ಅಭಿಮಾನಿಗಳಿಗೆ ನಿರಾಸೆ ಮೂಡಿಸಲಿದೆ ಒನ್‌ಪ್ಲಸ್ 6T: ಇದು ಒಪ್ಪೋ ಫೋನಿನ ಜೆರಾಕ್ಸ್!

|

ಈಗಾಗಲೇ ಭಾರತೀಯ ಪ್ರೀಮಿಯಮ್ ಸ್ಮಾರ್ಟ್‌ಪೋನ್ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್‌ ಮುಂದುವರೆದ ಭಾಗವಾಗಿ ಒನ್‌ಪ್ಲಸ್ 6T ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎನ್ನುವ ಮಾಹಿತಿಯೂ ಈಗಾಗಲೇ ತಿಳಿಸಿದೆ. ಇದೇ ಮಾದರಿಯಲ್ಲಿ ಒನ್‌ಪ್ಲಸ್ 6T ಸ್ಮಾರ್ಟ್‌ಫೋನ್‌ ಕುರಿತ ಮಾಹಿತಿಯೊಂದು ಲೀಕ್ ಆಗಿದ್ದು, ಬೆಸ್ಟ್ ಎನ್ನಿಸಿಕೊಳ್ಳುವ ಎಲ್ಲಾ ಆಯ್ಕೆಗಳು ಈ ಸ್ಮಾರ್ಟ್‌ಫೋನಿನಲ್ಲಿ ಇರಲಿದೆ.

ಅಭಿಮಾನಿಗಳಿಗೆ ನಿರಾಸೆ ಮೂಡಿಸಲಿದೆ ಒನ್‌ಪ್ಲಸ್ 6T: ಇದು ಒಪ್ಪೋ ಫೋನಿನ ಜೆರಾಕ್ಸ್!

ಈಗಾಗಲೇ ಲೀಕ್ ಆಗಿರುವ ಮಾಹಿತಿಗೆ ಇನ್ನಷ್ಟು ಹೊಸ ವಿಚಾರಗಳು ಸೇರ್ಪಡೆಯಾಗಿದ್ದು, ಒನ್‌ಪ್ಲಸ್ 6T ಸ್ಮಾರ್ಟ್‌ಫೋನನಲ್ಲಿ ವಾಟರ್ ಡ್ರಾಪ್ ನೋಚ್ ಡಿಸ್‌ಪ್ಲೇಯನ್ನು ಕಾಣಬಹುದಾಗಿದ್ದು, ಹೊಸ ಮಾದರಿಯಲ್ಲಿ ವಿನ್ಯಾಸಗೊಳ್ಳಲಿದೆ. ಅಲ್ಲದೇ ಇನ್‌ ಡಿಸ್‌ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಇದರಲ್ಲಿ ನೀಡಲಾಗಿದೆ. ಒನ್‌ಪ್ಲಸ್ 6 ಮತ್ತು ಒನ್‌ಪ್ಲಸ್ 6T ಸ್ಮಾರ್ಟ್‌ಫೋನ್ ನಡುವೆ ಸಾಕಷ್ಟು ವ್ಯತ್ಯಾಸವಿರಲಿದೆ. ಅಲ್ಲದೇ ಇದು ಒಪ್ಪೋ R17 ಸ್ಮಾರ್ಟ್‌ಫೋನಿನ ಜೆರಾಕ್ಸ್ ಎನ್ನುವ ಮಾತು ಕೇಳಿ ಬಂದಿದೆ.

How to recharge your Bangalore Metro card online - KANNADA
ಒಪ್ಪೋ R17 ಮಾದರಿ:

ಒಪ್ಪೋ R17 ಮಾದರಿ:

ಒನ್‌ಪ್ಲಸ್ 6T ಸ್ಮಾರ್ಟ್‌ಫೋನ್, ಈಗಾಗಲೇ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಒಪ್ಪೋ R17 ಮಾದರಿಯ ವಿನ್ಯಾಸವನ್ನು ಹೊಂದಿರಲಿದೆ ಎನ್ನಲಾಗಿದೆ. ಇದಲ್ಲದೇ ಇದು ಬಳೆಕೆದಾರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲಿದ್ದು, ನೋಡಲು ಸುಂದರವಾಗಿದೆ.

