ದುಬಾರಿ ಐಫೋನ್ Xಗಿಂತಲೂ ಒನ್‌ಪ್ಲಸ್ 6 ಬೆಸ್ಟ್: ಇಲ್ಲಿದೇ 6 ಕಾರಣಗಳು..!

|

ಮಾರುಕಟ್ಟೆಯಲ್ಲಿ ಆಪಲ್ ಲಾಂಚ್ ಮಾಡಿದ್ದ ದುಬಾರಿ ಬೆಲೆಯ ಐಫೋನ್ X ಹೊಸ ಟ್ರೆಂಡ್ ಅನ್ನು ಹುಟ್ಟಿಹಾಕಿತ್ತು. ಇದೇ ಮಾದರಿಯನ್ನು ಕಾಪಿ ಮಾಡಿದ ಹಲವು ಸ್ಮಾರ್ಟ್‌ಫೋನ್‌ಗಳು ಈಗಾಗಲೇ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿವೆ. ಇದೇ ಸಾಲಿಗೆ ಸೇರಿಕೊಳ್ಳಲಿರುವ ಒನ್‌ಪ್ಲಸ್ 6 ಸ್ಮಾರ್ಟ್‌ಪೋನ್ ಸಹ ಐಫೋನ್ X ಮಾದರಿಯಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಿವೆ.

ದುಬಾರಿ ಐಫೋನ್ Xಗಿಂತಲೂ ಒನ್‌ಪ್ಲಸ್ 6 ಬೆಸ್ಟ್: ಇಲ್ಲಿದೇ 6 ಕಾರಣಗಳು..!

ಈಗಾಗಲೇ ಮಾರುಕಟ್ಟೆಯಲ್ಲಿ ಐಫೋನ್‌ಗಿಂತಲೂ ಆಂಡ್ರಾಯ್ಡ್ ಫೋನ್ ಬೆಸ್ಟ್ ಎನ್ನುವವರ ಸಂಖ್ಯೆಯೂ ಅಧಿಕವಾಗಿದೆ. ಇದೇ ಮಾದರಿಯಲ್ಲಿ ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಶುರು ಮಾಡಿರುವ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್‌ಗಿಂತಲೂ ಐಫೋನ್ X ಬೆಸ್ಟ್ ಎನ್ನಲಾಗಿದೆ. ಇದಕ್ಕೆ ಕಾರಣಗಳೇನು ಎನ್ನುವುದನ್ನು ತಿಳಿಸುವ ಪ್ರಯತ್ನವೇ ಇದು.

ಐಫೋನ್ X ಅರ್ಧ ಬೆಲೆಗೆ:

ಐಫೋನ್ X ಅರ್ಧ ಬೆಲೆಗೆ:

ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್‌ ಸದ್ಯ ಮಾರುಕಟ್ಟೆಯಲ್ಲಿ ಸೇಲ್‌ ಆಗುತ್ತಿದ್ದು, ಐಫೋನ್ X ಬೆಲೆಗಿಂತಲೂ ಅರ್ಧದಷ್ಟು ಬೆಲೆಗೆ ಮಾರಾಟವಾಗುತ್ತಿದ್ದು, ಅದರಲ್ಲಿ ಇಲ್ಲದಂತಹ ಆಯ್ಕೆಗಳನ್ನು ಒಳಗೊಂಡಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಒನ್‌ಪ್ಲಸ್ ಬೆಸ್ಟ್.

ನೋಚ್ ಆಫ್ ಮಾಡಬಹುದು:

ನೋಚ್ ಆಫ್ ಮಾಡಬಹುದು:

ಒಂದು ವೇಳೆ ನಿಮಗೆ ಒನ್‌ಪ್ಲಸ್ 6 ಸ್ಮಾರ್ಟ್‌ಫೋನಿನಲ್ಲಿರುವ ನೋಚ್ ಇಷ್ಟವಾಗಲಿಲ್ಲ ಎಂದಾದರೆ ನೀವು ಅದನ್ನು ಆಫ್ ಅನ್ನು ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ. ಆದರೆ ಐಫೋನ್ X ನಲ್ಲಿ ಈ ಮಾದರಿಯ ಆಯ್ಕೆಯನ್ನು ಕಾಣಲು ಸಾಧ್ಯವಿಲ್ಲ ಎನ್ನಲಾಗಿದೆ.

