ದುಬಾರಿ ಫೋನ್ ಗಳ ಖರೀದಿಗೆ ಭಾರತೀಯರು ಎಷ್ಟು ದಿನ ಸಂಬಳಕ್ಕಾಗಿ ಕೆಲಸ ಮಾಡಬೇಕು ಗೊತ್ತಾ?

By Gizbot Bureau
|

ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಗಳು ನಮ್ಮಲ್ಲಿ ಲಭ್ಯವಿದ್ದರೂ ಕೂಡ ದುಬಾರಿ ಫೋನ್ ಗಳ ಆವಿಷ್ಕಾರಗಳಿಗೇನು ಕಡಿಮೆ ಇಲ್ಲ. ಭಾರತೀಯ ಮಧ್ಯಮ ವರ್ಗದ ಜನರಿಗೆ ಕೆಲವು ದುಬಾರಿ ಫೋನ್ ಗಳನ್ನು ಖರೀದಿಸುವುದು ಅಷ್ಟು ಸುಲಭದ ಮಾತಲ್ಲ. ಹುವಾಯಿ ಮೇಟ್ ಎಕ್ಸ್ ಮತ್ತು ಸ್ಯಾಮ್ ಸಂಗ್ ಗ್ಯಾಲಕ್ಸಿ ಫೋಲ್ಡ್ ನಂತರ ಫೋನ್ ಗಳ ಬೆಲೆ 1980 ರಿಂದ 2600 ಡಾಲರ್ ವರೆಗೆ ಇದೆ. ಈ ಫೋನ್ ಗಳು ಬಡವರ ಪಾಲಿನ ಕನಸಿನ ಮಾತಾಗಿದ್ದರೆ, ಸಿರಿವಂತರಿಗೆ ಅಗ್ಗದ ವಸ್ತು.

ದುಬಾರಿ ಫೋನ್ ಗಳ ಖರೀದಿಗೆ ಭಾರತೀಯರು ಎಷ್ಟು ದಿನ ಸಂಬಳಕ್ಕಾಗಿ ಕೆಲಸ ಮಾಡಬೇಕು

ಆದರೆ ಇತ್ತೀಚೆಗೆ ಒಂದು ಸರ್ವೇ ನಡೆದಿದೆ. ಇಂತಹ ದುಬಾರಿ ಫೋನ್ ಗಳನ್ನು ಭಾರತೀಯರು ಖರೀದಿಸಬೇಕು ಎಂದಾದರೆ ಎಷ್ಟು ದಿನ ದಿನಗೂಲಿ ಮಾಡಬೇಕು ಎಂಬುದಾಗಿ ತಿಳಿಸಲಾಗಿದೆ. ಬ್ಯಾಂಕ್ ಮೈ ಸೆಲ್ ನ ಅಧ್ಯಯನವೊಂದು ವಿಶ್ವದ 57 ದೊಡ್ಡ ಸಿಟಿಗಳಲ್ಲಿ ಹುವಾಯಿ ಮೇಟ್ ಎಕ್ಸ್ ಮತ್ತು ಸ್ಯಾಮ್ ಸಂಗ್ ಗ್ಯಾಲಕ್ಸಿ ಫೋಲ್ಡ್ ಮತ್ತು ಎಸ್10 ನಂತಹ ಫೋನ್ ಗಳನ್ನು ಖರೀದಿಸುವುದಕ್ಕೆ ಎಷ್ಟು ದಿನ ಕೆಲಸ ಮಾಡಬೇಕು ಎಂಬುದನ್ನು ತಿಳಿಸಿದೆ. ಕೆಲವು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಖಂಡಿತ ಈ ಫೋನ್ ಗಳು ಕೈಗೆಟುಕುವ ಬೆಲೆಯ ಫೋನ್ ಗಳಾಗಿರುತ್ತದೆ ಆದರೆ ಬೆಲೆಯನ್ನೇ ನೆಚ್ಚಿಕೊಂಡಿರುವ ಕೆಲವು ಮಾರುಕಟ್ಟೆಗಳಲ್ಲಿ ಈ ಡಿವೈಸ್ ಗಳು ಅಷ್ಟೇನು ಸದ್ದು ಮಾಡುವುದಿಲ್ಲ ಮತ್ತು ಇವು ಲಕ್ಸುರಿಯ ಸಂಕೇತಗಳಂತೆ ಬಿಂಬಿತವಾಗಿವೆ.

