತು ಸ್ನ್ಯಾಪ್ ಡ್ರ್ಯಾಗನ್ 845 ಸಿಪಿಯುವನ್ನು ಹೊಂದಿದ್ದು ತನ್ನ ದುಡ್ಡಿಗೆ ತಕ್ಕ ಮೌಲ್ಯವನ್ನು ಹೊಂದಿರುವ ಸ್ಮಾರ್ಟ್ ಫೋನ್ ಒನ್ ಪ್ಲಸ್ 6ಟಿ ಆಗಿದೆ.

48 ಘಂಟೆಗಳ ಒಳಗೆ ಅತೀ ಹೆಚ್ಚು ಫೋನ್ ಮಾರಾಟ ಮಾಡಿದ ಗಿನ್ನಿಸ್ ವರ್ಡ್ ರೆಕಾರ್ಡ್ ಸಾಧಿಸಿರುವ ಒನ್ ಪ್ಲಸ್ ಸಂಸ್ಥಎ ಇದೀಗ ದೇಶಾದ್ಯಂತ ಒನ್ ಪ್ಲಸ್ 6ಟಿಯನ್ನು ಗ್ರಾಹಕರ ಮೊದಲ ಆಯ್ಕೆಯನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ. ಮಾರುಕಟ್ಟೆಯಲ್ಲಿ ತನ್ನ ಹೆಗ್ಗುರತನ್ನು ಸ್ಥಾಪಿಸಲು ಮತ್ತು ನಾಲ್ಕು ವರ್ಷದ ಅಮೇಜಾನ್ ನೊಂದಿಗಿನ ಸಹಭಾಗಿತ್ವವನ್ನು ಗ್ರಾಹಕರೊಂದಿಗೆ ಆಚರಿಸಲು ಸಂಸ್ಥೆ ಕಾತುರದಿಂದ ಇದೆ.

ವರ್ಷಗಳಿಂದ ನಂಬಿಕೆ

ವರ್ಷಗಳಿಂದ ನಂಬಿಕೆ

ಅಮೇಜಾನ್ ಮತ್ತು ಒನ್ ಪ್ಲಸ್ ನ ನಾಲ್ಕು ವರ್ಷಗಳ ಉತ್ತಮ ಸಹಭಾಗಿತ್ವದ ಕಾರಣ ಇದೀಗ ಆಕರ್ಷಕ ರಿವಾರ್ಡ್ಸ್ ಗಳನ್ನು ನೂತನ ಫ್ಲಾಗ್ ಶಿಪ್ ಗಳ ಮೇಲೆ ನೀಡಲಾಗುತ್ತಿದ್ದು ನವೆಂಬರ್ 30 ರಿಂದ ಇದು ಜಾರಿಯಲ್ಲಿರಲಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಒನ್ ಪ್ಲಸ್ ಫೋನ್ ಗಳು ಅಮೇಜಾನ್.ಇನ್ ನಲ್ಲಿ ಎಕ್ಸ್ ಕ್ಲೂಸೀವ್ ಆಗಿ ಮಾರಾಟ ಮಾಡಲಾಗಿದ್ದು ಇದು ಕಂಪೆನಿಯ ನಾಲ್ಕು ವರ್ಷದ ಯಶಸ್ಸಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ ಎಂಬ ಚರ್ಚೆಯು ಭಾರತೀಯ ಮಾರುಕಟ್ಟೆಯಲ್ಲಿದೆ. ಒನ್ ಪ್ಲಸ್ ಮತ್ತು ಅಮೇಜಾನ್ ಎರಡೂ ಕಂಪೆನಿಗಳು ಉತ್ತಮ ಭಾಂಧವ್ಯ ಹೊಂದಿದ್ದು ನಿರಂತರವಾಗಿ ಒಟ್ಟಿಗೆ ಕೆಲಸ ಮಾಡುತ್ತಿದ್ದು ಉತ್ತಮ ಅಭಿವೃದ್ಧಿಯನ್ನು ಕಂಡೆವೆ. ಕಳೆದ ಕೆಲವು ವರ್ಷಗಳಲ್ಲಿ ವಿಭಿನ್ನ ಐಡಿಯಾಗಳನ್ನು , ಮಾರಾಟದ ಟ್ರಿಕ್ಸ್ ಗಳನ್ನು ಈ ಎರಡೂ ಕಂಪೆನಿಗಳು ಬಳಸಿವೆ. ಅದರಲ್ಲಿ ಇನ್ವೈಟ್ ಓನ್ಲಿ ಪರ್ಚೇಸ್, ರೆಫರಲ್ ಪ್ರೋಗ್ರಾಮ್ ಮತ್ತು ಫಾಸ್ಟ್ ಎಎಫ್ ಸೇಲ್ ಇತ್ಯಾದಿಗಳು.