ಡ್ಯಾಷ್ ಚಾರ್ಜರ್:

ಡ್ಯಾಷ್ ಚಾರ್ಜರ್:

ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್‌ ಡ್ಯಾಷ್ ಚಾರ್ಜ್ ಸಪೋರ್ಟ್ ಮಾಡಲಿದ್ದು, ಶೇ.50 ಬ್ಯಾಟರಿ 30 ನಿಮಿಷದಲ್ಲಿ ಪೂರ್ಣಗೊಳ್ಳಲಿದೆ. ಅಲ್ಲದೇ ಇದು ಸ್ಮಾರ್ಟ್‌ಫೋನಿನೊಂದಿಗೆ ದೊರೆಯಲಿದೆ. ಆದರೆ ಐಫೋನ್ X ಸಹ ಫಾಸ್ಟ್ ಚಾರ್ಜಿಂಗ್ ಸಫೋರ್ಟ್ ಮಾಡಲಿದೆ. ಆದರೆ ಚಾರ್ಜರ್ ಅನ್ನು ಹೆಚ್ಚುವರಿಯಾಗಿ ಪಡೆಯಬೇಕು.

ಹೆಡ್ ಫೋನ್ ಜಾಕ್:

ಹೆಡ್ ಫೋನ್ ಜಾಕ್:

ಒನ್‌ಪ್ಲಸ್ 6 ಸ್ಮಾರ್ಟ್‌ಫೋನಿನಲ್ಲಿ ಹೆಡ್ ಫೋನ್ ಜಾಕ್ ಇದ್ದು, 3.5mm ಜಾಕ್ ಇರುವ ಹೆಡ್ ಫೋನ್‌ಗಳನ್ನು ಹಾಕಿಕೊಳ್ಳಬಹುದಾಗಿದೆ. ಆದರೆ ಈ ಆಯ್ಕೆಯೂ ಐಫೋನ್ X ನಲ್ಲಿ ಇಲ್ಲ. ಏರ್ ಪೊಡ್ ನಲ್ಲಿ ಬ್ಯಾಟರಿ ಇಲ್ಲವಾದರೆ ನೀವು ಹಾಡು ಕೇಳಲು ಸಾಧ್ಯವೇ ಇಲ್ಲ.

ವೇಗ ಪ್ರೋಸೆಸರ್:

ವೇಗ ಪ್ರೋಸೆಸರ್:

ಒನ್‌ಪ್ಲಸ್ 6 ಸ್ಮಾರ್ಟ್‌ಫೋನಿನಲ್ಲಿ 8GB RAM ಕಾಣಬಹುದಾಗಿದ್ದು, ಇದರೊಂದಿಗೆ ಬೆಸ್ಟ್ ಇನ್ ಕ್ಲಾಸ್ ಪ್ರೋಸೆಸರ್ ಅನ್ನು ನೀಡಲಾಗಿದೆ. ಆದರೆ ಐಪೋನ್ Xನಲ್ಲಿ ಇಷ್ಟು ಪ್ರಮಾಣದ RAM ಅನ್ನು ಕಾಣಲು ಸಾಧ್ಯವಿಲ್ಲ.

Oneplus 6 First Impressions - Gizbot Kannada
ಫಿಂಗರ್ ಪ್ರಿಂಟ್ ಸ್ಕ್ಯಾನರ್:

ಫಿಂಗರ್ ಪ್ರಿಂಟ್ ಸ್ಕ್ಯಾನರ್:

ಒನ್‌ಪ್ಲಸ್ 6 ಸ್ಮಾರ್ಟ್‌ಫೋನಿನಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ನೋಡಬಹುದಾಗಿದೆ. ಇದಲ್ಲದೇ ಫೇಸ್ ಲಾಕ್ ಅನ್ನು ಸಹ ನೀಡಲಾಗಿದೆ. ಆದರೆ ಐಫೋನ್ X ನಲ್ಲಿ ಫೇಸ್ ಐಡಿ ಮಾತ್ರವೇ ಇದ್ದು, ಫಿಂಗರ್ ಪ್ರಿಂಟ್ ಆಯ್ಕೆಯನ್ನು ನೀಡಿಲ್ಲ ಎನ್ನಲಾಗಿದೆ.

Best Mobiles in India

English summary
OnePlus 6 is better than the iPhone X. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X