ಭಾರತದ ಪ್ರಮುಖ ಸಿಟಿಯಲ್ಲಿ ಸಂಬಳ ಮತ್ತು ಅಲ್ಲಿನ ಜೀವನ ನಿರ್ವಹಣೆಯ ವೆಚ್ಚ ಇವುಗಳನ್ನು ಆಧರಿಸಿ ಬ್ಯಾಂಕ್ ಮೈಸೆಲ್ ಸಮೀಕ್ಷೆಯು ಇಲ್ಲಿನ ಜನರಿಗೆ ಹುವಾಯಿ ಮೇಟ್ ಎಕ್ಸ್, ಸ್ಯಾಮ್ ಸಂಗ್ ಗ್ಯಾಲಕ್ಸಿ ಫೋಲ್ಡ್, ಗ್ಯಾಲಕ್ಸಿ ಎಸ್10, ಎಸ್10+, ಎಸ್10ಇ ಮತ್ತು ಐಫೋನ್ ಎಕ್ಸ್ಎಸ್ ನ್ನು ಖರೀದಿಸುವುದಾದರೆ ಎಷ್ಟು ದಿನ ಕೆಲಸ ಮಾಡಬೇಕು ಎಂಬುದನ್ನು ತಿಳಿಸಿದೆ.

ಹುವಾಯಿ Mate X Vs ಸಂಬಳ

ಹುವಾಯಿ Mate X Vs ಸಂಬಳ

ಅಧ್ಯಯನದ ಪ್ರಕಾರ ಮುಂಬೈ ನ ಸರಾಸರಿ ಸಂಬಳವು ಪ್ರತಿ ತಿಂಗಳಿಗೆ 591 ಡಾಲರ್ (ಅಂದಾಜು 5310 ರುಪಾಯಿಗಳು). ಹಾಗಾಗಿ ಹುವಾಯಿ ಮೇಟ್ ಎಕ್ಸ್ ನ್ನು ಒಬ್ಬ ವ್ಯಕ್ತಿ ಭಾರತದಲ್ಲಿ ಖರೀದಿಸಬೇಕು ಎಂದಾದರೆ ಆತ ಸುಮಾರು 95 ದಿನಗಳ ಕಾಲ ಕೆಲಸ ಮಾಡಬೇಕಾಗುತ್ತದೆ. 57 ದೇಶಗಳ ಪಟ್ಟಿಯಲ್ಲಿ ಇದು 16 ನೇ ಸ್ಥಾನದಲ್ಲಿರುವ ಜಾಗವಾಗಿದೆ. ಅಂದರೆ ಹುವಾಯಿ ಮೇಟ್ ಎಕ್ಸ್ ಸರಾಸರಿ ಮುಂಬೈ ವಾಸಿಗಳಿಗೆ ದುಬಾರಿ ಫೋನ್ ಆಗಿರುತ್ತದೆ. ಇದರ ಬದಲಾಗಿ ಅವರು • ಮುಂಬೈ ನಲ್ಲಿ 1 ಬೆಡ್ ರೂಮ್ ಇರುವ ಅಪಾರ್ಟೆಂಟ್ ನ್ನು 23.7 ತಿಂಗಳ ಅವಧಿಗೆ ಬಾಡಿಗೆಗೆ ಪಡೆಯಬಹುದು.

