ಶೀಘ್ರದಲ್ಲಿಯೇ ಒನ್‌ಪ್ಲಸ್‌ 6T ಲಾಂಚ್‌..! ಟ್ರಿಪಲ್‌ ಕ್ಯಾಮೆರಾದೊಂದಿಗೆ ಬರ್ತಿದೆ ಬಹು ನಿರೀಕ್ಷಿತ ಫ್ಲಾಗ್‌ಶಿಪ್‌..!

|

ಭಾರತೀಯ ಮಾರುಕಟ್ಟೆಗೆ ಮತ್ತೊಂದು ಕ್ರಾಂತಿಕಾರಿ ಡಿವೈಸ್‌ನ್ನು ಬಿಡುಗಡೆಗೊಳಿಸಲು ಒನ್‌ಪ್ಲಸ್‌ ಸಜ್ಜಾಗಿದೆ. ಹೊಸ ಡಿವೈಸ್‌ನ ಬಿಡುಗಡೆ ಸಮಯ ಹತ್ತಿರವಾಗುತ್ತಿದ್ದಂತೆ, ಸ್ಮಾರ್ಟ್‌ಫೋನ್‌ ಮೇಲಿನ ನಿರೀಕ್ಷೆ ಮುಗಿಲು ಮುಟ್ಟುತ್ತಿದೆ. ಹೊಸ ಡಿವೈಸ್‌ನ್ನು ಬಿಡುಗಡೆಗೊಳಿಸಲು ಒನ್‌ಪ್ಲಸ್ ಉತ್ಸುಕವಾಗಿದೆ. ಬಹು ನಿರೀಕ್ಷಿತ ಸ್ಮಾರ್ಟ್‌ಫೋನ್‌ ಮುಂದಿನ ತಿಂಗಳಲ್ಲಿ ಲಾಂಚ್ ಆಗುತ್ತಿದ್ದು, ಹೀಗಾಗಲೇ ಅಮೆಜಾನ್‌ನಲ್ಲಿ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ನ 'Notify Me' ಪ್ರಕಟವಾಗುತ್ತಿದೆ. ಗ್ರಾಹಕರು 'Notify Me' ಮೂಲಕ ಸಬ್‌ಸ್ಕ್ರೈಬ್‌ ಆದರೆ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ನ ದೈನಂದಿನ ಅಪ್‌ಡೇಟ್‌ಗಳನ್ನು ಪಡೆಯಬಹುದಾಗಿದೆ.

ಔಟ್‌ ಆಫ್‌ ಬಾಕ್ಸ್‌ ಮಾರುಕಟ್ಟೆ ತಂತ್ರ

ಔಟ್‌ ಆಫ್‌ ಬಾಕ್ಸ್‌ ಮಾರುಕಟ್ಟೆ ತಂತ್ರ

ಒನ್‌ಪ್ಲಸ್‌ನ ಮಾರ್ಕೆಟಿಂಗ್‌ ಕಡೆ ನೋಡಿದರೆ, ಕಂಪನಿ ಔಟ್‌-ಆಫ್‌-ಬಾಕ್ಸ್‌ ಯೋಚನೆಗಳ ಮೂಲಕ ಹೊಸ ಹೊಸ ಐಡಿಯಾಗಳನ್ನು ಮಾರ್ಕೆಟಿಂಗ್‌ ಲೋಕಕ್ಕೆ ಪರಿಚಯಿಸುತ್ತಿದೆ. ಕಂಪನಿಯು ಪ್ರಥಮ ಬಾರಿಗೆ ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ಅವರ ಜಾಹೀರಾತು ಮೂಲಕ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ನ್ನು ಅಧಿಕೃತವಾಗಿ ಘೋಷಿಸಿದೆ.

