ವಿಜೃಂಭಣೆಯಿಂದ ಲಾಂಚ್ ಆಯ್ತು 'ಒನ್‌ಪ್ಲಸ್ 6'!..ಕಳ್ಳನೂ ಖರೀದಿಸುವ ಬೆಲೆಯಲ್ಲಿ!!

ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿಯೇ ಭಾರೀ ನಿರೀಕ್ಷೆ ಹುಟ್ಟಿಸಿದ್ದ ಚೀನಾದ ಒನ್‌ಪ್ಲಸ್ ಕಂಪೆನಿಯ 'ಒನ್‌ಪ್ಲಸ್ 6' ಸ್ಮಾರ್ಟ್‌ಫೋನ್ ಲಂಡನ್‌ನಲ್ಲಿ ಮೊದಲು ಬಿಡುಗಡೆಯಾಗಿದೆ.

|

ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿಯೇ ಭಾರೀ ನಿರೀಕ್ಷೆ ಹುಟ್ಟಿಸಿದ್ದ ಚೀನಾದ ಒನ್‌ಪ್ಲಸ್ ಕಂಪೆನಿಯ 'ಒನ್‌ಪ್ಲಸ್ 6' ಸ್ಮಾರ್ಟ್‌ಫೋನ್ ಲಂಡನ್‌ನಲ್ಲಿ ಮೊದಲು ಬಿಡುಗಡೆಯಾಗಿದೆ. ಭಾರತದಲ್ಲಿ ಇಂದು ಮಧ್ಯಾಹ್ನ 3 ಗಂಟೆ ವೇಳೆಗೆ ಬಿಡುಗಡೆಗೆ ಆಯೋಜನೆಯಾಗಿದ್ದ 'ಒನ್‌ಪ್ಲಸ್ 6 ಸ್ಮಾರ್ಟ್‌ಫೋನಿನ ಎಲ್ಲಾ ಮಾಹಿತಿಗಳು ಲಂಡನ್ನಿನಲ್ಲಿಯೇ ಹೊರಬಿದ್ದಿವೆ.

ಬಿಡುಗಡೆಗಿಂತಲೂ ಮುನ್ನವೇ ಭಾರೀ ನಿರೀಕ್ಷೆಯನ್ನು ಮೂಡಿಸಿದ್ದ ಒನ್‌ಪ್ಲಸ್ 6 ಸ್ಮಾರ್ಟ್‌ಫೋನಿನ ಬಗ್ಗೆ ಈವರೆಗೂ ಹರಿದಾಡುತ್ತಿದ್ದ ಎಲ್ಲಾ ಮಾಹಿತಿಗಳು ನಿಜವಾಗಿವೆ. ನಮಗೆ ಈ ಮೊದಲು ಸಿಕ್ಕಿರುವ ಮಾಹಿತಿಗಳಿಗಿಂತ ಹೆಚ್ಚಾಗಿ ಸ್ಮಾರ್ಟ್‌ಫೋನ್ ವಾಟರ್‌ಪ್ರೂಫ್ ಫೀಚರ್ ಮತ್ತು ಬುಲೆಟ್ ವೈರ್‌ಲೆಸ್ ಹೆಡ್‌ಫೋನ್ ಅನ್ನು ಹೊಂದಿರುವುದು ಆಶ್ಚರ್ಯಕರವಾಗಿದೆ.

ವಿಜೃಂಭಣೆಯಿಂದ ಲಾಂಚ್ ಆಯ್ತು 'ಒನ್‌ಪ್ಲಸ್ 6'!..ಕಳ್ಳನೂ ಖರೀದಿಸುವ ಬೆಲೆಯಲ್ಲಿ!!

ಇನ್ನುಳಿದಂತೆ ವಿಶ್ವದ ಹೈ ಎಂಡ್ ಫೀಚರ್ಸ್ ಹೊಂದಿರುವ ಸ್ಮಾರ್ಟ್‌ಪೋನುಗಳಲ್ಲಿ ಒನ್‌ಪ್ಲಸ್ 6 ಒಂದಾಗಲಿದೆ ಎಂಬ ನಿರೀಕ್ಷೆಯನ್ನು ಒನ್‌ಪ್ಲಸ್ ಕಂಪೆನಿ ನಿಜಮಾಡಿದೆ. ಹಾಗಾದರೆ, ಬಿಡುಗಡೆಯಾಗಿ ವಿಜೃಂಭಿಸುತ್ತಿರುವ ಒನ್‌ಪ್ಲಸ್ 6 ಸ್ಮಾರ್ಟ್‌ಫೋನಿನ ಫೀಚರ್ಸ್ ಯಾವುವು? ಒನ್‌ಪ್ಲಸ್ 6 ಸ್ಮಾರ್ಟ್‌ಫೋನಿನ ಬೆಲೆ ಎಷ್ಟು ಎಂಬುದನ್ನು ಮುಂದೆ ತಿಳಿಯಿರಿ.!

