ಭಾರತಕ್ಕೆ ಬರಲಿದೆ ಓಬಿ ವರ್ಲ್ಡ್‌ ಪೋನ್: ರೂ. 5,500ಕ್ಕೆ 4G ಸ್ಮಾರ್ಟ್‌ಪೋನ್

|

ಸದ್ಯ ತೀವ್ರಗತಿಯಲ್ಲಿ ಬೆಳೆಯುತ್ತಿರುವ ಭಾರತೀಯ ಮೊಬೈಲ್ ಮಾರಕಟ್ಟೆಯ ಮೇಲೆ ವಿವಿಧ ಮೊಬೈಲ್ ತಯಾರಕ ಕಂಪನಿಗಳು ಕಣ್ಣಿಟ್ಟಿದ್ದು, ಈ ಹಿನ್ನಲೆಯಲ್ಲಿ Obi Worldphone ಭಾರತೀಯ ಮಾರುಕಟ್ಟೆಯನ್ನು ಶೀಘ್ರವೇ ಪ್ರವೇಶಿಸಲಿದ್ದು, ನೂತನವಾಗಿ Obi Worldphone MV1 ಎಂಬ ಆರಂಭಿಕ ಬೆಲೆಯ ಸ್ಮಾರ್ಟ್‌ಪೋನ್‌ನೊಂದನ್ನು ಪರಿಚಯಿಸುತ್ತಿದೆ.

ಭಾರತಕ್ಕೆ ಬರಲಿದೆ ಓಬಿ ವರ್ಲ್ಡ್‌ ಪೋನ್: ರೂ. 5,500ಕ್ಕೆ 4G ಸ್ಮಾರ್ಟ್‌ಪೋನ್

ಓದಿರಿ..: ಮಾರುಕಟ್ಟೆಯಲ್ಲಿ ಲಭ್ಯವಿರುವ ಟಾಪ್ 5 ಮೆಮೊರಿ ಕಾರ್ಡ್‌ಗಳು (64GB)

ಮೂಲಗಳ ಪ್ರಕಾರ ಈ ಪೋನನ್ನು ಆನ್ಲೈನ್ ಶಾಪಿಂಗ್ ಮಾರ್ಕೇಟ್‌ ಸ್ನ್ಯಾಪ್ ಕ್ಲೂಸ್ ಮೂಲಕ ಮಾರಾಟ ಮಾಡಲಿದೆ ಎನ್ನಲಾಗಿದ್ದು, ರೂ. 5,500ಕ್ಕೆ ಗುಣಮಟ್ಟದ 4G ಸ್ಮಾರ್ಟ್‌ಪೋನ್ ನೀಡಲು ಓಬಿ ವರ್ಲ್ಡ್‌ ಪೋನ್ ಮುಂದಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

5 ಇಂಚಿನ HD ಡಿಸ್‌ಪ್ಲೇ

5 ಇಂಚಿನ HD ಡಿಸ್‌ಪ್ಲೇ

ಓಬಿ ವರ್ಲ್ಡ್‌ ಪೋನ್ ಜಾಗತಿಕವಾಗಿ ಮೊಬೈಲ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದ್ದು, ಈ ಹಿನ್ನಲೆಯಲ್ಲಿ ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಪೋನನ್ನೇ ನೀಡಲಿದ್ದು, ಈ MV1 ಪೋನಿನಲ್ಲೂ 5 ಇಂಚಿನ HD ಗುಣಮಟ್ಟದ ಡಿಸ್‌ಪ್ಲೇಯನ್ನು ಅಳವಡಿಸಿದೆ. ಅಲ್ಲದೇ ಗೋರಿಲ್ಲಾ ಗ್ಲಾಸ್ ಸಹ ಹೊಂದಿದೆ.

1.3GHz ವೇಗದ ಪ್ರೋಸೆಸರ್

1.3GHz ವೇಗದ ಪ್ರೋಸೆಸರ್

ಓಬಿ ವರ್ಲ್ಡ್‌ ಪೋನ್ MV1 ನಲ್ಲಿ ವೇಗದ ಕಾರ್ಯಚರಣೆಗಾಗಿ 1.3GHz ವೇಗದ ಸ್ನಾಪ್‌ಡ್ರಾಗ್ 212 ಪ್ರೋಸೆಸರ್ ಅಳವಡಿಸಲಾಗಿದೆ. ಅಲ್ಲದೇ ಆಂಡ್ರಿನೋ 304 GPU ಇದೆ. ಮೊಬೈಲ್ ಎರಡು ಮಾದರಿಯಲ್ಲಿ ಲಭ್ಯವಿದ್ದು, 1GB RAM ಮತ್ತು 2GB RAM ಮಾದರಿಯಲ್ಲಿ ದೊರೆಯಲಿದೆ.

16GB ಇಂಟರ್ನಲ್ ಮೊಮೊರಿ

16GB ಇಂಟರ್ನಲ್ ಮೊಮೊರಿ

ಎರಡು ಮಾದರಿಯ ಪೋನಿನಲ್ಲೂ 16GB ಇಂಟರ್ನಲ್ ಮೊಮೊರಿ ಇದ್ದು, ಅಲ್ಲದೇ ಮೆಮೊರಿ ಕಾರ್ಡ್‌ ಹಾಕಿಕೊಳ್ಳುವ ಮೂಲಕ 64GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ. ಆಂಡ್ರಾಯ್ಡ್ 5.1 ನಲ್ಲಿ ಈ ಪೋನು ಕಾರ್ಯನಿರ್ವಹಿಸಲಿದೆ.

8MP ಕ್ಯಾಮೆರಾ:

8MP ಕ್ಯಾಮೆರಾ:

ಈ ಸ್ಮಾರ್ಟ್‌ಪೋನಿನ ಹಿಂಭಾಗದಲ್ಲಿ 8MP ಕ್ಯಾಮೆರಾ ಇದ್ದು, ಮುಂಭಾಗದಲ್ಲಿ 2MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಹಿಂಭಾಗದಲ್ಲಿ ಎಲ್‌ಇಡಿ ಫ್ಲಾಷ್ ಸಹ ನೀಡಲಾಗಿದೆ. ಈ ಪೋನು 4G ಸಪೋರ್ಟ್ ಮಾಡಲಿದ್ದು, ಫಿಂಗರ್‌ಪ್ರಿಂಟ್‌ ಸ್ಕ್ಯಾನರ್ ಸಹ ಈ ಪೋನಿನಲ್ಲಿದೆ.

Best Mobiles in India

Read more about:
English summary
Obi Worldphone is gearing up to launch Obi Worldphone MV1 in India this month, The Mobile Indian reports. The company is said to have partnered an e-commerce portal ShopClues. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X