ಜಾಹೀರಾತಿನಲ್ಲಿ ಬಾಲಿವುಡ್‌ ಸೂಪರ್‌ ಸ್ಟಾರ್ ಅಮಿತಾಭ್ ಬಚ್ಚನ್ ಹೊಸ ಸ್ಮಾರ್ಟ್‌ಫೋನ್‌ ಹಿಡಿದುಕೊಂಡಿದ್ದು, ವೀಕ್ಷಕರಿಗೆ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ನ ಅತ್ಯುನ್ನತ ಫೀಚರ್ ಇನ್‌ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಬಗ್ಗೆ ಹೇಳಿದ್ದಾರೆ. ಅದಲ್ಲದೇ ಜಾಹೀರಾತು ಮುಂದೆ ಬಿಡುಗಡೆಯಾಗುವ ಹೊಸ ಫ್ಲಾಗ್‌ಶಿಪ್‌ ಸ್ಮಾರ್ಟ್‌ಫೋನ್‌ನ ವಿನ್ಯಾಸದ ಬಗ್ಗೆಯೂ ತೆರೆದಿಟ್ಟಿದೆ.

ಹೊಸ ಮಾರ್ಗದಲ್ಲಿ ಜಾಹೀರಾತು

ಹೊಸ ಮಾರ್ಗದಲ್ಲಿ ಜಾಹೀರಾತು

ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ಬಿಡುಗಡೆಗೂ ಮುಂಚೆ ಕಂಪನಿ ಮತ್ತೊಂದು ಟಿವಿ ಜಾಹೀರಾತನ್ನು ಬಿಡುಗಡೆಗೊಳಿಸಲು ಚಿಂತಿಸಿದೆ. ಈ ಜಾಹೀರಾತನ್ನು ಶೀಘ್ರದಲ್ಲಿ ಬಿಡುಗಡೆಗೊಳಿಸಿ ಬಹು ನಿರೀಕ್ಷಿತ ಹೊಸ ಫ್ಲಾಗ್‌ಶಿಪ್‌ ಸುತ್ತ ಮತ್ತಷ್ಟು ನಿರೀಕ್ಷೆಗಳನ್ನು ತರಲು ಮುಂದಾಗಿದೆ.

ಒನ್‌ಪ್ಲಸ್ ಹೊಸ ಜಾಹೀರಾತನ್ನು ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ಬಿಡುಗಡೆ ಮಾಡುತ್ತಿದೆ. ಒನ್‌ಪ್ಲಸ್‌ ಸ್ಮಾರ್ಟ್‌ಫೋನ್‌ಗಳು ಎಷ್ಟು ಉತ್ತಮ ಎಂದು ನಮಗೆಲ್ಲಾ ಗೊತ್ತಿದೆ. ಅದರ ಮಾರ್ಕೆಟಿಂಗ್‌ ಚಿಂತನೆಗಳನ್ನು ನಾವು ತಳ್ಳಿ ಹಾಕುವಂತಿಲ್ಲ. ಆದ್ದರಿಂದ ಟಿವಿ ಜಾಹೀರಾತಿನ ಮೇಲೆ ಒಂದು ಕಣ್ಣಿಟ್ಟಿರುವುದು ಸೂಕ್ತ. ಜಾಹೀರಾತು ನಿಮಗೆ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಿಡುಗಡೆಗೆ ಮುಂಚೆಯೇ ನೀಡುತ್ತದೆ.