ಕೌಂಟರ್ ಪಾಯಿಂಟ್ ನ ಮಾರ್ಕೆಟ್ ಮಾನಿಟರ್ ಸೇವೆಯ ವರದಿಯ ಪ್ರಕಾರ ಅಮೇಜಾನ್ ಪ್ರೀಮಿಯಂ ಸ್ಮಾರ್ಟ್ ಪೋನ್ ಸೆಗ್ಮೆಂಟ್ ನಲ್ಲಿ 77% ಮಾರುಕಟ್ಟೆಯ ಶೇರ್ ನ್ನು ಪಡೆದು ಪ್ರಾಬಲ್ಯ ಸಾಧಿಸಿದ್ದು ಒನ್ ಪ್ಲಸ್ ಗೆ ಧನ್ಯವಾದ ತಿಳಿಸುತ್ತದೆಯಂತೆ.

ಹೆಚ್ಚುವರಿ ಲಾಭಗಳು

ಹೆಚ್ಚುವರಿ ಲಾಭಗಳು

ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಇದನ್ನು ಖರೀದಿಸಲು ಕೆಲವು ಗ್ರೇಟ್ ಆಫರ್ ಗಳಿದೆ. ನವೆಂಬರ್ 30 ರಿಂದ ವಾರ್ಷಿಕೋತ್ಸವದ ಆಫರ್ ಲೈವ್ ಆಗಲಿದ್ದು ಅದರಲ್ಲಿ ಸಿಟಿಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಒನ್ ಪ್ಲಸ್ 6ಟಿಯನ್ನು ಖರೀದಿಸಿದರೆ 1,500 ರುಪಾಯಿ ಕ್ಯಾಷ್ ಬ್ಯಾಕ್ ಲಭ್ಯವಾಗುತ್ತದೆ. ವಾರ್ಷಿಕೋತ್ಸವದ ಆಫರ್ ನಲ್ಲಿ 6 ತಿಂಗಳ ಆಕರ್ಷಕ ನೋ ಕಾಸ್ಟ್ ಇಎಂಐ ಆಯ್ಕೆಯೂ ಕೂಡ ಇದೆ.

ಒಂದು ವೇಳೆ ನಿಮ್ಮ ಬಳಿ ಒನ್ ಪ್ಲಸ್ ಡಿವೈಸ್ ಇದ್ದಲ್ಲಿ ಒನ್ ಪ್ಲಸ್ 6ಟಿ ಖರೀದಿಸಲು ಎಕ್ಸ್ ಚೇಂಜ್ ಆಫರ್ ಲಭ್ಯವಿದ್ದು 3,000 ರುಪಾಯಿ ವರೆಗೆ ಎಕ್ಸ್ ಚೇಂಜ್ ಆಫರ್ ಸಿಗುತ್ತದೆ.

ಒನ್ ಪ್ಲಸ್ ಇತ್ತೀಚೆಗೆ ತನ್ನ ಪ್ರಾಥಮಿಕ ಬಳಕೆದಾರರ ಆಯ್ಕೆಯನ್ನು ಗಂಭೀರವಾಗಿ ಪರಿಗಣಿಸಿದೆ. ಆಪಲ್ ಫೋನ್ ನೊಂದಿಗಿರುವ ಬಳಕೆದಾರರನ್ನು ತಮ್ಮೆಡೆಗೆ ಸೆಳೆಯಲು ಕಂಪೆನಿಯು ಹೆಚ್ಚುವರಿ ಎಕ್ಸ್ ಚೇಂಜ್ ಅಮೌಂಟ್ ನ್ನು ಕೂಡ ನೀಡುತ್ತಿದೆ.