ಡಿಸ್‌ಪ್ಲೇ ತಂತ್ರಜ್ಞಾನ!!

ಡಿಸ್‌ಪ್ಲೇ ತಂತ್ರಜ್ಞಾನ!!

ಒನ್‌ಪ್ಲಸ್ 6 ಸ್ಮಾರ್ಟ್‌ಫೋನಿನಲ್ಲಿ ಆಪಲ್ ಎಕ್ಸ್ ರೀತಿಯಲ್ಲಿ ಡಿಸ್‌ಪ್ಲೇ ನೋಚ್ ಇರುವ ಬಗ್ಗೆ ಈಗಾಗಲೇ ಮಾಹಿತಿ ನೀಡಿದ್ದ ಒನ್‌ಪ್ಲಸ್ ಕಂಪೆನಿಯು ಡಿಸ್‌ಪ್ಲೇ ಗುಣಮಟ್ಟದಲ್ಲಿಯೂ ಯಾವುದೇ ರಾಜಿಯಾಗಿಲ್ಲ. 6.28 ಇಂಚಿನ ಎಫ್‌ಹೆಚ್‌ಡಿ ಪ್ಲಸ್ ಆಪ್ಟಿಕ್ ಡಿಸ್‌ಪ್ಲೇನ್ನು ಹೊಂದಿದೆ.2280 x 1080 ಪಿಕ್ಸೆಲ್ ರೆಸಲ್ಯೂಶನನ್ನು ಹೊಂದಿರುವ ಡಿಸ್‌ಪ್ಲೇಯು ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ನಿಂದ ಪ್ರೊಟೆಕ್ಟ್ ಆಗಿದೆ. ಈ ಸಾಧನವು 3.5 ಮಿಮೀ ಆಡಿಯೋ ಜ್ಯಾಕ್ ಅನ್ನು ಹೊಂದಿದೆ.

ಸ್ಮಾರ್ಟ್‌ಫೋನ್ ವಿನ್ಯಾಸ!!

ಸ್ಮಾರ್ಟ್‌ಫೋನ್ ವಿನ್ಯಾಸ!!

19:9 ಆಸ್ಪೆಕ್ಟ್ ಅನುಪಾದಲ್ಲಿ ಡಿಸ್‌ಪ್ಲೇ ನೋಚ್ ಸ್ಕ್ರೀನ್ ಹೊಂದಿರುವ 'ಒನ್‌ಪ್ಲಸ್ 6' ಸ್ಮಾರ್ಟ್‌ಫೋನ್ ಫಿಂಗರ್‌ಪ್ರಿಂಟ್ ಫೀಚರ್ ಅನ್ನು ಹೊಂದಿದೆ. ಸಂಪೂರ್ಣ ವಾಟರ್‌ಪ್ರೂಫ್ ಬಾಡಿಯನ್ನು ನೀಡಿದರೂ ಸಹ ಪೂರ್ತಿ ಸ್ಕ್ರೀನ್ ಅನ್ನು ಹೊಂದಿರುವುದು ಸ್ಮಾರ್ಟ್‌ಫೋನ್ ವಿಶೇಷತೆಯಾಗಿದೆ. ಇನ್ನು ಸ್ಮಾರ್ಟ್‌ಫೋನ್ ಬಳಸಿ ನೋಡಿರುವ ತಜ್ಞರು ಹೇಳೀದಂತೆ, " ಒಂದು ಹೈ ಎಂಡ್ ಸ್ಮಾರ್ಟ್‌ಫೋನ್ ಎನ್ನಲು ಒನ್‌ಪ್ಲಸ್ 6 ವಿನ್ಯಾಸ ಅರ್ಹವಾಗಿದೆ' ಎಂದು ಆಶ್ಚರ್ಯವ್ಯಕ್ತಪಡಿಸಿದ್ದಾರೆ.

ಪ್ರೊಸೆಸರ್ ಮತ್ತು RAM!!

ಪ್ರೊಸೆಸರ್ ಮತ್ತು RAM!!