ಹಾಟ್‌ಸ್ಟಾರ್‌ನಲ್ಲಿ ಒನ್‌ಪ್ಲಸ್‌ 6T

ಹಾಟ್‌ಸ್ಟಾರ್‌ನಲ್ಲಿ ಒನ್‌ಪ್ಲಸ್‌ 6T

ಒನ್‌ಪ್ಲಸ್‌ ಜಾಹೀರಾತುಗಳು ಬಹಳಷ್ಟು ಪರಿಣಾಮಕಾರಿಯಾಗಿದ್ದು, ಕಂಪನಿ ತನ್ನ ಉತ್ಪನ್ನಗಳನ್ನು ಜನಪ್ರಿಯಗೊಳಿಸುವ ಕಲೆಯನ್ನು ಕರಗತ ಮಾಡಿಕೊಂಡಿದೆ. ಹೀಗಾಗಲೇ ಹಾಟ್‌ಸ್ಟಾರ್‌ನ ಚೀಯರ್ಸ್‌ನಲ್ಲಿ 6T ಫೀಚರ್‌ ತಂದಿದ್ದು, 6 ಚೀಯರ್‌ ಬದಲಾಗಿ 6Tಯನ್ನು ಹಾಟ್‌ಸ್ಟಾರ್‌ ತೋರಿಸುತ್ತಿದೆ. ಈ ಫೀಚರ್‌ನ್ನು ಸದ್ಯ ನಡೆಯುತ್ತಿರುವ ಏಷ್ಯಾ ಕಪ್‌ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆನಂದಿಸುತ್ತಿದ್ದೇವೆ. ಹಾಟ್‌ಸ್ಟಾರ್‌ ಆಪ್‌ನಲ್ಲಿ ಪಂದ್ಯದ ಪ್ರತಿ ಬಾಲ್‌ನ್ನು ಪ್ರೇಡಿಕ್ಟ್‌ ಮಾಡುವಾಗ ಹೊಸ 6T ಚಿಹ್ನೆಯನ್ನು ಈಗ ನೋಡಬಹುದಾಗಿದೆ. ಇದು ವೀಕ್ಷಕರ ಜತೆ ಪರಿಣಾಮಕಾರಿ ಸಂವಹನ ನಡೆಸಲು ಹೊಸ ಹಾಗೂ ವಿಶಿಷ್ಟವಾದ ಮಾರ್ಗವಾಗಿದ್ದು, ವೀಕ್ಷಕರಿಗೆ ಹೊಸ ಉತ್ಪನ್ನದ ಬಗ್ಗೆ ಹೆಚ್ಚಿನ ಕುತೂಹಲವನ್ನು ಹುಟ್ಟು ಹಾಕುತ್ತದೆ.

ಉತ್ಕೃಷ್ಟ ಬ್ಯಾಟರಿ ಸಾಮರ್ಥ್ಯ

ಉತ್ಕೃಷ್ಟ ಬ್ಯಾಟರಿ ಸಾಮರ್ಥ್ಯ

ಕಂಪನಿಯ ಟ್ರಾಕ್‌ ರೆಕಾರ್ಡ್‌ನ್ನು ಗಮನಿಸಿದರೆ, ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ಉತ್ತಮ ಬ್ಯಾಟರಿ ಸಾಮರ್ಥ್ಯ ಹೊಂದಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ನೀವು ಡ್ಯಾಶ್‌ ಚಾರ್ಜರ್‌ ಹುಡುಕುವುದಕ್ಕಿಂತ ಮುಂಚೆ ಸ್ಮಾರ್ಟ್‌ಫೋನ್‌ನ್ನು ದೀರ್ಘಕಾಲದವರೆಗೆ ಕಾರ್ಯನಿರ್ವಹಿಸಲು ಹೆಚ್ಚಿನ ಬ್ಯಾಟರಿ ಸಾಮರ್ಥ್ಯದೊಂದಿಗೆ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ಬಿಡುಗಡೆಯಾಗುತ್ತಿರುವುದನ್ನು ದೃಢಪಡಿಸಲಾಗಿದೆ.

