ಸ್ಮಾರ್ಟ್‌ಫೋನ್‌ ಬಳಕೆಯನ್ನೇ ಬದಲಾಯಿಸುತ್ತೇ ಅತ್ಯಾಧುನಿಕ ಒನ್‌ಪ್ಲಸ್‌ 6T..!

  ಬಹು ನಿರೀಕ್ಷಿತ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ನಲ್ಲಿ ಇರುತ್ತೆ ಎನ್ನಲಾಗಿರುವ ಇನ್‌ಡಿಸ್‌ಪ್ಲೇ ಫಿಂಗರ್‌ ಪ್ರಿಂಟ್ ಸ್ಕ್ಯಾನರ್ ಕುರಿತು ತಿಂಗಳುಗಳ ಹಿಂದೆಯೇ ಅನೇಕ ವದಂತಿಗಳನ್ನು ಹಬ್ಬಿರುವುದನ್ನು ನೀವು ಗಮನಿಸಿರುತ್ತೀರಿ. ಆದರೆ, ಇನ್‌ಡಿಸ್‌ಪ್ಲೇ ಫಿಂಗರ್‌ಪ್ರಿಂಟ್‌ ಇರುವ ಕುರಿತು ಒನ್‌ಪ್ಲಸ್‌ನ ಸಂಸ್ಥಾಪಕ ಮತ್ತು ಸಿಇಒ ಆಗಿರುವ ಪೇಟೆ ಲಾ ಖಚಿತ ಪಡಿಸಿದ್ದು, ಇನ್‌ಡಿಸ್‌ಪ್ಲೇ ಅನ್‌ಲಾಕ್‌ ವೇಗದ ಅನುಭವ ನೀಡಲಿದೆ ಎನ್ನಲಾಗಿದೆ. ಬಹುನಿರೀಕ್ಷಿತ ಫ್ಲಾಗ್‌ಶಿಪ್‌ ಸ್ಮಾರ್ಟ್‌ಫೋನ್‌ನಲ್ಲಿನ ಸ್ಕ್ರೀನ್ ಅನ್‌ಲಾಕ್‌ ಫೀಚರ್ ಕುರಿತು ಒನ್‌ಪ್ಲಸ್‌ ಕಂಪನಿ ಸಣ್ಣ ವಿಡಿಯೋ ಬಿಡುಗಡೆ ಮಾಡಿ ಸ್ಮಾರ್ಟ್‌ಫೋನ್‌ ಪ್ರಿಯರಲ್ಲಿ ಮತ್ತಷ್ಟು ಕುತೂಹಲವನ್ನು ಹೆಚ್ಚಿಸಿದೆ.

  ಒನ್‌ಪ್ಲಸ್‌ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ನೀವು ಹೊಸ ಸ್ಮಾರ್ಟ್‌ಫೋನ್‌, ಅದರ ವಿನ್ಯಾಸವನ್ನು ಸುಲಭವಾಗಿ ಗುರುತಿಸಬಹುದು. ಹೊಸ ಸ್ಮಾರ್ಟ್‌ಫೋನ್‌ ತೆಳುವಾದ ಬೆಜಲ್ಸ್‌ ಮತ್ತು ಇನ್‌ಡಿಸ್‌ಪ್ಲೇ ಫಿಂಗರ್‌ಪ್ರಿಂಟ್‌ ಸ್ಕ್ಯಾನರ್ ಹೊಂದಿರುವುದನ್ನು ಬಹಳ ಸೂಕ್ಷ್ಮವಾಗಿಯೇ 5 ಸೆಕೆಂಡ್‌ ವಿಡಿಯೋ ಹೊರಹಾಕಿದೆ. OnePlus 6T ಸ್ಮಾರ್ಟ್‌ಫೋನ್‌ನ ಇನ್‌ಡಿಸ್‌ಪ್ಲೇ ಫಿಂಗರ್‌ಪ್ರಿಂಟ್‌ ಸ್ಕ್ಯಾನರ್‌ನಿಂದ ನಾವು ಒಂದಿಷ್ಟು ಉತ್ತಮ ಫಲಿತಾಂಶಗಳನ್ನು ನಿರೀಕ್ಷಿಸುತ್ತಿದ್ದೇವೆ.