ವಾಟರ್ ಡ್ರಾಪ್ ನೋಚ್:

ವಾಟರ್ ಡ್ರಾಪ್ ನೋಚ್:

ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ವಾಟರ್ ಡ್ರಾಪ್ ನೋಚ್ ಡಿಸ್‌ಪ್ಲೇಯನ್ನು ನೂತನವಾಗಿ ಲಾಂಚ್ ಆಗಲಿರುವ ಒನ್‌ಪ್ಲಸ್ 6T ಸ್ಮಾರ್ಟ್‌ಫೋನಿನಲ್ಲಿಯೂ ಕಾಣಬಹುದಾಗಿದೆ. ಇದರಿಂದಾಗಿ ಬಳಕೆದಾರರಿಗೆ ದೊಡ್ಡ ಪ್ರಮಾಣದ ಡಿಸ್ ಪ್ಲೇಯೂ ಬಳಕೆಗೆ ದೊರೆಯಲಿದೆ ಎನ್ನಲಾಗಿದೆ. ಒಪ್ಪೋ R17 ಮಾದರಿಯಲ್ಲಿಯೇ ಇದು ಕಾಣಿಸಿಕೊಂಡಿದೆ.

ಇನ್‌ಡಿಸ್‌ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್‌:

ಇನ್‌ಡಿಸ್‌ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್‌:

ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಕಾಣಿಸಿಕೊಂಡಿದ್ದ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಒನ್‌ಪ್ಲಸ್ 6T ಸ್ಮಾರ್ಟ್‌ಫೋನ್ನಲ್ಲಿ ನೋಡಲು ಸಾಧ್ಯವಿಲ್ಲ, ಕಾರಣ ಇದರ ಮುಂಭಾಗದ ಡಿಸ್‌ಪ್ಲೇಯಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಅಳವಡಿಸಲಾಗಿದ್ದು, ಒನ್‌ಪ್ಲಸ್ ಲಾಂಚ್ ಮಾಡುತ್ತಿರುವ ಮೊದಲ ಇನ್‌ಡಿಸ್‌ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಹೊಂದಿರುವ ಸ್ಮಾರ್ಟ್‌ಫೋನ್ ಇದಾಗಲಿದೆ.

3.5mm ಇಯರ್ ಫೋನ್ ಜಾಕ್:

3.5mm ಇಯರ್ ಫೋನ್ ಜಾಕ್:

ಒನ್‌ಪ್ಲಸ್ 6T ಸ್ಮಾರ್ಟ್‌ಫೋನಿನಲ್ಲಿ ಈ ಹಿಂದೆ ಕಾಣಬಹುದಾಗಿದ್ದ 3.5mm ಇಯರ್ ಫೋನ್ ಜಾಕ್ ಅನ್ನು ತೆಗೆದುಹಾಕಲಾಗಿದೆ. ಇದರ ಬದಲಿಗೆ USB T-C ಪೋರ್ಟ್ ಅನ್ನು ನೀಡಲಾಗಿದ್ದು, ಇದಕ್ಕೆ ಸರಿ ಹೊಂದುವ ಹೆಡ್‌ ಫೋನ್ ಅನ್ನು ಮೊಬೈಲ್‌ನೊಂದಿಗೆ ನೀಡಲು ಒನ್‌ಪ್ಲಸ್ ಸಿದ್ಧತೆ ನಡೆಸಿದೆ.

Best Mobiles in India

English summary
OnePlus 6T Shown New Teaser, to know more visit kananda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X