ಒನ್‌ಪ್ಲಸ್‌ನಿಂದ ಮತ್ತೊಂದು ಫ್ಲಾಗ್‌ಶಿಪ್‌..! ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ ಲಾಂಚ್‌..!

By Gizbot Bureau
|

ಆಪಲ್‌ ಐಫೋನ್‌ಗಳ ಜೊತೆ ಸ್ಪರ್ಧೆಯಲ್ಲಿರುವ ಚೀನಾ ಮೂಲದ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪನಿ ಒನ್‌ಪ್ಲಸ್‌ ಕಳೆದ ವರ್ಷದವರೆಗೂ ವರ್ಷಕ್ಕೆ ಎರಡು ಸ್ಮಾರ್ಟ್‌ಫೋನ್‌ಗಳನ್ನು ಮಾತ್ರ ಬಿಡುಗಡೆ ಮಾಡುವ ಕ್ರಮವನ್ನು ಅನುಸರಿಸುತ್ತಿತ್ತು. ವರ್ಷದ ಮಧ್ಯಭಾಗದಲ್ಲಿ ಪ್ರಮುಖ ಸ್ಮಾರ್ಟ್‌ಫೋನ್‌ನ್ನು ಮತ್ತು ವರ್ಷದ ದ್ವಿತೀಯಾರ್ಧದಲ್ಲಿ ಕೆಲವು ನವೀಕರಣಗಳೊಂದಿಗೆ ಫಾಲೋ-ಅಪ್ ಹ್ಯಾಂಡ್‌ಸೆಟ್ ಅನ್ನು ಒನ್‌ಪ್ಲಸ್‌ ಬಿಡುಗಡೆ ಮಾಡುತ್ತಿತ್ತು. ಈ ವರ್ಷ ಕಂಪನಿ ತನ್ನ ತಂತ್ರವನ್ನು ಬದಲಿಸಿದ್ದು, ಒಟ್ಟಿಗೆ ಒನ್‌ಪ್ಲಸ್ 7 ಮತ್ತು ಒನ್‌ಪ್ಲಸ್ 7 ಪ್ರೊ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ.

ಒನ್‌ಪ್ಲಸ್‌ನಿಂದ ಮತ್ತೊಂದು ಫ್ಲಾಗ್‌ಶಿಪ್‌! ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ ಲಾಂಚ್

ಈಗ, ಟಿಪ್‌ಸ್ಟರ್‌ನಿಂದ ಹೊಸ ಮಾಹಿತಿ ಸೋರಿಕೆಯಾಗಿದ್ದು, ಒನ್‌ಪ್ಲಸ್‌ ಕಂಪನಿಯಿಂದ ಮುಂದಿನ ತಿಂಗಳು 'ಒನ್‌ಪ್ಲಸ್ 7 ಟಿ’ ಸ್ಮಾರ್ಟ್‌ಫೋನ್‌ ಬಿಡುಗಡೆಯಾಗಲಿದೆಯಂತೆ. ಮ್ಯಾಕ್ಸ್ ಜೆ ಹೆಸರಿನ ಟಿಪ್‌ಸ್ಟರ್ ಟ್ವಿಟರ್‌ನಲ್ಲಿ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದು, ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿದ್ದಾರೆ.

ಅಕ್ಟೋಬರ್‌ 15ರಿಂದ ಮಾರಾಟ

ಅಕ್ಟೋಬರ್‌ 15ರಿಂದ ಮಾರಾಟ

ಟಿಪ್‌ಸ್ಟರ್ ಪ್ರಕಾರ, ಅಕ್ಟೋಬರ್ 15ರಿಂದ ಒನ್‌ಪ್ಲಸ್ 7ಟಿ ಸ್ಮಾರ್ಟ್‌ಫೋನ್‌ ಯುಎಸ್ ಮತ್ತು ಇಯು ಮಾರುಕಟ್ಟೆಗಳಲ್ಲಿ ಮಾರಾಟ ಪ್ರಾರಂಭಿಸಲಿದೆ. ಇನ್ನು, ಸ್ಮಾರ್ಟ್‌ಫೋನ್‌ನ ಅಧಿಕೃತ ಬಿಡುಗಡೆ ಅಕ್ಟೋಬರ್ 10 ರಂದು ನಡೆಯಲಿದೆ. ಯುಎಸ್ ಮತ್ತು ಯುರೋಪಿಯನ್ ಪ್ರದೇಶಗಳಿಗಿಂತ ಮೊದಲು ಭಾರತದಲ್ಲಿ ಈ ಸಾಧನ ಬಿಡುಗಡೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಟಿಪ್‌ಸ್ಟರ್‌ ಉಲ್ಲೇಖಿಸಿದ್ದಾರೆ.

ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ ಲಾಂಚ್..?

ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ ಲಾಂಚ್..?

ಒನ್‌ಪ್ಲಸ್ ಕಂಪನಿ ಭಾರತದಲ್ಲಿ ಸೆಪ್ಟೆಂಬರ್ 26 ರಂದು ಒನ್‌ಪ್ಲಸ್ 7ಟಿ ಸ್ಮಾರ್ಟ್‌ಫೋನ್‌ನ್ನು ಬಿಡುಗಡೆಗೊಳಿಸುವ ಸಾಧ್ಯತೆ ಇದೆ. ಆದರೆ, ಭಾರತದಲ್ಲಿ ಯಾವಾಗಿನಿಂದ ಮಾರಾಟವಾಗುತ್ತದೆ ಎಂಬ ಬಗ್ಗೆ ಮಾಹಿತಿಯಿಲ್ಲ. ಇದರಿಂದ ಚೀನಾ ಕಂಪನಿಯು ಭಾರತದ ಮಾರುಕಟ್ಟೆಗೆ ನೀಡುವ ಪ್ರಾಮುಖ್ಯತೆ ಗೊತ್ತಾಗುತ್ತದೆ.

7ಟಿಯಲ್ಲಿ ಏನೀರುತ್ತೆ..?

7ಟಿಯಲ್ಲಿ ಏನೀರುತ್ತೆ..?

‘ಟಿ' ಸ್ಮಾರ್ಟ್‌ಫೋನ್ ಸರಣಿಗೆ ಸಂಬಂಧಿಸಿದಂತೆ ಹಲವಾರು ಪ್ರಶ್ನೆಗಳಿದ್ದು, ವಿಶೇಷವಾಗಿ ಈ ವರ್ಷ. ಎರಡು 'ಟಿ' ಹ್ಯಾಂಡ್‌ಸೆಟ್‌ಗಳು ಇವೆಯೇ ಅಥವಾ ಒಂದಷ್ಟೇ ಎಂಬುದು ಇನ್ನೂ ತಿಳಿದುಬಂದಿಲ್ಲ. ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 855+ ಪ್ರೊಸೆಸರ್‌ ಹೊರತುಪಡಿಸಿ ಉದ್ಯಮದಲ್ಲಿ ಯಾವುದೇ ಪ್ರಮುಖ ತಂತ್ರಜ್ಞಾನ ಪರಿಚಯವಾಗದ ಕಾರಣ ಹೊಸ ಸ್ಮಾರ್ಟ್‌ಫೋನ್‌ನಲ್ಲಿ ಏನೀರಲಿದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ..

ಒನ್‌ಪ್ಲಸ್ 7 ಪ್ರೊ

ಒನ್‌ಪ್ಲಸ್ 7 ಪ್ರೊ

ಇನ್ನು, ಒನ್‌ಪ್ಲಸ್ 7 ಪ್ರೊ ಸ್ಮಾರ್ಟ್‌ಫೋನ್‌ನ್ನು ಸ್ಮರಿಸಿದರೆ, 6.6 ಇಂಚಿನ QHD+ AMOLED ಡಿಸ್‌ಪ್ಲೇ ಮತ್ತು ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 855 ಪ್ರೊಸೆಸರ್‌ನಿಂದ ಬೆಂಬಲಿತವಾಗಿದೆ. 6GB, 8GB ಮತ್ತು 12GB RAM ಆಯ್ಕೆಗಳನ್ನು ಹೊಂದಿದ್ದು, ಇವು 128GB ಮತ್ತು 256GB ಯುಎಫ್‌ಎಸ್ 3.0 ಮೆಮೊರಿ ಸಂಗ್ರಹಣೆಯೊಂದಿಗೆ ಬರುತ್ತವೆ. ಹಿಂಭಾಗದಲ್ಲಿ 48MP + 8MP ಟೆಲಿಫೋಟೋ ಮತ್ತು 16MP ಅಲ್ಟ್ರಾ-ವೈಡ್ ಕ್ಯಾಮೆರಾ ವ್ಯವಸ್ಥೆ ಜೊತೆಗೆ ಮುಂಭಾಗದಲ್ಲಿ 16MP ಪಾಪ್-ಅಪ್ ಕ್ಯಾಮೆರಾ ಇದೆ. 30W ವಾರ್ಪ್ ಚಾರ್ಜಿಂಗ್ ಬೆಂಬಲದೊಂದಿಗೆ 4000mAh ಬ್ಯಾಟರಿ ಹೊಂದಿದ್ದು, 48,999 ರೂ.ಗಳಿಂದ 52,999 ರೂ. ಬೆಲೆ ಹೊಂದಿತ್ತು.

Best Mobiles in India

English summary
OnePlus 7T Might Launch On September 26th In India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X