  ಸ್ಮಾರ್ಟ್‌ಫೋನ್‌ ಬಳಕೆಯನ್ನೇ ಬದಲಾಯಿಸುತ್ತೇ ಅತ್ಯಾಧುನಿಕ ಒನ್‌ಪ್ಲಸ್‌ 6T..!

  OnePlus ತಂಡವು ಅನ್‌ಲಾಕ್‌ ಸಮಯದಲ್ಲಿ ಮಿಲಿ ಸೆಕೆಂಡ್‌ಗಳನ್ನು ಉಳಿಸುವ ಕಾರ್ಯವನ್ನು ಮಾಡಲು ಅನೇಕ ತಿಂಗಳುಗಳನ್ನು ವ್ಯಯಿಸಿದೆ. ಮತ್ತು ದೈನಂದಿನ ಸ್ಮಾರ್ಟ್‌ಫೋನ್‌ ಬಳಕೆಯಲ್ಲಿ ತೃಪ್ತಿಕರ ಅನುಭವ ನೀಡಲು ಅನ್‌ಲಾಕ್‌ ಅನಿಮೇಷನ್‌ನ್ನು ಬಹಳ ಎಚ್ಚರಿಕೆಯಿಂದ ರೂಪಿಸಿದೆ. ಮುಂಬರುವ ಫ್ಲಾಗ್‌ಶಿಪ್‌ ಸ್ಮಾರ್ಟ್‌ಫೋನ್‌ನಲ್ಲಿ ಹೊಸ ತಂತ್ರಜ್ಞಾನ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿಸಲು ನಾವು ಉತ್ಸುಕವಾಗಿದ್ದು, ಹೊಸ ತಂತ್ರಜ್ಞಾನದ ಕುರಿತು ಮುಂದೆ ನೋಡಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಅತ್ಯಾಧುನಿಕ ಸ್ಕ್ರೀನ್‌ ಅನ್‌ಲಾಕ್‌ ತಂತ್ರಜ್ಞಾನ

  ನಮ್ಮ ಬಳಕೆದಾರರಿಗೆ ತಂತ್ರಜ್ಞಾನದ ಮಿತಿಗಳನ್ನು ದಾಟಿ ನಾವೀನ್ಯತೆಯನ್ನು ನೀಡಬೇಕೆಂಬುದು OnePlus ನಂಬಿಕೆ. ಇನ್‌ಡಿಸ್‌ಪ್ಲೇ ಫಿಂಗರ್‌ಪ್ರಿಂಟ್‌ ಸ್ಕ್ಯಾನರ್‌ ತಂತ್ರಜ್ಞಾನವು ಸಾಮಾನ್ಯ ಬಯೋಮೆಟ್ರಿಕ್ ಸ್ಕ್ಯಾನರ್‌ಗಿಂತ ಹೆಚ್ಚು ಸಂಕೀರ್ಣವಾಗಿದೆ. ಒನ್‌ಪ್ಲಸ್‌ 6Tಯಲ್ಲಿನ ಸ್ಕ್ರೀನ್ ಅನ್‌ಲಾಕ್ ಫೀಚರ್‌ ಸ್ಕ್ರೀನ್‌ ಹಿಂದೆ ಜೋಡಿಸಲಾದ ಒಂದು ಮಾದರಿಗಿಂತ ಹೆಚ್ಚಾಗಿ ಕಾರ್ಯನಿರ್ವಹಿಸುತ್ತದೆ. ಈ ಫೀಚರ್‌ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಬಹಳ ಜಾಣ್ಮೆಯಿಂದ ರೂಪಿಸಿದ ಸಾಫ್ಟ್‌ವೇರ್‌ ಮತ್ತು ಹಾರ್ಡ್‌ವೇರ್‌ಗಳನ್ನು ಒಳಗೊಂಡಿದೆ.