ಒನ್‌ಪ್ಲಸ್ ಕಂಪೆನಿ ಸಿಇಒ ಪೀಟರ್ ಲೌ ಅವರು ಮೊದಲೇ ತಿಳಿಸಿದಂತೆ 'ಒನ್‌ಪ್ಲಸ್ 6' ಸ್ಮಾರ್ಟ್‌ಫೋನ್, ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 845 ಎಸ್‌ಒಸಿ ಪ್ರೊಸೆಸರ್ ಅನ್ನು ಹೊಂದಿದೆ. ಕಾರ್ಯನಿರ್ವಹಣೆಯಲ್ಲಿ 30% ಹೆಚ್ಚು ದಕ್ಷತೆ ಹಾಗೂ ವಿದ್ಯುತ್ ಉಳಿಕೆಯಲ್ಲಿ 10% ದಕ್ಷತೆಯನ್ನು ಈ ಪ್ರೊಸೆಸರ್ ನೀಡಲಿದೆ. ಈ ಪ್ರೊಸೆಸರ್ ಅನ್ನು ಅಡ್ರಿನೋ 630 ಜಿಪಿಯು ಜೊತೆ ಜೋಡಿಸಲಾಗಿದೆ. ಇನ್ನು UFS 2.1 ಶೇಖರಣಾ ಸಾಮರ್ಥ್ಯದ 6GB / 8GB RAM ಮತ್ತು 64GB / 128GB / 256GB ಮೆಮೊರಿ ವೆರಿಯಂಟ್‌ಗಳಲ್ಲಿ ಫೋನ್ ಬಿಡುಗಡೆಯಾಗಿದೆ.

'ಒನ್‌ಪ್ಲಸ್ 6' ಕ್ಯಾಮೆರಾ!!

'ಒನ್‌ಪ್ಲಸ್ 6' ಕ್ಯಾಮೆರಾ!!

'ಒನ್‌ಪ್ಲಸ್ 6' ಸ್ಮಾರ್ಟ್‌ಫೋನ್ ಈಗ ಹೆಚ್ಚು ತಂತ್ರಜ್ಞಾನದ ಡ್ಯುಯಲ್ ಕ್ಯಾಮೆರಾ ತಂತ್ರಜ್ಞಾನದಿಂದ ಅಲಂಕೃತವಾಗಿದೆ. 1.22 ಮೈಕ್ರಾನ್ ಪಿಕ್ಸೆಲ್ ಗಾತ್ರದ ಎಫ್ / 1.7 ಅಪಾರ್ಚರ್ ಹೊಂದಿರುವ 20-ಮೆಗಾಪಿಕ್ಸೆಲ್ ಸೋನಿ IM376K ಕ್ಯಾಮೆರಾ ಹಾಗೂ 16-ಮೆಗಾಪಿಕ್ಸೆಲ್ ಸೋನಿ IMX519 ಕ್ಯಾಮೆರಾಗಳು ಹಿಂಬಾದಲ್ಲಿವೆ. ಜೊತೆಗೆ 1 ಮೆಕ್ರಾನ್ ಪಿಕ್ಸೆಲ್ ಗಾತ್ರದ f / 1.7 ಅಪಾರ್ಚರ್ ಹೊಂದಿರುವ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾವನ್ನು ನೀಡಲಾಗಿದೆ.

ಸಾಫ್ಟ್‌ವೇರ್ ಮತ್ತು ಫೀಚರ್ಸ್!!

ಸಾಫ್ಟ್‌ವೇರ್ ಮತ್ತು ಫೀಚರ್ಸ್!!

'ಒನ್‌ಪ್ಲಸ್ 6' ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 8.1 ಓರಿಯೊ ಜೊತೆಗೆ ಆಕ್ಸಿಜನ್ 5.1 ಫೀಚರ್ ಹೊಂದಿದೆ. ಆಂಡ್ರಾಯ್ಡ್ 'ಪಿ' ಆರಂಭಿಕ ಅಳವಡಿಕೆ ಸ್ಮಾರ್ಟ್‌ಫೋನ್‌ಗಳಲ್ಲಿ ಇದು ಕೂಡ ಒಂದಾಗಿದೆ. ಈ ಆಕ್ಸಿಜನ್ 5.1 ಒಎಸ್ ಐಒಎಸ್ ಹತ್ತಿರದ ಆಂಡ್ರಾಯ್ಡ್ ತರಹದ ಅನುಭವವನ್ನು ನೀಡುತ್ತದೆ. ಇನ್ನು ಎನ್ಎಫ್‌ಸಿ, ಬ್ಲೂಟೂತ್ 5.0, 4 ಜಿ ವೋಲ್ಸ್ ಮತ್ತು ಹೆಚ್ಚಿನವುಗಳಂತಹ ಇತರ ಅಂಶಗಳಿವೆ. ಗೇಮಿಂಗ್ ಮೋಡ್ ಗಮನಾರ್ಹವಾಗಿದೆ, ಗೇಮಿಂಗ್ ಮೋಡ್ ಹಿಂದಿನ ಮಾದರಿಗಳಿಗಿಂತ ಸುಧಾರಿತ ಕಾರ್ಯಕ್ಷಮತೆಯನ್ನು ನೀಡುತ್ತದೆ.

