'ಒಪ್ಪೊ K1' ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಶುರುವಾಗಿದೆ ಕ್ಷಣಗಣನೆ!!

|

ಬಹುನಿರೀಕ್ಷಿತ ಒಪ್ಪೊ ಕಂಪನಿಯ ಮೀಡ್‌ ರೇಂಜ್‌ನ 'K1' ಸ್ಮಾರ್ಟ್‌ಫೋನ್‌ ಇಂದು ಭಾರತದಲ್ಲಿ ರಿಲೀಸ್ ಆಗಲಿದ್ದು, ಈಗಾಗಲೇ ಇ ಕಾಮರ್ಸ್ ಜಾಲತಾಣ ಫ್ಲಿಪ್‌ಕಾರ್ಟ್ ಮಾರುಕಟ್ಟೆಯಲ್ಲಿ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಒಪ್ಪೊ K1 ಸ್ಮಾರ್ಟ್‌ಫೋನ್ ತನ್ನ ಫೀಚರ್ಸ್‌ ಮತ್ತು ಕಡಿಮೆ ಬೆಲೆಯನ್ನು ಹೊಂದಿರಲಿದೆ ಎಂಬ ಇತ್ತೀಚಿನ ಸುದ್ದಿಯೊಂದು ಗ್ರಾಹಕರಲ್ಲಿ ಭಾರೀ ನಿರೀಕ್ಷೆಗಳನ್ನು ಮೂಡಿಸಿತ್ತು. ಇದೀಗ K1 ಸ್ಮಾರ್ಟ್‌ಫೋನ್ ರಿಲೀಸ್ ಆಗಲಿರುವ ಸುದ್ದಿ ಗ್ರಾಹಕರಲ್ಲಿ ಸಂತಸ ತಂದಿದೆ.

'ಒಪ್ಪೊ K1' ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಶುರುವಾಗಿದೆ ಕ್ಷಣಗಣನೆ!!

ಫಿಪ್‌ಕಾರ್ಟ್ ಜಾಲತಾಣದಲ್ಲಿ ಇಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆಗೊಳ್ಳಲಿರುವ ಒಪ್ಪೊದ K1 ಸ್ಮಾರ್ಟ್‌ಫೋನ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿದ್ದು, ಹಿಂಭಾಗದಲ್ಲಿ 3D ಗ್ಲಾಸ್‌ಸಹ ವಿಶಿಷ್ಠ ಲುಕ್ ಅನ್ನು ಹೊಂದಿದೆ ಮತ್ತು ಇದರ ಬೆಲೆಯು ಅಗ್ಗವಾಗಿರುವುದರಿಂದ ಈ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಉತ್ತಮ ಮಾರುಕಟ್ಟೆಯಲ್ಲಿ ಕಂಡುಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಸ್ಮಾರ್ಟ್‌ಫೋನ್‌ ಪ್ರಿಯರಂತು ಬಿಡುಗಡೆಯ ಸಮಯವನ್ನು ಎದುರುನೋಡುತ್ತಿದ್ದಾರೆ.

'ಒಪ್ಪೊ K1' ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಶುರುವಾಗಿದೆ ಕ್ಷಣಗಣನೆ!!

ನೂತನ ಫೀಚರ್ಸ್‌ಗಳಿಂದ ಮಿಡ್‌ ರೇಂಜ್ ಬೆಲೆಯ ಸ್ಮಾರ್ಟ್‌ಫೋನ್‌ಗಳಿಗೆ ಮಾರುಕಟ್ಟೆಯಲ್ಲಿ ಟಾಂಗ್ ಕೊಡಲು ಬರುತ್ತಿರುವ 'ಒಪೊ ಕೆ1' ಸ್ಮಾರ್ಟ್‌ಫೋನ್‌ ಮಧ್ಯಮ ಶ್ರೇಣಿಯ ಬೆಲೆಯಲ್ಲಿ ಹೈ ಎಂಡ್ ಫೀಚರ್ಸ್‌ಗಳನ್ನು ಹೊಂದಿದೆ. ಹಾಗಾದರೇ, ಇನ್ನೇನು ಕೆಲವೇ ಕ್ಷಣಗಳಲ್ಲಿ ಭಾರತಕ್ಕೆ ಕಾಲಿಡುತ್ತಿರುವ ಒಪ್ಪೊ ಕೆ 1 ಇತರೆ ಮಿಡ್‌ ರೇಂಜ್ ಸ್ಮಾರ್ಟ್‌ಫೋನ್‌ಗಳಿಗೆ ಪೈಪೋಟಿ ನೀಡುವಂತಹ ಏನೇಲ್ಲಾ ವಿಶೇಷ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಡಿಸೈನ್