  ಮುಂಬರುವ ಸ್ಮಾರ್ಟ್‌ಫೋನ್‌ ಅತ್ಯಂತ ಸುಧಾರಿತ ಇನ್‌ಡಿಸ್‌ಪ್ಲೇ ಫಿಂಗರ್‌ಪ್ರಿಂಟ್‌ ಸೆನ್ಸಾರ್‌ ತಂತ್ರಜ್ಞಾನವನ್ನು ಹೊಂದಿದೆ. ಈ ಫೀಚರ್‌ ಆಪ್ಟಿಕಲ್ ಫಿಂಗರ್‌ಪ್ರಿಂಟ್ ಮಾದರಿಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಸಣ್ಣ ಲೆನ್ಸ್‌ನ್ನು ಹೊಂದಿದೆ. ಈ ಲೆನ್ಸ್‌ ನಿಮ್ಮ ಫಿಂಗರ್‌ ಪ್ರಿಂಟ್‌ನ್ನು ಸ್ಕ್ರೀನ್‌ ಮೇಲೆ ಇಟ್ಟಾಗಿ ನಿಖರವಾಗಿ ಗುರುತಿಸುತ್ತದೆ. ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ನ ಸ್ಕ್ರೀನ್‌ ನಿಮ್ಮ ಫಿಂಗರ್‌ಪ್ರಿಂಟ್‌ನ ಬಾಹ್ಯರೇಖೆಯನ್ನು ಗುರುತಿಸಲು ಬೆಳಕಿನ ಮೂಲವನ್ನು ಬಳಸಿಕೊಳ್ಳುತ್ತದೆ. ಇದರಿಂದ ಸೆನ್ಸಾರ್‌ ಫಿಂಗರ್‌ಪ್ರಿಂಟ್‌ ನಿಖರತೆಯನ್ನು ಗುರುತಿಸಲು ಅನುಕೂಲವಾಗುತ್ತದೆ.

  ವೇಗ ಮತ್ತು ಹೆಚ್ಚಿನ ಭದ್ರತೆ

  ವೇಗದ ಇನ್‌ಡಿಸ್‌ಪ್ಲೇ ಅನ್‌ಲಾಕ್‌ ಅನುಭವಕ್ಕಾಗಿ ಒನ್‌ಪ್ಲಸ್‌ ಸ್ವಯಂ ಕಲಿಕೆ ಸಾಫ್ಟ್‌ವೇರ್‌ ಕ್ರಮಾವಳಿಗಳ ಜತೆ ಇತ್ತೀಚಿನ ಹಾರ್ಡ್‌ವೇರ್‌ಗಳೊಂದಿಗೆ ನಿಮ್ಮ ಫಿಂಗರ್‌ ಪ್ರಿಂಟ್‌ ಮಾಹಿತಿಯನ್ನು ಕೌಶಲ್ಯಯುತವಾಗಿ ಮೊದಲೇ ಅಪ್‌ಲೋಡ್ ಮಾಡಿರುತ್ತದೆ. ಒನ್‌ಪ್ಲಸ್‌ನಲ್ಲಿರುವ ಇಂಜಿನಿಯರ್‌ಗಳು ನಿಮ್ಮ ಫಿಂಗರ್‌ಪ್ರಿಂಟ್‌ ಮಾಹಿತಿ ಸಂಗ್ರಹಿಸಲು ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್‌ 845ನಲ್ಲಿನ 'Trust Zone' ಬಳಸಿದ್ದಾರೆ. ಇದು ಗೌಪ್ಯತೆಗಾಗಿರುವ ಪ್ರತ್ಯೇಕ ಸ್ಥಳವಾಗಿ ಕಾರ್ಯನಿರ್ವಹಿಸುತ್ತದೆ.

  ಒನ್‌ಪ್ಲಸ್‌ 6T ಸ್ಕ್ರೀನ್‌ನಲ್ಲಿ ನೀಡಲಾದ ನಿರ್ದಿಷ್ಟ ಸ್ಥಳದಲ್ಲಿ ನಿಮ್ಮ ಬೆರಳನ್ನು ಇರಿಸಿದ ತಕ್ಷಣ, 'Trust Zone'ನಲ್ಲಿ ಸಂಗ್ರಹಿಸಲಾದ ಮಾಹಿತಿಯೊಂದಿಗೆ ನಿಮ್ಮ ಫಿಂಗರ್‌ಪ್ರಿಂಟ್‌ನ ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಲು ಹೋಲಿಕೆಯನ್ನು ಮಾಡಲಾಗುತ್ತದೆ. ಸ್ಕ್ರೀನ್ ಅನ್‌ಲಾಕ್ ಫೀಚರ್ ತಯಾರಿಸುವಾಗ ಅನೇಕ ಸಾಫ್ಟ್‌ವೇರ್‌ ಅಲ್ಗೋರಿಥಮ್‌ಗಳನ್ನು ಪರೀಕ್ಷಿಸಿ, ಅನ್ವಯಿಸಲಾಗಿದೆ ಎಂದು ಒನ್‌ಪ್ಲಸ್‌ ಹೇಳಿದೆ. ವಿಸ್ತರಿತ ಬಳಕೆಯ ಮೂಲಕ ನಿಮ್ಮ ಫಿಂಗರ್‌ಪ್ರಿಂಟ್‌ನ್ನು ಹೆಚ್ಚಿನ ನಿಖರತೆಯಿಂದ ಗುರುತಿಸಲು ಒನ್‌ಪ್ಲಸ್‌ 6T ಸಿದ್ಧವಾಗಿದೆ.