ಫೇಸ್‌ಲಾಕ್ ತಂತ್ರಜ್ಞಾನ!!

ಫೇಸ್‌ಲಾಕ್ ತಂತ್ರಜ್ಞಾನ!!

'ಒನ್‌ಪ್ಲಸ್ 6' ಸ್ಮಾರ್ಟ್‌ಫೋನಿನಲ್ಲಿ ನಿರೀಕ್ಷೆಯಂತಯೇ ಫೇಸ್ ಅನ್ಲಾಕ್ ಫೀಚರ್ ಅನ್ನು ತರಲಾಗಿದೆ. ಫೇಸ್‌ ಅನ್ಲಾಕ್ ಮಾಡಲು 0.4 ಸೆಕೆಂಡ್ ಸಮಯವನ್ನು ಫೇಸ್ ಅನ್ಲಾಕ್ ಫೀಚರ್ ತೆಗೆದುಕೊಳ್ಳುತ್ತಿದೆ. ಇದರ ಜೊತೆಗೆ ಹಿಂಭಾಗದಲ್ಲಿ ಫಿಂಗರ್ಪ್ರಿಂಟ್ ಸಂವೇದಕವು ಕೇವಲ 0.2 ಸೆಕೆಂಡ್ಗಳನ್ನು ತೆಗೆದುಕೊಳ್ಳುತ್ತದೆ. ಒಟ್ಟಿನಲ್ಲಿ ಫಿಂಗರ್‌ಪ್ರಿಂಟ್ ಮತ್ತು ಫೇಸ್ ಅನ್ಲಾಕ್ ಎರಡೂ ಫೀಚರ್‌ಗಳಿಂದ ಸ್ಮಾರ್ಟ್‌ಫೋನ್ ಅಲಂಕೃತವಾಗಿದೆ. ಆದರೆ, ಫೇಸ್ ಅನ್ಲಾಕ್ ಆಪಲ್ ಎಕ್ಸ್‌ನಷ್ಟು ನಿಖರವಾಗಿಲ್ಲದೆ ಇರಬಹುದು ಎಂದು ತಜ್ಞರು ಹೇಳಿದ್ದಾರೆ.

'ಒನ್‌ಪ್ಲಸ್ 6' ಬೆಲೆ!!

'ಒನ್‌ಪ್ಲಸ್ 6' ಬೆಲೆ!!

'ಒನ್‌ಪ್ಲಸ್ 6' ಸ್ಮಾರ್ಟ್‌ಫೋನಿನ ಬಗ್ಗೆ ಈಗಾಗಲೇ ಬಹುತೇಕ ಮಾಹಿತಿಗಳನ್ನು ತಿಳಿದಿರುವ ನಿಮಗೆ ಒನ್‌ಪ್ಲಸ್ 6 ಬೆಲೆ ಎಷ್ಟು ಎಂಬ ಕುತೋಹಲ ಮೂಡಿಯೇ ಇರುತ್ತದೆ. 'ಒನ್‌ಪ್ಲಸ್ 6' ಸ್ಮಾರ್ಟ್‌ಫೋನಿನ ಬೆಲೆ ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಕಡಿಮೆಯಲ್ಲಿಯೇ ಇದ್ದು, ಮಿರರ್‌ ಬ್ಲಾಕ್ ಮತ್ತು ಮಿಡ್‌ನೈಟ್ ಬ್ಲಾಕ್ ಆವೃತ್ತಿಯ ಒನ್‌ಪ್ಲಸ್ 6 ಬೆಲೆ $529 ಡಾಲರ್‌ಗಳಿಂದ ಶುರುವಾಗಿದೆ. ಅಂದರೆ, ಭಾರತದ ರೂಪಾಯಿಗಳ ಲೆಕ್ಕದಲ್ಲಿ ಕೇವಲ 35,000 ರೂಪಾಯಿಗಳು ಎಂದರೆ ನಿಮಗೆ ಆಶ್ಚರ್ಯವಾಗಲೇಬೇಕು.

Best Mobiles in India

English summary
OnePlus 6 is now official and here are all the details. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X