ಡಿಸೈನ್

ಒಪ್ಪೊ ಕೆ 1 ಸ್ಮಾರ್ಟ್‌ಫೋನ್ ಸುಂದರ ಬಾಹ್ಯ ನೋಟವನ್ನು ಹೊಂದಿದ್ದು, ಸುತ್ತಲು ಶೈನಿಂಗ್ ನೊಂದಿಗೆ ಗ್ಲಾಸಿ ಲುಕ್‌ ಆಕಾರದಲ್ಲಿ ನೋಡುಗರ ಕಣ್ಮನ ಸೆಳೆಯುವಂತಿದೆ. ಡಿಸ್‌ಪ್ಲೇಯಲ್ಲಿ ಫಿಂಗರ್‌ಪ್ರಿಂಟ್ ರೀಡರ್ ಹೊಂದಿದೆ. ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ 3D ಗ್ಲಾಸ್ ಪ್ಯಾನೆಲ್ ನೀಡಲಾಗಿದೆ. ಸೆಲ್ಫೀ ಕ್ಯಾಮೆರಾ ಮುಂಬದಿಯ ಮೇಲ್ಭಾಗದ ಮಧ್ಯದಲ್ಲಿದೆ. ಹಿಂಬದಿಯ ಮೂಲೆಯಲ್ಲಿ ಎರಡು ಬ್ಯಾಕ್ ಕ್ಯಾಮೆರಾ ಹೊಂದಿದೆ.

ಡಿಸ್‌ಪ್ಲೇ

ಡಿಸ್‌ಪ್ಲೇ

ಈ ಸ್ಮಾರ್ಟ್‌ಫೋನ್ 19.5:9 ಅನುಪಾತದೊಂದಿಗೆ 6.4 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, ಸ್ಕ್ರೀನ್ ಮತ್ತು ಫೋನಿನ ಬಾಡಿಯ ನಡುವಿನ ಅಂತರ ಶೇ. 91 ರಷ್ಟು ಅನುಪಾತ ವಿದೆ. ಇದರೊಂದಿಗೆ ಈ ಸ್ಮಾರ್ಟ್‌ಫೋನ್‌ 1080 x 2340 ಪಿಕ್ಸಲ್ ಸಾಮರ್ಥ್ಯದ ರೆಸಲ್ಯೂಶನ್ ಹೊಂದಿರಲಿದೆ. ಡಿಸ್‌ಪ್ಲೇಯು ಕಡಿಮೆ ಅಂಚಿನಿಂದ ಕೂಡಿದ್ದು, ಹೈ ಎಂಡ್‌ ಮಾದರಿಯ ಅಂಚು ರಹಿತ ಡಿಸ್‌ಪ್ಲೇ ತರಹ ಕಾಣಿಸುತ್ತದೆ.

ಪ್ರೊಸೆಸರ್ ಹೇಗಿದೆ.?

ಪ್ರೊಸೆಸರ್ ಹೇಗಿದೆ.?

ಆಕ್ಟಾ ಕೋರ್ ಕ್ಚಾಲ್ಕಂ ಸ್ನಾಪ್‌ಡ್ರಾಗನ್ 660 ಸಾಮರ್ಥ್ಯದ ಉತ್ತಮ ಪ್ರೊಸೆಸರ್ ಅನ್ನು ಒಪ್ಪೊ ಕೆ 1 ಸ್ಮಾರ್ಟ್‌ಫೋನ್ ಹೊಂದಿರಲಿದೆ. ಈ ಸ್ಮಾರ್ಟ್‌ಫೋನ್ ಎರಡು ವೇರಿಯಂಟ್‌ಗಳಲ್ಲಿ ದೊರೆಯಲಿದ್ದು, 4GB RAM ಅಥವಾ 6GB RAM ಮತ್ತು 64GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ನೀಡಲಾಗಿದೆ. ಇನ್ನೂ ಬಾಹ್ಯ ಸಂಗ್ರಹಕ್ಕಾಗಿ ಎಸ್‌ಡಿ ಕಾರ್ಡ್‌ ಮೂಲಕ 256GB ವರೆಗೂ ವಿಸ್ತರಿಸುವುದಕ್ಕೆ ಅವಕಾಶ ನೀಡಲಾಗಿದೆ.