  ಒನ್‌ಪ್ಲಸ್ 6Tಯೊಂದಿಗೆ ಭವಿಷ್ಯದ ಜತೆ ನಡೆಯಿರಿ

  ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಕೆಲವೇ ವಾರಗಳು ದೂರವಿದ್ದು, ಸ್ಮಾರ್ಟ್‌ಫೋನ್‌ ಪ್ರಿಯರಲ್ಲಿ ಸಂಭ್ರಮ ಹೆಚ್ಚಿದೆ. ಒನ್‌ಪ್ಲಸ್‌ ಸಾಧನಗಳಲ್ಲಿ ಸ್ಕ್ರೀನ್‌ ಅನ್‌ಲಾಕ್‌ ತಂತ್ರಜ್ಞಾನ ಒಂದು ಮಹತ್ವದ ಫೀಚರ್‌ ಆಗಿ ಗುರುತಿಸಬಹುದಾಗಿದೆ. ಇದು ಸಾಟಿಯಿಲ್ಲದ ವೇಗ ಮತ್ತು ಅನುಕೂಲವನ್ನು ಬಳಕೆದಾರರಿಗೆ ನೀಡುವ ಉದ್ದೇಶವನ್ನು ಹೊಂದಿದೆ. ಒನ್‌ಪ್ಲಸ್‌ನ ಇಂಜಿನಿಯರ್‌ಗಳು ಇಲ್ಲಿನ ಮೂಲ ಮಾದರಿಗಳನ್ನು ಮೊದಲನೇ ತಲೆಮಾರಿನ ಆಪ್ಟಿಕಲ್‌ ಫಿಂಗರ್‌ಪ್ರಿಂಟ್ ಮಾದರಿಯಲ್ಲಿ ಮೊದಲ ಬಾರಿಗೆ ಒನ್‌ಪ್ಲಸ್‌ 5T ಸ್ಮಾರ್ಟ್‌ಫೋನ್‌ನಲ್ಲಿ ಪರೀಕ್ಷಿಸಲಾಗಿತ್ತು.

  ಒನ್‌ಪ್ಲಸ್‌ 5Tಯಲ್ಲಿ ಪರೀಕ್ಷಿಸಲಾದ ತಂತ್ರಜ್ಞಾನವು ಸಂಪೂರ್ಣವಾಗಿ ಮನವರಿಕೆಯಾಗಲಿಲ್ಲ. ಆದ್ದರಿಂದ, ತನ್ನ ಬಳಕೆದಾರರಿಗೆ ಮತ್ತಷ್ಟು ಸುಧಾರಿತ ತಂತ್ರಜ್ಞಾನ ನೀಡಲು ಒನ್‌ಪ್ಲಸ್‌ ನಿರ್ಧರಿಸಿತು. ಹಲವು ಪರೀಕ್ಷೆಗಳ ನಂತರ, ಒನ್‌ಪ್ಲಸ್‌ ಅಂತಿಮವಾಗಿ ಸ್ಕ್ರೀನ್ ಅನ್‌ಲಾಕ್ ತಂತ್ರಜ್ಞಾನದ ಅಂತಿಮ ಆವೃತ್ತಿಯನ್ನು ಪರೀಕ್ಷಿಸಿ ಸಾಟಿಯಿಲ್ಲದ ವೇಗ ಮತ್ತು ವಿಶ್ವಾಸಾರ್ಹತೆಯನ್ನು ಬಳಕೆದಾರರಿಗೆ ತಲುಪಿಸಲು ಸಿದ್ಧವಾಗಿದೆ.