• ತಮ್ಮ ಅಪಾರ್ಟ್ ಮೆಂಟ್ ನ ಯುಟಿಲಿಟಿ ಬಿಲ್ ನ್ನು 66.4 ತಿಂಗಳ ಅವಧಿಗೆ ಪಾವತಿ ಮಾಡಬಹುದು.

• 909 ಬಾರಿ ದುಬಾರಿ ರೆಸ್ಟೋರೆಂಟ್ ನಲ್ಲಿ ಆಹಾರ ಸೇವಿಸುವುದಕ್ಕೆ ಸಾಧ್ಯವಾಗುತ್ತದೆ.

• 1,453 ಬಾರಿ ಡೊಮೆಸ್ಟಿಕ್ 0.5ಲೀಟರ್ ಬಿಯರ್ ಖರೀದಿಸುವುದಕ್ಕೂ ಕೂಡ ಈ ಹಣವನ್ನು ಬಳಸಲು ಸಾಧ್ಯವಾಗುತ್ತದೆ.

ಗ್ಯಾಲಕ್ಸಿ ಫೋಲ್ಡ್ vrs ಸಂಬಳ

ಗ್ಯಾಲಕ್ಸಿ ಫೋಲ್ಡ್ vrs ಸಂಬಳ

ಈಗ ನಡೆದಿರುವ ಅಧ್ಯಯನದ ಪ್ರಕಾರ ಮುಂಬೈನಲ್ಲಿ ಸರಾಸರಿ ಸಂಬಳವನ್ನು ಅಂದರೆ 591 ಡಾಲರ್ ಪಡೆಯುವ(ಅಂದಾಜು 5310 ರುಪಾಯಿ) ಪಡೆಯುತ್ತಿರುವ ವ್ಯಕ್ತಿಯು ಸ್ಯಾಮ್ ಸಂಗ್ ಗ್ಯಾಲಕ್ಸಿ ಫೋಲ್ಡ್ ಫೋನ್ ನ್ನು ಖರೀದಿಸಬೇಕು ಎಂದಾದರೆ 72.4 ದಿನಗಳ ಕಾಲ ಕೆಲಸ ಮಾಡಬೇಕಾಗುತ್ತದೆ ಎಂದು ತಿಳಿಸಲಾಗಿದೆ. 57 ದೇಶಗಳ ಪಟ್ಟಿಯಲ್ಲಿ ಮುಂಬೈಯನ್ನು 16 ನೇ ಸ್ಥಾನದಲ್ಲಿ ಇಡಲಾಗಿದೆ. ಅಂದರೆ ಗ್ಯಾಲಕ್ಸಿ ಫೋಲ್ಡ್ ಮುಂಬೈ ಮಂದಿಗೆ ಭಾರೀ ದುಬಾರಿ ಫೋನ್ ಆಗಿರುತ್ತದೆ. ಈ ಫೋನ್ ಖರೀದಿಸುವ ಬದಲಾಗಿ ಮುಂಬೈ ಮಂದಿ ಅದೇ ದುಡ್ಡಲ್ಲಿ

• ಒಂದು ಬೆಡ್ ರೂಂ ಇರುವ ಅಪಾರ್ಟ್ ಮೆಂಟ್ ನ್ನು 18.1 ತಿಂಗಳ ಅವಧಿಗೆ ಬಾಡಿಗೆಗೆ ಪಡೆಯುವುದಕ್ಕೆ ಸಾಧ್ಯವಾಗುತ್ತದೆ.

• 50.6 ತಿಂಗಳ ಅವಧಿಗೆ ಅದೇ ದುಡ್ಡಲ್ಲಿ ಯುಟಿಲಿಟಿ ಬಿಲ್ ಗಳನ್ನು ಪಾವತಿಸುವುದಕ್ಕೆ ಸಾಧ್ಯವಾಗುತ್ತದೆ.