ಹೊಸ ಸ್ಮಾರ್ಟ್‌ಫೋನ್‌ನ ಬ್ಯಾಟರಿ 3700 mAh ಸಾಮರ್ಥ್ಯ ಹೊಂದಿದ್ದು, ಉತ್ತಮ ಬ್ಯಾಟರಿ ಹೊಂದಿದೆ. ಒನ್‌ಪ್ಲಸ್‌ 6 ಸ್ಮಾರ್ಟ್‌ಫೋನ್‌ 3300 mAh ಸ್ಮಾರ್ಟ್‌ಫೋನ್‌ ಹೊಂದಿತ್ತು. ನಿಮ್ಮ ಸ್ಮಾರ್ಟ್‌ಫೋನ್‌ನ ಹೆಚ್ಚಿನ ಬಳಕೆಯನ್ನು ಮುಂದುವರಿಸಲು ಇದು ಭರವಸೆ ನೀಡುತ್ತದೆ. ಇದಕ್ಕೆಲ್ಲಕ್ಕಿಂತ ಹೆಚ್ಚಾಗಿ ಜನಪ್ರಿಯ ಡ್ಯಾಶ್ ಚಾರ್ಜ್‌ರ್‌ನ ಮುಂದುವರೆದ ಆವೃತ್ತಿಯನ್ನು ಒನ್‌ಪ್ಲಸ್‌ 6Tಯಲ್ಲಿ ತರಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಹೊಸ OnePlus 6T ಸ್ಮಾರ್ಟ್‌ಫೋನ್‌ನ್ನು ಕಂಪನಿಯ ಸುಧಾರಿತ ಡ್ಯಾಶ್ ಚಾರ್ಜಿಂಗ್ ತಂತ್ರಜ್ಞಾನದ ಮೂಲಕ ಬೆಂಬಲಿಸಲಾಗುತ್ತದೆ. ಹೊಸ ಚಾರ್ಜಿಂಗ್ ತಂತ್ರಜ್ಞಾನ ಬ್ಯಾಟರಿ ಕಾರ್ಯಕ್ಷಮತೆಯನ್ನು ಹೇಗೆ ಸುಧಾರಿಸುತ್ತದೆ ಎಂಬುದು ಇನ್ನೂ ತಿಳಿದಿಲ್ಲ.

ಟ್ರಿಪಲ್‌ ಲೆನ್ಸ್‌ ಕ್ಯಾಮೆರಾ

ಟ್ರಿಪಲ್‌ ಲೆನ್ಸ್‌ ಕ್ಯಾಮೆರಾ

ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ಫೋಟೋಗ್ರಾಫಿಯನ್ನು ಬದಲಿಸುವ ತಾಕತ್ತು ಹೊಂದಿರಬಹುದು. ಹೀಗಾಗಲೇ ಹೊಸ ಸ್ಮಾರ್ಟ್‌ಫೋನ್‌ ಬಗ್ಗೆ ಅನೇಕ ಸೋರಿಕೆ ಮತ್ತು ಗಾಸಿಪ್‌ಗಳು ಹರಿದಾಡಿದ್ದು, ಅದರಂತೆ ಮುಂದೆ ಬರುವ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ನಲ್ಲಿ ಹೊಸ ರೀತಿಯ ಕ್ಯಾಮೆರಾ ವ್ಯವಸ್ಥೆಯನ್ನು ಅನುಷ್ಟಾನಗೊಳಿಸಲಾಗಿದೆ. ಹೊಸ ಸ್ಮಾರ್ಟ್‌ಫೋನ್‌ನಲ್ಲಿ ಎರಡಲ್ಲ ಬದಲಾಗಿ ಮೂರು ಲೆನ್ಸ್‌ ಕ್ಯಾಮೆರಾ ವ್ಯವಸ್ಥೆಯನ್ನು ಹಿಂಭಾಗದಲ್ಲಿ ಅಳವಡಿಸಲಾಗಿದ್ದು, ಸಾಟಿಯಿಲ್ಲದ ಕ್ಯಾಮೆರಾ ಕಾರ್ಯನಿರ್ವಹಣೆಯನ್ನು ಗಮನಿಸಬಹುದು. ಟ್ರಿಪಲ್‌ ಲೆನ್ಸ್‌ ಕ್ಯಾಮೆರಾ ವ್ಯವಸ್ಥೆ ಉತ್ತಮ ಫೀಚರ್‌ಗಳನ್ನು ಹೊಂದಿದ್ದು, DSLR ಮಟ್ಟದ ಚಿತ್ರಗಳನ್ನು ಸೆರೆ ಹಿಡಿಯುವುದಕ್ಕೆ ಅನುವು ಮಾಡಿಕೊಡುತ್ತದೆ.

Best Mobiles in India

English summary
OnePlus 6T to take the center stage soon: Here's what to look out for. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X