  ಹೊಸತನದ ಅನುಭವ

  ಎಲ್ಲಾ ಒನ್‌ಪ್ಲಸ್‌ ಸ್ಮಾರ್ಟ್‌ಫೋನ್‌ನ್ನು ನೋಡಿದ್ದೇವೆ ಮತ್ತು ಬಳಸಿದ್ದೇವೆ. ಆದರೆ, ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ಹಿಂದಿನ ಆವೃತ್ತಿಗಳಿಂದ ಬಹಳ ವಿಭಿನ್ನವಾಗಿದೆ ಎಂದು ಒನ್‌ಪ್ಲಸ್‌ನ ಸಿಇಒ ಪೀಟ್ ಲಾವ್‌ ಹೇಳಿದ್ದಾರೆ. ಹಿಂದಿನ ಒನ್‌ಪ್ಲಸ್‌ ಸಾಧನಗಳಿಗೆ ಹೋಲಿಕೆ ಮಾಡಿ ನೋಡಿದರೆ, ಇತ್ತೀಚಿನ ಹಾರ್ಡ್‌ವೇರ್‌ ಹಾಗೂ ಸಾಫ್ಟ್‌ವೇರ್‌ ಜತೆಗೆ ಒನ್‌ಪ್ಲಸ್‌ 6T ಉತ್ತಮ ಬಾಳಿಕೆ ನೀಡುತ್ತದೆ. Cnet.comಗೆ ನೀಡಿದ ಸಂದರ್ಶನವೊಂದರಲ್ಲಿ, ಮುಂಬರುವ ಸ್ಮಾರ್ಟ್‌ಫೋನ್‌ ಹಿಂದಿನ ಆವೃತ್ತಗಳಿಗಿಂತಲೂ ಹೆಚ್ಚು ನೀರು ನಿರೋಧಕವಾಗಿರುತ್ತದೆ ಹಾಗೂ ಮಳೆಗಾಲದಲ್ಲಿ, ಸಿಂಕ್ ಅಥವಾ ಸ್ಪ್ಲಾಶ್‌ನಲ್ಲಿ ಆಕಸ್ಮಿಕವಾಗಿ ಬಿದ್ದರೂ ಚಿಂತೆಪಡಬೇಕಿಲ್ಲ ಎಂದು ಒನ್‌ಪ್ಲಸ್‌ ಸಿಇಒ ಹೇಳಿರುವುದು ಗಮನಾರ್ಹ.

  ಮುಂಬರುವ ಒನ್‌ಪ್ಲಸ್‌ ಫ್ಲಾಗ್‌ಶಿಪ್‌ ಸ್ಮಾರ್ಟ್‌ಫೋನ್‌ನ್ನು ಪರೀಕ್ಷಿಸಲು ಸ್ಮಾರ್ಟ್‌ಫೋನ್‌ ಪ್ರಿಯರು ಉತ್ಸುಕರಾಗಿದ್ದಾರೆ. ಇತ್ತೀಚಿನ ಮಾಹಿತಿಯ ಪ್ರಕಾರ, ಒನ್‌ಪ್ಲಸ್‌ 6T ಅಕ್ಟೋಬರ್ ಮೂರನೇ ವಾರದಲ್ಲಿ ಅಧಿಕೃತ ಬಿಡುಗಡೆಯಾಗಲಿದೆ. ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ನ ನಿಯಮಿತ ಅಪ್‌ಡೇಟ್‌ಗಳನ್ನು ನೀಡಲು Amazon.in ಕೂಡ 'Notify Me' ಪುಟ ನೀಡಿದ್ದು, ಅಲ್ಲಿ ನೋಟಿಫೈ ಬಟನ್‌ ಕ್ಲಿಕ್ ಮಾಡುವ ಮೂಲಕ ಬಹುನಿರೀಕ್ಷಿತ ಫ್ಲಾಗ್‌ಶಿಪ್‌ ಸ್ಮಾರ್ಟ್‌ಫೋನ್‌ನ ಹೆಚ್ಚಿನ ಮಾಹಿತಿಯನ್ನು ದೈನಂದಿನವಾಗಿ ಪಡೆಯಬಹುದು. ಅದಲ್ಲದೇ ಹೊಸ ಸ್ಮಾರ್ಟ್‌ಫೋನ್‌ ಕುರಿತ ಹೆಚ್ಚಿನ ಮಾಹಿತಿಗೆ Kannada Gizbotನ್ನು ನೋಡ್ತಾ ಇರಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  OnePlus 6T Screen Unlock will forever change the way you interact with your phone. To know more this visit kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more