• ಸಾಮಾನ್ಯ ಬೆಲೆ ಇರುವ ರೆಸ್ಟೋರೆಂಟ್ ಗಳಲ್ಲಿ 692 ದಿನಗಳು ಊಟ ಮಾಡುವುದಕ್ಕೆ ಸಾಧ್ಯವಾಗುತ್ತದೆ.

• 1,106 ಬಾರಿ ಡೊಮೆಸ್ಟಿಕ್ ಬಿಯರ್ ನ್ನು 0.5 ಲೀಟರ್ ಖರೀದಿಸಬಹುದು

ಆತೀ ಹೆಚ್ಚು ದಿನ ಯಾರು ಕೆಲಸ ಮಾಡಬೇಕು?

ಆತೀ ಹೆಚ್ಚು ದಿನ ಯಾರು ಕೆಲಸ ಮಾಡಬೇಕು?

ಇತಿಯೋಫಿಯಾ ಮಂದಿ ಗ್ಯಾಲಕ್ಸಿ ಫೋಲ್ಡ್ ಖರೀದಿಸುವುದಕ್ಕಾಗಿ ಅತೀ ಹೆಚ್ಚು ದಿನಗಳ ಕಾಲ ಕೆಲಸ ಮಾಡಬೇಕಾಗುತ್ತದೆ. ಹೌದು ಈಗ ನಡೆದಿರುವ ಸರ್ವೇ ಪ್ರಕಾರ ಇಥಿಯೋಪಿಯಾದ ಮಂದಿ ಅಲ್ಲಿ ಸಿಗುವ ಸಂಬಳದಲ್ಲಿ ಗ್ಯಾಲಕ್ಸಿ ಫೋಲ್ಡ್ ಖರೀದಿಸಬೇಕು ಎಂದಾದರೆ ಸುಮಾರು 228.3 ದಿನಗಳ ಕಾಲ ಕೆಲಸ ಮಾಡಬೇಕು ಅಂದರೆ ವರ್ಷದ 62.54% ದಿನಗಳ ಕಾಲ ಕೆಲಸ ಮಾಡಿ ಸಂಬಳ ಪಡೆದು ಉಳಿತಾಯ ಮಾಡಿದರೆ ಮಾತ್ರವೇ ಈ ಫೋನ್ ಖರೀದಿಸುವುದಕ್ಕೆ ಸಾಧ್ಯವಾಗುತ್ತದೆ.

ಅತೀ ಕಡಿಮೆ ಅವಧಿಯಲ್ಲೇ ಗ್ಯಾಲಕ್ಸಿ ಫೋಲ್ಡ್ ಖರೀದಿಸಲು ಯಾರಿಗೆ ಸಾಧ್ಯ? ಸದ್ಯ ಸ್ವಿಝರ್ ಲ್ಯಾಂಡ್ ಮತ್ತು ಝೂರಿಕ್ ನಲ್ಲಿ ಲಭ್ಯವಾಗುವ ಸರಾಸರಿ ಸಂಬಳ 272.39 ಡಾಲರ್ ನ ಪ್ರಕಾರ ಅತೀ ಕಡಿಮೆ ಅಂದರೆ ಕೇವಲ 8.3 ದಿನಗಳ ಅವಧಿಗೆ ಕೆಲಸ ಮಾಡುವ ಮೂಲಕ ಖರೀದಿಸುವುದಕ್ಕೆ ಸಾಧ್ಯವಾಗುತ್ತದೆ. ಅಂದರೆ ವರ್ಷದ ಕೇವಲ 2.27% ಅವಧಿಯನ್ನು ಸಂಬಳದ ಕೆಲಸವನ್ನು ಮಾಡಿ ಖರೀದಿಸುವುದಕ್ಕೆ ಸ್ವಿಝರ್ ಲ್ಯಾಂಡ್ ಮಂದಿಗೆ ಸಾಧ್ಯವಾಗುತ್ತದೆ.