ಕ್ಯಾಮೆರಾ

ಕ್ಯಾಮೆರಾ

ಒಪ್ಪೊ ಕೆ 1 ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಒಟ್ಟು ಎರಡು ಕ್ಯಾಮೆರಾಗಳನ್ನು ಹೊಂದಿದ್ದು, ಅವುಗಳಲ್ಲಿ ಪ್ರಾಥಮಿಕ ಕ್ಯಾಮೆರಾ 16 ಮೆಗಾಪಿಕ್ಸಲ್ ಹೊಂದಿದ್ದರೆ, ಸೆಕೆಂಡರಿ ಕ್ಯಾಮೆರಾ 2 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿದೆ. ಇನ್ನೂ ಇದರೊಂದಿಗೆ ಮುಂಬದಿಯಲ್ಲಿ ಸೆಲ್ಫೀಗಾಗಿ 25 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾವನ್ನು ನೀಡಲಾಗಿದೆ. ಒಪ್ಪೊ ಮೊದಲಿನಿಂದಲೂ ಸೆಲ್ಫೀಗಾಗಿ ಹೆಚ್ಚು ಗಮನ ನೀಡುತ್ತಾ ಬಂದಿದೆ.

ಬ್ಯಾಟರಿ ಮತ್ತು ಮಲ್ಟಿಮೀಡಿಯಾ

ಬ್ಯಾಟರಿ ಮತ್ತು ಮಲ್ಟಿಮೀಡಿಯಾ

ಒಪ್ಪೊ ಕೆ1 ಸ್ಮಾರ್ಟ್‌ಫೋನ್‌ 3,600mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ನಿರಾತಂಕವಾಗಿ ಒಂದು ದಿನದವರೆಗೂ ಬ್ಯಾಟರಿ ಬಾಳಿಕೆ ಬರುತ್ತದೆ. ಇದರೊಂದಿಗೆ ಒಪ್ಪೊ 3.5mm ನ ಆಡಿಯೋ ಜಾಕ್‌ ನೀಡಿದ್ದು, ಹೆಡ್‌ಫೋನಿನಲ್ಲಿ ಆಡಿಯೋ ಕ್ಚಾಲಿಟಿಯೂ ಉತ್ತಮವಾಗಿ ಕೇಳಿಸುತ್ತದೆ.

ಬೆಲೆ?

ಬೆಲೆ?

ಈ ಮೊದಲೇ ಹೇಳಿದಂತೆ ಒಪ್ಪೊ ಕೆ1 ಮಿಡ್‌ ರೇಂಜ್ ಬೆಲೆಯ ಸ್ಮಾರ್ಟ್‌ಫೋನ್‌ ಆಗಿದ್ದು, ಎರಡು ವೇರಿಯಂಟ್‌ಗಳಲ್ಲಿ ಇ ಕಾಮರ್ಸ್ ಜಾಲತಾಣ ಫ್ಲಿಪ್‌ಕಾರ್ಟ್‌ನಲ್ಲಿ ದೊರೆಯಲಿದೆ. 4GB RAM ಸಾಮರ್ಥ್ಯ ಹೊಂದಿರುವ ವೇರಿಯಂಟ್‌ ಬೆಲೆ 16,900ರೂ.ಗಳು ಹಾಗೇ 6GB RAM ಸಾಮರ್ಥ್ಯದ ವೇರಿಯಂಟ್‌ನ ಬೆಲೆಯು. 19,000ರೂ.ಗಳು ಇರಲಿದೆ ಎಂದು ಊಹಿಸಲಾಗಿದೆ.

Best Mobiles in India

English summary
Oppo K1 will mark its debut in the Indian market as Flipkart-exclusive. The Oppo K1 price in India is likely to be around the China pricing. Here are Oppo K1 specifications and features.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X