ಒನ್ ಪ್ಲಸ್ ನ ಎಕ್ಸ್ ಕ್ಲೂಸೀವ್

ಒನ್ ಪ್ಲಸ್ ನ ಎಕ್ಸ್ ಕ್ಲೂಸೀವ್

ನೂತನ ಜನರೇಷನ್ನಿನ ಐಫೋನ್ ನೊಂದಿಗೆ ಸ್ಪರ್ಧೆಗಿಳಿಯಲು ಟಾಪ್ ನಾಚ್ ಫೀಚರ್ ನ್ನು ಒನ್ ಪ್ಲಸ್ 6ಟಿಯಲ್ಲಿ ಅಳವಡಿಸಲಾಗಿದೆ. ಒಂದು ಫ್ಲಾಗ್ ಶಿಪ್ ಮೊಬೈಲ್ ಗೆ ಇರಬೇಕಾಗಿರುವ ಎಲ್ಲಾ ವೈಶಿಷ್ಟ್ಯತೆಯನ್ನು ಇದರಲ್ಲಿ ಸೇರಿಸಲಾಗಿದೆ ಮತ್ತು ಇತರೆ ಹೈ ಎಂಡ್ ಫೋನ್ ಗಳ ಬೆಲೆಯ ಜೊತೆಗೆ ವೈಶಿಷ್ಟ್ಯತೆಗಳ ಮಹತ್ವದೊಂದಿಗೆ ಸ್ಪರ್ಧೆಗಿಳಿಯಲು ಸಮರ್ಥವಾಗಿರುವ ಪ್ಯಾಕೇಜ್ ನ್ನು ಇದು ಹೊಂದಿದೆ.

ಈ ಸಂದರ್ಬದ ಬಗ್ಗೆ ಒನ್ ಪ್ಲಸ್ ಇಂಡಿಯಾದ ಜನರಲ್ ಮ್ಯಾನೇಜರ್ ಆಗಿರುವ ವಿಕಾಸ್ ಅಗರ್ವಾಲ್ ಮಾತನಾಡಿದ್ದು, ಅಮೇಜಾನ್ ಇಂಡಿಯಾ ಮತ್ತು ಒನ್ ಪ್ಲಸ್ ಸಂಸ್ಥೆಗಳ ನಡುವಿನ ಒಪ್ಪಂದವು ನಿಜಕ್ಕೂ ಖುಷಿನೀಡಿದೆ. ಗ್ರಾಹಕರಿಗೆ ಉತ್ತಮ ಅನುಭವವನ್ನು ನೀಡುವುದಕ್ಕೆ ಇದು ನೆರವಾಗಿದೆ. ಈಗಾಗಲೇ ನಮ್ಮ ಸಂಬಂಧಕ್ಕೆ ನಾಲ್ಕು ವರ್ಷಗಳು ಸಂದಿವೆ ಮತ್ತು ಮುಂದಿನ ದಿನಗಳಲ್ಲೂ ಇದು ಜಾರಿಯಲ್ಲಿರಲು ನಾವು ಬಯಸುತ್ತೇವೆ. ಆ ಮೂಲಕ ಗ್ರಾಹಕರಿಗೆ ಒನ್ ಪ್ಲಸ್ ನ ಇನ್ನಷ್ಟು ಕೊಡುಗೆಗಳು ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.

ಒಂದು ವೇಳೆ ನೀವು ನಿಮ್ಮ ಆಪಲ್ ಐಫೋನ್ ನಿಂದ ಒನ್ ಪ್ಲಸ್ ಗೆ ಸ್ವಿಚ್ ಆನ್ ಆಗಬೇಕು ಎಂದು ಬಯಸುತ್ತಿದ್ದಲ್ಲಿ ಖಂಡಿತ ಇದು ಸರಿಯಾದ ಸಮಯವಾಗಿದೆ. ಅದಕ್ಕಿಂತಲೂ ಹೆಚ್ಚಿ ಅಮೇಜಾನ್ ಮತ್ತು ಒನ್ ಪ್ಲಸ್ ನ ಸಹಭಾಗಿತ್ವದಲ್ಲಿ ಆಕರ್ಷಕ ಆಫರ್ ಗಳು ಲಭ್ಯವಾಗುತ್ತಿದ್ದು ಅಮೇಜಾನ್ ನ ಬೆಲೆಯ ಲೆಕ್ಕಾಚಾರದಲ್ಲಿ ಖಂಡಿತವಾಗಲೂ ಇದು ಗ್ರಾಹಕರಿಗೆ ಉತ್ತಮ ಅನುಭವವನ್ನು ನೀಡುತ್ತದೆ. ಕ್ರೋಮಾ. ರಿಲಯನ್ಸ್ ಡಿಜಿಯಲ್, ಒನ್ ಪ್ಲಸ್.ಇನ್ ಮತ್ತು ಒನ್ ಪ್ಲಸ್ ನ ಎಕ್ಸ್ ಕ್ಲೂಸೀವ್ ಆಫ್ ಲೈನ್ ಸ್ಟೋರ್ ಗಳಲ್ಲಿ ಆನಿವರ್ಸರಿ ಆಫರ್ ಗಳು ಲಭ್ಯವಿದೆ.

Best Mobiles in India

English summary
OnePlus, the world-renowned brand which is known for its top-of-the-line premium smartphone portfolio recently took the wraps off its futuristic flagship - the OnePlus 6T.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X