ಗ್ಯಾಲಕ್ಸಿ ಫೋಲ್ಡ್ Vs ಜೀವನ ನಿರ್ವಹಣೆಯ ವೆಚ್ಚ

ಗ್ಯಾಲಕ್ಸಿ ಫೋಲ್ಡ್ Vs ಜೀವನ ನಿರ್ವಹಣೆಯ ವೆಚ್ಚ

ಗ್ಯಾಲಕ್ಸಿ ಫೋಲ್ಡ್ ಖರೀದಿಸುವ ಬದಲು ಗಾನಾ, ಆಕ್ರಾ ಸಿಟಿಗಳಲ್ಲಿ ಎರಡು ವರ್ಷದ ಬಾಡಿಗೆಗೆ ಒಂದು ಅಪಾರ್ಟ್ ಮೆಂಟ್ ನ್ನು ಖರೀದಿಸಬಹುದು( 27.3 ತಿಂಗಳಿಗೆ). ನ್ಯೂಯಾರ್ಕ್, ಯುಎಸ್ಎ ಗಳಲ್ಲಾದರೆ 0.6 ತಿಂಗಳ ಅವಧಿಗೆ ಒಂದು ಅಪಾರ್ಟ್ ಮೆಂಟ್ ನ್ನು ಬಾಡಿಗೆಗೆ ಪಡೆಯುವುದಕ್ಕೆ ಇದೇ ಹಣ ಸಾಕಾಗುತ್ತದೆ.

ಬಿಲ್ ಗಳು: ಬಾಂಗ್ಲಾದೇಶ, ಚಿಟ್ಟಾಗಾಂಗ್ ನಲ್ಲಿ 6 ವರ್ಷಗಳ ಅವಧಿಗೆ (70.6 ತಿಂಗಳು) ಯುಟಿಲಿಟಿ ಬಿಲ್ ಗಳನ್ನು ಪಾವತಿಸುವುದಕ್ಕೆ ಸಾಧ್ಯವಾಗುತ್ತದೆ. ಬರ್ಮುಡಾ, ಹ್ಯಾಮಿಲ್ಟನ್ ನಲ್ಲಿ ಕೇವಲ 7.5 ತಿಂಗಳ ಅವಧಿಗೆ ಯುಟಿಲಿಟಿ ಬಿಲ್ ಪಾವತಿಸುವುದಕ್ಕೆ ಈ ಹಣ ಸಾಕಾಗುತ್ತದೆ.

ಊಟ: ಇಸ್ಲಾಮಾಬಾದ್, ಪಾಕಿಸ್ತಾನದಲ್ಲಿ ಪ್ರತಿದಿನ ರಾತ್ರಿ 3 ವರ್ಷಗಳ ಅವಧಿಗೆ ಈ ಹಣದಿಂದ ಊಟ ಮಾಡಬಹುದು.ಆದರೆ ಬರ್ಮುಡಾ, ಹ್ಯಾಮಿಲ್ಟನ್ ನಲ್ಲಿ 72 ಬಾರಿ ಹೊರಗಡೆ ಹೊಟೆಲ್ ನಲ್ಲಿ ಊಟ ಮಾಡುವುದಕ್ಕೆ ಸಾಧ್ಯವಾಗುತ್ತದೆ.

ಬಿಯರ್: ಯುಕ್ರೇನ್, ಕಿವಿಯಲ್ಲಿ 6.5 ವರ್ಷ (2,379) ಬಿಯರ್ ಖರೀದಿಸುವುದಕ್ಕೆ ಸಾಧ್ಯವಾಗುತ್ತದೆ. ಅಬಿದಾಬಿಯಲ್ಲಿ 182 ಬಾರಿ ಬಿಯರ್ ಖರೀದಿಸುವುದಕ್ಕೆ ಸಾಧ್ಯವಾಗುತ್ತದೆ.

Best Mobiles in India

English summary
People in India need to work 72.4 days to afford the new Galaxy Fold & 95 days for the Huawei Mate X

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X